ಕಾಲು ಅಲುಗಾಡಿಸುವುದರಿಂದ ಆಗುವ ಸಮಸ್ಯೆಗಳು ಒಂದಲ್ಲ ಎರಡಲ್ಲ.....ಯಾಕೆ ಎಚ್ಚರ ವಹಿಸಬೇಕು......
ಕಾಲು ಅಲುಗಾಡಿಸುವುದು ಕೆಟ್ಟ ಅಭ್ಯಾಸ ಎಂದು ನಮ್ಮ ಹಿರಿಯರು ಪದೇ ಪದೇ ಹೇಳುತ್ತಿರುತ್ತಾರೆ. ಕೆಲಸ ಮಾಡುವಾಗ, ಮೀಟಿಂಗ್‌ನಲ್ಲಿ ಸುಮ್ಮನೆ ಕುಳಿತಿರುವಾಗ ಅಥವ ಏನೂ ಮಾಡದೆ ಸುಮ್ಮನಿದ್ದರೂ ಕಾಲು ಅಲುಗಾಡಿಸುವುದನ್ನು ನೋಡಬಹುದು. ವೈದ್ಯರು ಇದನ್ನು ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್ ಎಂದು ಕರೆಯುತ್ತಾರೆ ಇದರ ಬಗ್ಗೆ ಸಾಕಷ್ಟು ಅಧ್ಯಯನ ಕೂಡ ಮಾಡಲಾಗಿದೆ. ಆದರೆ ಇದರಿಂದ ನಮಗೆ ಹಣ ಕಾಸಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಯಾರೂ ಯೋಚನೆ ಮಾಡುವುದಿಲ್ಲ. ಕೆಲವ ರಾಶಿಯವರಿಗೆ ಶುಕ್ರ ಗ್ರಹದಿಂದ ಈ ಸಮಸ್ಯೆ ಕಾಣಲಿದೆ.
ಹೌದು! ಪದೇ ಪದೇ ಕಾಲು ಅಲುಗಾಡಿಸುವುದರಿಂದ ಹಣ ಕಾಸಿನ ಸಮಸ್ಯೆ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಮನೆಯಲ್ಲಿ ಖುಷಿ, ಐಶ್ವರ್ಯ, ಸಂಪತ್ತು ಮತ್ತು ಆರೋಗ್ಯದಲ್ಲಿ ಏರುಪೇರು ಕಾಣಲಿದೆ. ಕೆಲವರು ರಾಶಿಯವರಿಗೆ ಒಳ್ಳೆ ಸಮಯ ನಡೆಯುತ್ತಿದ್ದರೂ ಕೂಡ ಕಾಲು ಅಲುಗಾಡಿಸುವುದರಿಂದ ಒಳ್ಳೆ ಸಮಯ ಕಡಿಮೆ ಆಗುತ್ತದೆ. ಅಲ್ಲದೆ ರಾಜ ಯೋಗ, ಜಗಕೇಸರಿ ಯೋಗದಲ್ಲಿ ಇರುವ ನಕ್ಷತ್ರದವರು ಯಾವುದೇ ಕಾರಣಕ್ಕೂ ಕಾಲು ಅಲುಗಾಡಿಸಬಾರದು. ಕಾಲು ಅಲುಗಾಡಿಸುವುದರಿಂದ ನಮ್ಮ ಕಾನ್ಫಿಡೆನ್ಸ್ ತುಂಬಾ ಕಡಿಮೆ ಕಡಿಮೆ ಆಗುತ್ತದೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮೂಲ ನಕ್ಷತ್ರದ ಹುಡ್ಗೀರು ಯಾಕೆ ಪಳಪಳ ಅಂತಾರೆ; 'ಲಕ್ಷ್ಮಿ ನಿವಾಸ' ಭಾವನ ಲುಕ್ ನೋಡಿ
ಮನೆಯಲ್ಲಿ ಮಹಾಲಕ್ಷ್ಮಿ ಇರಬೇಕು, ಪರ್ಸ್ ತುಂಬಾ ಹಣ ಇರಬೇಕು, ಲಾಕರ್‌ನಲ್ಲಿ ಚಿನ್ನ ಬೆಳ್ಳಿ ತುಂಬಿರಬೇಕು ಅಂದರೆ ಕಾಲು ಅಲುಗಾಡಿಸಬಾರದು ಎಂದು ಅಜ್ಜ ಅಜ್ಜಿ ಹೇಳುತ್ತಾರೆ. ಅದರಲ್ಲೂ ಮಹಾಲಕ್ಷ್ಮಿ ನಕ್ಷತ್ರದವರು ಕಾಲು ಅಲುಗಾಡಿಸಿದರೆ ಮುಂದೆ ಕಾಲಿಡುವ ಮನೆ ನಷ್ಟ ಎದುರಿಸುತ್ತಾರೆ ಎನ್ನಲಾಗಿದೆ. ಗಂಡಸರು ಕಾಲು ಅಲುಗಾಡಿಸುವುದರಿಂದ ಹೆಂಡತಿ ಆರೋಗ್ಯದಲ್ಲಿ ಏರುಪೇರು, ಸುಮ್ಮನೆ ಟೆನ್ಶನ್ ಹೆಚ್ಚಾಗುವುದು ಹಾಗೂ ಅರ್ಥಿಕ ಸಮಸ್ಯೆ ಹೆಚ್ಚಾಗಲಿದೆ.
ಯಶ್-ರಾಧಿಕಾ ಮದುವೆಯಾಗಿ 8 ವರ್ಷ; ಕೊತ್ತಂಬರಿ ಸೊಪ್ಪು ಗಿಫ್ಟ್ ಕೊಟ್ಟಿದ್ರಂತೆ!
ಆರೋಗ್ಯ ಸಮಸ್ಯೆ:
ಕುಳಿತಲ್ಲಿ ನಿಮ್ಮ ಕಾಲು ಚಲನೆ ಮಾಡುವುದು ನಿಮ್ಮ ಹೃದಯಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ ಇದನ್ನು ಒಂದು ಸಿಂಡ್ರೋಮ್ ಎಂದು ಹೇಳುತ್ತಾರೆ..ಈ ವ್ಯಕ್ತಿಗಳು ನಿದ್ರೆ ಮಾಡುವ ಮುನ್ನ 200 ರಿಂದ 300 ಸಲ ಕಾಲು ಅಲುಗಾಡಿಸುತ್ತಾರೆ. ಈ ಅಭ್ಯಾಸ ಇದ್ದವರಲ್ಲಿ ನಕಾರಾತ್ಮಕ ಆಲೋಚನೆಗಳು ಹೆಚ್ಚಾಗುತ್ತದೆ.