ಮೀನ ರಾಶಿಯವರಿಗೆ ಹಲ್ಲಿ ಕಂಡರೆ ಭಯ, ನಿಮಗೆ ಯಾವ ಭಯ?

By Suvarna News  |  First Published Sep 28, 2020, 4:35 PM IST

ನಿಮ್ಮ ಜನ್ಮರಾಶಿಗೆ ತಕ್ಕ ನಕ್ಷತ್ರ, ಜನ್ಮಗುಣ, ಪ್ರಾಣಿ ಎಲ್ಲವೂ ಇರುವುದರಿಂದ ನಿಮಗೆ ನಿಮ್ಮದೇ ಆದ ಭಯಗಳೂ ಇರುತ್ತವೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


ಮೇಷ ರಾಶಿ
ನಿಮಗೆ ಹಾವನ್ನು ಕಂಡರೆ ಭಯವಿರುತ್ತದೆ. ವಿಷವಿಲ್ಲದ ಹಾವಾದರೂ ಸರಿ, ಅದನ್ನು ಕಂಡರೆ ದೂರ ಓಡುತ್ತೀರಿ. ಹಾವನ್ನು ಹಿಡಿದುಕೊಳ್ಳಬೇಕಾಗಿ ಬಂದರೆ ಸತ್ತು ಹೋಗುವಷ್ಟು ಭಯ ಉಂಟಾಗುತ್ತದೆ. ಅದಕ್ಕೆ ಕಾರಣ ನೀವು ಹಿಂದಿನ ಜನ್ಮದಲ್ಲಿ ಹಾವಿನ ಕಡಿತದಿಂದ ಮರಣಕ್ಕೆ ಈಡಾದದ್ದು ಮುಂತಾದ ಕಾರಣಗಳಿರಬಹುದು. 

ವೃಷಭ ರಾಶಿ 
ನಿಮಗೆ ಬೆಂಕಿ ಎಂದರೆ ತುಂಬಾ ಭಯ. ದೊಡ್ಡ ಪ್ರಮಾಣದ ಬೆಂಕಿಯ ಬಳಿಗೆ ಹೋಗಲು ಹೆದರುತ್ತೀರಿ. ಒಲೆಯಲ್ಲಿ ಬೆಂಕಿ ಒಂದು ಕ್ಷಣವೂ ಸುಮ್ಮನೆ ಉರಿಯಲು ಬಿಡುವುದಿಲ್ಲ. ಹಾಗೇ ಬೆಂಕಿಪೆಟ್ಟಿಗೆಯನ್ನು ಸುಮ್ಮನೆ ಹಿಡಿದುಕೊಳ್ಳಲೂ ಭಯಪಡುವವರು ನಿಮ್ಮ ರಾಶಿಯವರಲ್ಲಿ ಕೆಲವರು ಇರಬಹುದು. ಇಂಥವರು ಹಿಂದಿನ ಜನ್ಮದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ.

Tap to resize

Latest Videos

ಮಿಥುನ ರಾಶಿ
ನೀವು ಬೆಕ್ಕನ್ನು ಕಂಡರೆ ಭಯಪಡುತ್ತೀರಿ. ನೀವು ಕುಳಿತುಕೊಳ್ಳುವ ಸೋಫ, ಕುರ್ಚಿಯಲ್ಲಿ ಬೆಕ್ಕಿನ ರೋಮ ಕಂಡರೂ ಜಿಗಿದೆದ್ದು ಬಿಡುತ್ತೀರಿ. ಪಕ್ಕದಲ್ಲಿ ಬೆಕ್ಕನ್ನು ಕಂಡರೇ ನಿಮಗೆ ಏದುಸಿರು ಶುರುವಾಗುತ್ತದೆ. ಹಿಂದಿನ ಜನ್ಮದಲ್ಲಿ ನೀವು ಬೆಕ್ಕಿನಿಂದ ಬೇಟೆಗೆ ತುತ್ತಾದ ಯಾವುದಾದರೂ ಸಣ್ಣ ಪ್ರಾಣಿ ಆಗಿದ್ದಿರಬಹುದು.

undefined

ಕಟಕ ರಾಶಿ
ನಿಮಗೆ ಲೋಹದ ಆಯುಧಗಳನ್ನು ಕಂಡರೆ ಭಯ. ಉದಾಹರಣೆಗೆ ಚೂರಿ, ಕತ್ತಿ, ಖಡ್ಗ, ಈಟಿ ಇತ್ಯಾದಿ. ನೇಗಿಲು ಮುಂತಾದ ಉಳುಮೆ ಸಾಮಗ್ರಿಗಳನ್ನು ಕಂಡರೂ ಭಯವಿರುತ್ತದೆ. ಅದು ಕಾಲಿಗೆ ಗಾಯ ಮಾಡಿದರೆ ಎಂಬ ಆತಂಕ, ಸ್ಕ್ರೂಡ್ರೈವರ್ ಹಾಕಿ ತಿರುಗಿಸುವ ಸಣ್ಣ ಕೆಲಸ ಮಾಡಲೂ ಭಯಪಡುತ್ತೀರಿ. ಹಿಂದಿನ ಜನ್ಮದಲ್ಲಿ ಆಯುಧಗಳಿಂದ ಮೃತಪಟ್ಟಿರಬಹುದು.

ಸಿಂಹ ರಾಶಿ
ನಿಮ್ಮ ರಾಶಿಯ ಹೆಸರು ಸಿಂಹ ಆದರೂ, ನಿಮಗೆ ಗುಹೆಯಂಥ ಕತ್ತಲಿನ ಜಾಗಗಳನ್ನು ಕಂಡರೆ ತೀರಾ ಭಯ. ಇಕ್ಕಟ್ಟಾದ ಹಾಗೂ ಬೆಳಕು ಇಲ್ಲದ ಜಾಗಗಳಲ್ಲಿ ಹೋಗಲು ನೀವು ಇಷ್ಟಪಡುವುದಿಲ್ಲ. ರಾತ್ರಿ ಮಲಗುವಾಗಲೂ ಕೋಣೆಯಲ್ಲಿ ಸ್ವಲ್ಪವಾದರೂ ಬೆಳಕು ಇಲ್ಲದೆ ಗಾಢವಾಗಿ ಕತ್ತಲಿದ್ದರೆ ನಿಮಗೆ ಉಸಿರು ಕಟ್ಟಿದಂತಾಗಿ ಬಿಡಬಹುದು.

ಕನ್ಯಾ ರಾಶಿ
ಉಗುರು ಹಾಗೂ ಚೂಪಾದ ಹಲ್ಲುಗಳನ್ನು ಕಂಡರೆ ನಿಮಗೆ ಸತ್ತು ಹೋಗುವಷ್ಟು ಭಯ. ಹೀಗಾಗಿಯೇ ನಿಮ್ಮ ಉಗುರುಗಳನ್ನೂ ಒಂದು ಮಟ್ಟಕ್ಕಿಂತ ಜಾಸ್ತಿ ಬೆಳೆಸುವುದಿಲ್ಲ ನೀವು. ಇಂಥವುಗಳನ್ನು ಹೊಂದಿರುವ ನಾಯಿ- ಬೆಕ್ಕು- ಮುಂಗುಸಿ ಮೊದಲಾದ ಪ್ರಾಣಿಗಳಿಂದ ದೂರವೇ ಇರುತ್ತೀರಿ.

ತುಲಾ ರಾಶಿ
ನಿಮಗೆ ಎತ್ತರದ ಭಯ. ಇದು ಅತಿಯಾದರೆ ಅದನ್ನು ವರ್ಟಿಗೋ ಎನ್ನುತ್ತಾರೆ. ಇದು ಅತಿಯಾದ ಹಂತಕ್ಕೆ ಹೋಗದೆ ಇರಬಹುದು. ನಿಮ್ಮಲ್ಲೇ ಕೆಲವರಲ್ಲಿ ನಾಲ್ಕು ಮೆಟ್ಟಿಲು ಏರಿದರೂ ತಲೆ ತಿರುಗಿದಂತಾಗುತ್ತದೆ. ಎತ್ತರದ ಹೈರೈಸ್‌ ಬಿಲ್ಡಿಂಗ್‌ಗಳಲ್ಲಿ ವಾಸಿಸಲು ಇಂಥವರು ಇಷ್ಟಪಡುವುದಿಲ್ಲ. 

ಮನೆಯೊಳಗಿರೋ ನಕಾರಾತ್ಮಕ ಶಕ್ತಿಯನ್ನು ಪತ್ತೆ ಹಚ್ಚೋದು ಹೇಗೆ?

ವೃಶ್ಚಿಕ ರಾಶಿ
ಕೆಸರು ಎಂದರೆ ನಿಮಗೆ ತುಂಬಾ ಭಯ. ಹಿಂದಿನ ಜನ್ಮದಲ್ಲಿ ನೀರಿನಲ್ಲಿ ಮುಳುಗಿ ಅಥವಾ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿರುವ ಸಾಧ್ಯತೆ ಇದೆ. ಅಂಗಿಗೆ ಸ್ವಲ್ಪ ಕೆಸರು ಮೆತ್ತಿದರೂ ಜಿಗುಪ್ಸೆ ಪಟ್ಟುಕೊಳ್ಳುತ್ತೀರಿ, ಕೆಸರು ಇರಬಹುದು ಎಂಬ ಶಂಕೆ ಮೂಡಿಸುವ ಆಳವಾದ ನೀರಿನ ಜಾಗಗಳಲ್ಲಿ ದೋಣಿಯ ಮೇಲೆ ಹೋಗಲೂ ಇಷ್ಟಪಡುವುದಿಲ್ಲ. 

ಧನು ರಾಶಿ
ನಿಮಗೆ ವಾಹನಗಳನ್ನು ಓಡಿಸುವಲ್ಲಿ ಭಯವಿರುತ್ತೆ. ಕಷ್ಟಪಟ್ಟು ಕಲಿತು ಓಡಿಸಬಲ್ಲಿರಿ. ಆದರೆ, ನಿಜಕ್ಕೂ ವಾಹನ ಓಡಿಸುವ ಸಂದರ್ಭಗಳಿಂದ ತಪ್ಪಿಸಿಕೊಳ್ಳಲೇ ಪ್ರಯತ್ನಿಸುತ್ತಿರುತ್ತೀರಿ. ಪಕ್ಕದಲ್ಲಿ ಯಾರಾದರೂ ಒಳ್ಳೆಯದ ಡ್ರೈವರ್‌ ಇದ್ದರೆ ಅವರ ಕೈಗೆ ವಾಹನ ಕೊಟ್ಟು ಓಡಿಸುತ್ತೀರಿ.

ಕಂಡಿದ್ದೆಲ್ಲಾ ನಮ್ಮದಾಗಬೇಕೆಂದು ಹೋದರೆ ಈ ರಾಜನಿಗಾದ ಗತಿ ನಮಗೂ ಆದೀತು! 

ಮಕರ ರಾಶಿ
ಹಳದಿ ಬಣ್ಣಧ ವಸ್ತುಗಳನ್ನು ಕಂಡರೆ ನಿಮ್ಮಲ್ಲಿ ಒಂದು ಬಗೆಯ ಆತಂಕ ಶುರುವಾಗುತ್ತದೆ. ನಿಮಗೆ ಚಿನ್ನವನ್ನು ಕಂಡರೂ ಪ್ರೀತಿ ಉಂಟಾಗುವುದಿಲ್ಲ ಯಾಕೆಂದರೆ ಅದರ ಬಣ್ಣ ನಿಮಗೆ ಇಷ್ಟವಿಲ್ಲ. ಹಳದಿ ಬಟ್ಟೆಗಳನ್ನು ನೀವು ಧರಿಸುವುದಿಲ್ಲ. ಹಳದಿ ಒಳಾಂಗಣ ಇರುವ ಕಚೇರಿಗಳಲ್ಲಿ ಹೆಚ್ಚು ಸಮಯ ಇದ್ದರೆ ನಿಮಗೆ ತಲೆನೋವು ಗ್ಯಾರಂಟಿ.

ಕುಂಭ ರಾಶಿ
ನೀವು ಹಿಂದಿನ ಜನ್ಮದಲ್ಲಿ ಸಣ್ಣ ಪ್ರಾಣಿಯಾಗಿದ್ದಿರಬಹುದು, ಯಾಕೆಂದರೆ ನಿಮಗೆ ಆನೆ, ಒಂಟೆ, ಜಿರಾಫೆ, ಜೀಬ್ರಾ, ಕುದುರೆ ಮುಂತಾದ ದೈತ್ಯಾಕಾರದ ಪ್ರಾಣಿಗಳನ್ನು ಕಂಡರೆ ಭಯ. ಮೃಗಾಲಯಕ್ಕೆ ಹೋದರೂ ಆನೆಗಳ ಬಳಿಗೆ ಹೋಗಲು ಇಷ್ಟಪಡಲಾರಿರಿ. ಆನೆಸವಾರಿ ನಿಮಗೆ ಕಷ್ಟ. 

ಪುರಾಣಕಾಲದಲ್ಲೂ ಹನಿ ಟ್ರ್ಯಾಪ್ ಇತ್ತಾ? 

ಮೀನ ರಾಶಿ
ಹಲ್ಲಿಯನ್ನು ಕಂಡರೆ ನಿಮಗೆ ಜೀವ ಹೋಗುವಷ್ಟು ಭಯ. ಜಿರಲೆಯನ್ನು ಕಂಡರೂ ಆತಂಕ ಉಂಟಾದೀತು. ಅದೇನೂ ಪ್ರಾಣಾಪಾಯ ಮಾಡುವುದಿಲ್ಲ ಎಂದು ಗೊತ್ತಿದ್ದರೂ, ಇವುಗಳನ್ನು ಕಂಡಕೂಡಲೇ ನಿಮಗೇ ಗೊತ್ತಿಲ್ಲದಂತೆ ಕಾಲಿಗೆ ಬುದ್ಧಿ ಹೇಳುತ್ತೀರಿ. ಜಿರಲೆ ಮೈಮೇಲೆ ಬಿದ್ದರೆ ಅರಚಾಡಿ ನೆಲಮುಗಿಲು ಒಂದು ಮಾಡುವ ಸಾಧ್ಯತೆ ಇದೆ.

click me!