ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯ ನಕ್ಷತ್ರದವರ ಆಸಕ್ತಿ ಗೊತ್ತಾ..?

By Suvarna News  |  First Published Sep 10, 2021, 4:05 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ನಕ್ಷತ್ರ ಗ್ರಹಗಳಿಗೆ ವಿಶೇಷವಾದ ಸ್ಥಾನವಿದೆ. ಇವುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು   ತಿಳಿಯಲಾಗುತ್ತದೆ. ಇಲ್ಲಿ ನಾವು ಮೃಗಶಿರಾ, ಆರ್ದ್ರಾ, ಪುನರ್ವಸು ಮತ್ತು  ಪುಷ್ಯ ನಕ್ಷತ್ರದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....


ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರಗಳಿಗೆ ವಿಶೇಷವಾದ ಮಹತ್ವವಿದೆ. ಆಯಾ ನಕ್ಷತ್ರದಲ್ಲಿ ಜನಿಸಿದವರ ಗುಣ, ಸ್ವಭಾವಗಳು ವಿಭಿನ್ನವಾಗಿರುತ್ತವೆ. ಇಲ್ಲಿ ಮೃಗಶಿರಾ, ಆರ್ದ್ರಾ, ಪುನರ್ವಸು ಮತ್ತು ಪುಷ್ಯ ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ...

ಮೃಗಶಿರಾ ನಕ್ಷತ್ರ

Tap to resize

Latest Videos

undefined

ಇಪ್ಪತ್ತೇಳು ನಕ್ಷತ್ರಗಳ ಕೂಟದಲ್ಲಿ ಮೃಗಶಿರಾ ನಕ್ಷತ್ರವು ಐದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಮಂಗಳ ಗ್ರಹವಾಗಿದೆ. ಹಾಗಾಗಿ ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರು ಸಾಹಸ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಯಾವುದೇ ವಿಷಯದ ಬಗ್ಗೆ ದೃಢ ನಿಶ್ಚಯವನ್ನು ಹೊಂದಿರುತ್ತಾರೆ. ಚಂಚಲ ಸ್ವಭಾವ ಇವರದ್ದಾಗಿರುವುದಿಲ್ಲ. ಪ್ರತಿಯೊಂದು ಕೆಲಸವನ್ನು ಅತ್ಯಂತ ಪರಿಶ್ರಮದಿಂದ ಮಾಡುವ ಸ್ವಭಾವ ಇವರದ್ದಾಗಿರುತ್ತದೆ. ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ. ಈ ವ್ಯಕ್ತಿಗಳು ಸದಾ ಸಕ್ರಿಯರಾಗಿರುತ್ತಾರೆ. ಈ ವ್ಯಕ್ತಿಗಳು ಯಾರಿಂದಲಾದರೂ ಮೋಸ ಹೋಗಿದ್ದರೆ ಅವರಿಗೆ ಸರಿಯಾದ ಶಿಕ್ಷೆ ನೀಡುವವರೆಗೆ ಸುಮ್ಮನಿರುವುದಿಲ್ಲ. ಈ ವ್ಯಕ್ತಿಗಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ ಮತ್ತು ಮಾನಸಿಕವಾಗಿ ಉತ್ತಮ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಂಗೀತದ ಮೇಲೆ ಒಲವು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ, ಕೌಟುಂಬಿಕ ಜೀವನವನ್ನು ಉತ್ತಮವಾಗಿ ನಿಭಾಯಿಸುತ್ತಾರೆ.

ಇದನ್ನು ಓದಿ: ಹಸ್ತದಲ್ಲಿ ಶನಿ ಪರ್ವತ ಉಬ್ಬಾಗಿದ್ದರೆ ಅದೃಷ್ಟ..!

ಆರ್ದ್ರಾ ನಕ್ಷತ್ರ

ಇಪ್ಪತ್ತೇಳು ನಕ್ಷತ್ರಗಳಲ್ಲಿ ಆರ್ದ್ರಾ ನಕ್ಷತ್ರವು ಆರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ರಾಹು ಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಜೀವನಪೂರ್ತಿ ಬುಧ ಮತ್ತು ರಾಹು ಗ್ರಹದ ಪ್ರಭಾವ ಇರುತ್ತದೆ. ರಾಹು ಗ್ರಹದ ಪ್ರಭಾವವು ಈ ವ್ಯಕ್ತಿಗಳು ರಾಜಕಾರಣದತ್ತ ಒಲವು ತೋರಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇತರರು ಇವರತ್ತ ಆಕರ್ಷಿತರಾಗಲು ರಾಹು ಗ್ರಹದ ಪ್ರಭಾವವೇ ಕಾರಣವಾಗಿರುತ್ತದೆ. ಈ ವ್ಯಕ್ತಿಗಳು ಇತರರ ಮನಸ್ಸಿನಲ್ಲಿ ಇರುವುದನ್ನು ಬೇಗ ತಿಳಿದುಕೊಂಡು ಬಿಡುತ್ತಾರೆ. ಹಾಗಾಗಿ ಇವರು ಇತರರಿಂದ ಮೋಸ ಹೋಗುವುದು ತುಂಬಾ ಕಡಿಮೆ. ಇತರರಿಂದ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಸ್ವಾರ್ಥವನ್ನು ಪೂರೈಸಿಕೊಳ್ಳಲು ನೈತಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಇದನ್ನು ಓದಿ: ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಕ್ಷತ್ರದವರು ಹೇಗೆ ಗೊತ್ತಾ..?

ಪುನರ್ವಸು ನಕ್ಷತ್ರ

ಪುನರ್ವಸು ನಕ್ಷತ್ರವು ಏಳನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು ಗ್ರಹವಾಗಿದೆ. ಈ ನಕ್ಷತ್ರದಲ್ಲಿ  ಜನಿಸಿದವರ ಆಂತರ್ಯದಲ್ಲಿ ದೈವಿಕ ಶಕ್ತಿ ಇರುತ್ತದೆ ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ನೋಡಲು ದೊಡ್ಡದಾಗಿರುತ್ತಾರೆ. ಇವರ ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಅತ್ಯಂತ ಚುರುಕಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚು ಸ್ನೇಹಪರರು ಮತ್ತು ಇತರರೊಂದಿಗೆ ಪ್ರೇಮ ಭಾವನೆಯಿಂದ ಇರುತ್ತಾರೆ. ಈ ನಕ್ಷತ್ರದವರಿಗೆ ಯಾವುದೇ ವಿಪತ್ತು ಅಥವಾ ಸಮಸ್ಯೆಗಳು ಕಾಡಿದರೆ ಅಂತಹ ಸಮಯದಲ್ಲಿ ಯಾವುದೋ ಒಂದು ಅದೃಶ್ಯ ಶಕ್ತಿ ಇವರನ್ನು  ಕಾಪಾಡುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಧನವಂತರು ಸಹ ಆಗಿರುತ್ತಾರೆ.

ಇದನ್ನು ಓದಿ: ಈ ರಾಶಿಯ ಹುಡುಗಿಯರಿಗೆ ವಿಪರೀತ ಕೋಪ....ನಿಮ್ಮದ್ಯಾವ ರಾಶಿ?

ಪುಷ್ಯ ನಕ್ಷತ್ರ

ಇಪ್ಪತ್ತೇಳು ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವು ಎಂಟನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶನಿ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹದ ಪ್ರಭಾವವನ್ನು ಹೊಂದಿರುವ ಪುಷ್ಯ ನಕ್ಷತ್ರವನ್ನು ಎಲ್ಲಕ್ಕಿಂತ ಶುಭ ನಕ್ಷತ್ರವೆಂದು  ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಸದಾ ಇತರರ ಸಹಾಯಕ್ಕೆ ಸಿದ್ಧರಿರುತ್ತಾರೆ. ಅಷ್ಟೇ ಅಲ್ಲದೆ ಇವರಲ್ಲಿ ಸೇವಾ ಭಾವನೆ ಅತ್ಯಂತ ಹೆಚ್ಚಾಗಿರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಪರಿಶ್ರಮಿಗಳು ಆಗಿರುತ್ತಾರೆ. ತಮ್ಮ ಪರಿಶ್ರಮದ ಬಲದ ಮೇಲೆಯೇ ನಿಧಾನವಾಗಿ ಯಶಸ್ಸನ್ನು ಗಳಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಕಷ್ಟಗಳನ್ನು ಕಂಡು, ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾರೆ. ಇವರು ವಿರುದ್ಧ ಲಿಂಗಿಗಳ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ವ್ಯವಸ್ಥಿತ ಜೀವನವನ್ನು ನಡೆಸಲು ಇಚ್ಛಿಸುತ್ತಾರೆ. 

click me!