RIP: ಬಾಲಿವುಡ್ ತಾರೆಯರ ನಿಗೂಢ ಸಾವಿಗೆ ಕಾರಣ ಏನು?; ಜ್ಯೋತಿಷ್ಯದಲ್ಲಿ ಸಿಕ್ತು ಮರಣದ ರಹಸ್ಯ..!

By Sushma Hegde  |  First Published Aug 8, 2023, 12:22 PM IST

ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದು ಗೊತ್ತೇ ಆಗಲ್ಲ. ಕೆಲ ಸಮಯದ ಹಿಂದೆ ಸಂಭ್ರಮದಲ್ಲಿ ಮೈಮರೆತವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಇನ್ನಿಲ್ಲದಂತಾಗುತ್ತಾರೆ. ಅವರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಬಿಟ್ಟು ಹೋಗುತ್ತಾರೆ. ಇದಕ್ಕೆ ಸಿನಿಮಾ ರಂಗದಲ್ಲಿ ಅನೇಕ ಉದಾಹರಣೆಗಳಿವೆ.


ಬಿಟೌನ್'ನಲ್ಲಿ ಮಿಂಚಿದ ಅನೇಕ ತಾರೆಯರು ಅನುಮಾನಾಸ್ಪದವಾಗಿ ಮರೆಯಾಗಿದ್ದಾರೆ. ಅವರ ಸಾವುಗಳು ಇಂದಿಗೂ ನಿಗೂಢ. ಅವರ ನಿಗೂಢ ಸಾವಿಗೆ ಉತ್ತರ ಜ್ಯೋತಿಷ್ಯ ಶಾಸ್ತ್ರದಲ್ಲಿದೆ.

ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದು ಗೊತ್ತೇ ಆಗಲ್ಲ. ಕೆಲ ಸಮಯದ ಹಿಂದೆ ಸಂಭ್ರಮದಲ್ಲಿ ಮೈಮರೆತವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಇನ್ನಿಲ್ಲದಂತಾಗುತ್ತಾರೆ. ಅವರ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ಬಿಟ್ಟು ಹೋಗುತ್ತಾರೆ. ಇದಕ್ಕೆ ಸಿನಿಮಾ ರಂಗದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲೂ ಯಾರೂ ಊಹಿಸಲಾದ ರೀತಿಯಲ್ಲಿ ಬಾಲಿವುಡ್ ತಾರೆಯರು ಸಾವನ್ನಪ್ಪಿದ್ದಾರೆ.

Tap to resize

Latest Videos

ಬಾಲಿವುಡ್ ಚೆಲುವೆ ಹಿರಿಯ ನಟಿ ಶ್ರೀದೇವಿ, ಸುಶಾಂತ್ ಸಿಂಗ್ ಹಾಗೂ ದಿವ್ಯಭಾರತಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ, ಅವರ ಸಾವಿನ ಕಾರಣವು ಬಿಡಿಸಲಾಗದ ರಹಸ್ಯವಾಗಿದೆ. ಅವರ ಸಾವಿನ ಕಾರಣವನ್ನು ಜ್ಯೋತಿಷ್ಯಶಾಸ್ತ್ರದ ಮೂಲಕ ಕೆಲವು ಜ್ಯೋತಿಷಿಗಳು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ಸುಶಾಂತ್ ಸಿಂಗ್ ನಿಗೂಢ ಸಾವು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು (34) ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕೇಸ್‌ ಸಿಬಿಐ ತನಿಖೆ ನಡೆಯುತ್ತಿದ್ದು, ಅಂತಿಮ ವರದಿ ಇನ್ನೂ ಬಂದಿಲ್ಲ. ಈ ಸಾವು ಇಡೀ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದು ಚರ್ಚೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ಕನ್ಯಾರಾಶಿಯಲ್ಲಿ ಮಂಗಳನ ಸಂಚಾರ; ನಿಮ್ಮ ಕನಸನ್ನೆಲ್ಲಾ ನನಸು ಮಾಡ್ತಾನೆ ಈ ಗ್ರಹಗಳ ಕಮಾಂಡರ್‌

 

ದುರಂತ ಅಂತ್ಯ ಕಂಡ ಶ್ರೀದೇವಿ 

ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ ಕಂಡವರು. ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.

ದಿವ್ಯಾಭಾರತಿ ಸಾವಿಗೆ ಕಾರಣ ಏನು?

ಮೃತಪಟ್ಟು ಕೆಲವು ದಶಕಗಳು ಕಳೆದರೂ ಪ್ರೇಕ್ಷಕರ ಹೃದಯದಲ್ಲಿ ದಿವ್ಯಾ ಭಾರತಿ ಅವರ ನೆನಪು ಹಾಗೆಯೇ ಉಳಿದಿವೆ. ತೆಲುಗು ಮತ್ತು ದಕ್ಷಿಣ ಸೇರಿದಂತೆ ಉತ್ತರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ದಿವ್ಯಾ ಭಾರತಿ 1993 ರಲ್ಲಿ ತಮ್ಮ 19 ನೇ ವಯಸ್ಸಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ನಿಧನರಾದರು. ಅವರ ಸಾವಿನ ಬಗ್ಗೆ ಇನ್ನೂ ಸರಿಯಾದ ಕಾರಣ ತಿಳಿದುಬಂದಿಲ್ಲ. ನಟಿಯ ಸಾವಿನ ಬಗ್ಗೆ ಹಲವು ಅನುಮಾನಗಳಿವೆ ಎಂದು ಅವರ ಅಭಿಮಾನಿಗಳು ಈಗಲೂ ಚರ್ಚಿಸುತ್ತಾರೆ.
ನಟಿ ಮೃತಪಟ್ಟು 3 ದಶಕಗಳು ಕಳೆದರೂ ಅವರ ಸಾವು ಇನ್ನೂ ನಿಗೂಢವಾಗಿದೆ. 

ಠಾಕ್ರೆ ಮನೆಯಲ್ಲಿ ನಾಗರಹಾವು ; ‘ಮಹಾ’ ರಾಜಕೀಯದಲ್ಲಿ ಭಾರೀ ಬದಲಾವಣೆ..?

 

ಅಕಾಲಿಕ ಸಾವಿಗೆ ಅಸಲಿ ಕಾರಣವೇನು? ಏನು ಹೇಳುತ್ತೆ ಜ್ಯೋತಿಷ್ಯ?

ಇವರ ಮರಣದ ರೀತಿ ನೀತಿಯನ್ನು ತಿಳಿಯಲು ಜ್ಯೋತಿಷ್ಯದಲ್ಲಿ ಅವರ ಜಾತಕವನ್ನು ಪರೀಕ್ಷಿಸಬೇಕು. ಇಂತಹ ಅಕಾಲಿಕ ಮತ್ತು ಅಸಹಜ ಸಾವಿಗೆ ಕಾರಣವಾದವರಿಗೆ ಕೆಲವು ಸೂಕ್ಷ್ಮ ಅಂಶಗಳು ಅವರ  ಮೇಲೆ ಪ್ರಭಾವ ಬೀರುತ್ತವೆ. ಅತ್ಯಂತ ಕೆಟ್ಟ ಗ್ರಹಗಳು ಹಾಗೂ ನಕ್ಷತ್ರಗಳು ಅಕಾಲಿಕ ಮರಣಕ್ಕೆ ಕಾರಣ ಆಗುತ್ತವೆ ಎನ್ನುತ್ತದೆ ಜ್ಯೋತಿಷ್ಯ. ಇಂತಹ ಸಂದರ್ಭದಲ್ಲಿ ಅಪಘಾತಗಳು, ಆತ್ಮಹತ್ಯೆಗಳು ಹಾಗೂ ಕೊಲೆಯಂತಹ ಘಟನೆಗಳು ನಡೆಯುತ್ತವೆ. ಕೆಲವು ನಿಗೂಢವಾಗಿ ಉಳಿಯುತ್ತವೆ, ಅದಕ್ಕೆ ಕಾರಣ ಗ್ರಹದೋಷ ಎನ್ನುತ್ತಾರೆ ಜ್ಯೋತಿಷಿಗಳು.

click me!