ಕೆಲ ಹುಡುಗಿಯರು ಪದೇ ಪದೆ ತಪ್ಪು ಹುಡುಗನೊಂದಿಗೆ ಪ್ರೀತಿಯಲ್ಲಿ ಬಿದ್ದು ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಅಂಥ ಹುಡುಗಿಯರು ಈ ಏಳು ರಾಶಿಗಳಿಗೆ ಸೇರಿರುತ್ತಾರೆ.
ಸಂಬಂಧದಲ್ಲಿ ನೀವು ಬೇಗ ಮೋಸ ಹೋಗ್ತೀರಾ? ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗ್ತೀರಾ? ಪದೇ ಪದೆ ಸಂಬಂಧದಲ್ಲಿ ವಂಚನೆಗೆ ಒಳಗಾಗಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅಂತನೇ ಗೊತ್ತಾಗ್ತಿಲ್ವಾ? ನೀವು ಹುಡುಕಿಕೊಂಡ ಹುಡುಗನ ನೋಡಿ ಎಲ್ಲ ಇದೆಂಥ ಆಯ್ಕೆನಪ್ಪಾ ಎಂದು ಹುಬ್ಬೇರಿಸ್ತಾರಾ? ಹಿಂದೆ ಸಾಕಷ್ಟು ತಪ್ಪಾದ ಸಂಬಂಧಗಳಿಂದ ಸಮಸ್ಯೆ ಎದುರಿಸಿ, ನಿಮಗೆ ಸಿಗೋದೇ ತಪ್ಪು ಹುಡುಗರು, ಯಾಕೋ ಗೊತ್ತಿಲ್ಲ ಎಂದುಕೊಳ್ತಿದೀರಾ? ಬಹುಷಃ ಇದು ನಿಮ್ಮ ತಪ್ಪಲ್ಲ, ನಿಮ್ಮ ರಾಶಿಯದಿರಬಹುದು.
ಹೌದು, ಕೆಲ ರಾಶಿಯ ಹುಡುಗಿಯರು ಸಂಬಂಧದಲ್ಲಿ ಬೇಗ ಮೋಸ ಹೋಗ್ತಾರೆ. ಇಂಥ ಹುಡುಗಿಯರು ಯಾವ ರಾಶಿಗೆ ಸೇರಿರ್ತಾರೆ ಗೊತ್ತಾ?
ಮೇಷ(Aries): ಮಂಗಳನ ಕಾರಣದಿಂದ ನೀವು ಹಠಾತ್ ಪ್ರವೃತ್ತಿ ಮತ್ತು ಭಾವೋದ್ರಿಕ್ತ ಸ್ವಭಾವ ಹೊಂದಿದ್ದೀರಿ. ಯಾವುದೇ ಸಂದೇಶಗಳನ್ನು ಕಳುಹಿಸುವ ಮೊದಲು ಅಥವಾ ಕಿಸ್‌ಗಾಗಿ ಒಲವು ತೋರುವ ಮೊದಲು ನೀವು ಎರಡು ಬಾರಿ ಯೋಚಿಸುವುದಿಲ್ಲ. ನಂತರ ಬೇಡವಾಗಿತ್ತು ಎಂದು ಯೋಚಿಸುತ್ತೀರಿ. ಆದರೆ ಅಷ್ಟರಲ್ಲಾಗಲೇ ಎಡವಟ್ಟಾಗಿರುತ್ತದೆ.
ವೃಷಭ(Taurus): ಒಮ್ಮೆ ನೀವು ಯಾರನ್ನಾದರೂ ಇಷ್ಟಪಡಲು ಪ್ರಾರಂಭಿಸಿದರೆ, ನಂತರ ಅವರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರೂ ಸಹ ನೀವು ಅವರ ಸುತ್ತಲೇ ಅಂಟಿಕೊಳ್ಳುತ್ತೀರಿ. ಸಿಕ್ಕಾಪಟ್ಟೆ ಹಚ್ಚಿಕೊಳ್ಳುವ ಸ್ವಭಾವ ನಿಮ್ಮದು. ಈ ಸ್ವಭಾವ ನಿಮಗೆ ನೋವು ಕೊಡಲಾರಂಭಿಸಿದರೂ ಅದರಿಂದ ಹೊರಬರಲಾಗದೆ ಒದ್ದಾಡುತ್ತೀರಿ. ಕಡೆಗೆ ಮತ್ತೊಬ್ಬರ ಪ್ರೀತಿಯೇ ನಿಮ್ಮನ್ನು ಪಾರು ಮಾಡಬೇಕು. ಆಗ ಕೂಡಾ ಅವರನ್ನು ಮತ್ತೆ ಅತಿಯಾಗಿ ಅಂಟಿಕೊಳ್ಳುವ ತಪ್ಪು ಮಾಡುತ್ತೀರಿ.
ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಅನ್ನಪೂರ್ಣೇಶ್ವರಿಯ ಕೆಂಗಣ್ಣಿಗೆ ಗುರಿಯಾಗುತ್ತೀರಿ!
ಮಿಥುನ(Gemini): ಎಲ್ಲರೊಂದಿಗೆ ಸುಲಭವಾಗಿ ಬೆರೆವ ಮತ್ತು ಸ್ನೇಹಪರ ಸ್ವಭಾವವು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ. ಕೇವಲ ಒಂದು ಭೇಟಿಯ ನಂತರ ಹುಡುಗರನ್ನು ಒಬ್ಬರನ್ನೇ ಯಾವುದೋ ಪಾರ್ಟಿಯಲ್ಲೋ, ದೂರದ ಸ್ಥಳದಲ್ಲೋ ಭೇಟಿಯಾಗಲು ಒಪ್ಪಬೇಡಿ. ನೀವು ಸ್ನೇಹಸ್ವಭಾವದಿಂದ ಹೋದರೂ ಅದು ಕಡೆಗೆ ತಪ್ಪು ನಿರ್ಧಾರವಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಇದರಿಂದ ಎಡವುತ್ತೀರಿ. ಆದರೆ ನಂತರದಲ್ಲೂ ನಿಮ್ಮ ಸ್ನೇಹಶೀಲ ಗುಣವೇ ಮತ್ತೆ ಅಪಾಯಕ್ಕೆ ಒಡ್ಡುತ್ತದೆ.
ಕಟಕ(Cancer): ಚಂದ್ರನು ನಿಮ್ಮನ್ನು ಅತಿಯಾಗಿ ರೋಮ್ಯಾಂಟಿಕ್ ಆಗಿಸುತ್ತಾನೆ. ಇದರಿಂದ ಯಾರನ್ನಾದರೂ ಪ್ರೀತಿಸಲೇ ಬೇಕು, ಪ್ರೀತಿಯಲ್ಲಿ ಬೀಳಬೇಕು ಎಂಬ ಹಪಹಪಿಗೆ ಬೀಳುತ್ತೀರಿ. ಕಡೆಗೆ ಪ್ರೀತಿಯ ಅನುಭವಕ್ಕಾಗಿ ಸಿಕ್ಕ ವ್ಯಕ್ತಿ ಯಾರು ಎಂಥವನು ಎಂಬ ಬಗ್ಗೆ ಹೆಚ್ಚು ಯೋಚಿಸಲು ಹೋಗದೆ ತಪ್ಪು ನಿರ್ಧಾರ ಕೈಗೊಳ್ಳುತ್ತೀರಿ. ಅತ್ಯಂತ ಭಾವುಕರಾದ ನೀವು ಸಿಹಿ ಮಾತುಗಳಿಗೆ ಬೇಗ ಮರುಳಾಗುತ್ತೀರಿ. ಮತ್ತೆ ಮತ್ತೆ ಮೋಸ ಹೋಗುತ್ತಲೇ ಇರುತ್ತೀರಿ.
Ramadan ತಿಂಗಳು ಉಪವಾಸ ಆಚರಣೆ ಏಕೆ?
ಧನುಸ್ಸು(Sagittarius): ಗುರುವಿನ ಕಾರಣದಿಂದ ಬಹಳ ದಯಾಪರರಾಗಿರುತ್ತೀರಿ. ಹೀಗಾಗಿ ಒಬ್ಬ ವ್ಯಕ್ತಿ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರೂ ಸಹ, ನೀವು ಅಲ್ಲಿಯೇ ಇದ್ದು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಪದೇ ಪದೇ ಆತನ ತಪ್ಪುಗಳನ್ನು ಕ್ಷಮಿಸುತ್ತೀರಿ. ಇದರಿಂದ ಆತ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ.
ಕುಂಭ(Aquarius): ಶನಿಯ ಕಾರಣದಿಂದ ನೀವು ಯಾರನ್ನಾದರೂ ವಿಪರೀತ ಹಚ್ಚಿಕೊಂಡು ಇರುವುದಕ್ಕಿಂತ ಹೆಚ್ಚಿಗೆ ಅವರ ಬಗ್ಗೆ ಕಲ್ಪಿಸಿಕೊಳ್ಳುತ್ತೀರಿ. ಕಡೆಗೆ ಅದು ಸುಳ್ಳಾಗುತ್ತಲೇ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ಒದ್ದಾಡುತ್ತೀರಿ. ನಂತರ ಅವರ ಮೇಲಿನ ಹಟಕ್ಕಾಗಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುತ್ತೀರಿ. ಹಟದ ಕಾರಣದಿಂದ ಸಂಬಂಧ ಬೆಳೆಸುವುದರಿಂದ ಮತ್ತೊಬ್ಬ ವ್ಯಕ್ತಿಯ ಹಿನ್ನೆಲೆ ಬಗ್ಗೆ ಸರಿಯಾಗಿ ಯೋಚಿಸುವುದಿಲ್ಲ. ಅವರಲ್ಲಿ ಹೊಟ್ಟೆಕಿಚ್ಚು ಮೂಡಿಸಬೇಕೆಂದುಕೊಂಡು ಮತ್ತೊಂದು ತಪ್ಪು ಆಯ್ಕೆ ಮಾಡುತ್ತೀರಿ.
ಮೀನ(Pisces): ನೀವು ಪ್ರೀತಿಯಲ್ಲಿ ಬಹಳ ಆಳವಾಗಿ ಬೀಳುತ್ತೀರಿ ಮತ್ತು ಆ ಸಂಬಂಧವನ್ನು ತುಂಬಾ ಅನುಭವಿಸುತ್ತೀರಿ. ಕಡೆಗೆ ವಿಷಯಗಳು ತಪ್ಪು ದಾರಿ ಹಿಡಿದಾಗ ಅದರಿಂದ ಹೊರ ಬರಲು ಒದ್ದಾಡುತ್ತೀರಿ. ತಾನು ಅದರಿಂದ ಹೊರ ಬರುವ ಯೋಚನೆ ಮಾಡುವುದು ಬಿಟ್ಟು ದುಃಖವೇ ಹಣೆಯಲ್ಲಿ ಬರೆದಿದೆ ಎಂದುಕೊಂಡು ಅದನ್ನೇ ಯೋಚಿಸತೊಡಗುತ್ತೀರಿ.