ಕೆಲ ಜೋಡಿಗಳು ವಿವಾಹ ಆದಂದಿನಿಂದಲೂ ಜಗಳ, ಮುನಿಸಿನಲ್ಲೇ ದಿನ ಕಳೆಯುತ್ತಿರುತ್ತಾರೆ. ಈ ರೀತಿಯ ಜೀವನದಿಂದ ಮುಕ್ತಿ ಪಡೆದು ಪ್ರೀತಿ ಹೆಚ್ಚಿಸಲು ಏನು ಮಾಡಬೇಕೆಂಬ ಬಗ್ಗೆ ಜ್ಯೋತಿಷಿಗಳು ನೀಡಿದ ಸಲಹೆ ಇಲ್ಲಿದೆ.
ಮದುವೆಯಾದ ಹೊಸತರಲ್ಲಿ ಎಲ್ಲ ಚೆನ್ನಾಗಿತ್ತು, ಈಗೀಗಂತೂ ಮಾತು ಮಾತಿಗೂ ಜಗಳ, ಮಾತು ಬಿಡುವುದು, ಮುನಿಸು... ಜೀವನದಲ್ಲಿ ನೆಮ್ಮದಿಯೇ ಇಲ್ಲವಾಗಿದೆ ಎಂದು ನಿಮ್ಮ ಸ್ನೇಹಿತರು ಹೇಳುವುದು ಕೇಳಿರಬಹುದು. ಮತ್ತೆ ಕೆಲ ಜೋಡಿಗಳು ವಿವಾಹವಾದ ದಿನದಿಂದಲೇ ಜಗಳ, ಕೋಪತಾಪಗಳಲ್ಲಿ ಕಳೆಯುತ್ತಾ ಡೈವೋರ್ಸ್ ಯೋಚನೆಗೆ ಬಂದಿರುತ್ತಾರೆ. ಮತ್ತೆ ಕೆಲವರದ್ದೂ ದಾಂಪತ್ಯದಲ್ಲೂ ಇರಲಾರೆ, ಬಿಟ್ಟೂ ಇರಲಾರೆ ಎಂಬಂಥ ತ್ರಿಶಂಕು ಸ್ಥಿತಿ.
ಸಾಮಾನ್ಯವಾಗಿ ಜಾತಕದ ಎರಡನೇ ಮನೆಯ ಅಧಿಪತಿ ಬಾಧಿಸುತ್ತಿದ್ದರೆ, ಆಗ ವ್ಯಕ್ತಿಯು ಕುಟುಂಬ ಸದಸ್ಯರ ಜೊತೆ ಸಿಕ್ಕಾಪಟ್ಟೆ ಜಗಳವಾಡುತ್ತಾನೆ. ಅದೇ 7ನೇ ಮನೆಯ ಗ್ರಹ ದೋಷವಿದ್ದರೆ ಜೋಡಿಯ ಲೈಂಗಿಕ ಬದುಕಿ(sex life)ನಲ್ಲಿ ತೃಪ್ತಿ ಇರುವುದಿಲ್ಲ.
ಇನ್ನು ಜಾತಕದ 6 ಹಾಗೂ 7ನೇ ಮನೆ ಗ್ರಹಗಳ ಸಂಬಂಧದಿಂದ ಜೋಡಿಗಳ ನಡುವೆ ತಪ್ಪು ತಿಳಿವಳಿಕೆ(misunderstanding), ಸಣ್ಣ ವಿಷಯಗಳಿಗೂ ವಾದ, ದ್ವೇಷ(hatred)ಗಳು ಹೆಚ್ಚುತ್ತವೆ. ಇದಲ್ಲದೆ, ಸಣ್ಣ ದೂರನ್ನೂ ದೊಡ್ಡದು ಮಾಡುವುದು, ಅದರಿಂದ ಹಳೆಯ ವಿಷಯಗಳನ್ನೆಲ್ಲ ಕೆದಕಿ ಜಗಳ ಆಡುವುದು ಇಂಥವೆಲ್ಲ ಒಬ್ಬರಲ್ಲ, ದಾಂಪತ್ಯದಲ್ಲಿ ಇಬ್ಬರ ನೆಮ್ಮದಿಯನ್ನೂ ಕಸಿಯುತ್ತವೆ. ಇಂಥ ಸಮಸ್ಯೆಗಳಾದಾಗ ಆರಂಭದಲ್ಲೇ ಸರಿ ಮಾಡಿಕೊಳ್ಳಬೇಕು. ಏಕೆಂದರೆ ಆರಂಭದಲ್ಲಿ ಇಬ್ಬರಿಗೂ ತಾವು ಪ್ರೀತಿಯಿಂದ ಚೆನ್ನಾಗಿರಬೇಕೆಂದು ಮನಸ್ಸಿರುತ್ತದೆ. ಹಾಗೆ ಸರಿ ಮಾಡಿಕೊಳ್ಳುವ ಮನಸ್ಸಿದ್ದರೆ, ನಿಮ್ಮ ನಡುವಿನ ದಾಂಪತ್ಯದ ಮುನಿಸನ್ನು ಶಮನ ಮಾಡಿಕೊಳ್ಳಲು ಮೊದಲನೆಯದಾಗಿ ಈ ವಿಚಾರಗಳು ನಿಮ್ಮ ತಲೆಯಲ್ಲಿರಲಿ.
undefined
Astrology Tips : ಪೂರ್ವಜನ್ಮದ ಪಾಪಕರ್ಮಕ್ಕೆ ಮುಕ್ತಿ ಬೇಕೆ? ಇಲ್ಲಿವೆ ದಾರಿಗಳು..
ಇವಿಷ್ಟು ವಿಚಾರಗಳನ್ನು ಪಾಲಿಸುವ ಜೊತೆಗೆ, ಜ್ಯೋತಿಷ್ಯದಲ್ಲಿ ರಾಶಿಗನುಗುಣವಾಗಿ ನೀವೇನು ಮಾಡಬೇಕೆಂದು ಹೇಳಲಾಗಿದೆ. ಅದರತ್ತ ಗಮನ ಹರಿಸಿ.
ಮೇಷ ಹಾಗೂ ಕನ್ಯಾ(Aries and Virgo): ನೀವು ವಿವಾಹ ಜೀವನದ ಚಿಂತೆ, ಆತಂಕಗಳನ್ನು ದೂರ ಮಾಡಿಕೊಳ್ಳಲು ತಾಯಿ ಮಹಾಲಕ್ಷ್ಮಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳಿ.
ವೃಷಭ ಹಾಗೂ ಸಿಂಹ(Taurus and Leo): ಈ ಎರಡೂ ರಾಶಿಯವರು ತಮ್ಮ ದಾಂಪತ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ವಿಷ್ಣು ಸಹಸ್ರನಾಮ ಪಠಣ ಮಾಡಬೇಕು.
ಮಿಥುನ(gemini): ಈ ರಾಶಿಯವರು ತಮ್ಮ ಸಂಗಾತಿಯೊಂದಿಗಿನ ಜಗಳ, ಕದನಕ್ಕೆ ಕೊನೆ ಹಾಡಲು ಪಾರ್ವತಿಯನ್ನು ಪೂಜಿಸಬೇಕು.
ಕಟಕ(Cancer): ಈ ರಾಶಿಯವರು ವೈವಾಹಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆದಿತ್ಯ ಹೃದಯ ಪಠಣ ಮಾಡಿ.
Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ
ವೃಶ್ಚಿಕ(Scorpio): ವೃಶ್ಚಿಕ ರಾಶಿಯವರು ವೈವಾಹಿಕ ಸುಖ, ನೆಮ್ಮದಿಗಾಗಿ ದಕ್ಷಿಣಾಮೂರ್ತಿಯ ಸ್ಮರಣೆ ಮಾಡಿ.
ಧನಸ್ಸು ಹಾಗೂ ಮಕರ(Sagittarius and Capricorn): ಈ ಎರಡು ರಾಶಿಯವರಿಗೆ ಆಂಜನೇಯನ ಆರಾಧನೆಯಿಂದ ದಾಂಪತ್ಯ ಜೀವನ ಸುಧಾರಿಸುವುದು.
ಮೀನ ಮತ್ತು ತುಲಾ(Pieces and Libra): ಮಂಗಳನಿಗೆ ಪ್ರಾರ್ಥನೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ ಸಿಗಲಿದೆ.
ಇನ್ನು ಸಾಮಾನ್ಯವಾಗಿ ಎಲ್ಲ ರಾಶಿಯವರಿಗೂ ಶುಕ್ರವಾರ ಉಪವಾಸ ಮಾಡುವುದರಿಂದ ಮದುವೆಯ ನಂತರ ಜೀವನದಲ್ಲಿ ಸಂತೋಷ ಸಿಗಲಿದೆ. ಜೊತೆಗೆ, ಗಣಪತಿ ಮಂತ್ರವನ್ನು ಭಕ್ತಿಯಿಂದ ಹೇಳುವುದರಿಂದ ಇಬ್ಬರ ನಡುವೆ ಕಳೆದು ಹೋದ ಆಕರ್ಷಣೆ ಮರಳುವುದು. ಮುರುಗನನ್ನು ಸ್ಮರಿಸುವುದರಿಂದ ಪುರುಷರಿಗೆ ವೈವಾಹಿಕ ಜೀವನದ ನೆಮ್ಮದಿ ಸಿಗಲಿದೆ.