ಯಾವ ರಾಶಿಯವರು ಹೆಚ್ಚು ಶ್ರೀಮಂತರು? ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ನಿಮ್ಮ ಜನ್ಮರಾಶಿ ಎಲ್ಲಿದೆ? ಚೆಕ್ ಮಾಡಿ

By Bhavani Bhat  |  First Published Aug 30, 2024, 11:54 AM IST

ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಶಾರುಖ್ ಖಾನ್ ಸೆಲೆಬ್ರಿಟಿಗಳಲ್ಲಿ ಟಾಪ್‌ನಲ್ಲಿದ್ದರೆ, ಗೌತಮ್ ಅದಾನಿ ಉದ್ಯಮಿಗಳಲ್ಲಿ ಟಾಪ್‌ನಲ್ಲಿದ್ದಾರೆ. ಆದರೆ ಯಾವ ಜನ್ಮರಾಶಿಯವರು ಅತ್ಯಂತ ಮೇಲಿದ್ದಾರೆ? ನಿಮ್ಮ ಜನ್ಮರಾಶಿಯೂ ಇದೆಯಾ? ಇಲ್ಲಿ ನೋಡಿ.


ಈ ವರ್ಷದ ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ ಹಲವು ಅಚ್ಚರಿಗಳ ಮೊತ್ತ. ಅದರ ಪ್ರಕಾರ ಇಂಡಿಯನ್ ಸೆಲೆಬ್ರಿಟಿಗಳಲ್ಲಿ ಟಾಪ್ ಶ್ರೀಮಂತ ಎಂದರೆ ಶಾರುಖ್ ಖಾನ್. ಇಂಡಿಯನ್ ಉದ್ಯಮಿಗಳಲ್ಲಿ  ಟಾಪ್ ಸ್ಥಾನದಲ್ಲಿರುವ ವ್ಯಕ್ತಿ ಗೌತಮ್ ಅದಾನಿ. ಶ್ರೀಮಂತ ಮಹಿಳಾ ಸೆಲೆಬ್ರಿಟಿ ಜೂಹಿ ಚಾವ್ಲಾ. ಅದಿರಲಿ, ಯಾವ ಜನ್ಮರಾಶಿಯವರು ಈ ಲಿಸ್ಟ್‌ನಲ್ಲಿ ಅತ್ಯಧಿಕ ಸ್ಥಾನ ಪಡೆದಿದ್ದಾರೆ? ಯಾವ ಜನ್ಮಲಗ್ನದವರು ಹೆಚ್ಚು ಶ್ರೀಮಂತರೆನಿಸಿದ್ದಾರೆ ಎಂದು ಗಮನಿಸಿದರೆ ಕುತೂಹಲಕಾರಿ ವಿಷಯಗಳು ಹೊರಬೀಳುತ್ತವೆ. 

ಲಿಸ್ಟ್ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಜನಿಸಿದ ಜನ ಈ ವರ್ಷ ಶ್ರೀಮಂತಿಕೆಯಲ್ಲಿ ಅತ್ಯುತ್ತಮ ಬೆಳವಣಿಗೆ ಹೊಂದಿದ್ದಾರೆ. ನಂತರದ ಸ್ಥಾನಗಳ್ಲಿ ಮಿಥುನ ಮತ್ತು ಸಿಂಹ ರಾಶಿಗಳು ಇವೆ. ಕರ್ಕಾಟಕ ರಾಶಿಯವರು ತಮ್ಮ ಸಂಪತ್ತಿನಲ್ಲಿ 84 ಪ್ರತಿಶತ ಹೆಚ್ಚಳ ಅನುಭವಿಸಿದ್ದಾರೆ. ಮಿಥುನ ರಾಶಿಯು ಸಂಪತ್ತಿನಲ್ಲಿ ಗಮನಾರ್ಹ ಶೇಕಡಾ 77ರಷ್ಟು ಏರಿಕೆ ಕಂಡುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಸಿಂಹ ರಾಶಿ ಇದೆ. ಇವರ ಸಂಚಿತ ಸಂಪತ್ತಿನಲ್ಲಿ 68 ಪ್ರತಿಶತ ಏರಿಕೆಯಾಗಿದೆ. ಧನು ರಾಶಿಯವರದು ಶೇಕಡ 64ರಷ್ಟು ಸಂಪತ್ತು ಹೆಚ್ಚಳವಾಗಿದ್ದರೆ, ತುಲಾ ರಾಶಿಯವರು 61 ಪರ್ಸೆಂಟ್ ಏರಿಕೆ ಹೊಂದಿದ್ದಾರೆ. 

Tap to resize

Latest Videos

undefined

ನಂತರದ ಸ್ಥಾನಗಳು ಮಕರ ಹಾಗೂ ಮೀನಕ್ಕೆ. ಮಕರ ರಾಶಿಯು ಸಂಚಿತ ಸಂಪತ್ತಿನಲ್ಲಿ ಶೇಕಡಾ 58ರಷ್ಟು ಹೆಚ್ಚಳ ಕಂಡರೆ, ಮೀನ 46 ಶೇಕಡಾ ಏರಿಕೆ ಕಂಡಿದೆ. ಕುಂಭ ಮತ್ತು ಕನ್ಯಾರಾಶಿ ಎಂಟನೇ ಸ್ಥಾನವನ್ನು ಹಂಚಿಕೊಂಡಿವೆ. ಇವರ ಸಂಪತ್ತಿನಲ್ಲಿ ಶೇಕಡಾ 39ರಷ್ಟು ಹೆಚ್ಚಳವಾಗಿದೆ. ಮೇಷ, ವೃಶ್ಚಿಕ ಮತ್ತು ವೃಷಭ ರಾಶಿಗಳು ಅಂತಿಮ ಸ್ಥಾನಗಳನ್ನು ಹೊಂದಿದ್ದು, ಇವರ ಸಂಪತ್ತು ಕ್ರಮವಾಗಿ ಶೇಕಡಾ 34, 33 ಮತ್ತು 32 ರಷ್ಟು ಹೆಚ್ಚಾಗಿವೆ.

ಒಟ್ಟಾರೆಯಾಗಿ, ಸಂಪತ್ತಿನ ಬೆಳವಣಿಗೆಯಲ್ಲಿ ಕರ್ಕ ರಾಶಿಯು ಮುಂದಿದೆ. ಒಟ್ಟು ಕೊಡುಗೆಯಲ್ಲಿ ಮಿಥುನ ಅಗ್ರಸ್ಥಾನದಲ್ಲಿದೆ. ಪಟ್ಟಿಯಲ್ಲಿರುವ ಶ್ರೀಮಂತ ವ್ಯಕ್ತಿಗಳಲ್ಲಿ 9.9 ಪ್ರತಿಶತವನ್ನು ಮಿಥುನ ಪ್ರತಿನಿಧಿಸುತ್ತದೆ. ಇವರಲ್ಲಿ ಪ್ರಮುಖ ವ್ಯಕ್ತಿಗಳಾದ ಕುಮಾರ್ ಮಂಗಲಂ ಬಿರ್ಲಾ, ನೀರಜ್ ಬಜಾಜ್, ಎಲ್ ಎನ್ ಮಿತ್ತಲ್ ಸೇರಿದ್ದಾರೆ. ೯ ಶೇಕಡಾ ಮೊತ್ತ ಮೇಷ ರಾಶಿಯವರದು, ಇವರಲ್ಲಿ ಉದ್ಯಮಿ ಸುನಿಲ್ ಮಿತ್ತಲ್ ಇದ್ದಾರೆ. ಮುಖೇಶ್ ಅಂಬಾನಿ ಇರುವುದು ಮೇಷ ರಾಶಿಯಲ್ಲಿ. ಇವರ ಮೌಲ್ಯ 8.9 ಶೇಕಡ.

ಈ ರವಿಚಂದ್ರನ್ ಹೀರೋಯಿನ್ ದೇಶದ ಅತ್ಯಂತ ಶ್ರೀಮಂತ ನಟಿ! ಐಶ್, ಪ್ರಿಯಾಂಕ, ದೀಪಿಕಾ ಎಲ್ಲರ ಆಸ್ತಿ ಸೇರಿಸಿದ್ರೂ ಇವಳಷ್ಟಾಗಲ್ಲ!

ಈಗ ಶ್ರೀಮಂತಿಕೆಯ ಪಾಲಿನ ಪ್ರಕಾರ ಯಾವ ರಾಶಿಯವರದು ಎಷ್ಟೆಷ್ಟು ಎಂದು ನೋಡೋಣ: 

ಮಿಥುನ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 9.9 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಕುಮಾರ್ ಮಂಗಲಂ ಬಿರ್ಲಾ ಮತ್ತು ಕುಟುಂಬ, ನೀರಜ್ ಬಜಾಜ್ ಮತ್ತು ಕುಟುಂಬ, ಎಲ್ ಎನ್ ಮಿತ್ತಲ್ ಮತ್ತು ಕುಟುಂಬ

ವೃಶ್ಚಿಕ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 9.0 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಸುನಿಲ್ ಮಿತ್ತಲ್ ಮತ್ತು ಕುಟುಂಬ, ಯೂಸುಫ್ ಅಲಿ MA, ಇರ್ಫಾನ್ ರಜಾಕ್

ಮೇಷ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.9 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಮುಖೇಶ್ ಅಂಬಾನಿ ಮತ್ತು ಕುಟುಂಬ, ಸುಧೀರ್ ಮೆಹ್ತಾ ಮತ್ತು ಕುಟುಂಬ, ಆದಿ ಗೋದ್ರೇಜ್ ಮತ್ತು ಕುಟುಂಬ

ಮೀನ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.9 ಶೇಕಡಾ
ಗಮನಾರ್ಹ ವ್ಯಕ್ತಿಗಳು: ರಾಧಾಕಿಶನ್ ದಮಾನಿ ಮತ್ತು ಕುಟುಂಬ, ಉದಯ್ ಕೋಟಕ್, ಪಂಕಜ್ ಪಟೇಲ್ ಮತ್ತು ಕುಟುಂಬ

ಕನ್ಯಾರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.6 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಗೌತಮ್ ಅದಾನಿ ಮತ್ತು ಕುಟುಂಬ, ಶಿವ ನಾಡರ್ ಮತ್ತು ಕುಟುಂಬ, ಗೋಪಿಕಿಶನ್ ದಮಾನಿ ಮತ್ತು ಕುಟುಂಬ

ಕಟಕ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.5 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಗೋಪಾಲ್ ಬಂಗೂರ್ ಮತ್ತು ಕುಟುಂಬ

ಮಕರ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.4 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಕರ್ಸನ್‌ಭಾಯ್ ಪಟೇಲ್ ಮತ್ತು ಕುಟುಂಬ, ವಿಜಯ್ ಚೌಹಾಣ್ ಮತ್ತು ಕುಟುಂಬ, ರಾಧಾ ವೆಂಬು


ಸಿಂಹ ರಾಶಿ

ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 8.4 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಅಜೀಂ ಪ್ರೇಮ್‌ಜಿ ಮತ್ತು ಕುಟುಂಬ, ಶ್ರೀ ಪ್ರಕಾಶ್ ಲೋಹಿಯಾ, ಸತ್ಯನಾರಾಯಣ್ ನುವಾಲ್

ವೃಷಭ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 7.6 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಸೈರಸ್ ಎಸ್ ಪೂನಾವಲ್ಲ ಮತ್ತು ಕುಟುಂಬ, ರಾಜೀವ್ ಸಿಂಗ್ ಮತ್ತು ಕುಟುಂಬ, ಗೋಪಿಚಂದ್ ಹಿಂದುಜಾ ಮತ್ತು ಕುಟುಂಬ

ಧನು ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 7.5 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಸಜ್ಜನ್ ಜಿಂದಾಲ್ ಮತ್ತು ಕುಟುಂಬ, ನುಸ್ಲಿ ವಾಡಿಯಾ ಮತ್ತು ಕುಟುಂಬ, ವಿಕ್ರಮ್ ಲಾಲ್ ಮತ್ತು ಕುಟುಂಬ

ಕುಂಭ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 7.4 ಶೇಕಡಾ
ಗಮನಾರ್ಹ ವ್ಯಕ್ತಿಗಳು: ಸಂಜೀವ್ ಗೋಯೆಂಕಾ ಮತ್ತು ಕುಟುಂಬ

ತುಲಾ ರಾಶಿ
ಶ್ರೀಮಂತ ವ್ಯಕ್ತಿಗಳ ಶೇಕಡಾವಾರು: 7.0 ಶೇಕಡಾ
ಗಮನಾರ್ಹ ವ್ಯಕ್ತಿಗಳು: ದಿಲೀಪ್ ಶಾಂಘ್ವಿ, ವಿವೇಕ್ ಚಾಂದ್ ಸೆಹಗಲ್ ಮತ್ತು ಕುಟುಂಬ

Shahrukh Khan: ವರ್ಷಕ್ಕೆ 1000 ಕೋಟಿ ಗಳಿಸೋ ಶಾರುಕ್ ಆದಾಯದ ಮೂಲ ಯಾವ್ದು?
 

click me!