ಕೆಲವರ ವ್ಯಕ್ತಿತ್ವವೇ ಹಾಗೆ, ಅವರಲ್ಲೇನೋ ಆಕರ್ಷಣಾ ಶಕ್ತಿ ಇರುತ್ತದೆ. ನೋಡಿದೊಡನೆ ಅವರಲ್ಲಿ ಮಾತಾಡಬೇಕೆನಿಸುತ್ತೆ, ಮಾತಾಡಿದರೆ ಇನ್ನೂ ಹೆಚ್ಚು ಸಮಯ ಕಳೆಯಬೇಕೆನಿಸುತ್ತೆ. ಇಂಥ ಆಕರ್ಷಕ ವ್ಯಕ್ತಿತ್ವದ ಹುಡುಗರು ಯಾವ ರಾಶಿಯವರಾಗಿರುತ್ತಾರೆ ಗೊತ್ತಾ?
ಕೆಲ ಹುಡುಗಿಯರು ತಮ್ಮ ಆತ್ಮ ಸಂಗಾತಿಯ ಬಗೆಗೆ ಕನಸು ಕಂಡರೆ ಮತ್ತೆ ಕೆಲವರು ತಮಗೆ ಹೊಂದುವ, ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗರ ಬಗ್ಗೆ ಕನಸು ಕಾಣುತ್ತಾರೆ. ಹುಡುಗಿಯರ ಕನಸಿನ ರಾಜನಲ್ಲಿರುವ ಗುಣಗಳೆಲ್ಲ ವಾಸ್ತವದಲ್ಲಿ ಬಹುತೇಕರಲ್ಲಿ ಇರುವುದು ಸಾಧ್ಯವಿಲ್ಲ. ಆದರೆ, ವಾಸ್ತವವಾಗಿ ಕೆಲ ವ್ಯಕ್ತಿತ್ವಗಳು ಹುಡುಗಿಯರನ್ನು ಆಕರ್ಷಿಸುತ್ತವೆ. ಅವರ ಮಾತು, ನಡೆ, ಚಿಂತನೆಗಳೆಲ್ಲವೂ ವಿಶೇಷವೆನಿಸುತ್ತವೆ. ಅಂಥ ಹುಡುಗರು ಹತ್ತಿರ ಸುಳಿದಾಡಿದರೆ ಸಾಕು, ಅವರ ಕಡೆ ಹುಡುಗಿಯರು ಹೆಚ್ಚು ಗಮನ ವಹಿಸುತ್ತಾರೆ. ಇಂಥ ಆಕರ್ಷಕ ವ್ಯಕ್ತಿತ್ವ ಹೊಂದಿರುವ ಹುಡುಗರು ಸಾಮಾನ್ಯವಾಗಿ ಈ ಕೆಳಗಿನ ನಾಲ್ಕು ರಾಶಿಗಳಿಗೆ ಸೇರಿರುತ್ತಾರೆ.
ಮಿಥುನ(Gemini)
ನೀವು ಅದೃಷ್ಟವಂತರು. ಹುಡುಗಿಯರ ಗಮನ(attention)ವನ್ನು ಸೆಳೆಯಲು ನೀವು ಇತರ ಹುಡುಗರಂತೆ ಸಾಕಷ್ಟು ಸರ್ಕಸ್ ಮಾಡಬೇಕಿಲ್ಲ. ನಿಮ್ಮ ಆಕರ್ಷಕ ವ್ಯಕ್ತಿತ್ವವೇ ನಿಮಗಾಗಿ ಅದನ್ನು ಮಾಡುತ್ತದೆ. ಮಿಥುನ ರಾಶಿಯ ಪುರುಷರು ಮಹಿಳೆ(women)ಯರನ್ನು ತಕ್ಷಣವೇ ಆಕರ್ಷಿಸಿ ಬಿಡುತ್ತಾರೆ. ಮಿಥುನ ರಾಶಿಯ ಹುಡುಗರೂ ಮೃದು ಸ್ವಭಾವದವರೂ, ಉತ್ತಮ ಮಾತುಗಾರಿಕೆ ಉಳ್ಳವರೂ ಮತ್ತು ರೋಮ್ಯಾಂಟಿಕ್(romantic) ಗುಣದವರಾಗಿದ್ದಾರೆ. ಇದರಿಂದಾಗಿ ಹುಡುಗಿಯರಿಗೆ ಅವರು ಬಹಳ ಇಷ್ಟವಾಗುತ್ತಾರೆ. ಅದೂ ಅಲ್ಲದೆ, ಈ ರಾಶಿಯವರಿಗೆ ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕೆಂಬ ಬಗ್ಗೆ ಚೆನ್ನಾಗಿ ತಿಳಿದಿದೆ.
ಮಿಥುನ ರಾಶಿಯವರು ತುಂಬಾ ಭಾವುಕರಾಗುತ್ತಾರೆ. ಭಾವನೆಗಳು ಹೆಚ್ಚಿರುವ ಹುಡುಗರನ್ನು ಹುಡುಗಿಯರು ತುಂಬಾ ಇಷ್ಟಪಡುತ್ತಾರೆ. ಇಂಥವರಲ್ಲಿ ಹುಡುಗಿಯ ಹೃದಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚು ಎಂದು ಭಾವಿಸುತ್ತಾರೆ.
ಸಿಂಹ(Leo)
ಸಿಂಹ ರಾಶಿಯವರು ಹೃದಯದಲ್ಲಿ ತುಂಬಾ ಒಳ್ಳೆಯವರು ಮತ್ತು ಉತ್ತಮವಾಗಿ ಸಂಬಂಧಗಳನ್ನು(relationships) ನಿಭಾಯಿಸುವ ಛಾತಿಯವರು. ಅವರು ಸ್ವಭಾವತಃ ರೋಮ್ಯಾಂಟಿಕ್. ಹೀಗಾಗಿ, ಹುಡುಗಿಯರು ಇವರೊಂದಿಗೆ ಫ್ಲರ್ಟ್ ಮಾಡಲು ನಾಚಿಕೆ ಪಡುವುದಿಲ್ಲ. ಬದಲಿಗೆ ಇವರೊಂದಿಗಿದ್ದೇವೆ ಎಂದು ತೋರಿಸಿಕೊಳ್ಳಲು ಬಯಸುತ್ತಾರೆ. ಈ ರಾಶಿಚಕ್ರದ ಹುಡುಗರು ತುಂಬಾ ಪ್ರಭಾವಶಾಲಿಯಾಗಿರುತ್ತಾರೆ. ವಿದ್ಯೆಯಲ್ಲಿ ಮೇಲುಗೈ ಸಾಧಿಸುತ್ತಾರೆ. ಜೊತೆಗೆ, ಎಲ್ಲೇ ಹೋದರೂ ನಗುವಿನಲ್ಲೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗುವ ಕಲೆ ಇವರಿಗೆ ಒಲಿದಿರುತ್ತದೆ. ಸಿಂಹ ರಾಶಿಯವರ ಸೌಮ್ಯ, ಸ್ನೇಹಪರ ಮತ್ತು ಒಳ್ಳೆಯ ಸ್ವಭಾವವು ಹುಡುಗಿಯರನ್ನು ಪ್ರೀತಿಯಲ್ಲಿ ಕೆಡವುತ್ತದೆ. ಸಿಂಹ ರಾಶಿಯವರು ಮೊದಲ ನೋಟದಲ್ಲೇ ಯಾವುದೇ ಹುಡುಗಿಯನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿರುತ್ತಾರೆ.
Vastu Tips: ಶಂಖನಾದದಿಂದ ಮನೆಯಲ್ಲಿ ತುಂಬಲಿದೆ ಸಂಪತ್ತು.. ನಿಮಯ ಪಾಲನೆ ಅಗತ್ಯ
ತುಲಾ(Libra)
ಪ್ರೀತಿ ಮತ್ತು ಕರ್ತವ್ಯದ ಸಮತೋಲನವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ. ಆದರೆ, ತುಲಾ ರಾಶಿಯವರು ಇದನ್ನು ಸುಲಭವಾಗಿಯೇ ಸಾಧಿಸುತ್ತಾರೆ. ಇವರು ಎಲ್ಲರೊಂದಿಗೂ ಸ್ನೇಹಪರರಾಗಿರುತ್ತಾರೆ. ಯಾರ ಬಗ್ಗೆಯೂ ಕೆಟ್ಟ ಮಾತಾಡುವುದಿಲ್ಲ. ತುಲಾ ರಾಶಿಯವರು ಜನರ ಮಧ್ಯೆಯೇ ಇರಲು ಬಯಸುವವರು. ಹೀಗಾಗಿ, ಎಲ್ಲರೂ ಇವರೊಂದಿಗೆ ಸ್ನೇಹ ಹೊಂದಲು ಬಯಸುತ್ತಾರೆ. ಒಮ್ಮೆ ಇವರ ಸ್ನೇಹಿತರಾದರೆ ಅವರಿಗಾಗಿ ಇವರು ಸಾಕಷ್ಟು ಹೊಂದಾಣಿಕೆಗಳನ್ನು ಬೇಜಾರಿಲ್ಲದೆಯೇ ಮಾಡಿಕೊಳ್ಳುತ್ತಾರೆ. ಹಾಗಾಗಿ ಇವರ ಸ್ನೇಹವನ್ನು ಪಡೆದ ಹುಡುಗಿಯರು ಇವರ ಇನ್ನಷ್ಟು ಉತ್ತಮ ಸ್ವಭಾವಗಳ ಪರಿಚಯವಾಗುತ್ತಿದ್ದಂತೆಯೇ ಇವರ ಗರ್ಲ್‌ಫ್ರೆಂಡ್ ಆಗಲು ಬಯಸುತ್ತಾರೆ.
Astro Remidies: ಗ್ರಹ ದೋಷ ನಿವಾರಣೆಗೆ ಸ್ನಾನದಲ್ಲಿ ಪರಿಹಾರ, ಹೇಗಂತೀರಾ?
ಮಕರ(Capricorn)
ಮಕರ ರಾಶಿಯ ಪುರುಷರು ಬಹಳ ಹ್ಯಾಂಡ್ಸಮ್ ಆಗಿರುತ್ತಾರೆ. ಮಹಿಳೆಯರು ಇವರತ್ತ ಮೊದಲ ನೋಟ ಹರಿಸಲು ಇವರ ಲುಕ್ಸ್ ಸಾಕಾಗುತ್ತದೆ. ನಂತರದಲ್ಲಿ ತಿರುಗಿ ನೋಡಲು ಇವರ ಪ್ರಭಾವಿ ವ್ಯಕ್ತಿತ್ವ ಕಾರಣವಾಗುತ್ತದೆ. ಇವರ ಮಾತಾಡುವ ಶೈಲಿ, ಕೆಲಸದ ಮೇಲಿನ ಶ್ರದ್ಧೆ, ಗುರಿಯತ್ತ ನೇರ ನೋಟ- ಇವೆಲ್ಲವೂ ಹುಡುಗಿಯರಿಗೆ ಇವರ ಬಗ್ಗೆ ವಿಶೇಷವಾದ ಆಕರ್ಷಣೆ ತರುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.