Astrology Tips : ಪೂಜಾ ಸ್ಥಳದಲ್ಲಿ ನೀರಿಡೋದು ಏಕೆ?

By Suvarna NewsFirst Published Apr 25, 2023, 4:25 PM IST
Highlights

ನಮ್ಮ ಇಷ್ಟಾರ್ಥ ಈಡೇರಲಿ ಎನ್ನುವ ಕಾರಣಕ್ಕೆ ನಾವು ದೇವರ ಪೂಜೆ ಮಾಡೋದು, ದೇವಸ್ಥಾನಕ್ಕೆ ಹೋಗೋದು ಮಾಡ್ತೇವೆ. ಬರೀ ದೇವರ ಪೂಜೆ ಮಾಡಿದ್ರೆ ಸಾಲೋದಿಲ್ಲ, ದೇವರ ಮನೆಯಲ್ಲಿ ಏನೆಲ್ಲ ಇಡಬೇಕು ಎಂಬುದು ನಮಗೆ ತಿಳಿದಿರಬೇಕು. ಹಾಗೆಯೇ ಇಟ್ಟ ವಸ್ತುವಿನ ಮಹತ್ವ ತಿಳಿದಿರಬೇಕು.
 

ಹಿಂದೂಗಳ ಮನೆ ಅಂದ್ಮೇಲೆ ದೇವರ ಕೋಣೆ ಇರ್ಲೇಬೇಕು. ದೇವರ ಮನೆಯಲ್ಲಿ ಪ್ರತಿ ನಿತ್ಯ ಪೂಜೆ ನಡೆಯುತ್ತದೆ. ದೇವರ ಮನೆಯಲ್ಲಿ ದೇವರ ಬಳಿ ಸದಾ ದೀಪ ಉರಿಯುವಂತೆ ನೀರನ್ನು ಇಟ್ಟಿರುತ್ತಾರೆ. ಒಂದು ಲೋಟ ಅಥವಾ ಪಾತ್ರೆಯಲ್ಲಿ ಜಲವಿಡೋದನ್ನು ನೀವು ನೋಡಿಬಹುದು. ಬಹುತೇಕರ ಮನೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟಿರುತ್ತಾರೆ.  

ದೇವರ (God) ಮನೆಯಲ್ಲಿ ನೀರನ್ನಿಡಲು ಅನೇಕ ಕಾರಣವಿದೆ. ಇದ್ರಿಂದ ಆಗುವ ಪ್ರಯೋಜನ ಕೂಡ ಅಪಾರ. ನಾವಿಂದು ದೇವರ ಮನೆಯಲ್ಲಿ ನೀರನ್ನು ಇಡುವ ಪ್ರಯೋಜನ (Benefit) ವೇನು ಹಾಗೆ ಯಾಕೆ ಎಲ್ಲರೂ ಇಡಬೇಕು ಎಂಬುದನ್ನು ನಿಮಗೆ ಹೇಳ್ತೇವೆ. ದೇವರಿಗೆ ಪ್ರತಿ ನಿತ್ಯ ನಾವು ನೈವೇದ್ಯವನ್ನು ಅರ್ಪಿಸುತ್ತೇವೆ. ಹಣ್ಣು, ಸಿಹಿ (Sweet) ಸೇರಿದಂತೆ ಅನೇಕ ಆಹಾರವನ್ನು ದೇವರಿಗೆ ನೀಡ್ತೇವೆ. ನಾವು ನೀಡಿದ ಆಹಾರ (Food) ವನ್ನು ದೇವರು ಸೇವಿಸ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ.  ಆಹಾರದ ಜೊತೆ ನೀರನ್ನು ದೇವರಿಗೆ ನೀಡಿದ್ರೆ ಆಹಾರದ ಜೊತೆ ದೇವರು ನೀರನ್ನು ಕುಡಿಯುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪೂಜೆ ಮಾಡುವ ಸ್ಥಳದಲ್ಲಿ ನೀರನ್ನು ಇಡುವುದ್ರಿಂದ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಿರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನೀವು ದೇವರ ಮನೆಯಲ್ಲಿ ತಾಮ್ರದ ಪಾತ್ರದಲ್ಲಿ ನೀರಿಟ್ಟರೆ ಅದನ್ನು ಮತ್ತಷ್ಟು ಶುಭವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಆಸೆ ಈಡೇರಬೇಕೆಂದ್ರೆ ಪೂಜಾ ಸ್ಥಳದಲ್ಲಿ, ತಾಮ್ರ (Copper) ದ ಪಾತ್ರೆಯಲ್ಲಿ ನೀರಿಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆಯೇ ಒಂದು ಪಾತ್ರೆಯಲ್ಲಿಟ್ಟ ನೀರು ಮನೆಯಲ್ಲಿ ಶಕ್ತಿಯ ಸಂಚಾರಕ್ಕೆ ಕಾರಣವಾಗುತ್ತದೆ. 

Latest Videos

ಸೂರ್ಯ ಗ್ರಹಣ ಮುಗಿದ 15 ದಿನದೊಳಗೆ ಬರುತ್ತಿದೆ CHANDRA GRAHAN

ದೇವರ ಮನೆಯಲ್ಲಿ ಹೇಗೆ ನೀರಿಡಬೇಕು? : ದೇವರ ಮನೆಯಲ್ಲಿ ತಾಮ್ರ ಅಥವಾ ಬೇರೆ ಯಾವುದೇ ಲೋಹದ ಪಾತ್ರೆಯಲ್ಲಿ ನೀವು ನೀರಿಡಬಹುದು. ಆದ್ರೆ ಪ್ರತಿ ದಿನ ಈ ನೀರನ್ನು ಬದಲಿಸುತ್ತಿರಬೇಕು. ನೀರನ್ನು ಹಾಕಿದ ಪಾತ್ರೆಗೆ ತುಳಸಿ ಎಲೆಗಳನ್ನು ಹಾಕಬೇಕು. ಹೀಗೆ ಮಾಡಿದ್ರೆ ಆ ನೀರು ಹೆಚ್ಚು ಪವಿತ್ರವಾಗುತ್ತದೆ ಎಂಬ ನಂಬಿಕೆ ಇದೆ.  ನೀರಿಗೆ ತುಳಸಿ ದಳ ಬೀಳ್ತಿದ್ದಂತೆ ಆ ನೀರು ನದಿಯ ನೀರಿನಂತೆ ಶುದ್ಧವಾಗುತ್ತದೆ. ಇದು ಪೂಜಾ ಸ್ಥಳವನ್ನು ಶುದ್ಧವಾಗಿಡುತ್ತದೆ ಎಂದು ನಂಬಲಾಗಿದೆ. 

ದೇವರ ಮನೆಯಲ್ಲಿ ನೀರಿಡೋದ್ರಿಂದ ಆಗುವ ಲಾಭ :
• ನೀರು ಸಮೃದ್ಧಿಯ ಸಂಕೇತ. ದೇವರ ಮನೆಯಲ್ಲಿ ನೀರಿಟ್ಟರೆ ಸಮೃದ್ಧಿ ನೆಲೆಸುತ್ತದೆ.
• ಮನಸ್ಸನ್ನು ಶಾಂತಗೊಳಿಸುವ ಕೆಲಸವನ್ನು ದೇವರ ಮನೆಯಲ್ಲಿಟ್ಟ ನೀರು ಮಾಡುತ್ತದೆ.

ಕಾಲು ಅಲುಗಿಸೋ ಅಭ್ಯಾಸ ನಿಮಗಿದೆಯೇ? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ!

ಆರತಿ ಎತ್ತುವ ಮೊದಲು ಆರತಿ ಮಾಡುವ ತಟ್ಟೆಯ ಹಿಡಿಕೆಗೆ  ಸ್ವಲ್ಪ ನೀರನ್ನು ಹಾಕಲಾಗುತ್ತದೆ. ಆರತಿ ವೇಳೆ ದೀಪದ ಬೆಳಕು ಕೈಗೆ ಬರದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡ್ತಾರೆ. ಅದೇ ರೀತಿ ಆರತಿ ಮುಗಿದ ಮೇಲೆ ಆಚಮನ ಮಾಡಲು ನೀರನ್ನು ಬಳಸಲಾಗುತ್ತದೆ. ಆಚಮನ ಹಿಂದೂ ಸಂಪ್ರದಾಯದ ಪ್ರಮುಖ ಪದ್ಧತಿಯಾಗಿದೆ. ಧಾರ್ಮಿಕ ಕಾರ್ಯಮಗಳನ್ನು ಮಾಡುವ ಬದಲು ಆಚಮನ ಮಾಡಲಾಗುತ್ತದೆ. ಇವೆರಡಕ್ಕೂ ನೀರು ಬೇಕು ಎನ್ನುವ ಕಾರಣಕ್ಕೆ ದೇವರ ಮನೆಯಲ್ಲಿ ನೀರನ್ನು  ಇಡಲಾಗುತ್ತದೆ. 

ದೇವರ ಬಳಿ ಇಟ್ಟ ನೀರನ್ನು ಮನೆಯ ಮೂಲೆ ಮೂಲೆಗೆ  ಸಿಂಪಡಿಸಬೇಕು. ಹೀಗೆ ಮಾಡಿದ್ರೆ ಮನೆಯ ಎಲ್ಲ ಸ್ಥಳದಲ್ಲೂ ಧನಾತ್ಮಕ ಶಕ್ತಿ ನೆಲೆಸುತ್ತದೆ. ಮನೆಯ ಎಲ್ಲ ಜಾಗಕ್ಕೆ ನೀವು ನೀರನ್ನು ಸಿಂಪಡಿಸುವುದ್ರಿಂದ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಮನೆಗೆ ಇದು ಮಂಗಳವನ್ನುಂಟು ಮಾಡುತ್ತದೆ. ಮನೆಯಲ್ಲಿ ಸದಾ ಪ್ರಗತಿ ನೆಲೆಸಲು ಇದು ಸಹಕಾರಿಯಾಗುತ್ತದೆ. ದೇವರ ಮನೆಯಲ್ಲಿ ನೀರನ್ನು ಇಡುವುದ್ರಿಂದ ಎಲ್ಲ ದೇವರು, ಕುಟುಂಬಸ್ಥರ ಮೇಲೆ ಕೃಪೆ ತೋರುತ್ತಾರೆ ಎಂದು ನಂಬಲಾಗಿದೆ. 
 

click me!