Story of Ahalya: ದೇವೇಂದ್ರನಿಗೆ ಮೈಯೆಲ್ಲಾ ಯೋನಿ! ಯಾಕೆ ಗೊತ್ತೆ?

By Suvarna News  |  First Published Nov 14, 2021, 4:20 PM IST

ನಮ್ಮ ಪುರಾಣಗಳಲ್ಲಿ ಬರುವ ದೇವಲೋಕದ ಒಡೆಯ, ಭೂಮಿಗೆ ಮಳೆಬೆಳೆಗಳನ್ನು ಕರುಣಿಸುವ ದೇವರಾಜ ಇಂದ್ರನಿಗೆ ಮೈತುಂಬ ಯೋನಿಗಳು! ಅದಕ್ಕೊಂದು ಕತೆಯಿದೆ. 
 


ದೇವೇಂದ್ರನಿಗೆ (Devendra) 'ಸಹಸ್ರಯೋನಿ' ಎಂಬ ಇನ್ನೊಂದು ಹೆಸರಿದೆ. ಯಾಕೆಂದರೆ ಅವನ ಮೈಯೆಲ್ಲಾ ಯೋನಿ (Vagina) ಗಳಿವೆ. ಅದನ್ನೇ 'ಸಹಸ್ರಾಕ್ಷ' ಎಂದೂ ಕರೆಯುತ್ತಾರೆ. ಅದು ಯಾಕೆಂದು ಇಲ್ಲಿ ಓದಿ.

ಊರ್ವಶಿಯ (Urvashi) ಹೆಮ್ಮೆಯನ್ನು ಮುರಿಯುವ ಉದ್ದೇಶದಿಂದ ಬ್ರಹ್ಮ (Brahma) ಅಹಲ್ಯೆಯನ್ನು (Ahalya) ಸೃಷ್ಟಿಸಿದ. ನಂತರ ಈಕೆಯನ್ನು ಮುದ್ಗಲನೆಂಬ ಮಹರ್ಷಿಗೆ ಉಡುಗೊರೆಯಾಗಿ ನೀಡಿದೆ. ಈಕೆ ಜಗತ್ತಿನಲ್ಲಿಯೇ ಅತ್ಯಂತ ಸುಂದರಿಯಾಗಿ, ಮನಮೋಹಕ ಕನ್ಯೆಯಾಗಿ ಬೆಳೆದಳು. ಈಕೆ ಪ್ರಾಪ್ತವಯಸ್ಕಳಾದಾಗ, ಆಕೆಗೆ ಸ್ವಯಂವರವನ್ನು ಮುದ್ಗಲ ಏರ್ಪಡಿಸಿದ. ಸ್ವಯಂವರ ಎಂದರೆ ನೆರೆದ ನೂರಾರು ವರರಲ್ಲಿ ಸ್ಪರ್ಧೆ ಏರ್ಪಡಿಸಿ ಗೆದ್ದವನನ್ನು ವಧು ಮದುವೆಯಾಗುವಂತೆ ಮಾಡುವುದು.

Tap to resize

Latest Videos

undefined

ಅಷ್ಟರಲ್ಲಾಗಲೇ ಅಹಲ್ಯೆಯ ಸೌಂದರ್ಯದ ಖ್ಯಾತಿ ಹದಿನಾಲ್ಕು ಲೋಕಗಳನ್ನೂ ಹಬ್ಬಿತ್ತು. ಇದ್ರನಿಗೂ ಆಕೆಯ ಮೇಲೆ ಮೋಹ ಇಮ್ಮಡಿಸಿತ್ತು. ಅವನೂ ಸ್ವಯಂವರಕ್ಕೆ ಬಂದ. ಅಲ್ಲಿ, ಅಹಲ್ಯೆಯ ತಂದೆ ಬ್ರಹ್ಮನು ಒಂದು ಸ್ಪರ್ಧೆಯನ್ನು ಏರ್ಪಡಿಸಿದ. ಅದೇನೆಂದರೆ, ಮೂರು ಲೋಕಗಳನ್ನು ಸುತ್ತಿ ಬರುವುದು. ಯಾರು ಮೊದಲು ಮೂಲೋಕಗಳ ಪ್ರದಕ್ಷಿಣೆ ಮುಗಿಸುತ್ತಾರೋ ಅವರೇ ಅಹಲ್ಯೆಯನ್ನು ವರಿಸುವ ಸಮರ್ಥರು. ಇಂದ್ರ ಐರಾವತವನ್ನು ಏರಿ ಲೋಕ ಸುತ್ತಲು ಹೊರಟುಹೋದ. ಅಲ್ಲಿಯೇ ಇದ್ದ ಗೌತಮ (Gowthama) ಮಹರ್ಷಿಗಳು, ಕಾಮಧೇನುವಿಗೆ ಪ್ರದಕ್ಷಿಣೆ ಬಂದು, ನನ್ನ ಲೋಕಪ್ರದಕ್ಷಿಣೆ ಪೂರ್ತಿಯಾಯ್ತು ಎಂದರು. ಕಾಮಾಧೇನುವಿನಲ್ಲಿಯೇ ಎಲ್ಲ ಲೋಕಗಳೂ ಇವೆ ಎಂದು ಪ್ರಾಜ್ಞರು ಸಮರ್ಥಿಸಿದರು. ಕೊನೆಗೂ ಅಹಲ್ಯೆಯನ್ನು ಗೌತಮನಿಗೆ ಮದುವೆ ಮಾಡಿಸಲಾಯಿತು. ಇಂದ್ರ ರೋಷದಿಂದ, ಅಸೂಯೆಯಿಂದ ಉರಿದುಹೋದ.

ದ್ರೌಪದಿಗೆ ಐದು ಜನ ಗಂಡಂದಿರು ಅನ್ನೋದರ ಅರ್ಥವೇನು?

ಹೀಗೇ ವರ್ಷಗಳು ಉರುಳಿಹೋದವು. ಅಹಲ್ಯೆಯ ಚೆಲುವಿನಿಂದ ಹುಚ್ಚನಾಗಿದ್ದ ಇಂದ್ರ, ಆಕೆಯನ್ನು ಅನುಭವಿಸಲು ಸಮಯ ಕಾಯುತ್ತಿದ್ದ. ಕೆಲಕಾಲದವರೆಗೆ ಆಕೆಯ ಚಲನವಲನಗಳನ್ನು ಹಾಗೆಯೇ ಗಮನಿಸಿದ. ಒ೦ದು ಮು೦ಜಾನೆ, ಮಹರ್ಷಿ ಗೌತಮರು ನದಿಯಲ್ಲಿ ಸ್ನಾನಗೈಯ್ಯಬೇಕೆ೦ದು ಬೇಗನೆ ಎದ್ದು ಆಶ್ರಮವನ್ನು ಬಿಟ್ಟು ಹೊರನಡೆದಾಗ, ಇ೦ದ್ರನಿಗೆ ಈ ಸ೦ದರ್ಭವು ಅತ್ಯ೦ತ ಸದವಕಾಶದ೦ತೆ ಕ೦ಡುಬಂತು.

ಇ೦ದ್ರನು ಗೌತಮ ಮುನಿಗಳ೦ತೆ ಮಾರುವೇಷವನ್ನು ಧರಿಸಿಕೊಂಡು, ಅಹಲ್ಯೆಯೋರ್ವಳೇ ಇದ್ದ ಆಶ್ರಮವನ್ನು ಪ್ರವೇಶಿಸಿದ. ಗೌತಮ ಮುನಿಗಳ ವೇಷದಲ್ಲಿದ್ದ ಇ೦ದ್ರನನ್ನು ಕ೦ಡು ಅಹಲ್ಯೆಯು, "ನಿನ್ನ ವರ್ತನೆಯು ನನ್ನ ಪತಿಯ ನಡವಳಿಕೆಯ೦ತೆ ಕ೦ಡುಬರುತ್ತಿಲ್ಲ. ನನ್ನ ಪತಿಯು ಒಮ್ಮಿ೦ದೊಮ್ಮೆಲೇ ನನ್ನನ್ನು ಬರಸೆಳೆದು ತನ್ನ ಬಾಹುಗಳಿ೦ದ ಬಿಗಿಯಾಗಿ ಅಪ್ಪಿಕೊ೦ಡು ನನ್ನೊಡನೆ ಆನ೦ದಿಸಲು ಬಯಸುವವರು. ಅದು ನನಗೆ ಚೆನ್ನಾಗಿ ಗೊತ್ತು" ಎ೦ದು ಹೇಳುತ್ತಾಳೆ.

ಗೌತಮ ಮುನಿಗಳ ವೇಷದಲ್ಲಿದ್ದ ಇ೦ದ್ರನ ದೇಹದಿ೦ದ ಹೊರಹೊಮ್ಮುತ್ತಿದ್ದ ಸುರಲೋಕದ ಸುಗ೦ಧವನ್ನು ಗುರುತಿಸಲು ಸಮರ್ಥಳಾಗುತ್ತಾಳೆ. ಆದರೂ ಆಕೆಗೆ ಇಂದ್ರನ ಜೊತೆಗಿನ ಸರಸವವು ಬೇಕೆನಿಸುತ್ತದೆ. ಇಂದ್ರನ ಮಾತಿನ ಮೋಡಿಗೆ ಆಕೆ ಮರುಳಾಗುತ್ತಾಳೆ. ಇಂದ್ರ ಆಕೆಯೊಡನೆ ಕೂಡುತ್ತಾನೆ.

Personality of Zodiac Signs: ಈ ಜನ್ಮರಾಶಿಯಲ್ಲಿ ಹುಟ್ಟಿದ ಮಕ್ಕಳು ತರ್ಲೆ ನನ್ಮಕ್ಳು!

ಗೌತಮ ಋಷಿಗಳು ಸ್ನಾನವನ್ನು ಪೂರೈಸಿಕೊ೦ಡು ನದಿಯಿ೦ದ ಹಿ೦ದಿರುಗಿ ಆಶ್ರಮದತ್ತ ಬಂದರು. ತನ್ನ ಆಶ್ರಮದ ದ್ವಾರದಲ್ಲಿ ತನ್ನದೇ ರೂಪವನ್ನು ಹೊ೦ದಿರುವ ವ್ಯಕ್ತಿಯು ಹೊರಬರುತ್ತಿರುವುದನ್ನು ಕ೦ಡು ಬೆರಗಾಗುತ್ತಾರೆ. ದಿವ್ಯದೃಷ್ಟಿಯಿಂದ, ನಡೆದುದನ್ನೆಲ್ಲ ಊಹಿಸುತ್ತಾರೆ. ಕ್ರೋಧದಿಂದ ಕೆಂಡವಾಗುತ್ತಾರೆ.

ಅಹಲ್ಯೆಯು ತನಗೆ ಮೋಸ ಮಾಡಿದಳು ಎಂದು ಸಿಟ್ಟಾದ ಅವರು, "ನೀನು ಕಲ್ಲಾಗಿ ಹೋಗು'' ಎಂದು ಶಪಿಸುತ್ತಾರೆ. ನಂತರ ಇಂದ್ರನತ್ತ ತಿರುಗಿ "ಪರನಾರಿಯರನ್ನು ಮೋಹಿಸುವ ನಿನ್ನ ಮೈಯೆಲ್ಲಾ ಸಾವಿರ ಯೋನಿಗಳು ತುಂಬಿಹೋಗಲಿ. ನಿನ್ನನ್ನು ಯಾರೂ ಮೋಹಿಸದಂತೆ ವಿಕಾರ ಸ್ವರೂಪ ನಿನ್ನದಾಗಲಿ'' ಎಂದು ಶಾಪ ಕೊಟ್ಟರು.

ಈ ಶಾಪದಿಂದಾಗಿ ಇಂದ್ರನ ಮೈಯೆಲ್ಲ ಯೋನಿಗಳು ತುಂಬಿಕೊಂಡವು. ಅಹಲ್ಯೆಯು ಕಲ್ಲಾದಳು. ಮುಂದೆ ಶ್ರೀರಾಮನ ಪಾದಸ್ಪರ್ಶದಿಂದ ಆಕೆಗೆ ಮುಕ್ತಿಯಾಯಿತು. ಇಂದ್ರನಿಗೆ ಎಂದಿಗೂ ಈ ಶಾಪದಿಂದ ನಿವೃತ್ತಿಯಾಗಲಿಲ್ಲ.

click me!