Zodaic Sign: ಈ ರಾಶಿಯವರ ವಿರೋಧ ಕಟ್ಟಿ ಕೊಂಡ್ರೆ ಅಷ್ಟೇ, ಸೇಡು ತೀರಿಸಿಕೊಳ್ಳದೇ ಬಿಡಲ್ಲ!

By Suvarna News  |  First Published Jun 26, 2023, 5:59 PM IST

ಮನುಷ್ಯನಿಗೆ ಸಿಟ್ಟು, ಸೆಡವು, ಕೋಪ, ತಾಪ ಎಲ್ಲವೂ ಕಾಮನ್. ಆದರೆ, ಈ ಎಲ್ಲ ಗುಣಗಳು ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರೋದು ಅಷ್ಟೇ ಸತ್ಯ. ಅಷ್ಟಕ್ಕೂ ಯಾವ ರಾಶಿಯವರ ಜೊತೆ ವಿರೋಧ ಕಟ್ಟಿ ಕೊಳ್ಳೋದು ಡೇಂಜರಸ್?


ಎಲ್ಲರ ಹತ್ರ ಹೊಗಳಿಕೆ, ಮೆಚ್ಚುಗೆ ಬಯಸೋದು ಮನುಷ್ಯನ ಸ್ವಭಾವ. ಆದರೆ, ಅದನ್ನೊಂದನ್ನೇ ಬಯಸೋದು, ಯಾರು ಸ್ವಲ್ಪ ವಿರೋಧಿಸಿದರೂ ಸಿಡಿಮಿಡಿಗೊಂಡರೆ ಸ್ವಲ್ಪ ಮನಸ್ಥಿತಿ ಸರಿ ಇಲ್ಲದವರು ಎನ್ನಬಹುದು. ಮತ್ತೆ ಕೆಲವರು ಪ್ರೀತಿ, ವಿಶ್ವಾಸ ಬಯಸೋದು ಮಾತ್ರವಲ್ಲ. ಅಕಸ್ಮಾತ್ ಅದು ನಿರೀಕ್ಷಿಸಿದಷ್ಟು ಸಿಗಲಿಲ್ಲ. ಬರೀ ದ್ವೇಷವೇ ಅವರಿಗೆ ಸಿಗುತ್ತಿದೆ ಅಂದ್ರೆ ಸೇಡು ತೀರಿಸಿಕೊಳ್ಳಲೂ ಹಿಂಜರಿಯಲ್ಲ. ಅಂಥವರು ಸಾಮಾನ್ಯವಾಗಿ ಯಾವ ರಾಶಿಯವರಿಗೆ ಸೇರಿರುತ್ತಾರೆ?

ಮೇಷ (Aeris) ರಾಶಿ
ಇವರ ಹಿಂದೆ ಒಬ್ಬರು ಹೊಗಳುಭಟರಿದ್ದರೆ ಬೆಸ್ಟ್. ಮಾಡಿದ್ದೆಲ್ಲವಕ್ಕೂ ಸುಮ್ಮನೆ ಹೊಗಳಿದರೆ ಮೇಷ ರಾಶಿಯವಿರಗೆ ತೃಪ್ತಿಯಾಗೋಲ್ಲ. ಬದಲಿಗೆ ಹೊಗಳುತ್ತಲೇ ಇರಬೇಕು ಅಂತ ಸದಾ ಬಯಸುತ್ತಾರೆ. ಒಮ್ಮೆ ಈ ಹೊಗಳಿಕೆ ಮಿಸ್ ಆದರೆ ಜೀವನದಲ್ಲಿ ಏನನ್ನೋ ಕಳೆದು ಕೊಂಡಿದ್ದೇವೆ ಎನ್ನುವಂತೆ ಕೊರಗುತ್ತಾರೆ. ಇಂಥವರನ್ನು ಮೆಚ್ಚಿಸೋದು ಇದೆಯಲ್ಲ, ಅದು ಕಪ್ಪೆಯನ್ನು ಕೊಳಗಕ್ಕೆ ಹಾಕಿದಷ್ಟು ಕಷ್ಟ ಬಿಡಿ. ಹೊಗಳಿಕೆ ಹೋಗಲಿ. ಅಪ್ಪತಪ್ಪಿ ಟೀಕಿಸಿದರೋ ಮುಗೀತು ಕಥೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸೇಡು ತೀರಿಸಿಕೊಳ್ಳದೇ ಬಿಡುವುದು ಇಲ್ಲ. 

Latest Videos

undefined

ಸಿಂಹ (Leo) ರಾಶಿ
ಎಂಥದ್ದೇ ಕಾರ್ಯಕ್ರಮವಿರಲಿ, ನಾಲ್ಕು ಜನರು ಸೇರಿದ್ದಾರೆಂದರೆ ಸಾಕ, ಈ ಸಿಂಹ ರಾಶಿಯವರಿಗೆ Center of Attraction ಆಗೋ ಹುಚ್ಚು. ಅವರು ಮಾಡಿದ್ದೆಲ್ಲವುಕ್ಕೂ ಬಹುಪರಾಕ್ ಹೇಳುವವರು ಬೇಕು. ಸುಮ್ ಸುಮ್ಮನೆ ಹೊಗಳಿದರೂ ಸಾಕಾಗೋಲ್ಲ. ಸದಾ ಹೊಗಳಿಕೆಯೊಂದನ್ನೇ ಬಯಸೋ ಮಂದಿ ಇವರು. ಆ ಹೊಗಳಿಕೆಗಾಗಿ ಏನು ಬೇಕಾದರೂ ಮಾಡುತ್ತಾರೆ. ಇನ್ನೊಬ್ಬರನ್ನು ತುಳಿದು, ತಮ್ಮ ಬೇಳೆ ಬೇಯಿಸಿಕೊಳ್ಳಲೂ ಹೇಸುವುದಿಲ್ಲ ಈ ರಾಶಿಯವರು. ಸದಾ ಎಲ್ಲರೂ ನನ್ನ ಬಗ್ಗೆಯೇ ಹೇಳಬೇಕೆಂದು ಬಯಸುತ್ತಾರೆ. ಅಕಸ್ಮಾತ್ ಯಾರಾದ್ರೂ ತುಸು ನಿರ್ಲಕ್ಷಿಸಿದರೋ ಹೆಡೆ ತುಳಿದ ಹಾವನ ತರ ಆಡುತ್ತಾರೆ. ಮುಗೀತು ಕಥೆ. ಅವರು ವಿರುದ್ಧ ಮಾತನಾಡಿದವರ ಮಾನ ಹರಣ ಮಾಡಲೂ ಹೇಸದ ರಾಶಿಯವರು ಇವರು. 

3 ರಾಶಿಗಳನ್ನು ಜಟಿಲ ಸಮಸ್ಯೆಗಳ ಸುಳಿಯಲ್ಲಿ ಬಂಧಿಸುವ Samsaptak Yoga 2023

ಕುಂಭ (Capricorn) ರಾಶಿ
ಸಿಂಹ ರಾಶಿಯವರಂತೆ ಈ ರಾಶಿಯವರೂ ಎಲ್ಲರೂ ತಮ್ಮನ್ನು ಮೆಚ್ಚಬೇಕು ಮತ್ತು ಮತ್ತು ನಾವು ಮಾಡಿರುವ ಸಾಧನೆಗಳನ್ನು ಪುರಸ್ಕರಿಸಬೇಕೆಂದೇ ಬಯಸುತ್ತಾರೆ. ಇವರು ಮೂಲತಃ ಮಹತ್ವಾಕಾಂಕ್ಷಿಗಳು. ದೃಢ ನಿಶ್ಚಯಿಗಳು. ತಮ್ಮ ಕೆಲಸದಲ್ಲಿ ಪರ್ಫೆಕ್ಷನ್ ಬಯಸುತ್ತಾರೆ. ಹಾಗೆಯೇ ಅದನ್ನು ಮತ್ತೊಬ್ಬರು ರೆಕಗ್ನೈಸ್ ಮಾಡಲಿ ಎಂದೂ ಆಶಿಸುತ್ತಾರೆ. ಅಕಸ್ಮಾತ್ ಈ ರಾಶಿಯವರು ಬರಹಗಾರರೋ ಅಥವಾ ಕಲಾವಿದರೋ ಆದರೆ ಮುಗೀತು. ಮೆಚ್ಚುಗೆ ಇಲ್ಲದೇ ಬದುಕಲೂ ಆಗುವುದೇ ಇಲ್ಲ ಇವರಿಗೆ. ಯಾರಾದ್ರೂ ಟೀಕಿಸಿದರೆ ಅವರ ವಿರುದ್ಧ ಕೆಂಡ ಕಾರೋದು ಗ್ಯಾರಂಟಿ. 

ಮಿಥುನ (Gemini) ರಾಶಿ
Socially ಸಿಕ್ಕಾಪಟ್ಟೆ ಮಿಂಗಲ್ ಆಗೋ ರಾಶಿಯವರು ಇವರು. ಯಾರಾದರೂ ಇವರೊಂದಿಗೆ ಇದ್ದರೆ ಇವರಿಗೆ ಸೆಕ್ಯೂರಡ್ ಫೀಲ್ ಆಗುತ್ತೆ. ಒಬ್ಬಂಟಿಯಾಗಿ ಕಾಲ ಕಳೆಯಲು ಹಿಂದೇಟು ಹಾಕುತ್ತಾರೆ. ತಾವು ಮಾಡೋ ಕೆಲಸ ಇತರರ ಗಮನಕ್ಕೆ ಬರುತ್ತಿಲ್ಲವೆಂದರೆ, ಆ ಕೆಲಸವನ್ನೇ ಮಾಡೋಲ್ಲ ಈ ಮಿಥುನ ರಾಶಿಯವರು. ತಮ್ಮ ಜೊತೆಗಿರುವವರು ತಮ್ಮನ್ನು ಮಾತ್ರ ಪ್ರೀತಿಸಬೇಕೆಂದ ತುಸು ಪೊಸೆಸಿವ್‌ನೆಸ್ ಸಹ ಈ ರಾಶಿಯವರಿಗೆ ಇರುತ್ತೆ. ತಮ್ಮ ಒಡ ಹುಟ್ಟಿದವರನ್ನೂ ಯಾರಾದರೂ ಹೆಚ್ಚಿಗೆ ಪ್ರೀತಿಸಿದರೆ ಸಹಿಸಿಕೊಳ್ಳುವುದು ಕಷ್ಟ ಈ ರಾಶಿಯವರಿಗೆ. ದೇವರೇ, ಈ ರಾಶಿಯವರಿಗೆ ತಂಗಿ ಇದ್ದು, ಆಕೆ ಮೇಲೆ ಯಾರಾದ್ರೂ ಕಣ್ಣು ಹಾಕಿದರೆ ಜಮದಗ್ನಿಗಳಾಗಿ ಬಿಡುತ್ತಾರೆ. 

 

Tarot Readings: ಈ ರಾಶಿಗೆ ಜಗತ್ತನ್ನು ನೋಡುವ ದೃಷ್ಟಿ ಬದಲಾಯಿಸುವ ನೋವಿನ ಅನುಭವಗಳು..

ವೃಶ್ಚಿಕ(Scorpio)ರಾಶಿ
ನಮ್ಮನ್ನು ಬಿಟ್ಟರೆ ಮತ್ಯಾರೂ ಇಲ್ಲ ಅನ್ನೋರು ಇವರು. ಸಹಜವಾಗಿಯೇ ಈ ಗುಣ ಇರೋರು ತಮ್ಮತ್ತ ಎಲ್ಲರೂ ಆಕರ್ಷಿತರಾಗಬೇಕೆಂದು ಬಯಸುತ್ತಾರೆ. ತಮ್ಮದು ವಿಪರೀತ ಗ್ರೇಟ್ ಪರ್ಸನಾಲಿಟಿ. ಅದಕ್ಕೆ ಎಲ್ಲರೂ ಅಟ್ರ್ಯಾಕ್ಟ್ ಆಗಬೇಕು. ಮತ್ತೆಲ್ಲರೂ ಭೇಷ್ ಭೇಷ್ ಎನ್ನುತ್ತಿರಬೇಕೆಂದು ಬಯಸೋ ರಾಶಿ ವೃಶ್ಚಿಕ. ಅಕಸ್ಮಾತ್ ಯಾರಾದ್ರೂ ಇಗ್ನೋರ್ ಮಾಡಿದರೋ, ಇವರಿಗೆ ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂಬುವುದು ಚೆನ್ನಾಗಿ ಗೊತ್ತು. ಈ ವಿದ್ಯೆ ಇವರಿಗೆ ಚನ್ನಾಗಿ ಒಲಿದಿರುತ್ತದೆ.

click me!