ಬಣ್ಣಗಳು, ಸಂಗೀತ, ರಸದೌತಣ, ಭಾಂಗ್, ಎಲ್ಲೆಲ್ಲೂ ಸಂಭ್ರಮ- ಸ್ವರ್ಗಕ್ಕೆ ಕಿಚ್ಚು ಹಚ್ಚೋದಂದ್ರೆ ಇದೇ ಇರ್ಬೇಕು. ಈ ಬಣ್ಣಗಳ ಹಬ್ಬ ಹೋಳಿಯಲ್ಲಿ ಭಾಂಗ್ ಕುಡಿಯೋದೇಕೆ? ಅದನ್ನು ಮಾಡೋದು ಹೇಗೆ? ಇದರ ಪ್ರಾಮುಖ್ಯವೇನು? ಎಲ್ಲ ಹೇಳ್ತೀವಿ ಬನ್ನಿ.
ಇನ್ನೇನು ಹೋಳಿ(Holi) ಹಬ್ಬ ಬಂದೇಬಿಡ್ತು. ಮಕ್ಕಳು ಹೋಳಿಯಾಡುವ ಹೊಸ ಹೊಸ ರೀತಿಯ ಆಟಿಕೆಗಳನ್ನು ಕೊಂಡಿಟ್ಟುಕೊಳ್ಳುತ್ತಿದ್ದಾರೆ. ಹಿರಿಯರು ಬಣ್ಣಗಳನ್ನು ತಂದಿಡುವುದು, ಹೋಳಿಯ ದಿನ ಮಾಡಬೇಕಾದ ಅಡುಗೆಗಳಿಗೆ ದಿನಸಿ ಖರೀದಿ ಸೇರಿದಂತೆ ತಮ್ಮದೇ ಆದ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಉತ್ತರ ಭಾರತದ ಕಡೆಯಂತೂ ಮನೆ ಮನೆಯಲ್ಲೂ ಜನ ಭಾಂಗ್ ತಯಾರಿಯಲ್ಲಿ ನಿರತರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಉತ್ತರ ಭಾರತೀಯರನ್ನು ನೋಡಿ ಎಲ್ಲೋ ಕೆಲವರು ಅನುಕರಿಸುತ್ತಾರೆಯೇ ಹೊರತು ಭಾಂಗ್ ಇಲ್ಲಿನ ಮಟ್ಟಿಗೆ ಅಷ್ಟೊಂದು ಚಾಲ್ತಿಯಲ್ಲಿಲ್ಲ. ಆದರೂ, ಭಾಂಗ್(Bhang) ಏಕೆ ಹೋಳಿ ಹಬ್ಬದಲ್ಲಿ ಮಾಡುತ್ತಾರೆ, ಅದನ್ನು ತಯಾರಿಸುವುದು ಹೇಗೆ, ಕುಡಿಯುವುದರ ಪ್ರಯೋಜನವೇನು ಎಲ್ಲವನ್ನೂ ಹೇಳುತ್ತೇವೆ ಬನ್ನಿ.
ಭಾಂಗ್ ಎಂದರೇನು?
ಗಾಂಜಾ ಎಲೆಗಳನ್ನು ನೀರಿನಲ್ಲಿ ನೆನೆಸಿ ಭಾಂಗ್ ತಯಾರಿಸಲಾಗುತ್ತದೆ. ಪುರಾಣಗಳಲ್ಲಿ ಭಾಂಗ್ ಕುರಿತ ಅನೇಕ ಉಲ್ಲೇಖಗಳನ್ನು ನೋಡಬಹುದು. ಪರಶಿವನಿಗಂತೂ ಭಾಂಗ್ ಎಂದರೆ ಎಲ್ಲಿಲ್ಲದ ಪ್ರೀತಿ. ಶಿವರಾತ್ರಿ(Maha Shivaratri) ಮತ್ತು ಹೋಳಿ ಆಚರಣೆಯಲ್ಲಿ ಬಾಂಗ್ ಸೇವಿಸುವುದು ಆಚರಣೆಯಾಗಿ ಬೆಳೆದು ಬಂದಿದೆ.
ಬಾದಾಮಿ, ಪಿಸ್ತಾ, ಸಕ್ಕರೆ, ಹಾಲು, ಹಾಗೂ ಗಾಂಜಾ ಸೇರಿಸಿ ಭಾಂಗ್ ತಯಾರಿಸಲಾಗುತ್ತದೆ. ಗಾಂಜಾ ಎಂಬುದು ನಿಷೇಧಿತ ವಸ್ತುವಾದರೂ ಹೋಳಿಗೆ ಈ ಭಾಂಗನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸುವುದರಿಂದ, ಬದಲಿಯಾಗಿ ತಂಬಾಕು ಸೇರಿದಂತೆ ಬೇರೆ ಅಮಲಿನ ಪದಾರ್ಥ ಬಳಸಲಾಗುತ್ತದೆ. ಇದೊಂದು ಆಚರಣೆಯಾಗಿ ಬೆಳೆದು ಬಂದಿರುವುದರಿಂದ ಹಬ್ಬದಲ್ಲಿ ಭಾಂಗ್ ಕುಡಿಯಲು ಅಂಥ ಅಡ್ಡಿಯೇನು ಕಂಡುಬರುವುದಿಲ್ಲ. ಅಲ್ಲದೆ, ಕೆಲವೆಡೆ ಭಾಂಗನ್ನು ಔಷಧಿ ಎಂಬ ರೀತಿಯಲ್ಲಿ ನೋಡಲಾಗುತ್ತದೆ. ಇದು ಜ್ವರ(fever) ಗುಣಪಡಿಸುತ್ತದೆ, ಸನ್ ಸ್ಟ್ರೋಕ್, ಬೇಧಿ, ಅಜೀರ್ಣ ಗುಣಪಡಿಸುವ ಜೊತೆಗೆ ಕಫ ನೀಗಿಸುತ್ತದೆ. ಹಸಿವು ಹೆಚ್ಚಿಸುತ್ತದೆ, ಮಾತಿನ ಸಮಸ್ಯೆಗಳನ್ನು ಸರಿ ಪಡಿಸುತ್ತದೆ, ಜೊತೆಗೆ ದೇಹ ಎಚ್ಚರದಲ್ಲಿರುವಂತೆ ನೋಡಿಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಈ ಎಲ್ಲವೂ ಈ ಕಾಲದಲ್ಲಿ ಬರುವ ಸಮಸ್ಯೆಗಳಾಗಿರುವುದರಿಂದ ಒಮ್ಮೆ ಅವನ್ನು ನೀಗಿಸಲು ಭಾಂಗ್ ಸೇವನೆ ಉತ್ತಮವಾಗಿದೆ.
undefined
Holi 2022: ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಹೋಳಿಗೂ ಸಂಬಂಧವುಂಟು!
ಹಿಂದೂ ನಂಬಿಕೆಗಳ ಪ್ರಕಾರ, ಸಸ್ಯವು ಶಿವ(Lord Shiva)ನೊಂದಿಗೆ ಸಂಬಂಧ ಹೊಂದಿದೆ. ದಂತಕಥೆಯ ಪ್ರಕಾರ, ಒಮ್ಮೆ ಶಿವನು ತನ್ನ ಕುಟುಂಬದೊಂದಿಗೆ ಜಗಳವಾಡಿದ ನಂತರ ಹೊಲಕ್ಕೆ ಹೋದನು. ಆಯಾಸ ಮತ್ತು ನಿರಾಶೆಯಿಂದ, ಅವನು ಈ ಎಲೆಗಳ ಸಸ್ಯದ ಕೆಳಗೆ ನಿದ್ರಿಸಿದನು. ಅವನು ಎಚ್ಚರವಾದಾಗ, ಅವನ ಕುತೂಹಲವು ಸಸ್ಯದ ಎಲೆಗಳನ್ನು ಅಗಿಯಲು ಕಾರಣವಾಯಿತು. ತಕ್ಷಣವೇ ಪುನರ್ಯೌವನಗೊಂಡ ಶಿವನು ಸಸ್ಯವನ್ನು ತನ್ನ ನೆಚ್ಚಿನ ಆಹಾರವನ್ನಾಗಿಸಿಕೊಂಡನು. ಅಂದಿನಿಂದ ಅವನನ್ನು ಭಂಗಿ ಶಿವ ಎನ್ನಲಾಗುತ್ತದೆ. ಭಾಂಗ್ ಕೂಡಾ ಹೋಳಿಗೆ ಸಮಾನವಾಗಿದೆ. ಬಣ್ಣದೋಕುಳಿಯ ಸಂಭ್ರಮದಷ್ಟೇ ಉತ್ಸಾಹವನ್ನು ಭಾಂಗ್ ಕೂಡಾ ನೀಡುತ್ತದೆ. ಇನ್ನು ಹೋಳಿ ಹಾಗೂ ಭಾಂಗ್ ಎರಡೂ ಒಟ್ಟಾದ ಮೇಲೆ ಕೇಳುವುದೇ ಬೇಡ- ಇದೊಂದು ಅತ್ಯಂತ ರೋಮಾಂಚಕ ಹಬ್ಬದ ಆಚರಣೆಯಾಗುವುದರಲ್ಲಿ ಸಂದೇಹವಿಲ್ಲ.
ವಿವಿಧ ರೀತಿಯ ಭಾಂಗ್
ಭಾಂಗ್ ಲಸ್ಸಿ(Thandai)
ಭಾಂಗ್ ಲಸ್ಸಿ ಅಥವಾ ಕ್ಯನಬೀಸ್ ಮಿಲ್ಕ್‌ಶೇಕ್ ದೇಶದಲ್ಲಿ ಇದನ್ನು ಸೇವಿಸುವ ಅತಿ ಜನಪ್ರಿಯ ವಿಧಾನವಾಗಿದೆ. ಹಾಲು, ಮೊಸರು, ಸಕ್ಕರೆ, ಭಾಂಗ್ ಎಲೆಗಳು ಹಾಗೂ ಬಹಳಷ್ಟು ಡ್ರೈ ಫ್ರೂಟ್ಸ್ ಹಾಕಿ ಇದನ್ನು ತಯಾರಿಸಲಾಗುತ್ತದೆ.
HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ
ಭಾಂಗ್ ಪಕೋಡಾ(Bhang Pakoras)
ಪಕೋಡಾಕ್ಕೆ ಗಾಂಜಾ ಎಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ತಿನ್ನುವವರ ಉತ್ಸಾಹ ಏರುತ್ತದೆ.
ಭಾಂಗ್ ಗುಜಿಯಾ(Bhang Gujiyas)
ಗುಜಿಯಾ ಎಂದರೆ ಸಿಹಿ ಪದಾರ್ಥವಾಗಿದ್ದು ಖೋವಾ ಮತ್ತು ಡ್ರೈ ಫ್ರೂಟ್ಸ್‌ನಿಂದ ತಯಾರಿಸಲಾಗುತ್ತದೆ. ಇದಕ್ಕೆ ಭಾಂಗ್ ಸೇರಿಸಿದಾಗ ಇದು ಮತ್ತಷ್ಟು ರಿಫ್ರೆಶಿಂಗ್ ಆಗುತ್ತದೆ.
(ಈ ಲೇಖನದ ಉದ್ದೇಶ ಮಾಹಿತಿ ತಿಳಿಸುವುದಷ್ಟೇ ಆಗಿದೆಯೇ ಹೊರತು, ಯಾವುದೇ ರೀತಿಯಲ್ಲಿ ಮಾದಕ ಪದಾರ್ಥ ಸೇವನೆಯನ್ನು ಬೆಂಬಲಿಸುವುದಾಗಿರುವುದಿಲ್ಲ.)