ನೀರು, ಬೆಂಕಿ, ಗಾಳಿ, ಭೂಮಿ- ಇದರಲ್ಲಿ ನಿಮ್ಮದು ಯಾವ ಜನ್ಮರಾಶಿ? ನಿಮ್ಮ ಗುಣ ಹೇಗೆ?

By Suvarna News  |  First Published Sep 12, 2021, 4:23 PM IST

ಹನ್ನೆರಡು ರಾಶಿಚಕ್ರ ಚಿಹ್ನೆಗಳಲ್ಲಿ ಪ್ರತಿಯೊಂದು ಕೂಡಾ_ ನಾಲ್ಕು ವರ್ಗಗಳಲ್ಲಿ ಒಂದಕ್ಕೆ ಸೇರಿದೆ- ಬೆಂಕಿ, ನೀರು, ಗಾಳಿ ಮತ್ತು ಭೂಮಿ. ಇವುಗಳಿಗೆ ಪ್ರತ್ಯೇಕ ಗುಣಗಳೂ ಇವೆ. ನಿಮ್ಮ ವರ್ಗ ಯಾವುದು ಹಾಗೂ ನಿಮ್ಮ ಗುಣ ಯಾವುದು ಇಲ್ಲಿ ನೋಡಿಕೊಳ್ಳಿ.


ಜ್ಯೋತಿಷ್ಯ ಚಿಹ್ನೆಗಳು ನಿಜಕ್ಕೂ ಒಂದು ವಿಸ್ಮಯಕಾರಿ ವಿದ್ಯಮಾನ. ನಕ್ಷತ್ರಗಳು ಅಥವಾ ರಾಶಿಚಕ್ರದ ಚಿಹ್ನೆಗಳು ನಮ್ಮ ವ್ಯಕ್ತಿತ್ವದ ವಿಶೇಷತೆಗಳನ್ನು ಬಹಳ ಸುಲಭವಾಗಿ ಸೂಚಿಸುತ್ತವೆ. ರಾಶಿಚಕ್ರ ಚಿಹ್ನೆಗಳನ್ನು ಮುಖ್ಯವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ: ಬೆಂಕಿ, ನೀರು, ಭೂಮಿ ಮತ್ತು ಗಾಳಿ. ಈ ನಾಲ್ಕು ವರ್ಗಗಳು 12 ರಾಶಿಗಳಲ್ಲಿ ತಲಾ 3 ಚಿಹ್ನೆಗಳನ್ನು ಹೊಂದಿವೆ. ಪ್ರತಿಯೊಂದು ವರ್ಗ, ಅದರಲ್ಲಿರುವ ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರ ಸಾಮಾನ್ಯ ಗುಣವನ್ನು ಈಗ ತಿಳಿಯೋಣ.

ಅಗ್ನಿ- ಮೇಷ, ಸಿಂಹ, ಧನು

Tap to resize

Latest Videos

ಈ ಮೂರು ರಾಶಿಚಕ್ರಗಳು ಅಗ್ನಿ ಅಂಶದೊಂದಿಗೆ ಸಂಬಂಧ ಹೊಂದಿದೆ. ಬೆಂಕಿಯಂತೆಯೇ, ಮೇಷ ರಾಶಿಯು ಅದ್ಭುತವಾದ ಚೈತನ್ಯವನ್ನು ಹೊಂದಿದೆ ಮತ್ತು ಸಾಕಷ್ಟು ಪ್ರಬಲವಾಗಿದೆ. ಯಾರೇ ಆಗಲಿ ಅವರ ಸಂಪರ್ಕಕ್ಕೆ ಬಂದರೆ, ಅವರ ಪ್ರಭಾವದಿಂದ ಪಾರಾಗುವಂತಿಲ್ಲ. ಅವರು ಸ್ವಾಭಾವಿಕವಾಗಿ ಹೆಚ್ಚು ಆತ್ಮವಿಶ್ವಾಸ ಉಳ್ಳವರು. ಮತ್ತು ಅವರು ಸಂತೋಷವಾಗಿರುವಾಗ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತೋರಿಸುತ್ತಾರೆ. ಆದರೆ ಇಲ್ಲದಿದ್ದಾಗ, ತುಂಬಾ ಮೊಂಡುತನದಿಂದ ಮತ್ತು ನೇರವಾಗಿ, ನೋಯಿಸುವ ರೀತಿಯಲ್ಲಿ ಮಾತಾಡಬಹುದು.

ಸಿಂಹ ರಾಶಿಯವರು ಗರ್ಜಿಸುವ ವ್ಯಕ್ತಿತ್ವದವರು. ಯಾರಿಂದಲೂ ಇವರ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ಇವರು ಉತ್ತಮ ಶಕ್ತಿಯ ಮಟ್ಟವನ್ನು ಹೊಂದಿದ್ದಾರೆ. ಉತ್ಸಾಹದಿಂದ ಸೃಜನಶೀಲರು ಮತ್ತು ಬಲವಾದ ಚಿಂತನಶಕ್ತಿ ಉಳ್ಳವರು. ಈ ಶಕ್ತಿಯ ಪ್ರವಾಹವನ್ನು ಸಮತೋಲನಗೊಳಿಸಲು, ಇವರು ನೀರಿನ ರಾಶಿಚಿಹ್ನೆ ಉಳ್ಳವರನ್ನು ಸುತ್ತಮುತ್ತ ಹೊಂದಿರಬೇಕು.

ಧನು ರಾಶಿಯವರು ಕೆಲವೊಮ್ಮೆ ಉರಿಉರಿ ಬೆಂಕಿಯಂತಿರುತ್ತಾರೆ. ಇವರ ಬಳಿ ಹೋಗುವುದು ಕಷ್ಟ. ಆದರೆ ಕೆಲವು ಸಂದರ್ಭಗಳಲ್ಲಿ ಶಾಂತವಾಗಿರಬಹುದು. ಅವರು ಪ್ರತಿ ಯೋಜನೆ ಮತ್ತು ಸನ್ನಿವೇಶವನ್ನು ಬಹಳ ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಅದು ಅವರ ಕೆಲಸ ಮತ್ತು ಸಂಬಂಧಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.

ಚಪ್ಪಲಿ ಯಾವಾಗ ಶುಭ, ಯಾವಾಗ ಅಶುಭ? ಜ್ಯೋತಿಷ್ಯ ಏನ್ ಹೇಳುತ್ತೆ?
 

ಭೂಮಿ- ವೃಷಭ, ಕನ್ಯಾ, ಮಕರ

ವೃಷಭ ರಾಶಿಯು ಪ್ರಕೃತಿಯ ಸೌಂದರ್ಯವನ್ನು ಮೆಚ್ಚುವಂಥದು ಮತ್ತು ಅದಕ್ಕಾಗಿಯೇ ಭೂಮಿಯ ಕಂಪನ್ನು ಆಸ್ವಾದಿಸುತ್ತದೆ. ಇವರು ಅದ್ಧೂರಿ ಜೀವನಶೈಲಿಯನ್ನು ಅನುಸರಿಸಲು ಇಷ್ಟಪಡುತ್ತಾರೆ. ಐಷಾರಾಮಿ ವಸ್ತುಗಳಿಂದ ತಮ್ಮನ್ನು ರಂಜಿಸಿಕೊಳ್ಳಲು ಇಷ್ಟಪಡುತ್ತಾರೆ. ಇವರು ಶುಕ್ರಗ್ರಹದ ಸ್ವಭಾವದವರು. ಐಷಾರಾಮಿ ಮತ್ತು ದುಬಾರಿ ವಸ್ತುಗಳನ್ನು ಹುಡುಕುತ್ತಾರೆ. ಪ್ರಕೃತಿಯಂತೆಯೇ, ಅವರು ಬಣ್ಣಗಳು ಮತ್ತು ಜೀವನದ ಫಲಗಳನ್ನು ನಂಬುತ್ತಾರೆ.

ಕನ್ಯಾ ರಾಶಿಯವರು ನಂಬಲರ್ಹ, ಆಧರಿಸುವ ಮತ್ತು ಅತ್ಯಂತ ವೃತ್ತಿಪರ ಸ್ವಭಾವದವರು. ಇವರು ತಮ್ಮದೇ ಆದ ಅತ್ಯುತ್ತಮ ಆವೃತ್ತಿಯಾಗಲು ಬಯಸುತ್ತಾರೆ. ಏಕೆಂದರೆ ಅವರಿಗೆ ಹೆಚ್ಚಿನ ಗುರಿಗಳು ಮತ್ತು ಅದನ್ನು ಹೊಂದುವ ಆಕಾಂಕ್ಷೆಗಳಿವೆ. ವೃಷಭ ರಾಶಿಯಂತೆಯೇ ಇವರು ಸಹ ಶಾಂತ, ನೆಮ್ಮದಿಯ ಜೀವನ ನಡೆಸಲು ಬಯಸುತ್ತಾರೆ. ಅವರು ಕಡಿಮೆ ಗೊಂದಲಕ್ಕೊಳಗಾಗುವವರು ಮತ್ತು ವಾಸ್ತವದ ಬಗ್ಗೆ ಚೆನ್ನಾಗಿ ತಿಳಿದಿದವರು.

ಮಕರ ರಾಶಿಯವರು ಸಾಕಷ್ಟು ನಿಗೂಢವಾಗಿರಬಹುದು, ಆದರೆ ಇವರು ಉತ್ತಮ ದೃಢ ಮನಸ್ಸಿನ ಅಭಿಪ್ರಾಯವನ್ನು ಹೊಂದಿದ್ದಾರೆ. ಅದರೊಂದಿಗೆ ಇವರು ಪ್ರತಿಕೂಲತೆಗಳು ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತು ಹೋರಾಡಬಹುದು. ಇವರು ವಾದಿಸುವವರಲ್ಲ, ಆದರೆ ಇತರರ ಬೇಡಿಕೆಗಳಿಗೆ ಸಮಂಜಸ ಉತ್ತರ ಕೊಡುತ್ತಾರೆ.

ಗಾಳಿ- ಮಿಥುನ, ತುಲಾ, ಕುಂಭ

ಮಿಥುನ ರಾಶಿಯವರು ಎಂದಿಗೂ ಸ್ಥಿರವಾಗಿ ಇರಲಾರರು ಮತ್ತು ಯಾವಾಗಲೂ ಚಲನೆಯಲ್ಲಿರುತ್ತಾರೆ. ಅವರು ಸರಳವಾಗಿ ತಮಗೆ ಸರಿಹೊಂದುವ ದಿಕ್ಕಿನಲ್ಲಿ ಹರಿಯುತ್ತಾರೆ. ಕೆಲವೊಮ್ಮೆ ಗಾಳಿ ಬೀಸಿದಂತೆ ಹೋಗುವವರು, ಆದರೆ ಇವರ ಆಪ್ತರೊಂದಿಗೆ ಉತ್ತಮ ಸ್ನೇಹಿತರು ಮತ್ತು ನಿಜವಾಗಿಯೂ ಪಾರದರ್ಶಕವಾಗಿರುತ್ತಾರೆ. ಗಾಳಿಯತೆಯೇ ಮನ ಬಂದತ್ತ ಬೀಸುವವರು, ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ನಿಖರವಾಗಿರದು. ಚಂಚಲ ಮನಸ್ಸಿನವರಾಗಿರುತ್ತಾರೆ.

ತುಲಾ ರಾಶಿಯವರು ಸೃಜನಶೀಲ, ಐಷಾರಾಮಿ, ಭ್ರಮೆ ಅಥವಾ ಕಲಾತ್ಮಕತೆಯ ಜಗತ್ತಿನಲ್ಲಿ ವಾಸಿಸುತ್ತಿರುತ್ತಾರೆ. ಇವು ಗಾಳಿಯ ಅಂಶದ ಪ್ರತಿರೂಪವಾಗಿವೆ. ಗಾಳಿಯ ಅಂಶ ಇರುವುದರ ನಡುವೆಯೂ ಇವರು ತಮ್ಮ ಜೀವನವನ್ನು ಸಮತೋಲನಗೊಳಿಸಬಹುದು. ಇದರಿಂದ ಅವರು ತಮ್ಮ ಕಲ್ಪನೆ ಮತ್ತು ವಾಸ್ತವದೊಂದಿಗೆ ನಿಯಂತ್ರಣದಲ್ಲಿರುತ್ತಾರೆ. ಇವರು ಯಶಸ್ವಿಯಾಗಿದ್ದರೂ, ತಮ್ಮ ಜೀವನದ ಬಗ್ಗೆ ಹೆಮ್ಮೆ ಪಡುವುದಿಲ್ಲ.

ಕುಂಭ ರಾಶಿಯವರು ತುಂಬಾ ಉತ್ಸಾಹಿಗಳು; ಹೊಸ ಉದ್ಯಮಗಳ ಬಗ್ಗೆ ಉತ್ಸುಕರಾಗಿರುತ್ತಾರೆ. ಗಾಳಿಯಂತೆಯೇ ಅವರು ಹರಿಯಲು ಮತ್ತು ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಇವರು ಕೆಲವೊಮ್ಮೆ ಅನಿಯಂತ್ರಿತರು ಆಗಿರಬಹುದು. ಇವರು ಬೆಂಕಿಯ ಚಿಹ್ನೆಯವರೊಂದಿಗೆ ಬೆರೆಯುತ್ತಿದ್ದರೆ ಅದು ಅವರನ್ನು ಬಹಳ ಪ್ರಭಾವಶಾಲಿಯಾಗಿಸುತ್ತದೆ.

ಕನ್ಯಾ ರಾಶಿಯಲ್ಲಿ ಮಂಗಳ ಗ್ರಹ: ನಿಮ್ಮ ರಾಶಿಗೆ ಶುಭಾಶುಭ ಫಲವೇನು?

ರು- ಕಟಕ, ವೃಶ್ಚಿಕ, ಮೀನ

ಕಟಕ ರಾಶಿಯವರು ಆತ್ಮದ ಅಂಶ ಮತ್ತು ಹೃದಯದಿಂದ ಶುದ್ಧರಾಗಿದ್ದಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ತುಂಬಾ ಸಾಂತ್ವನ ನೀಡುತ್ತಾರೆ. ಇವರು ಯಾವಾಗಲೂ ಹೃದಯದಲ್ಲಿ ಉತ್ತಮ ಉದ್ದೇಶಗಳನ್ನು ಹೊಂದಿರುತ್ತಾರೆ. ಇವರ ಸ್ಪರ್ಶ ಭಾವನಾತ್ಮಕವಾಗಿರುತ್ತದೆ. ನೀರಿನಂತೆಯೇ, ಅವರು ತಮ್ಮ ತಂಪನ್ನು ಬಹಳ ಸುಲಭವಾಗಿ ನಿಮಗೆ ದಾಟಿಸುತ್ತಾರೆ.

ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ನಿಗೂಢತೆ ಕಾಪಾಡಿಕೊಳ್ಳುತ್ತಾರೆ ಮತ್ತು ಕುತೂಹಲದಿಂದ ಕೂಡಿರುತ್ತಾರೆ. ಇವರು ತಮ್ಮ ಜೀವನದ ಅಂಶಗಳನ್ನು ಅರ್ಥಮಾಡಿಕೊಳ್ಳಲು ಆಕಾಶ ಗ್ರಹಗಳ ಸ್ಥಾನಗಳನ್ನು ನಂಬುತ್ತಾರೆ. ಆಧ್ಯಾತ್ಮದ ಬಗ್ಗೆ ಅವರಿಗೆ ಹೆಚ್ಚು ತಿಳಿದಿರುತ್ತದೆ. ಇವರು ನೀರಿನ ಚಿಹ್ನೆಗಳ ವಿಶ್ವಾಸಾರ್ಹ ಅಂಶವನ್ನು ಚೆನ್ನಾಗಿ ಸೂಚಿಸುತ್ತಾರೆ.

ಮೀನ ರಾಶಿಯವರು ನೀರಿನಲ್ಲಿ ಅತಿ ವೇಗವಾಗಿ ಚಲಿಸುವ ಮೀನಿನಂತೆ ಎಲ್ಲಿ ಬೇಕಾದರೂ ಹೊಂದಿಕೊಳ್ಳುತ್ತಾರೆ. ಇವರ ವಲಯದಲ್ಲಿದ್ದರೆ ಇವರು ಅತಿ ವೇಗದ ಚಲನೆ ಮತ್ತು ಜ್ಞಾನ ಹೊಂದಿರುತ್ತಾರೆ. ಇವರು ಮಾಡುವ ಪ್ರತಿಯೊಂದು ಕೆಲಸಕ್ಕೂ ಸಂಬಂಧಿಸಿದ ಜ್ಞಾನವನ್ನು ಪಡೆಯಲು ಇಷ್ಟಪಡುತ್ತಾರೆ. ಇವರು ನಿಗೂಢವಾಗಿರುತ್ತಾರೆ. ಆದರೆ ಇವರು ಎಂದಿಗೂ ಅಸಮಂಜಸವಾಗಿರುವುದಿಲ್ಲ.

click me!