ರಾಶಿ ಆಧಾರದ ಮೇಲೆ ಯಾರಿಗೆ ಯಾವ ರೀತಿಯ ಅನಾರೋಗ್ಯ ಹೆಚ್ಚು ಕಾಡುತ್ತದೆ ಎಂಬುದನ್ನು ಊಹಿಸಬಹುದು.
ಅರೆ ಯಾವಾಗಲೂ ತಲೆನೋವೇ ಬರುತ್ತಾ? ಅಥವಾ ಮನೆಯಲ್ಲಿ ಯಾರಿಗೂ ಇಲ್ಲದ್ದು, ನೀವು ಮಾತ್ರ ಪದೇ ಪದೇ ಅದೇ ಚರ್ಮದ ಸಮಸ್ಯೆಯಿಂದ ಬಳಲುತ್ತೀರಾ? ಅಥವಾ ನಿಮಗೆ ಪದೇ ಪದೆ ಶೀತವೇ ಆಗುತ್ತಾ? ಹೀಗೆ ನಿಮ್ಮನ್ನು ಅದೇ ಆರೋಗ್ಯ ಸಮಸ್ಯೆ ಪದೇ ಪದೆ ಕಾಡಿಸುತ್ತಿದೆ ಎಂದರೆ ಅದಕ್ಕೆ ನಿಮ್ಮ ರಾಶಿ ಕಾರಣವಾಗಿರಬಹುದು. ಯಾವ ರಾಶಿಗೆ ಯಾವ ಅನಾರೋಗ್ಯ ಹೆಚ್ಚು ಬಾಧಿಸುತ್ತದೆ ಹಾಗೂ ಅದರ ಪರಿಹಾರಕ್ಕೆ ಏನು ಮಾಡಬೇಕು ನೋಡಿ..
ಮೇಷ(Aries): ಮೇಷ ರಾಶಿಯವರು ಸದಾ ಎಲ್ಲ ಜವಾಬ್ದಾರಿಗಳನ್ನು ತಲೆ ಮೇಲೆ ಹಾಕಿಕೊಳ್ಳುವವರು. ಅವರ ಈ ಸ್ವಭಾವದಿಂದಾಗಿ ತಲೆನೋವು, ಮೈಗ್ರೇನ್(migraine) ಸಮಸ್ಯೆ ಇವರಲ್ಲಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪರಿಹಾರವೆಂದರೆ ಒತ್ತಡಮುಕ್ತರಾಗಿರುವುದು.
undefined
ವೃಷಭ(Taurus): ವೃಷಭ ರಾಶಿಯು ವಿಶುದ್ಧ ಚಕ್ರ(throat chakra)ದೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ, ಈ ರಾಶಿಯವರು ಹೆಚ್ಚಾಗಿ ಗಂಟಲ ಕಿರಿಕಿರಿ(sore throat), ಕೆಮ್ಮು, ಕಿವಿನೋವು, ಈ ಸಂಬಂಧ ಇನ್ಫೆಕ್ಷನ್‌ಗಳಿಂದ ಬಳಲುತ್ತಾರೆ. ಇದರಿಂದ ಮುಕ್ತಿ ಬೇಕೆಂದರೆ ಸದಾ ತಣ್ಣನೆಯ ಪಾನೀಯಗಳು, ಸ್ಮೋಕಿಂಗ್ನಿಂದ ದೂರವಿರುವುದು. ಜೊತೆಗೆ ಜೇನುತುಪ್ಪ, ಶುಂಠಿ, ಗ್ರೀನ್ ಟೀ ಸೇವನೆ ಹೆಚ್ಚಿಸುವುದು.
ಮಿಥುನ(Gemini): ಈ ರಾಶಿಯವರು ಮಲ್ಟಿಟಾಸ್ಕಿಂಗ್‌ಗೆ ಹೆಸರಾದವರು. ಏಕಕಾಲದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸುವವರು. ಅವರಿದರಲ್ಲಿ ಯಶಸ್ವಿಯಾದರೂ, ಇದರಿಂದ ಅವರ ಆರೋಗ್ಯ ಕೆಡುತ್ತದೆ. ಹೀಗಾಗಿ ಇವರು ಆಗಾಗ ಆತಂಕ(anxiety), ಭಯ, ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಾರೆ. ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಿ.
ಕಟಕ(Cancer): ಕಟಕ ರಾಶಿಯವರು ಹೊರಗಿಂದ ತಮ್ಮನ್ನು ತುಂಬಾ ಸ್ಟ್ರಾಂಗ್ ಎಂದು ತೋರಿಸಿಕೊಳ್ಳುತ್ತಾರೆ. ಆದರೆ, ಭಾವನೆಗಳನ್ನೆಲ್ಲ ಒಳಗೇ ಬಚ್ಚಿಟ್ಟುಕೊಳ್ಳುತ್ತಾರೆ. ಇದರಿಂದಲೇ ಸಮಸ್ಯೆಗಳು ಹೆಚ್ಚುತ್ತವೆ. ಈ ಕಾರಣದಿಂದ ಇವರು ಗ್ಯಾಸ್ ರಿಫ್ಲಕ್ಸ್(acid reflux) ಹಾಗೂ ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ. ಇದಕ್ಕೆ ಪರಿಹಾರ ಬೇಕೆಂದರೆ ಹೆಚ್ಚು ನಾರಿನಂಶ ಇರುವ ಆಹಾರಗಳು ಹಾಗೂ ಮೊಸರು ಮತ್ತಿತರೆ ಪ್ರೊಬಯೋಟಿಕ್ಸ್ ಸೇವಿಸಿ. ಎಣ್ಣೆ ತಿಂಡಿಗಳು ಹಾಗೂ ಮಸಾಲೆ ಆಹಾರ(spicy food)ಗಳಿಂದ ದೂರವಿರಿ.
Birth Month And Traits: ನೀವು ಹುಟ್ಟಿದ ತಿಂಗಳು ನಿಮ್ಮ ಸ್ವಭಾವ ಹೇಳುತ್ತವೆ!
ಸಿಂಹ(Leo): ಇವರು ಹೆದರುವವರಲ್ಲ, ಆದರೆ ತುಂಬಾ ಭಾವಜೀವಿಗಳು. ಹಾಗಾಗಿ, ಇವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು, ಹೃದಯ ಬಡಿತ ಜೋರಾಗುವುದು ಹೆಚ್ಚು. ಇದನ್ನು ನಿಭಾಯಿಸಲು ಉಸಿರಾಟದ ವ್ಯಾಯಾಮಗಳನ್ನು ಮಾಡುವ ಜೊತೆಗೆ, ಹೆಚ್ಚು ಪ್ರೋಟೀನ್‌ಯುಕ್ತ(protein diet) ಆಹಾರ ಸೇವಿಸಿ.
ಕನ್ಯಾ(Virgo): ಇವರು ತುಂಬಾ ಆರೋಗ್ಯದ ಕಾಳಜಿ ಹೊಂದಿರುವವರು. ಇದೇ ಇವರಿಗೆ ಮುಳುವಾಗಬಹುದು. ಒಂದು ದಿನ ಸರಿಯಾಗಿ ನಿದ್ದೆ ಮಾಡಿಲ್ಲವೆಂದರೆ, ಕೊಂಚ ಜೀವನಶೈಲಿ ಏರುಪೇರಾದರೂ ರೋಗ ನಿರೋಧಕ ಶಕ್ತಿ ಕುಗ್ಗುವುದು. ಜೊತೆಗೆ, ಇನ್ಫೆಕ್ಷನ್‌ಗಳು ಬಾಧಿಸುವುವು. ಇದರಿಂದ ಹೊರ ಬರಲು ಧ್ಯಾನ(meditation) ಹಾಗೂ ಉತ್ತಮ ಆಹಾರದ ಮೊರೆ ಹೋಗಿ.
ತುಲಾ(Libra): ಈ ರಾಶಿಯ ಅಧಿಕಾರಕನು ಕಿಡ್ನಿ ಹಾಗೂ ಬ್ಲ್ಯಾಡರ್ ನಿಯಂತ್ರಿಸುತ್ತಾನೆ. ಹಾಗಾಗಿ, ಇವರಿಗೆ ಬರುವ ಸಮಸ್ಯೆಗಳೂ ಈ ಅಂಗಗಳಿಗೆ ಸಂಬಂಧಿಸಿದವೇ. ಇದಾಗಬಾರದು ಎಂದರೆ ಆಲ್ಕೋಹಾಲ್‌ನಿಂದ ದೂರವಿರಿ, ಚೆನ್ನಾಗಿ ನೀರು ಕುಡಿಯಿರಿ. ಆಹಾರದ ಬಗ್ಗೆ ಗಮನವಿರಲಿ.
Aksharabhyasam: ನಿಮ್ಮ ಪುಟ್ಟ ಕಂದನಿಗೆ ಅಕ್ಷರಾಭ್ಯಾಸ ಮಾಡಿಸಿದ್ರಾ?
ವೃಶ್ಚಿಕ(Scorpio): ಈ ರಾಶಿಯವರು ಬೇಗ ಬಾಯಾರುತ್ತಾರೆ. ಇದರಿಂದ ನೋವುಗಳು, ಮೂತ್ರ ನಾಳದಲ್ಲಿ ಸೋಂಕಿ(UTI)ನಂತ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಪರಿಹಾರ ಬೇಕೆಂದರೆ ತುಂಬಾ ನೀರು ಕುಡಿಯಿರಿ ಹಾಗೂ ಹೆಚ್ಚು ವ್ಯಾಯಾಮ ಮಾಡಿ. ಹೆಚ್ಚು ಸಮಯದ ಕಾಲ ಉಪವಾಸವೂ ಇರಕೂಡದು.
ಧನುಸ್ಸು(Sagittarius): ಇವರಿಗೆ ಬೆನ್ನು ನೋವು ಹಾಗೂ ತಲೆ ಸುತ್ತುವಿಕೆ(vertigo) ಸಾಮಾನ್ಯ ಸಮಸ್ಯೆಗಳು. ಇದಕ್ಕೆ ಇವರ ಕತ್ತು ಹಾಗೂ ಬೆನ್ನಿನಲ್ಲಿ ಟೆನ್ಷನ್ ಹೆಚ್ಚುವುದು ಕಾರಣ. ಇದಕ್ಕಾಗಿ ಕತ್ತು, ಬೆನ್ನಿಗೆ ವ್ಯಾಯಾಮ ಮಾಡುವ ಜೊತೆಗೆ ನಿಲ್ಲುವ, ಕೂರುವ ಭಂಗಿಯನ್ನು ಉತ್ತಮಪಡಿಸಿಕೊಳ್ಳಬೇಕು. ಆರೋಗ್ಯಕ್ಕಾಗಿ ಹೆಚ್ಚು ವಾಕ್ ಮಾಡಬೇಕು.
ಮಕರ(Capricorn): ಇವರು ಕಷ್ಟ ಜೀವಿಗಳು. ಇದರಿಂದ ಸುಸ್ತು, ಮೈಕೈ ನೋವು ಇವರಲ್ಲಿ ಹೆಚ್ಚು. ಇದಕ್ಕಾಗಿ ಇವರು ಚೆನ್ನಾಗಿ ವ್ಯಾಯಾಮ ಮಾಡುವ ಜೊತೆಗೆ ಆಹಾರ, ಮಧ್ಯೆ ಮಧ್ಯೆ ರೆಸ್ಟ್ ಮಾಡುವ ಕಡೆ ಗಮನ ಹರಿಸಬೇಕು.
Temple Special: ಇಲ್ಲಿನ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ವಾಪಸ್ ಬರೋದು ಗ್ಯಾರಂಟಿ!
ಕುಂಭ(Aquarius): ಇದು ಏರ್ ಸೈನ್ ಆಗಿರುವುದರಿಂದ ಇವರಲ್ಲಿ ಶ್ವಾಸಕೋಶದ ಸೋಂಕು, ಅಸ್ತಮಾ, ಅಲರ್ಜಿಗಳು, ಕೆಮ್ಮು(persistent cough) ಹೆಚ್ಚು. ಹಾಗಾಗಿ, ಇವರು ಮಾಲಿನ್ಯ ಪರಿಸರದಿಂದ ಹೊರಗಿರಬೇಕು. ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು. ಸ್ಟೀಮ್ ಬಾತ್, ಸ್ವಿಮ್ಮಿಂಗ್ ಸಹಾಯಕ್ಕೆ ಬರುತ್ತವೆ.
ಮೀನ(Pisces): ಇವರು ಮತ್ತೊಬ್ಬರ ಎನರ್ಜಿಯನ್ನು ಸುಲಭವಾಗಿ ಸೆಳೆಯುವವರಾದ್ದರಿಂದ ಶೀತ ಬೇಗ ಆಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಇವರು ಅತಿರೇಖದ ಉಷ್ಣತೆಯಿರುವಲ್ಲಿ ಹೋಗಬಾರದು, ಬೆಚ್ಚಗಿನ ನೀರನ್ನು ಸೇವಿಸಬೇಕು ಹಾಗೂ ತಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು.