ನಿಮ್ಮ ರಾಶಿ, ನಕ್ಷತ್ರಗಳು ನಿಮ್ಮ ಭವಿಷ್ಯದ ಮೇಲೆ ದೊಡ್ಡ ಮಟ್ಟಿಗೆ ಪ್ರಭಾವ ಬೀರುತ್ತವೆ. ನೀವು ಯಾವ ರಾಶಿವರು ಎಂಬುದು ತಿಳಿದ್ರೆ ನಿಮಗೆ ಯಾವೆಲ್ಲ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂಬುದನ್ನು ಹೇಳುವ ಶಕ್ತಿ ಜ್ಯೋತಿಷ್ಯ ಶಾಸ್ತ್ರಕ್ಕಿದೆ.
ಮನುಷ್ಯ ಅಂದ್ಮೇಲೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಜಾತಕ, ಜ್ಯೋತಿಷ್ಯದ ಮೇಲೆ ನಂಬಿಕೆ ಇರುವವರು ತಮ್ಮ ಜಾತಕಗಳನ್ನು ತೋರಿಸಿ ಮುಂದೆ ಎದುರಾಗುವ ತೊಂದರೆ, ಕಂಟಕಗಳನ್ನು ದೂರಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಜಾತಕದಿಂದ ನಮ್ಮ ಭವಿಷ್ಯದ ಸಮಸ್ಯೆಗಳು ತಿಳಿದಂತೆಯೇ ನಮ್ಮ ರಾಶಿಯೂ ಕೂಡ ದೇಹದ ಒಂದೊಂದು ಭಾಗವನ್ನು ಪ್ರತಿನಿಧಿಸುತ್ತೆ ಮತ್ತು ಅದಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಯನ್ನು ಹೇಳುತ್ತದೆ.
ರಾಶಿ ಮೂಲಕ ಆರೋಗ್ಯ (Health) ಸಮಸ್ಯೆ ತಿಳಿಯಬಹುದು
undefined
ಮೇಷ (Aries) : ಮೇಷ ರಾಶಿಯು ತಲೆ, ಮೆದುಳು ಮತ್ತು ಮುಖಕ್ಕೆ ಸಂಬಂಧಿಸಿದೆ. ಈ ರಾಶಿ ಮಂಗಳನಿಂದ ಆಳಲ್ಪಡುತ್ತದೆ. ಮೇಷ ರಾಶಿಯವರು ಹೆಚ್ಚು ಮಾನಸಿಕ ಒತ್ತಡದಿಂದ ಬಳಲುತ್ತಾರೆ. ಆದ್ದರಿಂದ ಇವರಿಗೆ ತಲೆನೋವು, ಮೈಗ್ರೇನ್ (Migraine), ಪಾರ್ಶ್ವವಾಯು ಸಮಸ್ಯೆಗಳು ಕಾಡುತ್ತದೆ. ಮೇಷ ರಾಶಿಯವರಿಗೆ ಕೂದಲು ಉದುರುವ ಸಮಸ್ಯೆಯೂ ಹೆಚ್ಚು.
ಜುಲೈನಲ್ಲಿ ಹುಟ್ಟಿದವರ 8 ಆಕರ್ಷಕ ಗುಣಗಳು..
ವೃಷಭ : ವೃಷಭ ರಾಶಿಯು ಕುತ್ತಿಗೆ, ಕಿವಿ ಮತ್ತು ಗಂಟಲನ್ನು ಪ್ರತಿನಿಧಿಸುತ್ತದೆ. ಹಾಗಾಗಿ ವೃಷಭ ರಾಶಿಯವರು ಥೈರಾಯ್ಡ್ ಮತ್ತು ಇ ಎನ್ ಟಿ ಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರೆ. ಶೀತ, ಗಂಟಲು ನೋವು, ಕಿವಿ ನೋವು, ಹಠಾತ್ತಾಗಿ ತೂಕದಲ್ಲಿ ವ್ಯತ್ಯಾಸವಾಗುವುದು ಮುಂತಾದ ತೊಂದರೆ ಇವರನ್ನು ಕಾಡುತ್ತದೆ.
ಮಿಥುನ : ಮಿಥುನ ರಾಶಿಯು ನಮ್ಮ ಶ್ವಾಸಕೋಶ, ಭುಜ, ತೋಳು ಮತ್ತು ಕೈಗಳಿಗೆ ಸಂಬಂಧಪಟ್ಟಿದೆ. ಇದು ಹೃದಯ ಚಕ್ರವಾದ್ದರಿಂದ ಈ ರಾಶಿಯವರು ಉಸಿರಾಟದ ತೊಂದರೆ, ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಜ್ವರ ಹಾಗೂ ನರಮಂಡಲ ಸಮಸ್ಯೆಗೆ ಒಳಗಾಗುತ್ತಾರೆ.
ಕಟಕ : ಕಟಕ ಸ್ತನ, ಎದೆ ಮತ್ತು ಹೊಟ್ಟೆಯ ಭಾಗವನ್ನು ಸೂಚಿಸುತ್ತದೆ. ಕಟಕ ರಾಶಿಯವರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಇವರು ಆಹಾರವನ್ನು ಅತೀ ಹೆಚ್ಚು ಅಥವಾ ಕಡಿಮೆ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಯನ್ನು ಎದುರಿಸುತ್ತಾರೆ.
ಸಿಂಹ : ಸಿಂಹ ರಾಶಿಯು ಹೃದಯ, ಬೆನ್ನು ಮತ್ತು ರಕ್ತಕ್ಕೆ ಸಂಬಂಧಪಟ್ಟಿದೆ. ಹಾಗಾಗಿ ಈ ರಾಶಿಯವರಿಗೆ ಹೃದಯದ ಸಮಸ್ಯೆ, ಬಿಪಿ ತೊಂದರೆ ಉಂಟಾಗಬಹುದು.
Vastu Tips: ದೀಪ ಬೆಳಗಲು ಎಣ್ಣೆ ಅಥವಾ ತುಪ್ಪ? ಯಾವುದು ತರುತ್ತೆ ಹೆಚ್ಚು ಫಲ?
ಕನ್ಯಾ : ಕನ್ಯಾ ರಾಶಿಯನ್ನು ಬುಧನು ಆಳುತ್ತಾನೆ. ಇದು ನಮ್ಮ ಹೊಟ್ಟೆ ಮತ್ತು ಕರುಳಿಗೆ ಸಂಬಂಧಪಟ್ಟಿರುವುದರಿಂದ ಈ ರಾಶಿಯವರು ಆಹಾರ ಪದ್ಧತಿಗಳಿಂದಲೇ ತೊಂದರೆಯನ್ನು ಎದುರಿಸುತ್ತಾರೆ. ಹಾಗಾಗಿ ಇವರು ಆರೋಗ್ಯಕರ ಆಹಾರವನ್ನು ಹೊಂದುವುದು ಮುಖ್ಯ.
ತುಲಾ : ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯು ಮೂತ್ರಪಿಂಡ, ಮೂತ್ರಜನಕಾಂಗದ ಗ್ರಂಥಿ ಮತ್ತು ಚರ್ಮಕ್ಕೆ ಸಂಬಂಧಿಸಿದೆ. ಈ ರಾಶಿಯವರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಹೊಟ್ಟೆಯ ಸಮಸ್ಯೆಯೂ ಇವರನ್ನು ಕಾಡಬಹುದು. ಇವರು ಹೆಚ್ಚು ಹೈಡ್ರೇಟ್ ಮತ್ತು ಮೊಶ್ಚರೈಸ್ ಆಗಿರಬೇಕು.
ವೃಶ್ಚಿಕ : ವೃಶ್ಚಿಕ ರಾಶಿಯು ಮೂತ್ರಕೋಶ, ಗುದನಾಳ, ಜನನಾಂಗಗಳು, ಅಂಡಾಂಶಯ ಮತ್ತು ವೃಷಣದೊಂದಿಗೆ ಸಂಬಂಧಿಸಿದೆ. ಈ ರಾಶಿಯವರು ಲೈಂಗಿಕವಾಗಿ ಹರಡುವ ರೋಗಗಳಿಗೆ ಒಳಗಾಗಬಹುದು. ಮೂತ್ರಕೋಶದ ಸೋಂಕು, ಯುಟಿಐ, ಪಿಸಿಓಎಸ್ ಮುಂತಾದವು ಮಹಿಳೆಯರಿಗೆ ಕಾಡಬಹುದು.
ಧನು : ಧನು ರಾಶಿ ಸೊಂಟ, ತೊಡೆ, ಸಿಯಾಟಿಕ್ ನರ ಮತ್ತು ದೃಷ್ಟಿಗೆ ಸಂಬಂಧಿಸಿದೆ. ಕಣ್ಣುಗಳ ಸಮಸ್ಯೆ ಧನು ರಾಶಿಯವರನ್ನು ಬಾಧಿಸುತ್ತದೆ. ದುರ್ಬಲ ದೃಷ್ಟಿಯಿಂದಲೇ ಇವರು ಅಪಘಾತಗಳಿಗೆ ಗುರಿಯಾಗಬಹುದು.
ಮಕರ : ಮಕರ ರಾಶಿಯು ಮೂಳೆ, ಮೊಣಕಾಲು, ಕೀಲು, ಚರ್ಮವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರು ಕ್ರೀಡೆಯಲ್ಲಿ ತೊಡಗಿದರೆ ಮೂಳೆ ಮುರಿತಕ್ಕೆ ಒಳಗಾಗಬಹುದು. ಹಾಗಾಗಿ ಅಂತಹ ಸಂದರ್ಭದಲ್ಲಿ ಇವರು ಜಾಗರೂಕರಾಗಿರಬೇಕು.
ಕುಂಭ : ಕುಂಭ ರಾಶಿ ಕಾಲು, ಪಾದದ ಕೀಲು, ರಕ್ತಪರಿಚಲನೆಗೆ (Blood Circulation) ಸಂಬಂಧಿಸಿದೆ. ಇವರು ಉಬ್ಬಿರುವ ರಕ್ತನಾಳದಂತಹ ತೊಂದರೆಯನ್ನು ಹೊಂದಬಹುದು. ಕುಂಭ ರಾಶಿಯವರು ಕಾಲುಗಳಿಗೆ ಆಗಾಗ್ಗ ಮಸಾಜ್ ಮಾಡುತ್ತಿರಬೇಕು. ಅಕ್ಯುಪಂಕ್ಚರ್ ಮಸಾಜ್ ಪಡೆಯುವುದೂ ಉತ್ತಮವಾಗಿದೆ.
ಮೀನ : ಮೀನ ರಾಶಿಯು ನರಮಂಡಲ (Nerve System), ಪಾದಗಳಿಗೆ ಸಂಬಂಧಿಸಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಇವರು ಉಸಿರಾಟದ ಮೇಲೆ ಹಿಡಿತ ಸಾಧಿಸುವುದು ಮುಖ್ಯ. ಇವರಿಗೆ ಕುರ, ಗಟ್ಟಿಯಾದ ಚರ್ಮದ ಸಮಸ್ಯೆ ಎದುರಾಗಬಹುದು.