ತಾಲೂಕಿನ ಹಾಲಹಳ್ಳಿ ಗ್ರಾಮದ ರಾಯನಕೆರೆ ಬಸವೇಶ್ವರ ಮನೆ ದೇವರ ಒಕ್ಕಲಿನವರು ದೀಪಾವಳಿ (ಬಲಿ ಪಾಡ್ಯಮಿ) ಹಬ್ಬವನ್ನೇ ಮಾಡುವುದಿಲ್ಲ.! ಜೊತೆಗೆ ಗೋ ಪೂಜೆಯನ್ನೂ ಮಾಡುತ್ತಿಲ್ಲ ಆದರೆ ಹಸಿರು ಪಟಾಕಿ ಸದ್ದು ಮಾಡುತ್ತಾರೆ.!
- ರಂಗೂಪುರ ಶಿವಕುಮಾರ್
ಗುಂಡ್ಲುಪೇಟೆ (ಅ.29): ತಾಲೂಕಿನ ಹಾಲಹಳ್ಳಿ ಗ್ರಾಮದ ರಾಯನಕೆರೆ ಬಸವೇಶ್ವರ ಮನೆ ದೇವರ ಒಕ್ಕಲಿನವರು ದೀಪಾವಳಿ (ಬಲಿ ಪಾಡ್ಯಮಿ) ಹಬ್ಬವನ್ನೇ ಮಾಡುವುದಿಲ್ಲ.! ಜೊತೆಗೆ ಗೋ ಪೂಜೆಯನ್ನೂ ಮಾಡುತ್ತಿಲ್ಲ ಆದರೆ ಹಸಿರು ಪಟಾಕಿ ಸದ್ದು ಮಾಡುತ್ತಾರೆ.!
undefined
ದೀಪಾವಳಿ ಹಬ್ಬ ರಾಯನಕೆರೆ ಬಸವೇಶ್ವರ ಒಕ್ಕಲಿನ ಕುಟುಂಬಸ್ಥರು
ದೀಪಾವಳಿ ಹಬ್ಬವನ್ನು ತಲತಲಾಂತರದಿಂದ ಆಚರಣೆ ಮಾಡುತ್ತಿಲ್ಲವಂತೆ. ಹಾಲಹಳ್ಳಿ ರಾಯನಕೆರೆ ಬಸವೇಶ್ವರ ಒಕ್ಕಲಿನ 40 ಕುಟುಂಬಸ್ಥರು ಮಾತ್ರ ದೀಪಾವಳಿ ಹಬ್ಬದ ಮೂರು ಆಚರಣೆ ಮಾಡುತ್ತಿಲ್ಲ. ಆದರೆ ಈ ಕುಟುಂಬದವರು ನರಕ ಚತುರ್ದಶಿ ದಿನ ಮಾತ್ರ ಹಬ್ಬದೂಟವನ್ನು ಮಾಡುತ್ತಿದ್ದಾರೆ. ಅಮವಾಸ್ಯೆ ಹಾಗೂ ಬಲಿ ಪಾಡ್ಯಮಿ ದಿನ ಹಾಗೂ ಮರುದಿನವರೆಗೆ (3 ದಿನ) ಯಾವುದೇ ಹೊಸ ಅಡುಗೆ ಮಾಡುವಂತಿಲ್ಲ. ಅಡುಗೆಯಲ್ಲಿ ಒಗ್ಗರಣೆ ಹಾಕುವಂತಿಲ್ಲ, ಸ್ನಾನ ಮಾಡುವಂತಿಲ್ಲ, ದೋಸೆ, ಇಡ್ಲಿ ಮಾಡಂಗಿಲ್ಲ ಜೊತೆಗೆ ಮಡಿ ಅನ್ನುವುದು ಇರುವುದಿಲ್ಲ, ಹೊಸ ಬಟ್ಟೆಗಳನ್ನು ಧರಿಸುವಂತಿಲ್ಲ, ಆದರೆ ದೀಪಾವಳಿ (ಬಲಿ ಪಾಡ್ಯಮಿ) ದಿನ ಮಾತ್ರ ಮಕ್ಕಳು ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಮತ್ತೊಂದು ವಿಶೇಷ ಏನೆಂದರೆ ರಾಯನಕೆರೆ ಬಸವೇಶ್ವರ ಒಕ್ಕಲಿಗರು ನೆಂಟರ ಮನೆಯಲ್ಲಿ ಸ್ನಾನ ಮಾಡಬಹುದು, ಹೊಸ ಬಟ್ಟೆ ಧರಿಸಬಹುದು ಆದರೆ ಸ್ವಂತ ಮನೆಯಲ್ಲಿ
ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದ ಜನ; ನಗರದಲ್ಲಿ 'ಹಸಿರು ಪಟಾಕಿ' ಮಾರಾಟವೇ ಠುಸ್
ಈ ನಂಬಿಕೆ ಕಲೆ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದು ಕೇವಲ ನಮ್ಮೂರಿನ ಕಥೆಯಲ್ಲ, ರಾಯನಕೆರೆ ಬಸವೇಶ್ವರ ಮನೆ ದೇವರಾಗಿ ಹೊಂದಿರುವ ತಾಲೂಕಿನ ಹಾಲಹಳ್ಳಿ, ಚಿಕ್ಕಹುಂಡಿ, ನಂಜನಗೂಡು ತಾಲೂಕಿನ ನಾಗಣಾಪುರ, ಹಂಚೀಪುರ, ಕಡಜೆಟ್ಟಿ, ಹರಗಿನಪುರ, ಹಾಡ್ಯ ಸೇರಿದಂತೆ ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ ಎಂದು ಚಿಂತಕ ಹಾಲಹಳ್ಳಿ ಪೃಥ್ವಿರಾಜ್ ಹೇಳಿದರು. ಈ ಸಂಪ್ರದಾಯ ಹಿಂದಿನಿಂದಲೂ ಇರುವ ಪದ್ದತಿಯಾಗಿದ್ದು ನನ್ನ ತಾತ, ಮುತ್ತಾತನ ಕಾಲದಿಂದಲೂ ರಾಯನಕೆರೆ ಬಸವೇಶ್ವರ ಒಕ್ಕಲಿನ ಕುಟುಂಬಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ರಾಯನಕೆರೆ ಮೈಸೂರು-ಎಚ್.ಡಿ.ಕೋಟೆ ಬಳಿಯ ಜಯಪುರದ ಬಳಿಯಿದೆ. ಅಲ್ಲಿ ಬಸವೇಶ್ವರ ದೇವಾಲಯ ಇದ್ದು ಬಹುಶಃ ಈ ಒಕ್ಕಲಿನ ಜನರು ಅಲ್ಲಿಂದ ವಲಸೆ ಹೋಗಿರಬೇಕು ಎಂದರು.
ದೀಪಾವಳಿಗೆ ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳೇನು? ಈ ಟಿಪ್ಸ್ ಫಾಲೋ ಮಾಡಿ
ಹುಳ ಬಿದ್ದಿತ್ತಂತೆ: ರಾಯನಕೆರೆ ಬಸವೇಶ್ವರ ಒಕ್ಕಲಿನ ಜನರು ಕೆಲ ದಶಕಗಳ ಹಿಂದೆ ಹಾಲಹಳ್ಳಿಯಲ್ಲಿ ಈ ನಂಬಿಕೆ ಸತ್ಯನಾ, ಸುಳ್ಳೋ ಇರಬೇಕು ಎಂದು ಗ್ರಾಮಸ್ಥನೊಬ್ಬ ಮನೆಯಲ್ಲಿ ದೀಪಾವಳಿಗೆ ದೋಸೆಗೆ ಹಿಟ್ಟು ಆಡಿಸಿದ್ದಂತೆ. ಬೆಳಗ್ಗೆ ಎದ್ದು ನೋಡಿದಾಗ ಆಡಿಸಿದ್ದ ಹಿಟ್ಟಿನಲ್ಲಿ ಹುಳ ಬಿದ್ದಿದ್ದ ಕಾರಣ ದೀಪಾವಳಿ ಆಚರಿಸುತ್ತಿಲ್ಲ ಎನ್ನಲಾಗಿದೆ