ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಅಂತೆಯೇ, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯಲ್ಲಿಯೂ ಶನಿ ಪರ್ವತವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
ಕೈಯಲ್ಲಿ ಶನಿ ಪರ್ವತದ ಮೇಲೆ ಯಾವುದಾದರೂ ಗುರುತು ಇದ್ದರೆ, ವ್ಯಕ್ತಿಯ ಜೀವನದಲ್ಲಿ ಹಲವು ಸಮಸ್ಯೆಗಳಿರುತ್ತವೆ ಎನ್ನುತ್ತದೆ ಹಸ್ತ ಸಾಮುದ್ರಿಕಾ ಶಾಸ್ತ್ರ. ಇಷ್ಟಕ್ಕೂ ಈ ಶನಿ ಪರ್ವತ ಕೈಲಿ ಎಲ್ಲಿರುತ್ತದೆ, ಹಾಗೊಂದು ವೇಳೆ ಶನಿ ಪರ್ವತದ ಮೇಲೆ ಗುರುತಿದ್ದರೆ ಏನು ಸಮಸ್ಯೆ ಎಲ್ಲವನ್ನೂ ತಿಳಿಯೋಣ.
ಕೈ ನೋಡಿ ಭವಿಷ್ಯ ಹೇಳೋದೇನು ಹೊಸತಲ್ಲ. ಇದು ತುಂಬಾ ಹಳೆಯ ಶಾಸ್ತ್ರ. ಸಾಮುದ್ರಿಕಾ ಶಾಸ್ತ್ರದ ಒಂದು ಭಾಗವಾದ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಕೈಯ್ಯ ರಚನೆ, ಆಕಾರ, ರೇಖೆಗಳು ಇತ್ಯಾದಿಯನ್ನು ನೋಡಿ ಭವಿಷ್ಯ ಹೇಳಲಾಗುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕೈ ರೇಖೆಗಳಂತೆ ಇರುವ ಗುರುತುಗಳು ಮತ್ತು ಕೈಲಿರುವ ಉಬ್ಬು(ಪರ್ವತಗಳು) ತಗ್ಗುಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಅಲ್ಲದೆ, ಈ ಪರ್ವತಗಳ ಮೇಲೆ ಇರುವ ಚಿಹ್ನೆಗಳಿಂದ, ವ್ಯಕ್ತಿಯ ಜೀವನದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಸಂಗತಿಗಳನ್ನು ಕಂಡು ಹಿಡಿಯಬಹುದು. ಅದೇ ರೀತಿ ಕೈಲಿರುವ ಶನಿ ಪರ್ವತಕ್ಕೆ ಧರ್ಮ ಗ್ರಂಥಗಳಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾದರೆ ಅಂಗೈಯಲ್ಲಿ ಶನಿ ಪರ್ವತ ಎಲ್ಲಿದೆ ಮತ್ತು ವ್ಯಕ್ತಿಯ ಜೀವನದ ಮೇಲೆ ಅದರ ಸ್ಥಾನದ ಪರಿಣಾಮ ಏನು ಎಂದು ತಿಳಿಯೋಣ.
ಭಾರತದಲ್ಲಿ ಗೋಚರವಾಗಲಿರುವ ವರ್ಷದ ಮೂರನೇ ಗ್ರಹಣ, ಯಾವಾಗ ಗೊತ್ತಾ?
ಕೈಯಲ್ಲಿ ಶನಿ ಪರ್ವತ(Shani Mount) ಎಲ್ಲಿದೆ?
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈಯಲ್ಲಿ ಮಧ್ಯದ ಬೆರಳಿನ ಕೆಳಗಿನ ಭಾಗ, ಅಂದರೆ ಮಧ್ಯದ ಬೆರಳು ಪ್ರಾರಂಭವಾಗುವ ಸ್ಥಳದಲ್ಲಿ ಶನಿ ಪರ್ವತವಿದೆ. ಶನಿ ಪರ್ವತವು ಏರಿದ್ದರೆ, ಅಂದರೆ ಚೆನ್ನಾಗಿ ಉಬ್ಬಿದಂತಿದ್ದರೆ ಅದು ಅದೃಷ್ಟವಂತ ವ್ಯಕ್ತಿಯ ಸಂಕೇತವಾಗಿದೆ. ಅಂತಹ ಜನರು ತುಂಬಾ ಕಠಿಣ ಪರಿಶ್ರಮ ಪಡುವವರು ಮತ್ತು ಜೀವನದಲ್ಲಿ ಉನ್ನತ ಸ್ಥಾನವನ್ನು ಸಾಧಿಸುತ್ತಾರೆ.
ಶನಿ ಪರ್ವತದ ಮೇಲೆ ಗುರುತನ್ನು ಏಕೆ ಶುಭವೆಂದು ಪರಿಗಣಿಸಲಾಗುವುದಿಲ್ಲ?
ಹಸ್ತಸಾಮುದ್ರಿಕ ಶಾಸ್ತ್ರ(Palmistry)ದ ಪ್ರಕಾರ, ಶನಿ ಪರ್ವತದ ಮೇಲೆ ಯಾವುದೇ ರೀತಿಯ ಗುರುತು ಇರಬಾರದು. ಹಾಗೊಂದು ವೇಳೆ ಇದ್ದರೆ ಅದನ್ನು ಅಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಮ್ಮ ಅಂಗೈಯಲ್ಲಿ ಶನಿಯ ಪರ್ವತದ ಮೇಲೆ ಅಡ್ಡ ಅಥವಾ ದ್ವೀಪ ಚಿಹ್ನೆಯನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಕಾಲಕಾಲಕ್ಕೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಜನರು ಆರೋಗ್ಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಸದಾ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಇನ್ನುಈ ಸ್ಥಳದಲ್ಲಿ ನಕ್ಷತ್ರದಂಥ ಗುರುತಿದ್ದರೆ, ಅಂಥವರು ಜೀವನದಲ್ಲಿ ದೊಡ್ಡ ಅಪಘಾತ(accidents), ದೊಡ್ಡ ಗಾಯ ನೋವುಗಳು, ಪ್ಯಾರಾಲಿಸಿಸ್‌ನಂಥ ಸಮಸ್ಯೆ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇಂಥ ಮಾರ್ಕ್ ಇರುವ ವ್ಯಕ್ತಿ ಜೀವಿತಾವಧಿಯಲ್ಲಿ ಅಪರಾಧಕ್ಕಾಗಿ ಜೈಲಿಗೆ ಹೋಗಬೇಕಾಗಿ ಬಂದರೂ ಅಚ್ಚರಿಯಿಲ್ಲ.
ಈ ನಾಲ್ಕು ರಾಶಿಯ ಜನ ಹೆಚ್ಚಾಗಿ arranged marriage ಆಗ್ತಾರೆ
ಅದೇ ಶನಿ ಪರ್ವತದಲ್ಲಿ ಚೌಕಾಕಾರದ ಚಿಹ್ನೆ ಇದ್ದರೆ, ನಿಟ್ಟುಸಿರು ಬಿಡಬಹುದು. ಇದು ವ್ಯಕ್ತಿಯು ಯಾವುದೇ ಸಮಸ್ಯೆ ಬಂದರೂ ಅದರಿಂದ ಹೊರ ಬರಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂಬ ಸೂಚಕವಾಗಿದೆ.
ಅಂಥ ಪರಿಸ್ಥಿತಿಯಲ್ಲಿ, ಶನಿ ಗ್ರಹದ ದುಷ್ಪರಿಣಾಮಗಳನ್ನು ತಪ್ಪಿಸಲು, ಜ್ಯೋತಿಷ್ಯದ ಪ್ರಕಾರ ಶನಿ(Saturn) ದೇವರ ಮಂತ್ರಗಳನ್ನು ಪಠಿಸಲು ಮತ್ತು ಶನಿ, ಶಿವ, ಆಂಜನೇಯನನ್ನು ಪೂಜಿಸಲು ಸಲಹೆ ನೀಡಲಾಗುತ್ತದೆ. ಹನುಮಾನ್ ಚಾಲೀಸಾ ಮತ್ತು ಶನಿ ಚಾಲೀಸಾ ಪಠಣದಿಂದ ಸಾಕಷ್ಟು ಸಮಸ್ಯೆಗಳಿಂದ ಪಾರಾಗಬಹುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.