ಗಣೇಶ ಚತುರ್ಥಿ ದಿನ ಇದನ್ನು ಧರಿಸಿದ್ರೆ ನಿಮ್ಮೆಲ್ಲ ಕಷ್ಟಗಳು ಕರಗುತ್ವೆ..

By Suvarna News  |  First Published Aug 20, 2022, 9:38 AM IST

ಗಣೇಶ ಚತುರ್ಥಿ ಹತ್ತಿರ ಬಂದಿದೆ. ಈ ದಿನ ವಿಘ್ನ ನಿವಾರಕನನ್ನು ಒಲಿಸಿಕೊಂಡು ಸದಾ ಆತನ ಒಲುಮೆಯನ್ನು ಜೊತೆಗಿರಿಸಿಕೊಂಡರೆ ಬದುಕಿನಲ್ಲಿ ವಿಘ್ನಗಳು ಕಡಿಮೆಯಾಗುತ್ತವೆ. ಹಾಗೆ ವಿಘ್ನೇಶ ನಿಮ್ಮನ್ನು ಸದಾ ಕಾಪಾಡಲು ಈ ಒಂದು ವಸ್ತು ಧರಿಸಿದ್ರೆ ಸಾಕು, ಅದೇನೆಂದು ನೋಡಿ..


ಗಣೇಶ ಚತುರ್ಥಿ ಹತ್ತಿರದಲ್ಲಿದೆ. ಜನ್ಮಾಷ್ಟಮಿ ಆಚರಣೆ ಮುಗಿಯುತ್ತಿದ್ದಂತೆಯೇ ಜನರು ಗೌರಮ್ಮ, ಗಣೇಶರ ಆಗಮನದ ಸಂಭ್ರಮದಲ್ಲಿದ್ದಾರೆ. ಅವರನ್ನು ಬರ ಮಾಡಿಕೊಳ್ಳುವ ಸಿದ್ಧತೆ ಶುರು ಹಚ್ಚಿಕೊಳ್ಳುತ್ತಿದ್ದಾರೆ. ಗೌರಿ ಗಣೇಶನ ಹಬ್ಬ ಎಂದ ಮೇಲೆ ಅದು ವರ್ಷದ ಅತ್ಯುತ್ತಮ ದಿನಗಳಲ್ಲೊಂದು ಎಂಬುದರಲ್ಲಿ ಅನುಮಾನವಿಲ್ಲ. ಗಣೇಶ ಚತುರ್ಥಿಯ ದಿನ ಈ ರುದ್ರಾಕ್ಷಿ ಧಾರಣೆ ಮಾಡುವುದರಿಂದ ಹಲವಾರು ಸಂಕಷ್ಟಗಳು ದೂರವಾಗುವ ಜೊತೆಗೆ, ಬರಲಿರುವ ವಿಘ್ನಗಳು ಎದುರಾಗುವ ಮುನ್ನವೇ ಮರೆಯಾಗುತ್ತವೆ. ಇದು ಯಾವ ರುದ್ರಾಕ್ಷಿ ನೋಡೋಣ. 

ಕೇವಲ ರುದ್ರಾಕ್ಷಿ ಧಾರಣೆಯೇ ಬಹಳಷ್ಟು ಮಹತ್ವ ಪಡೆದಿದೆ. ರುದ್ರಾಕ್ಷಿ ಧಾರಣೆಯಿಂದ ಸಕಾರಾತ್ಮಕ ಶಕ್ತಿ ಹೆಚ್ಚಿಸುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆ. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವವಾಯಿತು ಎಂಬ ನಂಬಿಕೆಯಿದೆ. ಹಾಗಾಗಿ, ಧಾರ್ಮಿಕವಾಗಿ ಅದು ಬಹಳಷ್ಟು ಮಹತ್ವ ಪಡೆದಿದೆ. ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣಗಳಲ್ಲಿ ರುದ್ರಾಕ್ಷಿ ಧಾರಣೆಯ ಮಹತ್ವ ವಿವರಿಸಲಾಗಿದೆ. ಒಟ್ಟು 14 ಪ್ರಕಾರದ ರುದ್ರಾಕ್ಷಿಗಳಿವೆ. ಅವುಗಳಲ್ಲಿ ಗಣೇಶ ರುದ್ರಾಕ್ಷಿ ಬಹಳ ವಿಶಿಷ್ಠವಾಗಿದೆ. ಅದಕ್ಕೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಶಕ್ತಿಯಿದೆ. 

Tap to resize

Latest Videos

Panchanga: ಇಂದು ಅಮೃತಸಿದ್ಧಿ ಯೋಗ, ಕೃಷ್ಣ ಸ್ಮರಣೆ ಮಾಡಿ..

ಗಣೇಶ ರುದ್ರಾಕ್ಷಿ
ಗಣೇಶ ರುದ್ರಾಕ್ಷಿ(Ganesh Rudraksha)ಯು ಗಣೇಶನನ್ನು ಮೆಚ್ಚಿಸುವುದು ಮಾತ್ರವಲ್ಲ, ಮಹಾದೇವನ ಕೃಪಾಶೀರ್ವಾದವನ್ನೂ ತರುತ್ತದೆ. ಇದರ ಧಾರಣೆಯಿಂದ ಏನೆಲ್ಲ ಲಾಭಗಳಿವೆ ನೋಡೋಣ..

  • ಗಣೇಶ ರುದ್ರಾಕ್ಷಿ ಧರಿಸುವುದರಿಂದ ಗಣೇಶನ ವಿಶೇಷ ಕೃಪೆಗೆ ಪಾತ್ರವಾಗಬಹುದು.  ಆತ ರುದ್ರಾಕ್ಷಿ ಧರಿಸದವರ ಜೊತೆಗೆ ಸದಾ ಇದ್ದು ಅವರ ರಕ್ಷಣೆ ಮಾಡುತ್ತಾನೆ.
  • ಗಣೇಶ ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ಧರಿಸಿದವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಓದಿನಲ್ಲಿ ಆಸಕ್ತಿ ಇಲ್ಲದ ವಿದ್ಯಾರ್ಥಿಗಳು ಇದನ್ನು ಧರಿಸಿದರೆ, ಇದರಿಂದ ಪ್ರೇರಣೆ ಹೆಚ್ಚಿ ಓದಿನಲ್ಲಿ ಚೆನ್ನಾಗಿ ಮುಂದುವರಿಯುತ್ತಾರೆ. . ಓದಿದ ವಿಷಯ ಹೆಚ್ಚು ನೆನಪಿನಲ್ಲಿರುತ್ತದೆ. ಇದರಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. 
  • ನಿಮ್ಮ ಜನ್ಮ ರಾಶಿಯ ಅಧಿಪತಿ ಬುಧಗ್ರಹವಾಗಿದ್ದರೆ ನೀವು ಗಣೇಶ ರುದ್ರಾಕ್ಷಿಯನ್ನು ಧರಿಸಲೇಬೇಕು. ಇದರಿಂದ ಜಾತಕ(Horoscope)ದಲ್ಲೇನಾದರೂ ಬುಧಗ್ರಹ ನೀಚ ಸ್ಥಿತಿಯಲ್ಲಿದ್ದರೆ ಉಚ್ಛ ಸ್ಥಿತಿಗೆ ಬರಲಿದೆ. ಬುಧಗ್ರಹದ ಶುಭಲಾಭ ಪಡೆಯಲು ಸಾಧ್ಯವಾಗುತ್ತದೆ. 
  • ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ಕೊರಳಿಗೆ ಗಣೇಶ ರುದ್ರಾಕ್ಷಿ ಧಾರಣೆ ಮಾಡಿಸಿ. ಇದರಿಂದ ಅವರ ಮನಸ್ಸು ಸ್ಥಿಮಿತಕ್ಕೆ ಬರುತ್ತದೆ. ಖಿನ್ನತೆ, ಆತಂಕದಂತ ಸಾಮಾನ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ವರದಾನ. 
  • ಗಣೇಶ ರುದ್ರಾಕ್ಷಿಯನ್ನು ಧರಿಸಿದರೆ ಜೀವನದಲ್ಲಿ ಎಲ್ಲ ಸಂಕಷ್ಟಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ. ಜೊತೆಗೆ, ಕಷ್ಟಗಳು ಮರೆಯಾಗುತ್ತವೆ. 
  • ಕೇತು ಗ್ರಹದ ಅಶುಭ ಪ್ರಭಾವದಿಂದ ನಿಮ್ಮನ್ನು ರಕ್ಷಿಸುತ್ತದೆ ಗಣೇಶ ರುದ್ರಾಕ್ಷಿ.

ಗಣೇಶ ಚತುರ್ಥಿ(Ganesha Chaturti)ಯದು ಧಾರಣೆ ಮಾಡಿ
ಗಣೇಶ ರುದ್ರಾಕ್ಷಿಯನ್ನು ಧರಿಸಲು ಸಂಕಷ್ಟಿ ಉತ್ತಮ ದಿನ. ಅದಲ್ಲದೆ, ಗಣೇಶ ಚತಿರ್ಥಿಯ ದಿನ ಈ ಗಣೇಶ ರುದ್ರಾಕ್ಷಿಯನ್ನು ಧಾರಣೆ ಮಾಡಿದರೆ ಬಹಳ ಶುಭಕಾರಕ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದನ್ನು ಧರಿಸದೇ ಇದ್ದರೂ ಹಬ್ಬದ ದಿನ ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡಿದರೂ ಬಹಳ ಒಳ್ಳೆಯದಾಗುತ್ತದೆ. ಆದರೆ, ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿದ್ದೇ ಆದಲ್ಲಿ ಅದಕ್ಕೆ ಪ್ರತಿ ದಿನ ಪೂಜೆ ಪುನಸ್ಕಾರಗಳು ನಡೆಯಲೇಬೇಕು. ಇದು ಬಿಟ್ಟರೆ ಸೋಮವಾರದ ದಿನ ಹಾಗೂ ಬುಧವಾರದಂದು ಗಣೇಶ ರುದ್ರಾಕ್ಷಿಯನ್ನು ಕೆಂಪು ದಾರದಿಂದ ಇಲ್ಲವೇ ಬಂಗಾರ(gold), ಬೆಳ್ಳಿಯ ಜೊತೆ ಧರಿಸಬಹುದಾಗಿದೆ. 

ಅಬ್ಬಬ್ಬಾ! ಮನೆಯಂಗಳದಲ್ಲೇ ತೆಂಗಿನಮರವಿದ್ದರೆ ಎಷ್ಟೆಲ್ಲ ಲಾಭಗಳು!

ಹೇಗಿರುತ್ತದೆ?
ಗಣೇಶ ರುದ್ರಾಕ್ಷಿ ನೋಡಲು ಸಾಮಾನ್ಯ ರುದ್ರಾಕ್ಷಿಯಂತಲೇ ಇದ್ದು, ಗಣೇಶನ ಸೊಂಡಿಲ ಆಕಾರವು ಪ್ರತ್ಯೇಕವಾಗಿ ಮೂಡಿರುತ್ತದೆ. ಇದರಿಂದಾಗಿ ನೋಡಲು ಗಣೇಶನ ರೀತಿಯೇ ಕಾಣುತ್ತದೆ. 

click me!