ಗ್ರಹಗಳ ದೋಷ ನಿವಾರಣೆಗೆ ಸ್ನಾನದಲ್ಲಿದೆ ಸರಳ ಉಪಾಯ. ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಿ, ಅದನ್ನು ಸ್ನಾನ ಮಾಡುವಾಗ ಉಪಯೋಗಿಸುವುದರಿಂದ ಆಯಾ ಗ್ರಹಗಳಿಗೆ ಸಂಬಂಧಿಸಿದ ದೋಷಗಳು ನಿವಾರಣೆ ಆಗುತ್ತವೆ. ಹಾಗಾದರೆ ಯಾವ ಗ್ರಹಕ್ಕೆ ಯಾವ ಪರಿಹಾರ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಪ್ರತಿ ವ್ಯಕ್ತಿಯ ಜೀವನದ ಮೇಲೂ ನವಗ್ರಹಗಳ (Planets) ಪರಿಣಾಮ ಇದ್ದೇ ಇರುತ್ತದೆ. ಗ್ರಹಗಳ ಶುಭ (Good) ಮತ್ತು ಅಶುಭ (Bad) ಫಲಗಳು ವ್ಯಕ್ತಿಯ ಜೀವನದ ಸುಖ ದುಃಖಗಳಿಗೆ ಕಾರಣವಾಗುತ್ತವೆ. ಗ್ರಹಗಳು ಉಚ್ಚ ಸ್ಥಾನದಲ್ಲಿದ್ದರೆ ಶುಭ ಫಲಗಳು ಪ್ರಾಪ್ತವಾಗುತ್ತವೆ. ಅದೇ ಗ್ರಹಗಳು ನೀಚ ಸ್ಥಿತಿಯಲ್ಲಿ ಅಶುಭ ಫಲಗಳು ಸಿಗುತ್ತವೆ. ಇಂಥ ಸಮಯದಲ್ಲಿ ಅನೇಕ ಕಷ್ಟಗಳು (Difficulties) ತೊಂದರೆ ತಾಪತ್ರಯಗಳು ಎದುರಾಗುತ್ತವೆ. ಹಾಗಾಗಿ ಗ್ರಹಗಳ ಸ್ಥಿತಿ ಉತ್ತಮವಾಗಲು ಆಯಾ ಗ್ರಹಕ್ಕೆ ತಕ್ಕ ವಸ್ತುವನ್ನು ಸ್ನಾನದ (Bath) ನೀರಿಗೆ (Water) ಹಾಕಿ, ಸ್ನಾನ ಮಾಡುವುದರಿಂದ ಗ್ರಹ ದೋಷ ನಿವಾರಣೆ ಆಗುತ್ತದೆ. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ....
ಸೂರ್ಯ (Sun)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ (Horoscope) ಸೂರ್ಯ ಗ್ರಹ ಸ್ಥಿತಿ ನೀಚವಾಗಿದ್ದರೆ ಅದಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಿಸಲು ಬಿಲ್ವ ಮರದ ಬೇರು, ಜೇಡಿಮಣ್ಣು, ಏಲಕ್ಕಿ, ಕುಂಕುಮ, ದೇವದಾರು ಕಟ್ಟಿಗೆ, ಕೆಂಪು ಹೂವುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಸೂರ್ಯ ಗ್ರಹದ ದೋಷ ನಿವಾರಣೆಯಾಗುತ್ತದೆ.
ಚಂದ್ರ (Moon)
ಚಂದ್ರಮಾ ಮನಸೋ ಜಾತಃ ಎಂಬ ಮಾತಿನಂತೆ, ಚಂದ್ರನು ಮನೋ ಕಾರಕನಾಗಿರುವ ಕಾರಣ ಅದಕ್ಕೆ ಸಂಬಂಧಿಸಿದ ದೋಷಗಳ ನಿವಾರಣೆಗೆ ಸ್ನಾನದ ನೀರಿಗೆ ಬಕುಳ ಗಿಡ ಬೇರು, ಬಿಳಿ ಚಂದನ, ಬಿಳಿ ಹೂವುಗಳು, ಪನ್ನೀರು ಇತ್ಯಾದಿಗಳನ್ನು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಮಾನಸಿಕ ಅಸ್ವಸ್ಥತೆ ನಿವಾರಣೆಯಾಗುತ್ತದೆ.
ಮಂಗಳ (Mars)
ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಿಕೊಳ್ಳಲು ಸ್ನಾನದ ನೀರಿಗೆ ರಕ್ತಚಂದನ, ಕೆಂಪು ಹೂವು ಮತ್ತು ಅನಂತ ಮೂಲ (ಹಾಲುಬಳ್ಳಿ)ವನ್ನು ಬೆರೆಸಬೇಕು. ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಸಂಬಂಧಿಸಿದ ದೋಷಗಳು ದೂರವಾಗುತ್ತವೆ.
ಬುಧ (Mercury)
ಬುಧ ಗ್ರಹದ ದೋಷ ನಿವಾರಣೆಗೆ ಜೇನುತುಪ್ಪ, ವಿಧಾರ, ಜಾಯಿಕಾಯಿ ಇತ್ಯಾದಿಗಳನ್ನು ನೀರಿನಲ್ಲಿ ಬೆರೆಸಬೇಕು. ನಂತರ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಗ್ರಹಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ.
ಗುರು (Jupiter)
ಗುರು ಗ್ರಹಕ್ಕೆ ಸಂಬಂಧಿಸಿದ ದೋಷ ನಿವಾರಣೆಗೆ ಭಾರಂಗಿ, ಮಧುಮಾಲತಿ ಹೂವು, ಬಿಳಿ ಸಾಸಿವೆ, ಅಂಜೂರ ಇತ್ಯಾದಿಗಳನ್ನು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ಮದುವೆ, ವಿದ್ಯಾಭ್ಯಾಸ ಮತ್ತು ಉದ್ಯೋಗಗಳಿಗೆ ಆಗುತ್ತಿರುವ ಅಡೆತಡೆಗಳು ದೂರವಾಗುತ್ತವೆ.
ಶುಕ್ರ (Venus)
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಶುಕ್ರಗ್ರಹದ ಶುಭ ಫಲವನ್ನು ಪಡೆಯಲು ಮತ್ತು ದೋಷ ನಿವಾರಣೆಗೆ ಸ್ನಾನದ ನೀರಿನಲ್ಲಿ ಏಲಕ್ಕಿ, ಜಾಯಿಕಾಯಿ ಮತ್ತು ಮೂಲಂಗಿ ಬೀಜವನ್ನು ಸೇರಿಸಿ ಸ್ನಾನ ಮಾಡಬೇಕು. ಇದರಿಂದ ಶುಕ್ರಗ್ರಹದ ಶುಭ ಫಲ ಸಿಗುತ್ತದೆ. ಇದರಿಂದ ವ್ಯಕ್ತಿಗೆ ಸಕಲ ಭೌತಿಕ ಸುಖಗಳು ಪ್ರಾಪ್ತವಾಗುತ್ತದೆ.
ಇದನ್ನು ಓದಿ: Personality Traits: ಈ ರಾಶಿಯವರಿಗೆ ಬೇಜವಾಬ್ದಾರಿ ಹೆಚ್ಚು.. ನೀವಿದ್ದೀರಾ?
ಶನಿ (Saturn)
ಶನಿ ದೋಷದಿಂದ ಪೀಡಿತರಾದವರು ಅಥವಾ ಶನಿ ಗ್ರಹದ ಕೃಪೆ ಪಡೆಯಲು ಇಚ್ಛಿಸುವವರು ಸ್ನಾನದ ನೀರಿಗೆ ಕಪ್ಪು ಎಳ್ಳು , ಅಮರ್ ಬೇಲ್, ಸೋಂಪು, ಸಾಸಿವೆಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ಶನಿ ಗ್ರಹಕ್ಕೆ ಸಂಬಂಧಿಸಿದ ಸಕಲ ದೋಷಗಳು ನಿವಾರಣೆಯಾಗುತ್ತವೆ.
ರಾಹು (Rahu)
ರಾಹು ಗ್ರಹದ ತೊಂದರೆಗೆ ಒಳಗಾಗಿದ್ದರೆ, ರಾಹು ದೋಷ ನಿವಾರಣೆಗೆ ಸ್ನಾನದ ನೀರಿಗೆ ಧೂಪ, ದೇವದಾರು, ಕಸ್ತೂರಿ ಮತ್ತು ಗಜದಂತವನ್ನು ಸೇರಿಸಿ ಸ್ನಾನ ಮಾಡಬೇಕು.
ಇದನ್ನು ಓದಿ: Sun Transit: ಈ ನಾಲ್ಕು ರಾಶಿಗಳಿಗೆ ಅದೃಷ್ಟ ಬದಲಾಗೋಕೆ ಇನ್ನೈದೇ ದಿನ!
ಕೇತು (Ketu)
ಕೇತು ಗ್ರಹದ ದೋಷ ನಿವಾರಣೆಗೆ ಧೂಪ, ದೇವದಾರು ಮತ್ತು ಕೆಂಪು ಚಂದನವನ್ನು ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡಬೇಕು. ವುದರಿಂದ ಕೇತು ಗ್ರಹಕ್ಕೆ ಸಂಬಂಧಿಸಿದ ದೇಶವು ನಿವಾರಣೆಗೊಳ್ಳುತ್ತವೆ.