ಈ ನಾಲ್ಕು ರಾಶಿಯವರಲ್ಲಿ ಅಹಂಕಾರ ಜಾಸ್ತಿ!

By Suvarna News  |  First Published Apr 7, 2022, 3:59 PM IST

ಕೊಂಚ ಮಟ್ಟಿನ ಅಹಂಕಾರವಾದರೆ ಸಹಿಸಿಕೊಳ್ಳಬಹುದು. ಆದರೆ, ವಿನಯವೇ ವ್ಯಕ್ತಿತ್ವಕ್ಕೆ ಭೂಷಣ. ಇದು ತಿಳಿಯದೆ, ಹೆಚ್ಚು ಧಿಮಾಕು ಮಾಡುವವರು ಹಾಗೂ ಸ್ವಾರ್ಥಿಗಳು ಹೆಚ್ಚಾಗಿ ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?


ಕೆಲವರಿಗೆ ಹಾಗೆಯೇ, ವಿನಾ ಕಾರಣ ತಾವು ಉಳಿದೆಲ್ಲರಿಗಿಂತ ಮೇಲು ಎಂಬ ಭಾವವಿರುತ್ತದೆ. ಅವರ ಯೋಚನೆಗಳು, ನಡೆ ನುಡಿಗಳೆಲ್ಲವೂ ಸ್ವಾರ್ಥದಿಂದ ಕೂಡಿರುತ್ತದೆ. ತನ್ನ ಕೋಳಿ ಕೂಗಿದ್ರೆನೇ ಬೆಳ್ಗಾಗೋದು ಅನ್ನೋ ವಿಭಾಗದವರು ಇವರು. ತಲೆಯ ಮೇಲೆ ಕೋಡಿದ್ದಂಗೆ ಆಡ್ತಾರೆ ಅಂತೀವಲ್ಲ.. ಅದು ಇವರಿಗೆ ಚೆನ್ನಾಗಿ ಸೂಟಾಗುತ್ತದೆ. ತಮ್ಮ ಅಹಂಕಾರ(arrogant)ದ ಕಾರಣಕ್ಕೆ ಯಾರನ್ನು ನೋಯಿಸಲೂ ಹಿಂಜರಿಯುವವರಲ್ಲ. ಮಾತಿನಲ್ಲಿ ಮೇಲರಿಮೆ ತುಂಬಿರುತ್ತದೆ. ಜಗತ್ತೇ ತಮ್ಮ ಸುತ್ತ ಸುತ್ತುತ್ತಿದೆ ಎಂದುಕೊಂಡಿರುತ್ತಾರೆ. ದಾರ್ಷ್ಟ್ಯದ ಮಾತುಗಳನ್ನಾಡುತ್ತಾರೆ.

ಪ್ರತಿಭಾವಂತರೇನೋ ಸರಿ, ಬುದ್ಧಿವಂತರೆಂಬುದೂ ಸತ್ಯವೇ, ಹಣಕಾಸು ಇವರ ಕೈಲಿ ಚೆನ್ನಾಗಿ ಓಡಾಡುವುದೂ ನಿಜ- ಹಾಗಂಥ ಈ ಕಾರಣಗಳಿಗಾಗಿ ತಾನೇ ಮೇಲು ಎಂದು ಮೆರೆಯೋಕೆ ಹೋದ್ರೆ ಯಾರಿಗೆ ತಾನೆ ಇಷ್ಟವಾಗುತ್ತೆ? ವಿದ್ಯೆಗೆ ವಿನಯವೇ ಭೂಷಣ ಎನ್ನುತ್ತಾರೆ. ಹಾಗೆ, ಎಷ್ಟೇ ಪ್ರತಿಭೆ ಇದ್ರೂ ವಿನಯ ಇಲ್ಲವಾದ್ರೆ ಅಲ್ಲಿ ಅಹಂಕಾರ ತುಂಬಿರುತ್ತೆ. ಅಂಥ ಅಹಂಕಾರಿಗಳು ಹೆಚ್ಚಾಗಿ ಯಾವ ರಾಶಿಗೆ(zodiac signs) ಸೇರಿರುತ್ತಾರೆ ಗೊತ್ತಾ?

Tap to resize

Latest Videos

ಸಿಂಹ(Leo)
ಇವರು ತಮ್ಮನ್ನು ತಾವು ಸಿಕ್ಕಾಪಟ್ಟೆ ಪ್ರೀತಿಸುತ್ತಾರೆ ಮತ್ತು ಸ್ವಯಂ ಗೀಳಿ(self obsessive)ಗಾಗಿ ಕುಖ್ಯಾತರಾಗಿರುತ್ತಾರೆ. ಸಿಂಹ ರಾಶಿಯ ಜನರು ಸಾಮಾನ್ಯವಾಗಿ ಸ್ವಾರ್ಥಿಗಳಾಗಿರುತ್ತಾರೆ ಮತ್ತು ಅವರು ಇತರರಿಗಿಂತ ತಾವೇ ಶ್ರೇಷ್ಠರು ಎಂಬ ಕಲ್ಪನೆ ಹೊಂದಿರುತ್ತಾರೆ. ಮುಂದಿನ ಬಾರಿ ನೀವು ಸಿಂಹ ರಾಶಿಯವರೊಂದಿಗೆ ಮಾತನಾಡುವಾಗ ಬೇಕಿದ್ದರೆ ಗಮನ ಕೊಟ್ಟು ನೋಡಿ. ಎಲ್ಲ ಜನರು ತಮ್ಮಂತೆ ಇರಲು ಬಯಸುತ್ತಾರೆ ಎಂದವರು ತಿಳಿದಿರುತ್ತಾರೆ.  ಅಹಂಕಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ ಇವರು. ಆದರೂ ಇವರಿಗೆ  ಸ್ನೇಹಿತರು ಮತ್ತು ಬೆಂಬಲಿಗರು ಹೆಚ್ಚಾಗಿ ಇರಲು ಕಾರಣ ಇವರ ವರ್ಚಸ್ವಿ ವ್ಯಕ್ತಿತ್ವ. ಈ ರಾಶಿಯವರಿಗೆ ಅದೂ ಕೂಡಾ ಚೆನ್ನಾಗಿ ತಿಳಿದಿರುವ ಸಂಗತಿಯೇ. ಹಾಗಾಗಿ, ಅಹಂಕಾರ ಪಡಲು ಕೂಡಾ ತಾವು ಅರ್ಹರು ಎಂದುಕೊಂಡಿರುತ್ತಾರೆ. 

ಧನು(Sagittarius)
ಧನು ರಾಶಿಯವರ ಪ್ರಕಾರ, ಇವರು ಎಲ್ಲ ವಿಷಯಗಳ ಕೇಂದ್ರಬಿಂದು. ಹೌದು, ಅವರ ವರ್ತನೆ ಹಾಗೆಯೇ ಇರುತ್ತದೆ. ಜಗತ್ತು ತಮ್ಮ ಸುತ್ತ ಸುತ್ತುತ್ತಿದೆ ಎಂದಿವರು ಅಂದುಕೊಂಡಿರುತ್ತಾರೆ. ಕೆಲವೊಮ್ಮೆ ಇವರು ಸಿಕ್ಕಾಪಟ್ಟೆ ಸ್ವಪ್ರೀತಿಯಲ್ಲಿ ತೊಡಗುತ್ತಾರೆ ಮತ್ತು ತಮ್ಮ ಕುಂದುಗಳನ್ನು ಕೂಡಾ ರೊಮ್ಯಾಂಟಿಸೈಸ್ ಮಾಡಿ ನೋಡುತ್ತಾರೆ. ತಮ್ಮ ಅದ್ಭುತವಾದ ವ್ಯಕ್ತಿತ್ವಕ್ಕೆ ಎಲ್ಲರೂ ಬೀಳುತ್ತಾರೆ, ಎಲ್ಲರೂ ತಮ್ಮನ್ನು ಪ್ರೀತಿಸುತ್ತಾರೆ ಎಂದುಕೊಳ್ಳುತ್ತಾರೆ. ಇಷ್ಟಾದರೂ ಇವರ ಆಕರ್ಷಕ ವ್ಯಕ್ತಿತ್ವವೇ ಇವರನ್ನು ಯಾರಾದರೂ ದ್ವೇಷಿಸದಂತೆ ತಡೆಯುತ್ತದೆ. 

ವೀಳ್ಯದೆಲೆ ಹೀಗೆ ಬಳಸಿದ್ರೆ ಹಣ ನಿಮ್ಮತ್ತ ಹರಿದು ಬರುತ್ತದೆ..

ವೃಷಭ(Taurus)
ಇವರು ಸೊಕ್ಕಿಗೆ ಪ್ರಸಿದ್ಧಿಯಾಗಿದ್ದಾರೆ. ಸಿಕ್ಕಾಪಟ್ಟೆ ಮಹತ್ವಾಕಾಂಕ್ಷಿಗಳು ಹಾಗೂ ತಮ್ಮ ಲೋಕದಲ್ಲೇ ತಾವು ಮುಳುಗಿರುವವರು. ಕೆಲವೊಮ್ಮೆ ಜೊತೆಗಿರುವವರನ್ನು ಬದಿಗೆ ಸರಿಸಿ ಅವರು ಅಗತ್ಯವೇ ಇಲ್ಲವೆನ್ನುವಂತ ಭಾವನೆ ತರಿಸಿಬಿಡಬಲ್ಲರು. ಯಾವ ವಿಷಯಕ್ಕೂ ರಾಜಿ ಮಾಡಿಕೊಳ್ಳುವ ಸ್ವಭಾವ ಇವರದಲ್ಲ. ತಾವು ಮಾಡಿದ್ದೆಲ್ಲ ಸರಿ ಎಂದುಕೊಳ್ಳುವವರು. 

Saturn Effect: ಶನಿ ಸಾಡೇಸಾತಿ ಈ ರಾಶಿಯವರಿಗೆ ಕಷ್ಟಕಾಲ!

ಮೇಷ(Aries)
ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಜನರು ತಮ್ಮ ಬಗ್ಗೆ ಮಾತ್ರ ಯೋಚಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತುಂಬಾ ಸಂವೇದನಾರಹಿತರಾಗಿರುತ್ತಾರೆ ಮತ್ತು ಸ್ವಯಂ-ಕೇಂದ್ರಿತವಾಗಿರುತ್ತಾರೆ. 
ವಿಷಯಗಳನ್ನು ಭಾವನಾತ್ಮಕವಾಗಿ ಗ್ರಹಿಸುವಲ್ಲಿ ಹಿಂದೆ ಬೀಳುತ್ತಾರೆ. ಇದರಿಂದ ಅಹಂಕಾರಿಗಳೆನಿಸಿಕೊಳ್ಳುತ್ತಾರೆ. ಆದರೆ, ಇವರನ್ನು ನೇರವಾಗಿ ಸಹಾಯ ಕೇಳಿದರೆ ಅವರು ತಕ್ಷಣ ಸಹಾಯಕ್ಕೆ ಧಾವಿಸುತ್ತಾರೆ. ಯಾರಾದರೂ ನೀನೇ ಇಂದ್ರ ಚಂದ್ರ ಎಂದು ಉಬ್ಬಿಸಿದರೆ, ಆಗ ಇವರಿಂದ ಕೆಲಸ ಮಾಡಿಸಿಕೊಳ್ಳಬಹುದು. 

click me!