Dreams: ಚಿನ್ನ, ಬೆಳ್ಳಿ ಆಭರಣಗಳ ಕನಸು ಬಿದ್ದರೆ ಅದೃಷ್ಟವೋ, ದುರಾದೃಷ್ಟವೋ..?

By Suvarna NewsFirst Published Nov 14, 2021, 2:29 PM IST
Highlights

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಕಂಡರೆ ಅದು ಬಹಳ ಒಳ್ಳೆಯದಂತೆ. ಕನಸಿನಲ್ಲಿ ಯಾರಿಗಾದರೂ ಆಭರಣಗಳನ್ನು ಉಡುಗೊರೆಯಾಗಿ ನೀಡಿದರೆ ಶುಭ ಸಂಕೇತವೆಂದು ಪರಿಗಣಿಸಲಾಗಿದೆ. ಈ ರೀತಿ ಕನಸು ಕಂಡರೆ ನಿಮ್ಮ ಕೆಲಸದಲ್ಲಿ ಬಡ್ತಿ ಸಹ ಸಿಗಲಿದೆ ಎಂದು ಹೇಳಲಾಗುತ್ತದೆ. ಹಾಗಾದರೆ, ಕನಸಿನಲ್ಲಿ ಆಭರಣಗಳು ಬಿದ್ದರೆ ಯಾವ ಅರ್ಥವನ್ನು ಕೊಡಲಿದೆ ಎಂಬುದನ್ನು ನೋಡೋಣವೇ..?
 

ಆಭರಣ (Jewellery) ಎಂದರೆ ಎಲ್ಲರಿಗೂ ಪ್ರೀತಿ, ಇಷ್ಟ (Like) ಇದ್ದೇ ಇರುತ್ತದೆ. ಹೆಚ್ಚೆಚ್ಚು ಆಭರಣಗಳನ್ನು ಹೊಂದಬೇಕು ಎಂಬ ಕನಸು (Dream) ಸಹ ಹಲವರಿಗೆ ಇರುತ್ತದೆ. ಆದರೆ, ಎಲ್ಲರಿಗೂ ಅವರ ಕನಸು ತಕ್ಷಣ ಈಡೇರುವುದು ತುಸು ಕಷ್ಟವೇ ಸರಿ. ಹಾಗಂತ ಆಭರಣಗಳನ್ನು ಕೊಳ್ಳುವ, ಉಡುಗೊರೆಯಾಗಿ (Gift) ನೀಡುವ ಕನಸು ಕಂಡರೆ ಅದು ತಪ್ಪೇ..? (wrong) ಖಂಡಿತಾ ಇಲ್ಲ. ಅದು ನಿಮಗೆ ಅದೃಷ್ಟವನ್ನೂ (Luck) ತರುತ್ತೆ ಅನ್ನುತ್ತದೆ ಸ್ವಪ್ನ ಶಾಸ್ತ್ರ. 

ಸ್ವಪ್ನ ಶಾಸ್ತ್ರದ ಅನುಸಾರ, ಪ್ರತಿ ಕನಸಿಗೂ ಅದರದ್ದೇ ಆದ ಅರ್ಥ (Meaning) ಇದೆ. ಆದರೆ, ಹಲವು ಕನಸುಗಳು ನಮಗೆ ನೆನಪಿಗೇ ಬರುವುದಿಲ್ಲ. ಇನ್ನು ಕೆಲವು ಕನಸುಗಳು ಅಚ್ಚಳಿಯದೇ ಉಳಿದುಬಿಡುವುದೂ ಇದೆ. ಆದರೆ, ಒಬ್ಬ ವ್ಯಕ್ತಿಯು ಯಾವುದೇ ಕನಸುಗಳನ್ನು ಕಂಡರೂ ಅದಕ್ಕೊಂದು ಹಿನ್ನೆಲೆ, ಅರ್ಥ ಇರುತ್ತದೆ. ಕನಸಿನ ಮೇಲೆ ನಡೆದ ಅಧ್ಯಯನಗಳ (Study) ಪ್ರಕಾರ, ಅವುಗಳು ಭವಿಷ್ಯದಲ್ಲಿ (Future) ನಡೆಯಬಹುದಾದ ಘಟನೆಗಳ (Incident) ಬಗ್ಗೆ ಮುನ್ಸೂಚನೆಯನ್ನು ಕೊಡುತ್ತದೆ. 

ಅನೇಕ ಮಂದಿ ತಾವು ಹೊಸ ಹೊಸ ವಿನ್ಯಾಸದ (Design) ಚಿನ್ನ (Gold), ಬೆಳ್ಳಿ (Silver) ಆಭರಣಗಳನ್ನು ಧರಿಸಿರುವ ಅಥವಾ ಖರೀದಿಸುತ್ತಿರುವ ಕನಸನ್ನು ಕಂಡಿರುತ್ತಾರೆ. ಆದರೆ, ಕೆಲವೊಮ್ಮೆ ಇದು ಒಳ್ಳೇ (Good) ಪರಿಣಾಮವನ್ನು ನೀಡಿದರೆ, ಮತ್ತೆ ಕೆಲವು ಬಾರಿ ಕೆಟ್ಟ (Bad) ಪರಿಣಾಮವನ್ನು ಬೀರಬಹುದು. ಹಾಗಾದರೆ, ಕನಸಿನಲ್ಲಿ ಈ ಆಭರಣಗಳು ಕಂಡರೆ ಅದಕ್ಕೆ ಏನು ಅರ್ಥ ಎಂಬ ಬಗ್ಗೆ ನೋಡೋಣ ಬನ್ನಿ..

ಇದನ್ನು ಓದಿ: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿ

ಕನಸಲ್ಲಿ ಚಿನ್ನ - ಬೆಳ್ಳಿ ಆಭರಣ ಕಂಡರೆ

ಸ್ವಪ್ನ ಶಾಸ್ತ್ರದ ಅನುಸಾರ, ಚಿನ್ನ ಅಥವಾ ಬೆಳ್ಳಿಯಂತಹ ಅಮೂಲ್ಯವಾದ (Precious) ಲೋಹಗಳನ್ನು ನೀವು ಕನಸಿನಲ್ಲಿ ಕಂಡಿದ್ದೀರೆಂದಾದರೆ, ನಿಮ್ಮ ಜೇಬು (Pocket) ಬಿಸಿಯಾಗಲಿದೆ ಎಂದರ್ಥ. ಅಂದರೆ, ಶೀಘ್ರದಲ್ಲೇ ಹೆಚ್ಚು ಖರ್ಚು (Spent) ಮಾಡಲಿದ್ದೀರಿ ಎಂಬುದರ ಮುನ್ಸೂಚನೆ ಇದಾಗಿರುತ್ತದೆ. ಇಂತಹ ಕನಸಿನಿಂದ ನಿಮ್ಮ ಕುಟುಂಬದಲ್ಲಿ ಮದುವೆ (Marriage), ಮುಂಜಿಗಳಂತಹ ಶುಭ ಸಮಾರಂಭಗಳು ಏರ್ಪಡಬಹುದು ಇಲ್ಲವೇ ನಿಮ್ಮದೇ ಕಾರ್ಯಚಟುವಟಿಕೆ / ಯೋಜನೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುವ ಸಂದರ್ಭ ಒದಗಿಬರಬಹುದು. ಹೀಗಾಗಿ ನಿಮಗೆ ಇಂತಹ ಕನಸು ಬಿದ್ದರೆ ಆರ್ಥಿಕ (Economy) ಲೆಕ್ಕಾಚಾರವನ್ನು ಹಾಕಿಕೊಂಡು ಖರ್ಚುಗಳನ್ನು ಹೇಗೆ ಸರಿದೂಗಿಸಿಕೊಳ್ಳಬಹುದು ಎಂಬುದರ ಮೇಲೆ ಗಮನಹರಿಸಿ.

ಆಭರಣ ಕಳ್ಳತನವಾದರೆ? (Theft) 

ಕನಸಿನಲ್ಲಿ ನಿಮ್ಮ ಆಭರಣಗಳು ಕಳ್ಳತನವಾದರೆ, ನಿಮ್ಮ ಶತ್ರುಗಳು ಇಲ್ಲವೇ ಎದುರಾಳಿಗಳು ನಿಮಗೆ ಹಾನಿ ಮಾಡಲಿದ್ದಾರೆ ಎಂಬುದರ ಸೂಚಕ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಇನ್ನು ನೀವು ಕನಸಿನಲ್ಲಿ ಆಭರಣಗಳನ್ನು ಖರೀದಿಸಿದರೆ (Purchase) ಅದು ನಿಮಗೆ ಶುಭ ಸಂಕೇತವಾಗಿದೆ. ಶೀಘ್ರದಲ್ಲೇ ನಿಮಗೆ ಯಶಸ್ಸಿನ (Success) ಹಾದಿ (Path) ತೆರೆದುಕೊಳ್ಳಲಿದೆ (Open) ಎಂಬ ಅರ್ಥವನ್ನು (Meaning) ಕೊಡುತ್ತದೆ. 

ನೀವೇ ಆಭರಣ ಧರಿಸುವ ಕನಸು ಬಿದ್ದರೆ..? (wearing Dream) 

ನೀವು ಆಭರಣಗಳನ್ನು ಧರಿಸುವ, ಧರಿಸಿರುವ ರೀತಿ ನಿಮಗೆ ಕನಸು ಬಿದ್ದಿದೆ ಎಂದಾದರೆ ಸ್ವಲ್ಪ ಮುನ್ನೆಚ್ಚರಿಕೆ (Precaution) ವಹಿಸುವ ಅಗತ್ಯವಿದೆ. ಇದಕ್ಕೆ ನೀವು ಪರಿಹಾರವನ್ನು (Solution) ಬಲ್ಲವರಿಂದ ಕೇಳಿ ತಿಳಿದುಕೊಂಡರೆ ಒಳ್ಳೆಯದು. ಅಂದರೆ ನಿಮ್ಮ ಪ್ರೀತಿಪಾತ್ರರಲ್ಲಿ (Loved one) ಒಬ್ಬರು ನಿಮ್ಮಿಂದ ದೂರ ಸರಿಯುತ್ತಾರೆ ಎಂಬ ಅರ್ಥವನ್ನು ಈ ಕನಸು ಕೊಡುತ್ತದೆ. ಅಂದರೆ, ವಿವಾಹ ಸಂಬಂಧವು ಮುರಿದುಬೀಳುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ವ್ಯವಹಾರ (Business) ಕ್ಷೇತ್ರವನ್ನು ಗಮನಿಸುವುದಾದರೆ, ಅಲ್ಲಿ ನಷ್ಟಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ನೀವು ಎಚ್ಚರಿಕೆಯ ಹೆಜ್ಜೆಯನ್ನು ಇಡುವ ಮೂಲಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಾಗುತ್ತದೆ. 

ಇದನ್ನು ಓದಿ: ನಿಮ್ಮಿಷ್ಟದ ಬಣ್ಣದಲ್ಲಿದೆ ವ್ಯಕ್ತಿತ್ವದ ರಹಸ್ಯ !!

ಉಡುಗೊರೆಯಾಗಿ ಆಭರಣ ನೀಡುವ ಕನಸು (Gift)

ನಿಮ್ಮ ಹತ್ತಿರದವರಿಗೋ, ಸಂಬಂಧಿಕರಿಗೋ (Relative) ಅಥವಾ ನಿಮ್ಮ ಮೇಲಧಿಕಾರಿಗಳಿಗೋ (Boss) ಆಭರಣಗಳನ್ನು ಉಡುಗೊರೆಯಾಗಿ ನೀಡುವ ಕನಸು ಬಿದ್ದರೆ, ಅದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಈ ರೀತಿ ಕನಸುಗಳು ಬಿದ್ದರೆ, ನಿಮಗೆ ಉದ್ಯೋಗದಲ್ಲಿ ಬಡ್ತಿ (Promotion) ಸಿಗಬಹುದು ಇಲ್ಲವೇ ವೇತನದಲ್ಲಿ (Salary) ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಹೆಳಲಾಗುತ್ತದೆ. ಇನ್ನು ನೀವು ವ್ಯಾಪಾರ-ವ್ಯವಹಾರ ಕ್ಷೇತ್ರದವರಾಗಿದ್ದರೆ ವ್ಯಾಪಾರದಲ್ಲಿ ದೊಡ್ಡಮಟ್ಟಿನ ಯಶಸ್ಸು ಸಿಗುವ ಸಾಧ್ಯತೆಗಳು ಹೆಚ್ಚಾಗಿರಲಿದೆ. 

click me!