Rahu and Ketu: ಜಾತಕದಲ್ಲಿ ಕಾಳಸರ್ಪ ದೋಷವಿದೆಯೇ? ಅದರ ಪರಿಣಾಮ ಏನು ಗೊತ್ತಾ?

By Suvarna News  |  First Published Feb 6, 2022, 11:37 AM IST

ರಾಹು ಹಾಗೂ ಕೇತು ಜಾತಕದಲ್ಲಿ ಎಲ್ಲಿದ್ದಾರೆ ಎಂಬ ಆಧಾರದಲ್ಲಿ 12 ರೀತಿಯ ಕಾಳಸರ್ಪ ದೋಷಗಳು ಉಂಟಾಗಬಹುದು. ಅವು ಯಾವೆಲ್ಲ, ಅದರಿಂದೇನಾಗುತ್ತದೆ ನೋಡೋಣ.


ರಾಹು ಹಾಗೂ ಕೇತು ಜಾತಕದಲ್ಲಿ ಎಲ್ಲಿವೆ ಎಂಬ ಆಧಾರದ ಮೇಲೆ 12 ರೀತಿಯ ಕಾಳಸರ್ಪ ದೋಷಗಳು ವ್ಯಕ್ತಿಯನ್ನು ಕಾಡಬಹುದು. ಪೂರ್ವ ಜನ್ಮದ ಕರ್ಮದ ಅನುಸಾರ ಈ ರಾಹು, ಕೇತು ಜಾತಕದಲ್ಲಿ ಎಲ್ಲಿರಬೇಕು ಎಂಬುದು ನಿರ್ಧರಿತವಾಗಿರುತ್ತದೆ. ಯಾವೆಲ್ಲ ದೋಷಗಳು, ಅದರಿಂದೇನಾಗುತ್ತದೆ ನೋಡೋಣ. 

1. ಅನಂತ ಕಾಳ ಸರ್ಪ ದೋಷ
ರಾಹುವು ಲಗ್ನದಲ್ಲಿದ್ದು, ಕೇತುವು 7ನೇ ಮನೆಯಲ್ಲಿದ್ದಾಗ, ಅನಂತ ಕಾಳಸರ್ಪ ದೋಷ ಉಂಟಾಗುತ್ತದೆ. ಇತರ ಎಲ್ಲ ಗ್ರಹಗಳೂ ಇವುಗಳ ಮಧ್ಯೆ ಇರುತ್ತವೆ. ಹಾಗಾಗಿ, ಈ ದೋಷ ಇರುವ ಜನರು ಯಶಸ್ಸಿಗಾಗಿ ಎಷ್ಟು ಪ್ರಯತ್ನ ಹಾಕಿದರೂ ಸಾಲದೆಂಬಂತಾಗುತ್ತದೆ. ಇದರಿಂದಾಗಿ ಜೂಜು(gambling), ಸ್ಟಾಕ್ ಮಾರ್ಕೆಟ್‌ನ ಅತಿಯಾದ ಆಮಿಷಕ್ಕೆ ಇವರು ಬಲಿಯಾಗುತ್ತಾರೆ. ಇದರಿಂದ ಕಳೆದುಕೊಳ್ಳುತ್ತಲೇ ಹೋಗುತ್ತಾರೆ. ಜೊತೆಗೆ, ಅಪರಾಧ ಚಟುವಟಿಕೆಗಳು ಹೆಚ್ಚುತ್ತವೆ. ವಿವಾಹ ವಿಳಂಬತೆ, ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. 27ನೇ ವರ್ಷದ ಬಳಿಕ ಬೇರೆ ಯೋಗಗಳು ಸ್ಟ್ರಾಂಗ್ ಆಗಿದ್ದಾಗ ಈ ದೋಷ ನಿವಾರಣೆಯಾಗುತ್ತದೆ. 

Tap to resize

Latest Videos

undefined

2. ಕುಲಿಕ್ ಕಾಳ ಸರ್ಪ ದೋಷ
ರಾಹು ಜಾತಕದ 2ನೇ ಮನೆಯಲ್ಲಿದ್ದು, ಕೇತು 8ನೇ ಮನೆಯಲ್ಲಿದ್ದಾಗ ಕುಲಿಕ್ ದೋಷ ಉಂಟಾಗುತ್ತದೆ. ಇದರಿಂದಾಗಿ ಹಗರಣಗಳು, ಮಾನನಷ್ಟ(Defamations), ಅಸ್ಥಿರ ವಿವಾಹ ಜೀವನ, ಆರ್ಥಿಕ ಸಮಸ್ಯೆಗಳು(financial issues) ಉಂಟಾಗುತ್ತವೆ. 33ನೇ ವರ್ಷದ ಬಳಿಕ ಇತರೆ ಯೋಗಗಳು ಬಲವಾಗಿದ್ದರೆ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. 

3. ವಾಸುಕಿ ಕಾಳ ಸರ್ಪ ದೋಷ
ರಾಹು 3ನೇ ಮನೆಯಲ್ಲಿದ್ದು, ಕೇತುವು 9ನೇ ಮನೆಯಲ್ಲಿದ್ದಾಗ ವಾಸುಕಿ ಕಾಳ ಸರ್ಪ ದೋಷ ಉಂಟಾಗುತ್ತದೆ. ಇದರಿಂದ ಬಹಳಷ್ಟು ಕೌಟುಂಬಿಕ ಸಮಸ್ಯೆಗಳು(domestic problems) ಎದುರಾಗುತ್ತವೆ. ಎಷ್ಟೇ ಕಷ್ಟ ಪಟ್ಟರೂ ತಕ್ಷಣದಲ್ಲಿ ಫಲಿತಾಂಶ ಸಿಗದೆ, ಬದುಕಿನ ಕಡೆಯ ಭಾಗದಲ್ಲಿ ಮಾತ್ರ ಅನುಭವಿಸಲು ದೊರೆಯಬಹುದು. ಇದರಿಂದ ಉದ್ಯಮದಲ್ಲಿ ಅಪಾರ ನಷ್ಟವಾಗಬಹುದು. ಬೇರೆ ಯೋಗಗಳ ಬಲವಿದ್ದರೆ 36ನೇ ವಯಸ್ಸಿನ ಬಳಿಕ ಈ ದೋಷ ನಿವಾರಣೆಯಾಗುತ್ತದೆ. 

Weekly Horoscope: ಮೇಷಕ್ಕೆ ಅಭಿವೃದ್ಧಿಯ ವಾರ, ಮಿಥುನಕ್ಕೆ ಚಿಂತೆಗಳ ಭಾರ

4. ಶಂಕ್ಫಲ್ ಕಾಳ ಸರ್ಪ ದೋಷ
ಇದು ರಿಯಲ್ ಎಸ್ಟೇಟ್, ಸಂಪತ್ತು, ಉದ್ಯೋಗ, ಶಿಕ್ಷಣ ಸಂಬಂಧ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ರಾಹು 4ನೇ ಮನೆ ಹಾಗೂ ಕೇತು 10ನೇ ಮನೆಯಲ್ಲಿದ್ದಾಗ ಹೀಗಾಗುತ್ತದೆ. ಒಂದು ವೇಳೆ ಚಂದ್ರ ದೋಷವೂ ಸೇರಿದರೆ ಆಗ ವ್ಯಕ್ತಿಯು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾನೆ. 43ನೇ ವರ್ಷದ ಬಳಿಕ ಇತರೆ ಬಲವಿದ್ದಾಗ ಈ ದೋಷದಿಂದ ಮುಕ್ತರಾಗಬಹುದು. 

5. ಪದ್ಮ ಕಾಳ ಸರ್ಪ ದೋಷ
ರಾಹು 5ನೇ ಮನೆಯಲ್ಲಿದ್ದು, ಕೇತು 11ನೇ ಮನೆಯಲ್ಲಿದ್ದಾಗ ಈ ದೋಷ ಉಂಟಾಗುತ್ತದೆ. 5ನೇ ಮನೆಯು ಪೂರ್ವ ಪುಣ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಿಂದಿನ ಜನ್ಮದ ಪುಣ್ಯವೇ ಇಲ್ಲದ್ದನ್ನು ಈ ದೋಷ ಸೂಚಿಸುತ್ತದೆ. ಶಿಕ್ಷಣ(education) ಹಾಗೂ ಉದ್ಯೋಗ ಸಮಸ್ಯೆಗಳು ಹೆಚ್ಚಿರುತ್ತವೆ. ಗುಪ್ತ ಶತ್ರುಗಳು ಜಾಸ್ತಿ ಇರುತ್ತಾರೆ. 48ನೇ ವರ್ಷದ ಬಳಿಕ ಇತರೆ ಬಲದ ಬೆಂಬಲದಿಂದ ಸಮಸ್ಯೆಗಳು ತಗ್ಗಬಹುದು. 

6. ಮಹಾಪದ್ಮ ಕಾಳ ಸರ್ಪ ದೋಷ
ಇದು ಕೂಡಾ ಕೌಟುಂಬಿಕ ಜೀವನವನ್ನು ಹಾಳು ಮಾಡುತ್ತದೆ. 6 ಹಾಗೂ 12ನೇ ಮನೆಯಲ್ಲಿ ಕ್ರಮವಾಗಿ ರಾಹು, ಕೇತುವಿದ್ದಾಗ ಈ ದೋಷವುಂಟಾಗುತ್ತದೆ. ಶತ್ರುಗಳ ವಿರುದ್ಧ ಗೆಲುವು ಸಾಧಿಸಿದರೂ ಕೆಟ್ಟ ಹೆಸರು ಬರಲಿದೆ. 54 ವರ್ಷದ ಬಳಿಕ ಅಭಿವೃದ್ಧಿ ಕಾಣಬಹುದು.

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

7. ತಕ್ಷಕ್ ಕಾಳ ಸರ್ಪ ದೋಷ
ರಾಹು 7ನೇ ಮನೆಯಲ್ಲಿ ಹಾಗೂ ಕೇತು 1ನೇ ಮನೆಯಲ್ಲಿದ್ದಾಗ ತಕ್ಷಕ್ ದೋಷ ಇರುತ್ತದೆ. ಇದರಿಂದ ವ್ಯಕ್ತಿಯ ರೊಮ್ಯಾನ್ಸ್ ಬದುಕಿನಲ್ಲಿ ಹಾಗೂ ಪಿತ್ರಾರ್ಜಿತ ಆಸ್ತಿ(ancestral property) ಪಡೆವಲ್ಲಿ ಸಮಸ್ಯೆಗಳಾಗುತ್ತವೆ. ತತ್ವಜ್ಞಾನದಲ್ಲಿ ಆಸಕ್ತಿ ಇರುತ್ತದೆ. ಸಾಧನೆಗಳಿದ್ದರೂ ಅವನ್ನೆಲ್ಲ ತೊರೆದು ಹೋಗುವ ಸಂಭವಗಳಿರುತ್ತವೆ. 60ನೇ ವರ್ಷದ ಬಳಿಕ ಆಧ್ಯಾತ್ಮ(spirituality)ದತ್ತ ಸಾಗುತ್ತಾರೆ. 

8. ಕಾರ್ಕೋಟಕ್ ಕಾಳ ಸರ್ಪ ದೋಷ
ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಇದು. 8 ಹಾಗೂ 2ನೇ ಮನೆಯಲ್ಲಿ ಕ್ರಮವಾಗಿ ರಾಹು ಕೇತು ಇದ್ದಾಗ ಈ ದೋಷ ಉಂಟಾಗುತ್ತದೆ. ಎಷ್ಟೇ ಕಷ್ಟ ಪಟ್ಟರ ಫಲ ಸಿಗುವುದಿಲ್ಲ. 33ನೇ ವರ್ಷದ ಬಳಿಕ ಅಭಿವೃದ್ಧಿ ಕಾಣಬಹುದು. 

9. ಶಂಕಚೂಡ್ ಕಾಳ ಸರ್ಪ ದೋಷ
9, 3ನೇ ಮನೆಯಲ್ಲಿ ರಾಹು ಕೇತುವಿದ್ದಾಗ ಈ ದೋಷ ಇರುತ್ತದೆ. ಇದರಿಂದ ಉದ್ಯಮದಲ್ಲಿ ಸಮಸ್ಯೆಗಳು, ಅಧಿಕಾರ, ಸ್ಥಾನ ಕಳೆದುಕೊಳ್ಳುತ್ತಾರೆ. ಈ ಸಮಸ್ಯೆಗಳ ಕಾರಣದಿಂದ ಇವರು ಹೆಚ್ಚು ಸ್ವಾರ್ಥಿಯಾಗುತ್ತಾರೆ. 36ನೇ ವರ್ಷದ ಬಳಿಕ ಜೀವನ ಉತ್ತಮವಾಗಬಹುದು.

Birth Month And Traits: ನೀವು ಹುಟ್ಟಿದ ತಿಂಗಳು ನಿಮ್ಮ ಸ್ವಭಾವ ಹೇಳುತ್ತವೆ!

10. ಘಟ ಕಾಳ ಸರ್ಪ ದೋಷ
10, 4ನೇ ಮನೆಯಲ್ಲಿ ರಾಹು, ಕೇತುವಿದ್ದಾಗ ಈ ದೋಷ ಇರುತ್ತದೆ. ಇದರಿಂದ ವ್ಯಕ್ತಿ ಏನೇ ಮಾಡಿದರೂ, ಯಶಸ್ಸು ಕಂಡರೂ ಸಂತೋಷ ಸಿಗುವುದಿಲ್ಲ. ಕುಟುಂಬ ಸದಸ್ಯರಿಂದಲೇ ಬದುಕು ಭಾರವೆನಿಸಬಹುದು. ತಾಯಿಯ ಸೇವೆ ಮಾಡುವುದರಿಂದ ಈ ದೋಷದಿಂದ ಮುಕ್ತರಾಗಬಹುದು. 

11. ವಿಶ್ದರ್ ಕಾಳ ಸರ್ಪ ದೋಷ
11 ಹಾಗೂ 5 ನೇ ಮನೆಯಲ್ಲಿ ಕ್ರಮವಾಗಿ ರಾಹು, ಕೇತು ಇದ್ದಾಗ ವಿಶ್ದರ್ ದೋಷ ಉಂಟಾಗಿ ಮರೆವು, ಶೈಕ್ಷಣಿಕ ಹಿನ್ನಡೆ, ಆಸ್ತಿ ಸಂಬಂಧಿ ಮೋಸ, ವಂಚನೆ ಹೆಚ್ಚುತ್ತದೆ. ಮಗುವಾಗದೆ ಇರಬಹುದು. 

12. ಶೇಷನಾಗ್ ಕಾಳ ಸರ್ಪ ದೋಷ
ರಾಹು 12 ಹಾಗೂ ಕೇತು 6ನೇ ಮನೆಯಲ್ಲಿದ್ದರೆ ಈ ದೋಷ ಇರುತ್ತದೆ. ಇದರಿಂದ ಅವಮಾನ, ಹಿತಶತ್ರುಗಳ ಕಾಟ, ಅತೃಪ್ತಿಯ ಜೀವನ ಇರುತ್ತದೆ. ಬೇರೆ ಯೋಗಗಳು ಬಲವಾಗಿದ್ದರೆ 54ನೇ ವರ್ಷದ ಬಳಿಕ ಇದರಿಂದ ಮುಕ್ತರಾಗಬಹುದು. 

click me!