ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?

Published : Apr 07, 2022, 05:27 PM IST
ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?

ಸಾರಾಂಶ

ಆಲಿಯಾ ಭಟ್- ರಣಬೀರ್ ಕಪೂರ್ ವಿವಾಹ ಇನ್ನೊಂದು ವಾರದಲ್ಲಿ ನಡೆಯಲಿದೆ. ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಜ್ಯೋತಿಷಿಗಳೇನಂತಾರೆ?

ಬಾಲಿವುಡ್(Bollywood) ಈಗ ಮತ್ತೊಂದು ಸ್ಟಾರ್ ಮದುವೆಗೆ ಸಜ್ಜಾಗಿದೆ. ಇದೇ ತಿಂಗಳ 15ರಂದು ಆಲಿಯಾ ಭಟ್- ರಣಬೀರ್ ಕಪೂರ್(Ranbir Kapoor and Alia Bhatt) ವಿವಾಹಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಚೆಂಬೂರಿನಲ್ಲಿರುವ ಕಪೂರ್ ಕುಟುಂಬದ ಪುರಾತನ ಮನೆ ಆರ್‌ಕೆ ಹೌಸ್‌(RK house)ನಲ್ಲಿ ಈ ವಿವಾಹ ನಡೆಯಲಿದೆ. ಅರ್ಧರಾತ್ರಿ 2ರಿಂದ 4 ಗಂಟೆ ಮುಹೂರ್ತದಲ್ಲಿ ಅಕ್ಷರಶಃ ತಾರೆಗಳ ಸಮ್ಮುಖದಲ್ಲಿ ಜೋಡಿ ವಿವಾಹ(marriage)ವಾಗಲಿದೆ. ಏಪ್ರಿಲ್ 13ರಂದು ಮೆಹಂದಿ ಕಾರ್ಯಕ್ರಮ ಕೂಡಾ ಅಲ್ಲಿಯೇ ನಡೆಯಲಿದೆ. 

ಇವರಿಬ್ಬರೂ ಬಿ ಟೌನ್‌ನ ಸುಂದರ ಜೋಡಿ ಎಂಬುದರಲ್ಲಿ ಅನುಮಾನವಿಲ್ಲ. ರಣಬೀರ್ ಕಪೂರ್ ಈ ಹಿಂದೆ ಕತ್ರೀನಾ, ದೀಪಿಕಾ ಪಡುಕೋಣೆ ಎಂದು ಎಲ್ಲರ ಜೊತೆ ಡೇಟ್ ಮಾಡಿ, ಲವ್ವುಪವ್ವು ಅಂತ ಗುಲ್ಲೆಬ್ಬಿಸಿ ಕಡೆಗೆ ಕೈ ಕೊಟ್ಟ ಕಳಂಕ ಹೊತ್ತಿದ್ದ ನಟ. ಆದರೆ, ಆಲಿಯಾ ರಣಬೀರ್ ಪ್ರೇಮಜೀವನಕ್ಕೆ ಬಂದು ನಾಲ್ಕು ವರ್ಷಗಳೇ ಕಳೆದರೂ ಈ ಪ್ರೀತಿ ಗೀತಿ ಇತ್ಯಾದಿ ದಿನದಿಂದ ದಿನಕ್ಕೆ ಸ್ಟ್ರಾಂಗ್ ಆಗುತ್ತಲೇ ಇರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ರಣಬೀರ್‌ನ ಚಂಚಲ ಚಿತ್ತವನ್ನು ಆಲಿಯಾ ಕಟ್ಟಿ ಹಾಕುವಲ್ಲಿ ಸಫಲಳಾಗಿದ್ದಾಳೆ. ಅಂತೂ ಇವರ ಸಂಬಂಧ ಮದುವೆವರೆಗೆ ಬಂದು ನಿಂತಿದೆ. 

ಸಾಮಾನ್ಯವಾಗಿ ರಿಸರ್ವ್ಡ್ ಆಗಿರುವ ರಣಬೀರ್, ಕೋವಿಡ್ ಅಲ್ಲ ಎಂದರೆ ತಮ್ಮ ವಿವಾಹ 2020ರಲ್ಲೇ ಆಗಿರಬೇಕಿತ್ತು ಎಂದೊಮ್ಮೆ ಹೇಳಿದ್ದರು. ಮತ್ತೊಂದು ಸಂದರ್ಶನದಲ್ಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದ ಆಲಿಯಾ, 'ನಾನಾಗಲೇ ರಣಬೀರ್‌ನನ್ನು ಬಹಳ ಹಿಂದೆಯೇ ಮನಸ್ಸಲ್ಲೇ ವಿವಾಹವಾಗಿದ್ದೇನೆ. ಎಲ್ಲವೂ ಒಂದು ಉದ್ದೇಶಕ್ಕಾಗಿಯೇ ಘಟಿಸುತ್ತವೆ. ನಮ್ಮ ವಿವಾಹವಾದಾಗ ಎಲ್ಲವೂ ಚೆಂದವಾಗಲಿದೆ,' ಎಂದಿದ್ದರು. 

2018ರಲ್ಲಿ ಸೋನಂ ಕಪೂರ್ ವೆಡ್ಡಿಂಗ್ ರಿಸೆಪ್ಶನ್‌ಗೆ ಹೋದಾಗ ಈ ಜೋಡಿ ತಮ್ಮ ಸಂಬಂಧವನ್ನು ಖಚಿತಪಡಿಸಿತ್ತು. ಅಂದಿನಿಂದ ಇದುವರೆಗೂ ಎಲ್ಲ ಪಾರ್ಟಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದರು. ಆಲಿಯಾ ಆಗಿನಿಂದಲೇ ರಣಬೀರ್ ಕುಟುಂಬಕ್ಕೆ ಹತ್ತಿರವಾಗಿದ್ದರು.

ಈ ನಾಲ್ಕು ರಾಶಿಯವರಲ್ಲಿ ಅಹಂಕಾರ ಜಾಸ್ತಿ!

ಈಗ ಇವರಿಬ್ಬರ ವಿವಾಹ ಇನ್ನೊಂದು ವಾರದಲ್ಲಿರುವಾಗ, ಇಬ್ಬರ ವಿವಾಹ ಜೀವನ ಹೇಗಿರುತ್ತದೆ ಎಂದು ಸಾಕಷ್ಟು ಸೆಲೆಬ್ರಿಟಿ ಜ್ಯೋತಿಷಿಗಳು ಲೆಕ್ಕ ಹಾಕುತ್ತಲೇ ಇದ್ದಾರೆ. ಅವರ ಪ್ರಕಾರ ಇವರ ವೈವಾಹಿಕ ಜೀವನ ಹೇಗಿರುತ್ತದೆ ಗೊತ್ತಾ?

 

'ಆಲಿಯಾ ಭಟ್ ಹಾಗೂ ರಣಬೀರ್ ವಿವಾಹವಾಗುವುದು ಖಚಿತವಾಗಿದೆ. ಇವರಿಬ್ಬರೂ ಬಿ ಟೌನ್‌ನ ಪವರ್‌ಫುಲ್ ಜೋಡಿಯಾಗಲಿದ್ದಾರೆ. ಇವರಿಬ್ಬರ ಸಂಬಂಧ ಉತ್ತಮ ಫಲ ಕೊಡಲಿದೆ. ರಣಬೀರ್ ತಂದೆ ರಿಷಿ ಕಪೂರ್ ಬದುಕಿದ್ದರೆ ಇವರ ವಿವಾಹ 2020ರಲ್ಲೇ ನಡೆಯುತ್ತಿತ್ತು,' ಎಂದಿದ್ದಾರೆ ಒಬ್ಬರು ಪಂಡಿತರು. 

ಆದರೆ ಸುದೀಪ್ ಕೊಚಾರ್ ಎಂಬ ಜ್ಯೋತಿಷಿಯ ಪ್ರಖಾರ, ಇವರಿಬ್ಬರ ಜೋಡಿ ಮ್ಯಾಚ್ ಆಗುವುದಿಲ್ಲ. ಆಲಿಯಾ ಬಹಳ ಭಾವಜೀವಿಯಾಗಿದ್ದರೆ, ರಣಬೀರ್ ತುಂಬಾ ಪ್ರಾಕ್ಟಿಕಲ್ ಆಗಿದ್ದಾನೆ. ಇರಿಬ್ಬರೂ ಜೊತೆಯಾಗಿರಬೇಕು ಎಂದರೆ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. 

ವೀಳ್ಯದೆಲೆ ಹೀಗೆ ಬಳಸಿದ್ರೆ ಹಣ ನಿಮ್ಮತ್ತ ಹರಿದು ಬರುತ್ತದೆ..

ಮುನಿಶಾ ಖಟ್ವಾನಿಯ ಪ್ರಕಾರ, ಆಲಿಯಾ ರಣಬೀರ್ ಕುಟುಂಬಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ. ಇವರಿಬ್ಬರ ನಡುವೆ ಇರುವ ವ್ಯತ್ಯಾಸವೇ ಒಬ್ಬರು ಮತ್ತೊಬ್ಬರನ್ನು ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಇವರ ಸಂಬಂಧ ಚೆನ್ನಾಗಿದ್ದರೂ ಇಬ್ಬರೂ ಸಿಕ್ಕಾಪಟ್ಟೆ ವಾದದಲ್ಲಿ ತೊಡಗುತ್ತಾರೆ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ