Mahashivratri 2023 : ಶಿವನಿಗೆ ಬಿಲ್ವಪತ್ರೆ ಏರಿಸುವ ಮುನ್ನ ಈ ವಿಷಯಗಳ ಇರಲಿ ಲಕ್ಷ್ಯ

By Suvarna NewsFirst Published Feb 14, 2023, 5:36 PM IST
Highlights

ಶಿವ ಭಕ್ತರಿಗೆ ವಿಶೇಷವಾದ ದಿನ ಶಿವರಾತ್ರಿ. ಈ ದಿನ ಶಿವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸ್ತಾರೆ. ಶಿವನ ಆರಾಧನೆಯಲ್ಲಿ ಬೇಲ್ಪತ್ರೆಯನ್ನು ಬಳಸಲಾಗುತ್ತದೆ. ಬಿಲ್ವತ್ರೆ ಬಳಸುವ ವೇಳೆ ಕೆಲ ತಪ್ಪುಗಳನ್ನು ಮಾಡಿದ್ರೆ ಅದ್ರಿಂದ ನಮಗೆ ನಷ್ಟವಾಗುತ್ತದೆ.  
 

ಶಿವನ ಭಕ್ತರಿಗೆ ಇನ್ನೇನು ನಾಲ್ಕೈದು ದಿನದಲ್ಲಿ ಹಬ್ಬದ ಸಡಗರ. ಮಹಾಶಿವರಾತ್ರಿಯ ಸಂಭ್ರಮ. ಶಿವ ಅಭಿಷೇಕ ಪ್ರಿಯ ಹಾಗೇ ಬಿಲ್ವಪತ್ರೆ ಕೂಡ ಶಿವನಿಗೆ ಅತ್ಯಂತ ಶ್ರೇಷ್ಠವಾಗಿದೆ. ಹಾಗಾಗಿಯೇ ಶಿವರಾತ್ರಿಯಂದು ಶಿವ ಲಿಂಗಕ್ಕೆ ಅಭಿಷೇಕ ಮಾಡಿ ಬಿಲ್ವಪತ್ರೆಗಳನ್ನು ಏರಿಸಲಾಗುತ್ತೆ. ನಾವಿಂದು ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮಹತ್ವ ಹಾಗೂ ಅದನ್ನು ಏರಿಸುವಾಗ ಯಾವೆಲ್ಲ ವಿಷ್ಯ ನೆನಪಿಡಬೇಕು ಎಂಬುದನ್ನು ನಿಮಗೆ ಹೇಳ್ತೆವೆ.

ಬಿಲ್ವಪತ್ರೆ (Bilvapatre) ಯ ಮಹತ್ವ : ಪುರಾಣ (Mythology) ದ ಕಥೆಗಳು ಹೇಳುವ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ವಿಷವನ್ನು ಶಿವ (Shiva) ಕುಡಿದಾಗ ಆತನಿಗೆ ಗಂಟಲು ಉರಿಯುತ್ತಿತ್ತು. ಬಿಲ್ವಪತ್ರೆಗೆ ವಿಷವನ್ನು ಹೊರಹಾಕುವ ಗುಣವಿರುವುದರಿಂದ ಶಿವನಿಗೆ ಬಿಲ್ವಪತ್ರೆಯ ಎಲೆಗಳನ್ನು ಅರ್ಪಿಸಲಾಯ್ತು. ಹಾಗಾಗಿಯೇ ಅಂದಿನಿಂದ ಇಂದಿನವರೆಗೂ ಶಿವನಿಗೆ ಬಿಲ್ವಪತ್ರೆಯನ್ನು ಏರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಶಿವನಿಗೆ ಮೂರು ಕಣ್ಣು ಇರುವಂತೆಯೇ ಬಿಲ್ವಪತ್ರೆಯೂ ಕೂಡ ಮೂರು ಎಲೆಗಳನ್ನು ಹೊಂದಿರುತ್ತದೆ. ಆದ್ದರಿಂದಲೇ ಇದನ್ನು ಶಿವನ ಪ್ರತೀಕ ಎನ್ನಲಾಗುತ್ತದೆ.

Latest Videos

ಶಿವನಿಗೆ ಪತ್ರೆ ಅರ್ಪಿಸುವ ವೇಳೆ ಗಮನವಿರಲಿ : 
• ಈಶ್ವರನ ಪ್ರತಿರೂಪವಾದ ಬಿಲ್ವಪತ್ರೆಗೆ ಮೂರು ಎಲೆ (Leaf) ಗಳಿರುತ್ತವೆ. ಹಾಗೆ ಮೂರು ಎಲೆಗಳಿರುವ ಬಿಲ್ವಪತ್ರೆಗಳನ್ನು ಮಾತ್ರ ಶಿವನಿಗೆ ಏರಿಸಬೇಕು. ಮುರಿದ ಎಲೆ ಅಥವಾ ಹರಿದ ಎಲೆಗಳ ಪತ್ರೆಯನ್ನು ಈಶ್ವರನಿಗೆ ಏರಿಸಬಾರದು.
• ಲಿಂಗಕ್ಕೆ ಪತ್ರೆಯನ್ನು ಏರಿಸುವಾಗ ಗಿಡದಿಂದ ಕೊಯ್ದು ಹಾಗೆಯೇ ಹಾಕಬಾರದು. ಅದನ್ನು ಚೆನ್ನಾಗಿ ತೊಳೆದು ಏರಿಸಬೇಕು.
• 11 ಅಥವಾ 21 ಬಿಲ್ವಪತ್ರೆಯನ್ನು ಈಶ್ವರನಿಗೆ ಏರಿಸಬೇಕು. ಅಷ್ಟೊಂದು ಸಂಖ್ಯೆಯ ಬಿಲ್ವಪತ್ರೆ ಇಲ್ಲವೆಂದಾದರೆ ಒಂದು ಬಿಲ್ವಪತ್ರೆಯನ್ನು ಕೂಡ ನೀವು ಏರಿಸಬಹುದು. ಸಮಸಂಖ್ಯೆಯ ಬಿಲ್ವ ಪತ್ರೆಯನ್ನು ಏರಿಸಬಾರದು.

Maha shivratri 2023 : ಮಹಾಶಿವರಾತ್ರಿಯಂದು ಯಾವ ರಾಶಿಗೆ ಭಾಗ್ಯದ ಬಾಗಿಲು ತೆರೆಯುತ್ತೆ ನೋಡಿ

• ಬಿಲ್ವಪತ್ರೆಯನ್ನು ಕೊಯ್ಯುವಾಗ ಶಿವನನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು. ಬಿಲ್ವಪತ್ರೆಯನ್ನು ಕೊಯ್ಯುವ ಮೊದಲು ಪತ್ರೆಯ ಮರ (tree) ಕ್ಕೆ ನಮಸ್ಕಾರ ಮಾಡಬೇಕು.
• ಚತುರ್ಥಿ, ಅಷ್ಠಮಿ, ನವಮಿ, ಪ್ರದೋಷ, ಶಿವರಾತ್ರಿ, ಅಮವಾಸ್ಯೆ ಮತ್ತು ಸೋಮವಾರದ ದಿನ ಬಿಲ್ವಪತ್ರೆಯನ್ನು ಕೀಳಬಾರದು. ಹಾಗೊಮ್ಮೆ ನಿಮಗೆ ಅಂದಿನ ದಿನ ಪತ್ರೆ ಬೇಕಾದ್ದಲ್ಲಿ ಹಿಂದಿನ ದಿನವೇ ಕೊಯ್ದಿಟ್ಟುಕೊಳ್ಳಬೇಕು.
• ಎಂದಿಗೂ ಬಿಲ್ವಪತ್ರೆಯನ್ನು ರೆಂಬೆಯ ಸಮೇತ ಕೊಯ್ಯಬೇಡಿ.
• ಮಹಿಳೆಯರು ಶಿವನಿಗೆ ಪೂಜೆ ಮಾಡುವಾಗ ಬಿಲ್ವಪತ್ರೆಯನ್ನು ಅರ್ಪಿಸಿದರೆ ಅಖಂಡ ಸೌಭಾಗ್ಯ ಪ್ರಾಪ್ತವಾಗುತ್ತೆ.
• ಬಿಲ್ವಪತ್ರೆಯ ಎಲೆಯ ಮೇಲೆ ಚಂದನದಿಂದ ರಾಮ ಅಥವಾ ಓಂ ನಮಃ ಶಿವಾಯ ಬರೆದು ಈಶ್ವರ ಲಿಂಗಕ್ಕೆ ಅರ್ಪಿಸಿದರೆ ನಿಮ್ಮ ಎಲ್ಲ ಇಷ್ಟಗಳೂ ನೆರವೇರುತ್ತವೆ.

MAHASHIVRATRI 2023: ಶಿವನಿಗೆ ತುಳಸಿ, ಅರಿಶಿನ, ಕುಂಕುಮ ಬಳಸಿ ಪೂಜಿಸಬಾರದು, ಇಲ್ಲಿದೆ ಕಾರಣ..

ಶಿವನಿಗೆ ಶ್ರೇಷ್ಠವಾದ ಬಿಲ್ವಪತ್ರೆ ಆರೋಗ್ಯಕ್ಕೂ ಒಳ್ಳೆಯದು : 
ಬಿಲ್ವಪತ್ರೆಯ ಎಲೆ, ಬೇರು, ತೊಗಟೆ, ಹಣ್ಣು ಎಲ್ಲದರಲ್ಲೂ ಔಷಧೀಯ ಗುಣಗಳಿವೆ.
• ಶಿವರಾತ್ರಿ ಮುಗಿದ ಮೇಲೆ ಬಿಲ್ವಪತ್ರೆಯನ್ನು ಬಿಸಾಡುವ ಬದಲು ಅದರ ತಂಬುಳಿಯನ್ನು ಮಾಡಿ ಸವಿಯಬಹುದು. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
• ಹಸಿವಿನ ಸಮಸ್ಯೆ ಇರುವವರು ಪತ್ರೆಯ ಎಲೆಗಳನ್ನು ಒಣಗಿಸಿ ಅದರ ಪುಡಿಯನ್ನು ಮಜ್ಜಿಗೆಯ ಜೊತೆ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ.
• ಅಜೀರ್ಣ, ವಾಂತಿಯಿಂದ ಬಳಲುತ್ತಿರುವವರು ಬಿಲ್ವಪತ್ರೆಯ ರಸದೊಂದಿಗೆ ಜೇನುತುಪ್ಪ ಬೆರೆಸಿ ಸೇವಿಸಬಹುದು.
• ಬಿಲ್ವಪತ್ರೆಯ ರಸವು ತಲೆಹೊಟ್ಟನ್ನು ಕೂಡ ನಿವಾರಿಸುತ್ತದೆ.
• ಬಿಲ್ವಪತ್ರೆಯ ಹಣ್ಣಿನ ಪಾನಕ ಮಾಡಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ.
• ಬಿಲ್ವಪತ್ರೆಯ ಹಣ್ಣಿನ ಒಳಗಿನ ತಿರುಳನ್ನು ತೆಗೆದು ಅದಕ್ಕೆ ಶುಂಠಿ ಮತ್ತು ಸ್ವಲ್ಪ ಜೀರಿಗೆ ಹಾಕಿ ಕಷಾಯ ಮಾಡಿ ದಿನಕ್ಕೆ ಒಂದೆರಡು ಬಾರಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ.

click me!