ಹಾಸಿಗೆಯಲ್ಲೂ ಹೆಂಡತಿ ಗಂಡನಿಂದ ಈ ವಿಷಯ ಮುಚ್ಚಿಡ್ತಾಳಂತೆ! ಚಾಣಕ್ಯನಿಗೂ ಇದು ಗೊತ್ತಿತ್ತು!

By Bhavani Bhat  |  First Published Oct 29, 2024, 9:36 PM IST

ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ತಮ್ಮ ಗಂಡಂದಿರಿಂದ ಕೆಲವು ವಿಷಯಗಳನ್ನು ಮುಚ್ಚಿಡುತ್ತಾರೆ. ಗಂಡಸರೇ, ಅವು ಯಾವುವು ಅಂತ ನಿಮಗೆ ಗೊತ್ತಾದರೆ, ನಿಮ್ಮ ಜಂಘಾಬಲವೇ ಉಡುಗಿ ಹೋಗಬಹುದು! 


ಸಂತೋಷದ ದಾಂಪತ್ಯ ಜೀವನವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಆದ್ದರಿಂದಲೇ ಗಂಡ-ಹೆಂಡತಿ ಯಾವತ್ತೂ ಒಬ್ಬರಿಗೊಬ್ಬರು ಏನನ್ನೂ ಮುಚ್ಚಿಡಬಾರದು ಎಂದು ಹೇಳಲಾಗುತ್ತದೆ. ಆದರೆ ಚಾಣಕ್ಯ ನೀತಿಯಲ್ಲಿ (Chanaky Niti) ) ಮಹಿಳೆಯರು ತಮ್ಮ ಗಂಡನಿಂದ ಕೆಲವು ವಿಷಯಗಳನ್ನು ಮರೆಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ ಇದು ಎಲ್ಲರಿಗೂ ಅನ್ವಯಿಸದಿರಬಹುದು. ಏಕೆಂದರೆ ಸಾಮಾನ್ಯವಾಗಿ ಪತಿ-ಪತ್ನಿಯರ ಬಾಂಧವ್ಯ ಉತ್ತಮವಾಗಿದ್ದರೆ ವಿಷಯಗಳನ್ನು ಮರೆಮಾಚುವ ಪ್ರಶ್ನೆಯೇ ಇರುವುದಿಲ್ಲ. ಆದರೆ ಇಂದಿಗೂ ಕೆಲವು ಸಂಬಂಧಗಳಲ್ಲಿ ಹೆಂಡತಿ ಕೆಲವು ವಿಷಯಗಳನ್ನು ಗಂಡನಿಂದ ಮುಚ್ಚಿಡುವ ಸಾಧ್ಯತೆ  ಉಂಟು. ಆ ವಿಷಯಗಳು ಯಾವುವು ಎಂದು ತಿಳಿದುಕೊಳ್ಳೋಣ.

ಸೀಕ್ರೆಟ್ ಕ್ರಶ್: ಹಲವು ಮಹಿಳೆಯರು ತಮ್ಮ ಜೀವನದಲ್ಲಿ ಪತಿ ಹೊರತುಪಡಿಸಿ ಒಬ್ಬನಲ್ಲ ಒಬ್ಬ ಪುರುಷನ ಬಗ್ಗೆ ರಹಸ್ಯ ಮೋಹವನ್ನು ಹೊಂದಿರುತ್ತಾರೆ. ಆಳವಾಗಿ ಪ್ರೀತಿಸಬಹುದು ಅಥವಾ ತಾತ್ಕಾಲಿಕ ಮೋಹವೂ ಇರಬಹುದು. ಅಂತಹ ಸಂದರ್ಭಗಳಲ್ಲಿ, ಮಹಿಳೆಯರು ಅದರ ಬಗ್ಗೆ ತಮ್ಮ ಸ್ನೇಹಿತೆಯರಿಗೆ ಹೇಳಬಹುದು. ಆದರೆ ಆಕೆ ಇದನ್ನು ತನ್ನ ಪತಿಯಿಂದ ಮುಚ್ಚಿಡುತ್ತಾಳೆ.

Tap to resize

Latest Videos

undefined

ಹಳೆಯ ಲವ್: ತನ್ನ ಹಳೆಯ ಪ್ರೇಮ ಪ್ರಕರಣವನ್ನು ಎಂದೂ ತನ್ನ ಗಂಡನ ಬಳಿ ಪತ್ನಿ ಹೇಳಿಕೊಳ್ಳಲಾರಳು. ಯಾಕೆಂದರೆ ಇದು ಗಂಡಸಿನ ಇಗೋ ಹರ್ಟ್‌ ಮಾಡುತ್ತದೆ ಎಂಬುದು ಆಕೆಗೆ ಗೊತ್ತಿರುತ್ತದೆ.   

ರತಿಸುಖದ ಉತ್ಕರ್ಷ: ಮಿಲನದ ಸಮಯದಲ್ಲಿ ಗಂಡಸು ಬಹುಬೇಗ ಲೈಂಗಿಕ ಕ್ರಿಯೆಯನ್ನು ಮುಗಿಸಿದರೆ, ಹೆಣ್ಣಿಗೆ ಪ್ರಣಯೋತ್ಕರ್ಷ ಆಗದೇ ಹೋಗುವ ಸಂಭವ ಹೆಚ್ಚು. ಗಂಡಸಿಗೆ ಆದಂತೆ ಹೆಣ್ಣಿಗೆ ಮಿಲನದ ತುತ್ತತುದಿಯ ಸುಖ ಬೇಗನೆ ಆಗುವುದಿಲ್ಲ. ಆದರೂ ಇದನ್ನು ಪತ್ನಿ ಪತಿಗೆ ಮುಕ್ತವಾಗಿ ಹೇಳಲಾರಳು. ಹೇಳಿದರೆ ಗಂಡ ಎಲ್ಲಿ ತನ್ನ ಪುರುಷತ್ವದ ಬಗ್ಗೆ ಅವಮಾನ ಅನುಭವಿಸುತ್ತಾನೋ ಎಂದು ಆಕೆ ಭಾವಿಸುತ್ತಾಳೆ.

ಪ್ರಣಯ (Romance): ಸಾಮಾನ್ಯವಾಗಿ ಮಹಿಳೆಯರು ತಮ್ಮ ಪತಿಯೊಂದಿಗೆ ಮಧುಮಂಚದಲ್ಲಿ ಹೆಚ್ಚಿನ ಪ್ರಣಯವನ್ನು ಹೊಂದುವ ಬಲವಾದ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಅವರು ಇದನ್ನು ತಮ್ಮ ಪತಿಗೆ ಸ್ಪಷ್ಟವಾಗಿ ವ್ಯಕ್ತಪಡಿಸುವುದಿಲ್ಲ. ಪ್ರಣಯಕ್ಕಾಗಿ ಮನದಲ್ಲಿ ಬಲವಾದ ಬಯಕೆ ಇದ್ದರೂ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಪರೋಕ್ಷವಾಗಿ ತಿಳಿಸಲು ಯತ್ನಿಸುತ್ತಿರುತ್ತಾರೆ.

ಉಳಿತಾಯ (Savings): ಮನೆಯ ಹೆಣ್ಣನ್ನು ಗೃಹಲಕ್ಷ್ಮಿ ಎಂದು ಜನ ಕರೆಯುವುದನ್ನು ನೀವು ಕೇಳಿರಬಹುದು. ಹಣ ಉಳಿತಾಯದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಭವಿಷ್ಯವನ್ನು ನಿರೀಕ್ಷಿಸುವ ಮೂಲಕ, ಅವರು ಕೆಲವು ರೀತಿಯಲ್ಲಿ ಉಳಿಸುತ್ತಾರೆ. ಆದರೆ ಮಹಿಳೆಯರು ತಮ್ಮ ಗಂಡನಿಂದ ಉಳಿತಾಯವನ್ನು ಮುಚ್ಚಿಡುತ್ತಾರೆ. ಏಕೆಂದರೆ ಗಂಡಂದಿರು ಹೆಚ್ಚು ದುಂದುವೆಚ್ಚ ಮಾಡುತ್ತಾರೆ ಮತ್ತು ಅವರು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭಾವಿಸುತ್ತಾರೆ.

ಅನಾರೋಗ್ಯ (Illness): ಗಂಡ ಮತ್ತು ಹೆಂಡತಿಯ ನಡುವೆ ಅನೇಕ ವಿಷಯಗಳು ವಿನಿಮಯ ಆಗುತ್ತವೆ. ಆದರೆ ಹೆಂಡತಿ ತನ್ನ ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ತನ್ನ ಗಂಡನಿಗೆ ಹೇಳಲು ಇಷ್ಟಪಡುವುದಿಲ್ಲ. ಮುಖ್ಯವಾಗಿ ಮಹಿಳೆಯರನ್ನು ಕಾಡುವ ಕೆಲವು ಸಮಸ್ಯೆಗಳ ಬಗ್ಗೆ. ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುವುದಿಲ್ಲ. ಈಗಿನ ಆಧುನಿಕ ಹೆಣ್ಣು ಗಂಡನ ಜೊತೆಗೆ ಇದನ್ನು ಮಾತನಾಡುತ್ತಾಳೆ. ಆದರೆ ಸಾಂಪ್ರದಾಯಿಕ ಮನೆತನಗಳಲ್ಲಿ ಇನ್ನೂ ಮಹಿಳೆ ಇದರಿಂದ ಮುಕ್ತಳಾಗಿಲ್ಲ. 

ಅಂಕಲ್​ ಆದ್ರೂ ಪರವಾಗಿಲ್ಲ, ಮಹಿಳೆಯರು ಇಂತಹ ಪುರುಷರನ್ನು ಪ್ರೀತಿಸುತ್ತಾರೆ

ವಿಶೇಷ ನಿರ್ಧಾರಗಳು: ಗಂಡನ ಮಾತನ್ನು ಮಹಿಳೆಯರು ಹೆಚ್ಚಾಗಿ ಅಲ್ಲಗಳೆಯಲಾರರು. ಮನೆಯಲ್ಲಿ ಕೆಲವು ವಿಶೇಷ ನಿರ್ಧಾರಗಳನ್ನು ಕೈಗೊಳ್ಳುವುದು ಅನೇಕ ಬಾರಿ ಸಂಭವಿಸುತ್ತದೆ. ಇದರಲ್ಲಿ ಪತಿ ಮತ್ತು ಪತ್ನಿ ಇಬ್ಬರ ಒಪ್ಪಿಗೆ ಅಗತ್ಯ. ಆದರೆ ಕೆಲವೊಮ್ಮೆ ಹೆಂಡತಿ ತನ್ನ ಪತಿಯೊಂದಿಗೆ ಸಂತೋಷವಿಲ್ಲದಿದ್ದರೂ ಸಹ ನಿರ್ಧಾರಗಳನ್ನು ಒಪ್ಪಿಕೊಳ್ಳುತ್ತಾಳೆ. ಗಂಡನಿಗೆ ಈ ವಿಷಯ ತಿಳಿಯುವುದೇ ಇಲ್ಲ. ಕೆಲವೊಮ್ಮೆ ಕೆಲವು ನಿರ್ಧಾರಗಳಿಂದ ಹೆಂಡತಿ ಸಂತೋಷವಾಗಿಲ್ಲದಿದ್ದರೂ ಸಂತೋಷವಾಗಿರುವಂತೆ ನಟಿಸುತ್ತಾಳೆ.

ತವರಿನವರಿಗೆ ಕೊಟ್ಟ ಸಾಲ: ಪತ್ನಿಯರು ಕೆಲವೊಮ್ಮೆ ಗುಟ್ಟಾಗಿ ತನ್ನ ತವರು ಮನೆಗೆ ಹಣಕಾಸು ಅಥವಾ ಬೇರೇನಾದರೂ ಸಹಾಯ ಮಾಡುತ್ತಾಳೆ. ಅದು ಆಕೆಯ ಕರುಳುಬಳ್ಳಿಯ ಸಂಬಂಧ. ಆದರೆ ಈ ಹಣಕಾಸಿನ ನೆರವು ಮಾತ್ರ ಗಂಡನ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸುತ್ತಾಳೆ. ಹಾಗೊಂದು ವೇಳೆ ಆತನಿಗೆ ಗೊತ್ತಾದರೂ ತನಗೇ ಖರ್ಚು ಮಾಡಿದೆನೆಂದು ತಿಳಿಸುತ್ತಾಳೆ. 

ಆದರ್ಶ ದಾಂಪತ್ಯ ಸುಖಕ್ಕೆ ಚಾಣಕ್ಯನ 7 ಸೂತ್ರಗಳು, ನವವಿವಾಹಿತರು ತಿಳಿಯಲೇಬೇಕು
 

click me!