Sadguru Talks: ಶಾಶ್ವತವಾದ ಆರ್ಗ್ಯಾಸಂ ಸಾಧಿಸುವುದು ಹೇಗೆ? ಸದ್ಗುರು ಹೇಳ್ತಾರೆ ಕೇಳಿ

By Bhavani BhatFirst Published Aug 23, 2024, 9:07 PM IST
Highlights

ಆರ್ಗ್ಯಾಸಂ ಎಂದರೆ ಲೈಂಗಿಕ ಮಿಲನದ ಪರಾಕಾಷ್ಠೆ. ಗಂಡಸರಲ್ಲಿ ಅದು ಸ್ಖಲನದ ಹೊತ್ತಿನಲ್ಲಿ ಸಂಭವಿಸಿದರೆ, ಹೆಣ್ಣಿನಲ್ಲಿ ಒಂದು ಲೈಂಗಿಕ ಕ್ರಿಯೆಯ ವೇಳೆ ಹಲವು ಬಾರಿ ಇದನ್ನು ಪಡೆಯಲು ಸಾಧ್ಯ. ಆದರೆ ಕಾಮಕ್ರಿಯೆ ಇಲ್ಲದೆಯೂ ಪರಾಕಾಷ್ಠೆ ಸಾಧಿಸಲು ಸಾಧ್ಯವಾ? ಶಾಶ್ವತವಾದ ಪರಾಕಾಷ್ಠೆ ಎಂಬುದೊಂದು ಇದೆಯಾ? ಸದ್ಗುರು ಏನ್‌ ಹೇಳ್ತಾರೆ ಕೇಳೋಣ. 
 

ಸಾಮಾನ್ಯವಾಗಿ, ಹೆಚ್ಚಿನ ಜನರಿಗೆ, ʼಆರ್ಗ್ಯಾಸಂʼ ಅಥವಾ ʼಪರಾಕಾಷ್ಠೆ' ಎಂಬ ಪದವು ಯಾವಾಗಲೂ ಲೈಂಗಿಕತೆಯ ಅರ್ಥ ನೀಡುತ್ತದೆ. ಮೂಲಭೂತವಾಗಿ, ಪರಾಕಾಷ್ಠೆ ಎಂದರೆ ಆಂತರಿಕ ಭಾವಪರವಶ ಸ್ಥಿತಿ. ಲೈಂಗಿಕತೆಗೆ ಸಂಬಂಧಿಸಿದಂತೆ ಇದನ್ನು ಸಾಮಾನ್ಯವಾಗಿ ಭಾಷೆಯಲ್ಲಿ ಬಳಸಲಾಗುತ್ತಿದೆ. ಏಕೆಂದರೆ ಹೆಚ್ಚಿನ ಜನರು ದೈಹಿಕ ಲೈಂಗಿಕತೆಯ ತೀವ್ರತೆಗಿಂತ ದೊಡ್ಡ ಅನುಭವವನ್ನು ತಿಳಿದಿಲ್ಲ. ಆದ್ದರಿಂದ, ಅವರು ಲೈಂಗಿಕತೆಗೇ ಪರಾಕಾಷ್ಠೆ ಎಂಬ ಪದವನ್ನು ಬಳಸುತ್ತಾರೆ.

ಪರಾಕಾಷ್ಠೆ ಎಂಬ ಪದದ ಅರ್ಥ ಅದಕ್ಕಿಂತ ಹೆಚ್ಚಿನದು. ಇದು ನಿಮ್ಮ ಇಡೀ ಭಾವಜೀವನದ ಉತ್ತುಂಗವನ್ನು ತಲುಪುವುದು. ಆದರೆ ಸೆಕ್ಸ್‌ನಿಂದ ಇದು ಸಾಧ್ಯವಿಲ್ಲ. ಸೆಕ್ಸ್‌ ಇದು ನಿಮಗೆ ಒಂದು ಸೀಮಿತವಾದ ಉತ್ತುಂಗವನ್ನು ನೀಡುತ್ತದೆ. ಆದರೆ ಅದು ನಿಮ್ಮನ್ನು ಸಂಪೂರ್ಣ ಶಿಖರಕ್ಕೆ ಕೊಂಡೊಯ್ಯುವುದಿಲ್ಲ. ಅಲ್ಲಿ ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಸಿಡಿಯುತ್ತದೆ. ಹಾಗಾಗಿ ಆರ್ಗ್ಯಾಸಂಗೆ ಲೈಂಗಿಕತೆಯು ಪರಾಕಾಷ್ಠೆ ಎಂದು ವಿವರಿಸುವುದು ಅಸಮರ್ಪಕ. ದೈಹಿಕವಾಗಿ ಪಡೆಯುವ ಭಾವಪರವಶ ಸ್ಥಿತಿಗೆ ಒಂದು ಮಿತಿ ಇರುತ್ತದೆ.

Latest Videos

ಆದರೆ ಒಮ್ಮೆ ದೈಹಿಕ ಸಂಸರ್ಗದ ಅಗತ್ಯವಿಲ್ಲದೆ ಪರಾಕಾಷ್ಠೆ ಪಡೆಯುವುದು ಹೇಗೆ ಎಂದು ತಿಳಿದಿದ್ದರೆ, ಅದು ಶಾಶ್ವತ ಪರಾಕಾಷ್ಠೆಗೆ ದಾರಿ. ಭಾರತದಲ್ಲಿ ಇದಕ್ಕೆ ಬೇರೆ ಉತ್ತಮ ಪದ ಇದೆ. ಇದನ್ನು ನಾವು ‘ಆನಂದ’ ಎಂದು ಕರೆಯುತ್ತೇವೆ. ಆನಂದವೆಂದರೆ ಪರಾಕಾಷ್ಠೆ. ನಾವು ದೇವರನ್ನು ಪರಾಕಾಷ್ಠೆ ಎಂದು ಕರೆಯುತ್ತೇವೆ. “ದೇವರು ಆನಂದ, ಬ್ರಹ್ಮಾನಂದ” ಎನ್ನುತ್ತೇವೆ. ನಾವು ದೇವರೆಂದು ಉಲ್ಲೇಖಿಸುವುದು ಅಂತಿಮ ಅಥವಾ ಶಾಶ್ವತ ಪರಾಕಾಷ್ಠೆ. ಮೂಲಭೂತವಾಗಿ ಮನುಷ್ಯ ಹುಡುಕುತ್ತಿರುವ ಏಕೈಕ ವಿಷಯವೆಂದರೆ ಆಹ್ಲಾದದ ಅಂತಿಮ ಸ್ಥಿತಿ. ಅವನು ಅದನ್ನು "ದೇವರ ರಾಜ್ಯ" "ಸ್ವರ್ಗ" ಎಂದೆಲ್ಲ ಕರೆಯಬಹುದು. 

ಆದ್ದರಿಂದ ದೇವರನ್ನು ʼಆನಂದ' ಎಂದು ಹೇಳಲಾಗಿದೆ. ಪರಾಕಾಷ್ಠೆ ಎಂಬುದಕ್ಕಿಂತಲೂ ʼಆನಂದʼ ಸೂಕ್ತ ಪದ. ಪರಮ ಪರಾಕಾಷ್ಠೆಯೇ ದೇವರು. ನೀವು ಸೀಮಿತ ವಿಷಯಗಳಲ್ಲಿ ನೆಲೆಗೊಳ್ಳಲು ಬಯಸಿದರೆ ಸೆಕ್ಸ್‌, ಲೈಂಗಿಕತೆ, ಮದ್ಯ, ಮಾದಕ ದ್ರವ್ಯಗಳನ್ನು ಪ್ರಯತ್ನಿಸಬಹುದು. ಅದು ನಿಮ್ಮನ್ನು ಗುಲಾಮರನ್ನಾಗಿ ಮಾಡುತ್ತದೆ ಹೊರತು ನಿಮ್ಮನ್ನು ಮುಕ್ತಗೊಳಿಸುವುದಿಲ್ಲ. ಏಕೆಂದರೆ ಅದು ಆನಂದವಲ್ಲ, ಅದು ಕೇವಲ ಸಂತೋಷ. ಜನರು ಸಂತೋಷವನ್ನು ಹುಡುಕುತ್ತಾರೆ. ನೀವು ಆನಂದಮಯವಾಗಿದ್ದರೆ ಖಂಡಿತವಾಗಿಯೂ ಸಂತೋಷಕ್ಕೆ ಸೀಮಿತರಾಗಬೇಕಿಲ್ಲ. ಆನಂದವನ್ನು ಹೊಂದಿದರೆ, ಆಮೇಲೆ ಅದನ್ನು ಹುಡುಕಬೇಕಿಲ್ಲ.

Chanakya Neeti: ಚಾಣಕ್ಯ ಹೇಳುವ ಪ್ರಕಾರ, ಹೆಂಡತಿ ತನ್ನ ಗಂಡನಿಗೆ ಯಾವಾಗ ಸುಳ್ಳು ಹೇಳ್ತಾಳೆ ಗೊತ್ತಾ?
 

ಸಂತೋಷ ಎಂದರೆ ಕೇವಲ ಆನಂದದ ನೆರಳು. ಅದು ಎಂದಿಗೂ ನಿಜವಲ್ಲ. ಅದು ಕೇವಲ ನೆರಳು ನೀಡುತ್ತದೆ. ನೀವು ಸಂತೋಷದ ಮಿತಿಯನ್ನು ಅರ್ಥಮಾಡಿಕೊಳ್ಳದಿದ್ದರೆ, ನೀವು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ನೀವು ಹೆಚ್ಚು ಹೆಚ್ಚು ಆನಂದವನ್ನು ಹುಡುಕುತ್ತಿದ್ದಂತೆ, ಹೆಚ್ಚು ಹೆಚ್ಚು ನೀವು ಸಂತೋಷದ ವಸ್ತುಗಳಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಆದರೆ ನೀವು ಹೆಚ್ಚು ಹೆಚ್ಚು ಆನಂದವನ್ನು ಹೊಂದಿದಂತೆ ಎಲ್ಲದರಿಂದ ಮುಕ್ತರಾಗುತ್ತೀರಿ.

ನೀವು ನಿಜವಾಗಿಯೂ ಆನಂದವಾಗಿರುವಾಗ, ಏನೂ ಅಗತ್ಯವಿಲ್ಲ. ಊಟ ಬೇಕಾಗಿಲ್ಲ, ನಿದ್ದೆಯೂ ಬೇಕಾಗಿಲ್ಲ, ಜೀವನವೂ ಬೇಕಾಗಿಲ್ಲ. ವಾಸ್ತವವಾಗಿ ನೀವು ನಿಜವಾಗಿಯೂ ಆನಂದವಾಗಿರುವಾಗ ನೀವು ಸಾಯಲು ಸಿದ್ಧರಿರುತೀರಿ. ಪ್ರತಿ ಕ್ಷಣವೂ ಸಾಯಲು ನಿರಂತರವಾಗಿ ಸಿದ್ಧರಿರುವವನು ಮಾತ್ರ ಜೀವನವನ್ನು ತಿಳಿಯುತ್ತಾನೆ. ಏಕೆಂದರೆ ಜೀವನದ ಪ್ರಪಾತಕ್ಕೆ ಬೀಳುವುದು ಹೇಗೆ ಎಂದು ನಿಮಗೆ ತಿಳಿದಿಲ್ಲದಿದ್ದರೆ, ನಿಮಗೆ ಜೀವನದ ಶಿಖರವನ್ನು ಎಂದಿಗೂ ತಿಳಿದಿರುವುದಿಲ್ಲ. ಬದುಕು ಮತ್ತು ಸಾವು ಒಂದರೊಳಗೊಂದು ಇವೆ. ಇದು ಒಂದರ ನಂತರ ಒಂದಲ್ಲ. ನೀವು ಸಾವಿನ ಪ್ರಪಾತಕ್ಕೆ ಬೀಳಲು ಸಿದ್ಧರಿದ್ದರೆ ಮಾತ್ರ, ನೀವು ಜೀವನದ ಶಿಖರವನ್ನು ತಿಳಿಯುವಿರಿ. 
 

ಭಾರತದ 5 ಅತ್ಯಂತ ನಿಗೂಢ-ಪವಾಡ ದೇವಾಲಯಗಳು, ಇವುಗಳ ಮುಂದೆ ವಿಜ್ಞಾನವೂ ಫೇಲ್‌!
 

click me!