ನೀಮ್ ಕರೋಲಿ ಬಾಬಾಗೆ ಡ್ರಗ್ಸ್ ತಿನ್ನಿಸಿದ ಹಾರ್ವರ್ಡ್ ಪ್ರೊಫೆಸರ್! ಆಮೇಲೇನಾಯಿತು?

By Suvarna News  |  First Published Apr 25, 2023, 5:34 PM IST

ಆಂಜನೇಯನ ಅವತಾರವೆಂದೇ ಪರಿಗಣಿತವಾದ ಬಾಬಾ ನೀಮ್ ಕರೋಲಿಗೆ ಒಮ್ಮೆ ಹಾರ್ವರ್ಡ್ ಪ್ರೊಫೆಸರ್ ಒಬ್ಬರು ಡ್ರಗ್ಸ್ ನೀಡಿದರು. ಆಗ ಆದ ಪವಾಡವೇನು ಗೊತ್ತಾ?


ಬಾಬಾ ನೀಮ್ ಕರೋಲಿ ಅವರ ಜೀವನವು ರಹಸ್ಯಗಳಿಂದ ತುಂಬಿದೆ. ಅವರ ಭಕ್ತರು ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಪ್ರತಿಯೊಬ್ಬರೂ ಬಾಬಾಗೆ ಸಂಬಂಧಿಸಿದ ಕೆಲವು ನಿಗೂಢ ಕಥೆಗಳನ್ನು ಹೇಳುತ್ತಾರೆ. ಅಂತಹ ಒಂದು ಕಥೆಯು ಹಾರ್ವರ್ಡ್‌ನ ಸಹಾಯಕ ಪ್ರಾಧ್ಯಾಪಕರಿಗೆ ಸಂಬಂಧಿಸಿದೆ, ಅವರ ಜೀವನವು ಬಾಬಾ ನೀಮ್ ಕರೋಲಿಯನ್ನು ಭೇಟಿಯಾದ ನಂತರ ಬದಲಾಯಿತು. ಭಕ್ತರು ನಿರೂಪಿಸಿದ ಹಾರ್ವರ್ಡ್ ಪ್ರಾಧ್ಯಾಪಕರ ಕಥೆಯನ್ನು ತಿಳಿಯೋಣ.

ಹಾರ್ವರ್ಡ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ರಿಚರ್ಡ್ ಆಲ್ಪರ್ಟ್ ಎಂಬ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಿದ್ದರು. ಮನುಷ್ಯನನ್ನು ಕಂಗೆಡಿಸುವ ನಶೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಈ ಅಧ್ಯಯನದ ಸಮಯದಲ್ಲಿ ರಿಚರ್ಡ್ ಕೂಡ ಈ ಮಾದಕ ವ್ಯಸನಕ್ಕೆ ಒಳಗಾದರು. ರಿಚರ್ಡ್ ಕೂಡ ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿದ್ದರು, ಅದರ ಕಾರಣದಿಂದಾಗಿ ಅವರು ಭಾರತಕ್ಕೆ ಬಂದರು. ಇಲ್ಲಿ ಅವರು ಬಾಬಾ ನೀಮ್ ಕರೋಲಿಯನ್ನು ಭೇಟಿಯಾದರು. ರಿಚರ್ಡ್‌ನ ಮನಸ್ಸು ಬಾಬಾನ ಬಗ್ಗೆ ಗೊಂದಲಕ್ಕೊಳಗಾಯಿತು, ಅವರು ತಮ್ಮ ಮನಸ್ಸಿನಲ್ಲಿ ಬಾಬಾ ಬಗ್ಗೆ ಹೊಂದಿದ್ದ ಪೂರ್ವಗ್ರಹಕ್ಕೆ ಅನುಗುಣವಾಗಿ ಬಾಬಾ ನೀಮ್ ಕರೋಲಿಯನ್ನು ಅರ್ಥ ಮಾಡಿಕೊಂಡರು ಮತ್ತು ಅವರು ತಿನ್ನುತ್ತಿದ್ದ ಅಮಲು ಪದಾರ್ಥದ ಅನೇಕ ಮಾತ್ರೆಗಳನ್ನು ಬಾಬಾಗೆ ಗೊತ್ತಿಲ್ಲದಂತೆ ಕೊಟ್ಟರು. ಆದರೆ ಅದನ್ನೆಲ್ಲ ಸೇವಿಸಿದ ಬಾಬಾರಿಗೆ ಏನೂ ಆಗಲೇ ಇಲ್ಲ.

Latest Videos

undefined

ಇದನ್ನು ನೋಡಿ ರಿಚರ್ಡ್‌ಗೆ ಬಹಳ ಆಶ್ಚರ್ಯವಾಯಿತು. ನೀಮ್ ಕರೋಲಿ ಬಾಬಾನ ಪವಾಡವನ್ನು ನೋಡಿದ ನಂತರ ಅವರು ಬಾಬಾರ ಶಿಷ್ಯರಾದರು. ಬಾಬಾ ನೀಮ್ ಕರೋಲಿ ರಿಚರ್ಡ್‌ಗೆ ಈ ನಶೆಯಲ್ಲಿ ಏನೂ ಇಲ್ಲ, ನೀವು ನಶೆಯಲ್ಲಿ ಇರಬೇಕಾದರೆ ಆಧ್ಯಾತ್ಮಿಕತೆಯ ಅಮಲು ತೆಗೆದುಕೊಳ್ಳಿ ಎಂದು ಹೇಳಿದರು. 

Chandra Grahan 2023: ಈ ರಾಶಿಗಳಿಗೆ ಕವಿಯಲಿದೆ ಗ್ರಹಣದ ಕರಿನೆರಳು

ಬಳಿಕ ಬಾಬಾ ನೀಮ್ ಕರೋಲಿ ರಿಚರ್ಡ್ ಆಲ್ಪರ್ಟ್‌ಗೆ ರಾಮದಾಸ್ ಎಂದು ಹೆಸರಿಸಿದರು. ಇದರ ನಂತರ, ರಿಚರ್ಡ್ ಆಲ್ಪರ್ಟ್ ಅವರು ಬಾಬಾ ನೀಮ್ ಕರೋಲಿಯ ಪವಾಡಗಳ ಮೇಲೆ ಮಿರಾಕಲ್ ಆಫ್ ಲವ್ ಎಂಬ ಪುಸ್ತಕವನ್ನು ಬರೆದರು. ಇದಾದ ನಂತರ ರಾಮದಾಸ್ ಅವರು ಸೇವಾ ಫೌಂಡೇಶನ್ ಮತ್ತು ಹನುಮಾನ್ ಫೌಂಡೇಶನ್‌ನ ಸಹಾಯದಿಂದ ದೇಶ ಮತ್ತು ವಿದೇಶದ ಅನೇಕ ಸ್ಥಳಗಳಲ್ಲಿ ಅನೇಕ ಆಧ್ಯಾತ್ಮಿಕ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಮಾಡಿದರು. ಕೈಂಚಿ ಧಾಮಕ್ಕೆ ಬರುವ ಅನೇಕ ಭಕ್ತರು ಈ ಕಥೆಯನ್ನು ಭಕ್ತಿಯಿಂದ ನಿರೂಪಿಸುತ್ತಾರೆ.

ತುಪ್ಪವಾಗಿ ಬದಲಾದ ನೀರು
ಬಾಬಾ ನೀಮ್ ಕರೋಲಿಯ ಕೈಂಚಿ ಧಾಮ್ ಯಾವಾಗಲೂ ಭಂಡಾರಗಳನ್ನು ಹೊಂದಿರುತ್ತದೆ, ಬಾಬಾ ಕೈಂಚಿಧಾಮದಲ್ಲಿ ವಾಸಿಸಲು ಪ್ರಾರಂಭಿಸಿದಾಗಿನಿಂದ ಈ ಪ್ರಕ್ರಿಯೆಯು ನಡೆಯುತ್ತಿದೆ. ಭಕ್ತರ ಪ್ರಕಾರ, ಇಲ್ಲಿಗೆ ಬಂದ ಪ್ರತಿಯೊಬ್ಬ ಭಕ್ತರು ಸಂತೃಪ್ತರಾಗಿ ತೆರಳುತ್ತಿದ್ದರು. ಒಮ್ಮೆ ಭಂಡಾರ ನಡೆಯುತ್ತಿದ್ದರೆ ತುಪ್ಪ ಕಡಿಮೆಯಾಯಿತು. ಈಗ ತುಪ್ಪದ ವ್ಯವಸ್ಥೆ ಇಲ್ಲದೇ ಹೋದರೆ ಭಂಡಾರ ನಿಲ್ಲಿಸಬೇಕಾಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಮೂಡಿತು. ನಂತರ ಸೇವಕ ಬಾಬಾ ನೀಮ್ ಕರೋಲಿಗೆ ಹೋಗಿ ಪರಿಸ್ಥಿತಿಯನ್ನು ವಿವರಿಸಿದರು. ಇದನ್ನು ಕೇಳಿಯೂ ವಿಚಲಿತರಾಗದ ಬಾಬಾ, ಪಕ್ಕದಲ್ಲಿ ಹರಿಯುವ ನದಿಯ ನೀರನ್ನು ಬಾಣಲೆಗೆ ಹಾಕಲು ಸೇವಕರಿಗೆ ಹೇಳಿದರು.

Love Astrology: ಈ ರಾಶಿಗಳ ಪ್ರೀತಿ ಹೆಚ್ಚು ಕಾಲ ಬಾಳೋದಿಲ್ಲ, ಬೇಗ ಬ್ರೇಕಪ್ ಅನುಭವಿಸುವ ರಾಶಿಗಳಿವು..

ಮೊದಲಿಗೆ ಸೇವಕರಿಗೆ ಈ ವಿಷಯ ಅರ್ಥವಾಗಲಿಲ್ಲ, ಆದರೆ ಬಾಬಾ ಹೇಳಿದ್ದಾರೆಂದ ಮೇಲೆ ಅದಕ್ಕೊಂದು ಅರ್ಥವಿರಬಹುದೆಂದು ಸೇವಕರು ಹೋಗಿ ತುಪ್ಪವಿರುವ ಡಬ್ಬದಲ್ಲಿ ನದಿಯ ನೀರನ್ನು ತೆಗೆದುಕೊಂಡು ಹಿಂತಿರುಗಿದರು. ಸೇವಕರು ಈ ನೀರನ್ನು ಬಾಣಲೆಗೆ ಹಾಕುತ್ತಾರೆ. ಸ್ವಲ್ಪ ಸಮಯದಲ್ಲೇ ಆ ನೀರು ತುಪ್ಪವಾಗಿ ಮಾರ್ಪಟ್ಟಿತು. ಅಲ್ಲಿದ್ದವರೆಲ್ಲ ಈ ಪವಾಡವನ್ನು ಕಂಡು ಬೆರಗಾದರು.
 

click me!