ಪ್ರತಿನಿತ್ಯ ಎದ್ದ ತಕ್ಷಣ ಅಂಗೈ ನೋಡಿ ಕರಾಗ್ರೇ ವಸತೇ ಲಕ್ಷ್ಮೀ ಎಂಬ ಸ್ತೋತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕೆಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರದ ಪ್ರಕಾರ ಪ್ರಾತಃಕಾಲದಲ್ಲಿ ದೇವರ ದರ್ಶನ ಮಾಡುವುದರಿಂದ, ಗೋ ಮಾತೆಗೆ ನಮಸ್ಕರಿಸುವುದರಿಂದ ಮತ್ತು ತಂದೆ-ತಾಯಿಗೆ ವಂದಿಸುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ ಸಹ. ಹೀಗಾಗಿ ಯಾವುದನ್ನು ನೋಡಿದರೆ, ಕೇಳಿದರೆ ಅದೃಷ್ಟ ಎಂಬ ಬಗ್ಗೆ ತಿಳಿಯೋಣ…
ಬೆಳ್ಳಂಬೆಳಗ್ಗೆ ಎದ್ದೊಡನೆ ದೇವರ ಮುಖ ನೋಡಿದರೆ ಇಲ್ಲವೇ ನಮ್ಮ ಕರವನ್ನು ನೋಡಿಕೊಂಡು “ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೇ ಸರಸ್ವತಿ, ಕರಮೂಲೇ ಸ್ಥಿತೇ ಗೌರಿ, ಪ್ರಭಾತೇಕರ ದರ್ಶನಂ” ಸ್ತುತಿಸಿದರೆ ಒಳ್ಳೆಯದು. ಹೀಗೆ ಹಲವು ವಿಚಾರಗಳನ್ನು ನಾವು ಕೇಳಿರುತ್ತೇವೆ. ಕೆಲವೊಮ್ಮೆ ನಾವು ಎದ್ದಾಗ ಯಾವುದೋ ಧ್ವನಿ ಕೇಳಿಸುತ್ತದೆ, ಇನ್ಯಾವುದನ್ನೋ ನೋಡಿರುತ್ತೇವೆ. ಅಂದು ನಮಗೆ ಶುಭವೂ ಆಗಿರುತ್ತದೆ. ಆದರೆ, ಇಂಥದ್ದಕ್ಕೆ ಎಂಬುದು ಮಾತ್ರ ನಮಗೆ ಗೊತ್ತಿರುವುದಿಲ್ಲ. ಇಲ್ಲಿ ಎಲ್ಲವಕ್ಕೂ ಒಂದು ಕಾರಣ ಇದ್ದೇ ಇರುತ್ತದೆ. ಆ ಕಾರಣವನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ಹೌದು. ಯಾವುದನ್ನು ಕೇಳಿದರೆ, ಯಾವುದನ್ನು ನೋಡಿದರೆ ಅದೃಷ್ಟ ಖುಲಾಯಿಸುತ್ತೆ ಎಂಬುದು ಹಲವರಿಗೆ ಗೊತ್ತೇ ಇರುವುದಿಲ್ಲ. ಬೆಳಗಿನ ಸಮಯದಲ್ಲಿ ನಮ್ಮ ಮನಸ್ಸು ಮತ್ತು ಬುದ್ಧಿಯು ಶಾಂತ ಮತ್ತು ಸಂವೇದನಾಶೀಲ ಅವಸ್ಥೆಯಲ್ಲಿರುತ್ತದೆ. ಹಾಗಾಗಿ ಪೂಜೆ-ಪುನಸ್ಕಾರಗಳಿಗೆ ಬೆಳಗಿನ ಸಮಯ ಉಪಯುಕ್ತ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಎಲ್ಲವೂ ನೆನಪಿನಲ್ಲಿ ಉಳಿಯುತ್ತದೆ. ಪ್ರಾಚೀನ ಕಾಲದಲ್ಲಿಯೂ ನಂಬಿಕೆ ಹೇಗೆ ಬಂದಿದೆ ಎಂದರೆ ಕೆಲವು ದೃಶ್ಯ, ಧ್ವನಿ ನೋಡುವುದು, ಕೇಳುವುದನ್ನು ಮಾಡಿದರೆ ಸಾಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅವುಗಳ ಬಗ್ಗೆ ನೋಡೋಣ…
ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..!
ದೇವಸ್ಥಾನದ ಘಂಟೆ ಅಥವಾ ಶಂಖದ ಧ್ವನಿ
ದೇವಾಲಯಗಳಿಂದ ಕೇಳಿಬರುವ ಘಂಟಾನಾದ ಇಲ್ಲವೇ ಶಂಖದ ಸ್ವರಗಳು ಬೆಳಗ್ಗೆ ಎದ್ದಾಕ್ಷಣ ಕಿವಿಗೆ ಬಿದ್ದರೆ ತುಂಬಾ ಶುಭ ಆಗುತ್ತದೆ. ಹಾಗಾಗಿ ಪೂರಾ ದಿನ ಸಕಾರಾತ್ಮಕತೆಯಿಂದ ಸಾಗುತ್ತದೆ.
ಇವುಗಳು ಕಂಡರೆ ತುಂಬಾ ಶುಭ
ಬೆಳಗ್ಗೆ ಎದ್ದ ತಕ್ಷಣ ಎದುರಿಗೆ ನವಿಲು, ಹಂಸ, ಶಂಖ, ತೆಂಗಿನ ಕಾಯಿ ಅಥವಾ ಹೂವುಗಳು ಕಂಡರೆ ತುಂಬಾ ಶುಭ ಎನ್ನಲಾಗಿದೆ. ಹೀಗೆ ಕಂಡರೆ ಆ ದಿನವಿಡೀ ಶುಭ ಸುದ್ದಿಗಳೇ ಕೇಳುತ್ತದೆ ಎನ್ನಲಾಗಿದೆ.
ಗೋ ಮಾತೆ ದರ್ಶನ
ಬೆಳಗ್ಗೆ ಎದ್ದ ತಕ್ಷಣ ಹಸುವನ್ನು ನೋಡುವುದು, ಅದರ ಧ್ವನಿ ಕೇಳಿಸಿದರೆ ಇಲ್ಲವೇ ಹೊರಗೆ ವಾಕಿಂಗ್ ಹೋದಾಗ ಹಸು ಕಂಡರೆ ಆ ದಿನ ಬಹಳ ಶುಭ ಎಂದು ಹೇಳಲಾಗುತ್ತೆ.
ಇದನ್ನು ಓದಿ: 2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು!
ಕರವಂದನೆ ಒಳ್ಳೆಯದು
ಬೆಳಗ್ಗೆ ಹಾಸಿಗೆಯಿಂದ ಎದ್ದೇಳುವಾಗಲೇ ಮಾಡಬೇಕಾದ ಬಹುಮುಖ್ಯ ಕೆಲಸವೆಂದರೆ ಕರಸ್ತುತಿ ಮಾಡುವುದು. ಶಾಸ್ತ್ರದ ಪ್ರಕಾರ ಹಸ್ತದ ಮೇಲ್ಭಾಗದಲ್ಲಿ ಲಕ್ಷ್ಮೀ ದೇವಿ, ಮಧ್ಯಭಾಗದಲ್ಲಿ ಸರಸ್ವತಿ ದೇವಿ, ಮೂಲ ಭಾಗದಲ್ಲಿ ಗೌರಿಯು ನೆಲೆಸಿರುತ್ತಾಳೆ. ಹೀಗಾಗಿ ಶಕ್ತಿಯ ರೂಪವಾದ ಮೂರೂ ದೇವಿಯರನ್ನು ಸ್ತುತಿಸಿದರೆ ಎಲ್ಲ ದೇವರಿಗೂ ನಮಿಸಿದಂತೆ ಎಂದು ಹೇಳಲಾಗಿದೆ. ಇದು ಶುಭವನ್ನುಂಟು ಮಾಡಿ ಅದೃಷ್ಟ ತಂದುಕೊಡುತ್ತದೆ.
ಹೋಮ-ಹವನ ಕಂಡರೆ
ಬೆಳಗ್ಗೆ ಎದ್ದಾಗ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಹೋಮ-ಹವನಗಳು ಕಂಡರೆ, ಇಲ್ಲವೇ ಮಂತ್ರೋಚ್ಛಾರಣೆಗಳ ಧ್ವನಿ ಕೇಳಿಬಂದರೆ ಅತ್ಯಂತ ಶುಭವಾಗಿದೆ. ಇವುಗಳ ದರ್ಶನ ಮತ್ತು ಶ್ರವಣವು ಶರೀರದಲ್ಲಿ ಸಕಾರಾತ್ಮಕ ಶಕ್ತಿಯನ್ನು ಸಂಚರಿಸುವಂತೆ ಮಾಡುತ್ತದೆ.
ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು!
ಮುತ್ತೈದೆಯರು ಕಂಡರೆ
ಬೆಳಗಿನ ಸಂದರ್ಭದಲ್ಲಿ ಸ್ನಾನ ಮಾಡಿ ಶುಚಿಯಾಗಿ ಮಡಿ ವಸ್ತ್ರದಲ್ಲಿ ಕಾರ್ಯನಿರತವಾದ ಮುತ್ತೈದೆಯರು ಎದುರಾದರೆ ಬಹಳ ಶುಭವೆಂದು ಹೇಳಲಾಗುತ್ತದೆ. ಅವರ ಪ್ರಸನ್ನ ಮುಖವು ನಿಮಗೆ ಇಡೀ ದಿನ ಶುಭವನ್ನು ತಂದುಕೊಡುವುದಲ್ಲದೆ, ಧನಪ್ರಾಪ್ತಿಯನ್ನೂ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ.