ಪ್ರಕೃತಿಯ ಪ್ರತೀಕ ನಾಗನನ್ನು ಪೂಜಿಸುವ ನಾಗರ ಪಂಚಮಿ

By Suvarna NewsFirst Published Aug 2, 2022, 1:22 PM IST
Highlights

ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಬರುವುದೇ ನಾಗರಪಂಚಮಿ ಹಬ್ಬ. ಈ ಹಬ್ಬ ಸಹಜೀವಿಗಳಲ್ಲಿ ದೇವರನ್ನು ಕಾಣುವ, ಆ ಮೂಲಕ ಅವುಗಳ ಉಳಿವಿಗಾಗಿ ಕಾರಣವಾಗುವುದಕ್ಕೆ, ಈ ಮೂಲಕ ಜೈವಿಕ ಸಮತೋಲನ ಕಾಪಾಡಿಕೊಳ್ಳುವುದಕ್ಕೂ ನೆರವಾಗುತ್ತದೆ. 

ಶಿವನಿಗೆ ಅರ್ಪಿತವಾದ ಶ್ರಾವಣ ಮಾಸದಲ್ಲಿ ವಿವಿಧ ಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಜೊತೆಗೆ ಸರ್ಪಗಳನ್ನು ಪೂಜಿಸುವ ನಿಯಮವಿದೆ. ನಾಗ ಪಂಚಮಿಯಂದು ಸರ್ಪಗಳನ್ನು ಪೂಜಿಸುವುದರಿಂದ ಸರ್ಪ ದೋಷಗಳು ಮತ್ತು ಕಾಳ ಸರ್ಪದೋಷ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ವರ್ಷದ ನಾಗರ ಪಂಚಮಿ ಬಹಳ ವಿಶೇಷವಾಗಿದೆ ಏಕೆಂದರೆ ಹಲವು ವರ್ಷಗಳ ನಂತರ ಈ ಬಾರಿ ಅಪರೂಪದ ಸಂಯೋಗವು ಈ ದಿನ ರೂಪುಗೊಳ್ಳಲಿದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್‌ 2 ರಂದು ಮಂಗಳವಾರ ಆಚರಿಸಲಾಗುತ್ತದೆ.

ಆ.2ರಂದು ಮಂಗಳವಾರ ನಾಗರ ಪಂಚಮಿ ಆಚರಿಸಲಾಗುತ್ತಿದ್ದು, ಇದೇ ದಿನ ಮಂಗಳ ಗೌರಿವ್ರತವನ್ನೂ ಆಚರಿಸಲಾಗುವುದು. ಈ ದಿನ ಸುಮಂಗಲಿಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆ ಮತ್ತು ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ನಾಗರ ಪಂಚಮಿ ದಿನದಂದು ನಾಗದೇವತೆಯೊಂದಿಗೆ ಶಿವ ಮತ್ತು ಪಾರ್ವತಿ ದೇವಿಯನ್ನು ಕೂಡ ಪೂಜಿಸಲಾಗುತ್ತದೆ. ಈ ದಿನದ ಶುಭ ಸಂಯೋಗದ ನಿಯಮಗಳ ಪ್ರಕಾರ, ನಾಗದೇವತೆ, ಶಿವ ಮತ್ತು ಪಾರ್ವತ ದೇವಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು.

Latest Videos

ನಾಗರ ಪಂಚಮಿ ಪೂಜೆಯ ನಿಯಮಗಳು: ಶ್ರಾವಣ ಶುಕ್ಲ ಪಂಚಮಿಯಲ್ಲಿ ನಾಗವ್ರತ (ನಾಗ ಪಂಚಮಿ ಉಪವಾಸ) ಮಾಡಲಾಗುತ್ತದೆ. ಎರಡನೇ ದಿನ ಪಂಚಮಿ ಮೂರು ಮುಹೂರ್ತಗಳಿಗಿಂತ ಕಡಿಮೆಯಿದ್ದರೆ ಮತ್ತು ಮೊದಲ ದಿನ ಮೂರು ಮುಹೂರ್ತಗಳಿಗಿಂತ ಕಡಿಮೆ ಇರುವ ಚತುರ್ಥಿಗೆ ಸಂಬಂಧಿ​ಸಿದ್ದರೆ, ಮೊದಲ ದಿನವೇ ಈ ಉಪವಾಸವನ್ನು ಆಚರಿಸಲಾಗುತ್ತದೆ. ಮೊದಲ ದಿನ ಪಂಚಮಿಯಂದು ಮೂರು ಮುಹೂರ್ತಗಳಿಗಿಂತ ಹೆಚ್ಚು ಕಾಲ ಚತುರ್ಥಿ ಬಂದರೆ, ಎರಡನೇ ದಿನವೂ ಎರಡು ಮುಹೂರ್ತಗಳವರೆಗೆ ನಡೆಯುವ ಪಂಚಮಿಯಂದು ಈ ಉಪವಾಸವನ್ನು ಆಚರಿಸಬಹುದು ಎನ್ನುವ ನಂಬಿಕೆಯಿದೆ.

ಶ್ರೀಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ನಾಗನ ಮರ್ದನ ಮಾಡಿದ ದಿನವೇ ನಾಗರ ಪಂಚಮಿ

ನಾಗರ ಪಂಚಮಿ ಉಪವಾಸ ಮತ್ತು ಪೂಜೆ ವಿಧಾನ: ನಾಗರ ಪಂಚಮಿ ದಿನದಂದು ದೈವಿ ರೂಪವಾದ ಅಷ್ಟನಾಗ ದೇವತೆಗಳನ್ನು ಪೂಜಿಸಲಾಗುತ್ತದೆ. ಈ ದಿನ ಅನಂತ, ವಾಸುಕಿ, ಪದ್ಮ, ಮಹಾಪದ್ಮ, ತಕ್ಷಕ, ಕುಳಿಕ, ಕಾರ್ಕೋಟಕ ಮತ್ತು ಶಂಖಪಾಲ ಎಂಬ ಅಷ್ಟನಾಗಗಳನ್ನು ಪೂಜಿಸಲಾಗುತ್ತದೆ. ಚತುರ್ಥಿಯ ದಿನ ಒಮ್ಮೆ ಮಾತ್ರ ಊಟವನ್ನು ಮಾಡಬೇಕು. ಪಂಚಮಿಯಂದು ಉಪವಾಸ ಮಾಡಿ ಸಾಯಂಕಾಲ ಊಟ ಮಾಡಬೇಕು. ನಾಗರ ಪ್ರತಿಮೆ ಅಥವಾ ಮಣ್ಣಿನ ನಾಗರ ವಿಗ್ರಹವನ್ನು ಮರದ ಮಣೆಯ ಮೇಲಿಟ್ಟು ಈ ದಿನ ಪೂಜಿಸಬಹುದು. ನಂತರ ನಾಗದೇವತೆಗೆ ಅರಿಶಿನ, ಕೆಂಪು ಸಿಂಧೂರ, ಅಕ್ಕಿ ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ನಂತರ ಹಸಿ ಹಾಲು, ತುಪ್ಪ, ಸಕ್ಕರೆ ಬೆರೆಸಿ ಮರದ ಮಣೆಯ ಮೇಲೆ ಇಟ್ಟಿರುವ ನಾಗದೇವತೆಗೆ ನೈವೇಧ್ಯ ಮಾಡುತ್ತಾರೆ. ಪೂಜೆಯ ನಂತರ, ನಾಗದೇವರಿಗೆ ಆರತಿಯನ್ನು ಮಾಡಲಾಗುತ್ತದೆ. ಶುಭ ಫಲವನ್ನು ಪಡೆಯುವುದಕ್ಕಾಗಿ ನೀವು ಈ ದಿನ ಹಾವು ಆಡಿಸುವವರಿಗೆ ಸ್ವಲ್ಪ ಹಣವನ್ನು ಕೊಟ್ಟು ಅವರಿಂದ ಹಾವನ್ನು ಪಡೆದು ಅದನ್ನು ಹುತ್ತಕ್ಕೆ ಬಿಡಬಹುದು. ಪೂಜೆಯ ಕೊನೆಗೆ ನಾಗರ ಪಂಚಮಿಯ ಕಥೆ ಕೇಳಬೇಕು.

ನಾಗರ ಪಂಚಮಿಯ ಧಾರ್ಮಿಕ ಮತ್ತು ಜ್ಯೋತಿಷ್ಯ ಮಹತ್ವ: ಹಿಂದೂ ಧರ್ಮದಲ್ಲಿ, ನಾಗದೇವತೆಯ ಆರಾಧನೆಯು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ನಾಗರ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ವ್ಯಕ್ತಿಯು ಶತ್ರುಗಳ ಭಯದಿಂದ ಮುಕ್ತಿಯನ್ನು ಹೊಂದುತ್ತಾನೆ ಮತ್ತು ನವೀಕರಿಸಬಹುದಾದ ಪುಣ್ಯವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ನಾಗದೇವತೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಹಾವು ಕಡಿತದ ಭಯವು ದೂರಾಗುತ್ತದೆ. ಜಾತಕಕ್ಕೆ ಸಂಬಂಧಿ​ಸಿದ ಕಾಳಸರ್ಪ ದೋಷವೂ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ.

ಸಾಮಾಜಿಕ ಮಹತ್ವ: ನಾಗರ ಪಂಚಮಿಯು ಹಾವುಗಳ ಮಹತ್ವವನ್ನು ನಮಗೆ ತಿಳಿಸುತ್ತದೆ. ಅವನ್ನು ದೇವರಾಗಿ ಕಾಣುವ ಹಿಂದೆ ಈ ಸಂತತಿಯನ್ನು ರಕ್ಷಿಸುವ ಮಹದೋದ್ದೇಶವಿದೆ. ಈ ಮೂಲಕ ಪ್ರಕೃತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ದೂರದೃಷ್ಟಿಯಿದೆ. 

ಈ ರಾಶಿಯ ಹುಡುಗಿಯರು ಹಣ ಉಳಿಸಿಯೇ ಸಂಪತ್ತು ಬೆಳೆಸ್ತಾರೆ! ಇಂಥಾಕೆ ಪತ್ನಿಯಾದ್ರೆ ಲಕ್

ನಾಗರ ಪಂಚಮಿ ಪೂಜೆ ಮಂತ್ರ
ಸರ್ವೇ ನಾಗಾಃ ಪ್ರಿಯಾಂತಾಂ ಮೇ ಯೇ ಈ ಕೇಚಿತ್‌ ಪ್ರಥ್ವಿತಳೇ
ಯೇ ಚ ಹೇಳಿಮರೀಚಿಸ್ಥಾ ಯಂತ್ರೇ ದಿವಿ ಸಂಸ್ಥಿತಾಃ
ಯೇ ನದಿಷು ಮಹಾನಾಗಾ ಯೇ ಸರಸ್ವತಿಗಾಮಿನಃ
ಯೇ ಚ ವಾಪಿತಡ್ಗೇಷು ತೇಷು ಸರ್ವೇಷು ವೈ ನಮಃ
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖ ಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಂ
ಸಾಯಂಕಾಲೇ ಪಠೇನಿತ್ಯಂ ಪ್ರಾತಃಕಾಲೇ ವಿಶೇಷತಃ
ತಸ್ಯ ವಿಶಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್‌

click me!