Valentine Day : ಪ್ರೀತಿ ಧಕ್ಕೋದು ಯಾರಿಗೆ?

By Suvarna News  |  First Published Feb 14, 2023, 6:04 PM IST

ಪ್ರೀತಿ ಎಲ್ಲರಿಗೂ ಸಿಗುವಂತಹದ್ದಲ್ಲ. ಅದಕ್ಕೂ ಅದೃಷ್ಟ ಮಾಡಿರ್ಬೇಕು. ನಿಮಗೆ ಶುದ್ಧ ಪ್ರೀತಿ ಸಿಕ್ಕಿದೆ ಅಂದ್ರೆ ಅದಕ್ಕೆ ನಿಮ್ಮ ಗ್ರಹ, ರಾಶಿಗಳು ಕಾರಣ. ಕೆಲ ರಾಶಿಯವರಿಗೆ ಪ್ರೀತಿಯ ಮಳೆಯಾದ್ರೆ ಮತ್ತೆ ಕೆಲ ರಾಶಿಯವರು ಏನು ಮಾಡಿದ್ರೂ ಪ್ರೀತಿ ಕೈಗೆ ಸಿಗೋದಿಲ್ಲ.
 


ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸ್ವಭಾವ ಹೊಂದಿರುತ್ತಾನೆ. ಗ್ರಹ ಹಾಗೂ ರಾಶಿ ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರೀತಿ ಧಕ್ಕುವುದ್ರಿಂದ ಹಿಡಿದು ಪ್ರೀತಿ ಕಳೆದುಕೊಳ್ಳುವವರೆಗೆ ಎಲ್ಲವೂ ಗ್ರಹವನ್ನು ಅವಲಂಬಿಸಿದೆ. ಗ್ರಹಗಳು ಸರಿಯಾದ ಸ್ಥಾನದಲ್ಲಿದ್ರೆ ಶುಭಫಲ ಪ್ರಾಪ್ತಿಯಾಗುತ್ತದೆ. ಗ್ರಹಗಳು ಕೆಟ್ಟ ಸ್ಥಾನದಲ್ಲಿದ್ರೆ ನಷ್ಟವಾಗುತ್ತದೆ. ನಿಜವಾದ ಪ್ರೀತಿ ಸಿಗೋದು ಅದೃಷ್ಟವೆನ್ನಬಹುದು. ಎಲ್ಲ ಸಮಯದಲ್ಲೂ ಪ್ರೀತಿ ಕೈ ಹಿಡಿಬೇಕೆಂದೇನಿಲ್ಲ. ಕೆಲವೊಮ್ಮೆ ಪ್ರೀತಿ ಕೈಕೊಡುತ್ತದೆ. ಪ್ರೀತಿ ವಿಷ್ಯದಲ್ಲಿ ಯಾವ ರಾಶಿಯವರ ಸ್ವಭಾವ ಹೇಗಿರುತ್ತದೆ, ಯಾರಿಗೆ ಪ್ರೀತಿ ಸಿಗುತ್ತದೆ ಎಂಬುದನ್ನು ನಾವಿಂದು ಹೇಳ್ತೆವೆ. 

ಯಾವ ರಾಶಿಯವರಿಗೆ ಸಿಗುತ್ತೆ ಪ್ರೀತಿ (Love) ? :

Latest Videos

undefined

ಮೇಷ : ಪ್ರೀತಿಯಲ್ಲಿ ಆತುರವಿಲ್ಲದೆ ಹೋದ್ರೆ ಇವರಿಗೆ ನಿಜವಾದ ಪ್ರೀತಿ ಸಿಗುತ್ತದೆ. ಮನಸ್ಸು (Mind) ಚಂಚಲವಾಗಿರುವ ಕಾರಣ ಮೇಷ ರಾಶಿಯವರ ಸಂಬಂಧ (Relationship) ದಲ್ಲಿ ಸಮಸ್ಯೆ ಕಾಣಿಸಿಕೊಳ್ತಿರುತ್ತದೆ. ಮನಸ್ಸು ಸ್ಥಿರವಾಗಿದ್ದರೆ ಪ್ರೀತಿ ಯಶಸ್ವಿಯಾಗಲು ಸಾಧ್ಯ.

ವೃಷಭ : ವೃಷಭ ರಾಶಿಯವರು ಪ್ರೀತಿ ಮಾಡೋದು ಮಾತ್ರವಲ್ಲ ಅದನ್ನು ಬಹಳ ಉತ್ಸಾಹದಿಂದ ನಿರ್ವಹಿಸುತ್ತಾರೆ.  ಆದ್ರೆ ಪ್ರೀತಿ ವಿಷ್ಯದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ಆಳವಾದ ಪ್ರೀತಿಯಲ್ಲಿದ್ರೂ ಒಂದಲ್ಲ ಒಂದು ಬಾರಿ ವಿಫಲನಾಗ್ತಾನೆ.

Valentine Day 2023: ಪ್ರೀತಿ ಎಂದರೇನು? ಪಾರ್ವತಿಯ ಪ್ರಶ್ನೆಗೆ ಶಿವ ಕೊಟ್ಟ ಉತ್ತರವಿಲ್ಲಿದೆ..

ಮಿಥುನ : ಮಿಥುನ ರಾಶಿಯವರಿಗೆ ಪ್ರೀತಿ ಹಾಗೂ ಸಫಲತೆ ಸದಾ ಸಿಗುತ್ತದೆ. ಅವರು ಬಯಸಿದ ಸಮಯದಲ್ಲಿ ಅವರಿಗೆ ಪ್ರೀತಿ ಧಕ್ಕುತ್ತದೆ. ಆದ್ರೆ ಪ್ರೀತಿಯಲ್ಲಿ ಸದಾ ಗೊಂದಲ (Confusion) ಹಾಗೂ ಉದ್ವೇಗವಿರುತ್ತದೆ. ಆರಂಭದಲ್ಲಿ ಚೆನ್ನಾಗಿರುವ ಪ್ರೀತಿ ಜೀವನ ನಂತ್ರದ ದಿನಗಳಲ್ಲಿ ಸಮಸ್ಯೆಯಾಗುತ್ತದೆ.

ಕರ್ಕ : ಪ್ರೀತಿ ವಿಷ್ಯದಲ್ಲಿ ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವರು ಭಾವನಾತ್ಮಕವಾಗಿ ಹೆಚ್ಚು ನರಳುತ್ತಾರೆ. ಈ ರಾಶಿಯವರು ಬೇಗನೆ ಭಾವನಾತ್ಮಕ ಉತ್ತುಂಗಕ್ಕೆ ಏರುತ್ತಾರೆ. ಪ್ರೀತಿ ವಿಷ್ಯದಲ್ಲಿ ಇವರು ಆತುರಪಡಬಾರದು.

ಸಿಂಹ : ನಮ್ಮಿಬ್ಬರ ಮಧ್ಯೆ ಇನ್ನೊಬ್ಬ ವ್ಯಕ್ತಿ ಬರಬಾರದು ಎಂಬುದು ಇವರು ಆಸೆ. ಹಾಗಾಗಿಯೇ ಪ್ರೀತಿಯನ್ನು ಹೆಚ್ಚು ಪ್ರಾಮಾಣಿಕವಾಗಿ ನಿಭಾಯಿಸ್ತಾರೆ. ಪ್ರೀತಿಯಲ್ಲಿರುವ ಈ ರಾಶಿಯ ಜನರು ವೃತ್ತಿಯಲ್ಲೂ ಏಳ್ಗೆ ಕಾಣ್ತಾರೆ. ಪ್ರೀತಿ ಇವರನ್ನು ಸುಧಾರಿಸುವ ಕೆಲಸ ಮಾಡುತ್ತದೆ.

ಕನ್ಯಾ : ಧನ ಹಾಗೂ ಸ್ವಾರ್ಥ ಸ್ವಭಾವ ಇವರನ್ನು ಪ್ರೀತಿಯಿಂದ ದೂರವಿಡುತ್ತದೆ. ಯಾರಿಂದ ಲಾಭವಿದ್ಯೋ ಆ ವ್ಯಕ್ತಿ ಜೊತೆ ಇರಲು ಈ ರಾಶಿಯವರು ಇಷ್ಟಪಡ್ತಾರೆ. ಹಣ ನೋಡಿ ಪ್ರೀತಿ ಮಾಡೋದು ಪ್ರೀತಿಯಲ್ಲ ಅದು ಅವಕಾಶವಾದ. ಈ ಪ್ರೀತಿ ಯಾವಾಗ್ಲೂ ಅಸಫಲವಾಗುತ್ತದೆ.

ತುಲಾ : ಪ್ರೀತಿಗಾಗಿ ಇವರು ಉನ್ನತ ಸ್ಥಾನವನ್ನು ಕಳೆದುಕೊಳ್ತಾರೆ. ಆದ್ರೆ ಪ್ರೀತಿ ವಿಷ್ಯದಲ್ಲಿ ಇವರು ಪ್ರಾಮಾಣಿಕವಾಗಿರ್ತಾರೆ. ಕೆಲವೊಮ್ಮೆ ಮೋಸದ ಜಾಲದಲ್ಲಿ ಸಿಕ್ಕಿಬಿದ್ದು ಸಮಸ್ಯೆ ಎದುರಿಸುತ್ತಾರೆ.  

ವೃಶ್ಚಿಕ : ವಿವಾಹದ ವಿಷ್ಯದಲ್ಲಿ ಇವರಿಗೆ ಅದೃಷ್ಟವಿಲ್ಲ. ಅವರು ಬಯಸಿದ ವ್ಯಕ್ತಿಯನ್ನು ಅವರು ಮದುವೆಯಾಗಲು ಸಾಧ್ಯವಿಲ್ಲ. ಮದುವೆ ನಂತ್ರವೂ ಅನೇಕ ಸಮಸ್ಯೆಯನ್ನು ಇವರು ಎದುರಿಸುತ್ತಾರೆ.

ಧನು : ಈ ರಾಶಿಯವರು ಪ್ರೀತಿಯ ಅರ್ಥವನ್ನು ತಿಳಿಯೋದಿಲ್ಲ. ಪ್ರೇಮವನ್ನು ತಿರಸ್ಕರಿಸುವ ಕಾರಣ ಇವರ ಆರ್ಥಿಕ ಸ್ಥಿತಿ ಸುಧಾರಿಸೋದಿಲ್ಲ. ಪ್ರೀತಿಯ ವಿಷ್ಯದಲ್ಲಿ ಇವರು ಪ್ರಾಮಾಣಿಕವಾಗಿರುವುದು ಮುಖ್ಯ..

ಮಕರ : ಪ್ರೀತಿಯ ವಿಷಯದಲ್ಲಿ ಮಕರ ದುರ್ಬಲವಾಗಿರುತ್ತದೆ. ಪ್ರೀತಿ ಇವರಿಗೆ ನಷ್ಟ ತರುತ್ತದೆ. ತಮ್ಮ ಭಾವನೆಯನ್ನು ಮುಂದಿರುವವರಿಗೆ ಹೇಳಲು ಸಾಧ್ಯವಾಗದ ಇವರು ಸಮಸ್ಯೆ ಎದುರಿಸುತ್ತಾರೆ.

ಮಂತ್ರಾಲಯ ಸಮೀಪವೇ ಪಂಚಮುಖಿ ಆಂಜನೇಯ ದೇವಾಲಯ ಇರೋದ್ಯಾಕೆ ತಿಳ್ದಿದೀರಾ?

ಕುಂಭ : ಈ ರಾಶಿಯವರಿಗೆ ಶುದ್ಧ ಮನಸ್ಸಿನ, ಪ್ರೀತಿಸುವ ವ್ಯಕ್ತಿಗಳು ಸಿಗ್ತಾರೆ. ಆದ್ರೆ ಯಾರು ಪ್ರೀತಿಸ್ತಿದ್ದಾರೆ, ಯಾರು ನಾಟಕವಾಡ್ತಿದ್ದಾರೆ ಎಂಬುದು ಇವರಿಗೆ ಅರ್ಥವಾಗೋದಿಲ್ಲ.

ಮೀನ : ಪ್ರಾಮಾಣಿಕವಾಗಿ ಮಾಡಿದ ಪ್ರೀತಿ ಇವರನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಪ್ರೀತಿ ಅವರನ್ನು ತುಂಬಾ ಅದೃಷ್ಟವಂತರನ್ನಾಗಿ ಮಾಡುತ್ತದೆ. ಆದ್ರೆ ಕುಟುಂಬದ ಜವಾಬ್ದಾರಿಯಿಂದಾಗಿ ಇವರು ಪ್ರೀತಿಯನ್ನು ತ್ಯಾಗ ಮಾಡ್ತಾರೆ. ಹಾಗಾಗಿ ಇವರಿಗೆ ಜೀವನದಲ್ಲಿ ಹೆಚ್ಚು ಯಶಸ್ಸು ಸಿಗೋದಿಲ್ಲ.
 

click me!