Zodiac Compatibility: ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

By Suvarna News  |  First Published Feb 6, 2022, 3:06 PM IST

ಹಿಂದೂಗಳಲ್ಲಿ ಮದುವೆ ಮಾಡುವುದೆಂದರೆ ಮೊದಲು ಜಾತಕ ಹೊಂದಾಣಿಕೆಯಾಗಬೇಕು. ಆಮೇಲಷ್ಟೇ ಹುಡುಗ- ಹುಡುಗಿಯನ್ನು ಮಾತಾಡಲು ಬಿಟ್ಟು ಅಭಿಪ್ರಾಯ ಕೇಳುವುದು. ಜಾತಕ ಹೊಂದಾಣಿಕೆಯಲ್ಲಿ ಹಲವು ವಿಷಯಗಳನ್ನು ಪರಿಗಣಿಸಲಾಗುತ್ತದೆ. ಅವುಗಳಲ್ಲೊಂದು ರಾಶಿ ಹೊಂದಾಣಿಕೆ. ಯಾವ ರಾಶಿಗೆ ಯಾವ ರಾಶಿ ಹೊಂದುತ್ತದೆ ಎಂಬ ವಿವರ ಇಲ್ಲಿದೆ. 


ಜಾತಕ(Horoscope) ಎಂಬುದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತ ಜ್ಯೋತಿಷ್ಯ ದಾಖಲೆಯಾಗಿದೆ. ಇಬ್ಬರು ವ್ಯಕ್ತಿಗಳ ಜಾತಕದ ಹೊಂದಾಣಿಕೆಯು ಅವರ ಜೀವನ, ಸಂಬಂಧದ ಸುಮಧುರತೆಯನ್ನು ಲೆಕ್ಕ ಹಾಕುತ್ತದೆ. ಎಲ್ಲ ಸ್ವಭಾವದವರು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲ ಸ್ವಭಾವದವರು ಕೆಲವರಿಗೆ ತುಂಬಾ ಚೆನ್ನಾಗಿ ಹಿಡಿಸುತ್ತಾರೆ. ಆ ಆಧಾರದ ಮೇಲೆ ಜ್ಯೋತಿಷ್ಯದಲ್ಲಿ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ನೋಡುವುದು ರಾಶಿಚಕ್ರ(zodiac)ಗಳ ಹೊಂದಾಣಿಕೆ. ಯಾವ ರಾಶಿಗೆ ಯಾವ ರಾಶಿಗಳು ಹೊಂದುತ್ತವೆ ನೋಡೋಣ. 

ಮೇಷ (Aries)
ಮೇಷವು ಅಗ್ನಿಯ ರಾಶಿ. ಈ ರಾಶಿಯವರಿಗೆ ಅತಿಯಾದ ಉತ್ಸಾಹ ಹಾಗೂ ಶಕ್ತಿ. ಇವರನ್ನು ಮತ್ತೊಬ್ಬರು ನಿಯಂತ್ರಿಸಲು ಹೋದರೆ ಅಗ್ನಿ ಹೊತ್ತಿ ಉರಿಯುತ್ತದಷ್ಟೇ. ಹಾಗಾಗಿ, ಇದಕ್ಕೆ ವಾಯು ಚಿಹ್ನೆಯಾದ ತುಲಾ ರಾಶಿ ಚೆನ್ನಾಗಿ ಸಮತೋಲನ ಸಾಧಿಸುತ್ತದೆ. ಇದರ ಹೊರತಾಗಿ ಮತ್ತೊಂದು ಅಗ್ನಿ ಚಿಹ್ನೆಯಾದ ಸಿಂಹ ರಾಶಿ ಕೂಡಾ ಮೇಷಕ್ಕೆ ಉತ್ತಮ ಹೊಂದಾಣಿಕೆ. ಉಳಿದಂತೆ ಮೇಷ, ಮಿಥುನ, ಧನು ಹಾಗೂ ಕುಂಭ ಹೊಂದುತ್ತವೆ. ಮಕರ ಹಾಗೂ ಕರ್ಕಾಟಕವಂತೂ ಆಗಿ ಬರುವುದೇ ಇಲ್ಲ. 

Latest Videos

ವೃಷಭ(Taurus)
ವೃಷಭ ರಾಶಿಯು ಭೂಮಿ ಚಿಹ್ನೆ ಹೊಂದಿದ್ದು, ಎತ್ತು ಇದನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರು ತುಂಬಾ ತಾಳ್ಮೆ, ಬದ್ಧತೆ ಹಾಗೂ ಛಲ ಹೊಂದಿದವರು. ಇವರಿಗೆ ಜಲ ಚಿಹ್ನೆಯಾದ ಕಟಕ, ವೃಶ್ಚಿಕ ಹಾಗೂ ಮೀನ ಉತ್ತಮ ಹೊಂದಾಣಿಕೆಯಾಗಿದೆ. ಈ ರಾಶಿಯವರು ಮೃದು ಹೃದಯವು ಕನ್ಯಾ ರಾಶಿಯೊಂದಿಗೂ ಚೆನ್ನಾಗಿ ಬೆರೆಯುತ್ತದೆ. ವೃಷಭ ಹಾಗೂ ಮಕರದ ಜೊತೆ ಹೊಂದಿಕೆ ಪರವಾಗಿಲ್ಲ. 

ಮಿಥುನ(Gemini)
ಇದು ವಾಯು ಚಿಹ್ನೆಯಾಗಿದ್ದು, ಈ ರಾಶಿಯವರು ಎಂಥ ಸನ್ನಿವೇಶಕ್ಕೂ ಹೊಂದಿಕೊಳ್ಳಬಲ್ಲರು. ಉತ್ತಮ ಸಂವಹನ ಕಲೆ(communication skill) ಹೊಂದಿರುತ್ತಾರೆ. ಸ್ವತಂತ್ರತೆ, ತಿರುಗಾಟ ಹಾಗೂ ಸ್ವಂತ ಸಮಯ ಇಷ್ಟ ಪಡುತ್ತಾರೆ. ನಿಮ್ಮಂತೇ ಗುಣ ಹೊಂದಿದ ಮೇಷ, ಧನು ಹಾಗೂ ಸಿಂಹ ರಾಶಿಯವರೊಂದಿಗೆ ಹೊಂದಾಣಿಕೆ ಚೆನ್ನಾಗಿರುತ್ತದೆ. ಬಿಟ್ಟರೆ ಕುಂಭ ಹಾಗೂ ತುಲಾ ರಾಶಿಯೂ ಪರವಾಗಿಲ್ಲ. 

ಕಟಕ(Cancer)
ಈ ರಾಶಿಯವರು ಕುಟುಂಬ ಇಷ್ಟಪಡುವವರು. ಸೃಜನಶೀಲತೆ, ಅವಲಂಬನೆ, ಸೂಕ್ಷ್ಮತೆ ಇವರ ಗುಣ. ಇವರು ಪ್ರಾಮಾಣಿಕರು ಹಾಗೂ ಬದ್ಧತೆ ಉಳ್ಳವರು. ಭಾವನಾತ್ಮಕ ಬುದ್ಧಿವಂತಿಕೆ ಇವರಲ್ಲಿ ಹೆಚ್ಚು. ಈ ರಾಶಿಯವರು ಭೂಮಿ ಚಿಹ್ನೆಗಳಾದ ವೃಷಭ, ಕನ್ಯಾ ಜೊತೆಗೆ ಚೆನ್ನಾಗಿ ಹೊಂದುತ್ತಾರೆ. ಅದರ ಹೊರತಾಗಿ ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯೂ ಹೊಂದುತ್ತವೆ. 

Mythological Story: ಶಿವನಿಂದ ಪಡೆದ ಪಾಶುಪತಾಸ್ತ್ರವನ್ನು ಅರ್ಜುನ ಬಳಸಿದ್ದು ಯಾರ ಮೇಲೆ?

ಸಿಂಹ(Leo)
ಸಿಂಹವು ಅಗ್ನಿ ಚಿಹ್ನೆಯಾಗಿದ್ದು, ಸೂರ್ಯನೇ ಇದರ ಅಧಿಕಾರಕ. ಧೈರ್ಯ, ಶಕ್ತಿ, ಉತ್ಸಾಹ ಎಲ್ಲವೂ ಹೆಚ್ಚು. ಹುಟ್ಟಾ ನಾಯಕರು. ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುವವರು. ಸಿಂಹಕ್ಕೆ ತುಲಾ, ಮಿಥುನ ಪರ್ಫೆಕ್ಟ್ ಮ್ಯಾಚ್. ಜೊತೆಗೆ ಮೇಷ, ಧನು, ಕುಂಭ ರಾಶಿಯೂ ಆಗಿ ಬರುತ್ತದೆ. 

ಕನ್ಯಾ(Virgo)
ಕನ್ಯಾ ರಾಶಿಯು ಭೂಮಿ ಚಿಹ್ನೆಯಾಗಿದ್ದು, ಹೆಚ್ಚು ಪ್ರಾಕ್ಟಿಕಲ್, ಲಾಜಿಕಲ್ ಆದವರು. ಕೊಂಚ ನಾಚಿಕೆ ಗುಣವೂ ಇರುತ್ತದೆ. ಕರುಣೆ, ಪ್ರೀತಿಪಾತ್ರರಿಗೆ ಬೆಂಬಲ ನೀಡುವುದು ಇವರ ಗುಣ. ಮುರಿದಿದ್ದನ್ನು ಜೋಡಿಸುವವರು. ವೃಶ್ಚಿಕ, ಮೀನ, ವೃಷಭ, ಮಕರ ಈ ರಾಶಿಗೆ ಹೊಂದಾಣಿಕೆಯಾಗುತ್ತದೆ. 

Rahu and Ketu: ಜಾತಕದಲ್ಲಿ ಕಾಳಸರ್ಪ ದೋಷವಿದೆಯೇ? ಅದರ ಪರಿಣಾಮ ಏನು ಗೊತ್ತಾ?

ತುಲಾ(Libra)
ತುಲಾ ರಾಶಿಗೆ ಎಲ್ಲದರಲ್ಲೂ ಸಮತೋಲನ ಸಾಧಿಸುವುದು ಇಷ್ಟ. ಸಂಬಂಧದಲ್ಲಿ ಕೂಡಾ. ನೀವು ಭೇಟಿಯಾಗುವ ಪ್ರತಿಯೊಬ್ಬರ ಜೊತೆಯೂ ಚೆನ್ನಾಗಿ ಹೊಂದಿಕೊಳ್ಳುವರು. ಎಲ್ಲರನ್ನೂ ಖುಷಿಯಾಗಿಡಲು ಸಾಧ್ಯವಾದಷ್ಟು ಪ್ರಯತ್ನಿಸುವರು. ಜಗಳದಿಂದ ದೂರ ಇರುವವರು. ಇವರಿಗೆ ಮಿಥುನ ಅತ್ಯುತ್ತಮ ಜೋಡಿ. ಉಳಿದಂತೆ ಹೆಚ್ಚು ಎನರ್ಜೆಟಿಕ್ ಆಗಿರುವ ಮೇಷ, ಸಿಂಹ, ಧನು ಕೂಡಾ ಚೆನ್ನಾಗಿ ಹೊಂದುತ್ತವೆ. 

ವೃಶ್ಚಿಕ(Scorpio)
ವೃಶ್ಚಿಕವು ಜಲ ಚಿಹ್ನೆ ಹೊಂದಿದ್ದು, ನಿಗೂಢ ವ್ಯಕ್ತಿತ್ವದವರು. ಉತ್ತಮ ಗೆಳೆಯರು. ಭಾವನೆಗಳು ಹೆಚ್ಚೇ ಇದ್ದರೂ ನಂಬಿಕೆ ಬರದೆ ಯಾರೊಂದಿಗೂ ಬಾಯಿ ಬಿಡದವರು. ಇವರಿಗೆ ಮಕರ ಹಾಗೂ ಕನ್ಯಾ ರಾಶಿ ಬೆಸ್ಟ್ ಮ್ಯಾಚ್. ಉಳಿದಂತೆ ಮೀನ ಹಾಗೂ ಕಟಕವೂ ಹೊಂದುತ್ತವೆ. 

ಧನು(Sagittarius)
ಸಾಹಸಿಗಳು, ಕುತೂಹಲ ಹಾಗೂ ಸ್ವಾತಂತ್ರ್ಯಪ್ರಿಯರು. ಬುದ್ಧಿವಂತಿಕೆ ಹಾಗೂ ಆಧ್ಯಾತ್ಮ ಒಂದುಗೂಡಿದವರು. ಬಹಳ ಪ್ರತಿಭಾನ್ವಿತರು. ಇವರಿಗೆ ಸಿಂಹ ಹಾಗೂ ಧನು ಉತ್ತಮ ಹೊಂದಾಣಿಕೆ. ಮೇಷ, ಕುಂಭ, ತುಲಾ ಕೂಡಾ ಹೊಂದುತ್ತವೆ. 

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ಮಕರ(Capricorn)
ಮಕರ ರಾಶಿಯವರು ಭಾವನೆ ವ್ಯಕ್ತಪಡಿಸುವುದಿಲ್ಲ. ಆದರೆ, ಸವಾಲುಗಳನ್ನು ಎದೆಗುಂದದೆ ಎದುರಿಸುತ್ತಾರೆ. ಮೀನ, ವೃಶ್ಚಿಕ ಹಾಗೂ ಕನ್ಯಾ ಉತ್ತಮವಾಗಿ ಈ ರಾಶಿಗೆ ಹೊಂದುತ್ತವೆ. ಬಿಟ್ಟರೆ ವೃಷಭವೂ ಪರವಾಗಿಲ್ಲ. 

ಕುಂಭ(Aquarius)
ಕುಂಭ ರಾಶಿಯು ಸ್ವಾತಂತ್ರ್ಯ ಪ್ರಿಯರು ಹಾಗೂ ಆದರ್ಶ ಜೀವಿಗಳು. ಪ್ರೀತಿ ತುಂಬಿದವರು. ಕುಂಭಕ್ಕೆ ಧನು, ಮೇಷ, ಕುಂಭ, ಮಿಥುನ, ತುಲಾ ಉತ್ತಮ ಹೊಂದಾಣಿಕೆಯ ರಾಶಿಗಳು. 

ಮೀನ(Pisces)
ಈ ರಾಶಿಯವರು ಕನಸುಗಾರರು. ಬಹಳ ಭಾವಜೀವಿಗಳು. ಮೂಡಿಗಳು. ಇವರಿಗೆ ವೃಷಭ, ಮಕರ, ವೃಶ್ಚಿಕ ಹಾಗೂ ಕಟಕ ಚೆನ್ನಾಗಿ ಹೊಂದುತ್ತವೆ. 
 

click me!