Saturn Effect: ನಿಮ್ಮ ರಾಶಿಗೆ ಶನಿ ಎಂಟ್ರಿ ಕೊಟ್ರೆ ಏನಾಗತ್ತೆ?

By Suvarna News  |  First Published Jan 10, 2022, 9:24 AM IST

ಶನಿ ಕಾಟ, ಸಾಡೇ ಸಾತ್ ಹೀಗೆ ಅನೇಕ ರೀತಿಯಲ್ಲಿ ಶನಿದೇವನಿಂದ ತೊಂದರೆ ಅನುಭವಿಸುವವರಿದ್ದಾರೆ. ತಪ್ಪು ಮಾಡಿದವರಿಗೆ ಶನಿ ಕಾಡುತ್ತಾನೆ. ಹಾಗೆಂದ ಮಾತ್ರಕ್ಕೆ ಶನಿ ಕಾಟ ಹಿಡಿದವರೆಲ್ಲ ಅಧರ್ಮ ಮಾರ್ಗ ತುಳಿದಿದ್ದಾರೆಂದಲ್ಲ. ಇದಕ್ಕೆ ಕೆಲವು ಗ್ರಹಗತಿಗಳೂ ಕಾರಣವಾಗಿರುತ್ತದೆ. ಹಾಗಾದರೆ ಯಾವ ಯಾವ ರಾಶಿಯವರ ಮೇಲೆ ಶನಿ ಪಾತ್ರ ಏನು ಎಂಬುದನ್ನು ನೋಡೋಣ.


ಇದೊಳ್ಳೆ ಶನಿ ಕಾಟ (Saturn) ಆಯ್ತಲ್ಲ ಅಂತ ಮಾತನಾಡಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಹಾಗಾದರೆ, ಶನಿ ಗ್ರಹ ಎಂದರೆ ತೊಂದರೆ ಕೊಡುವ ಗ್ರಹವೇ? ಶನಿಯನ್ನು ತಾಮಸ ಗ್ರಹ ಎನ್ನಲಾಗುವುದಾದರೂ ಎಲ್ಲರಿಗೂ ತೊಂದರೆ ಕೊಡುವವನಲ್ಲ. ಕೆಲವರಿಗೆ ಅಶುಭವನ್ನುಂಟು ಮಾಡಿದರೆ, ಮತ್ತೆ ಕೆಲವರಿಗೆ ಶುಭಕಾರಕನಾಗಿದ್ದಾನೆ. 

ಜಾತಕದಲ್ಲಿ ಶನಿಯು ಯಾವ ರಾಶಿಯಲ್ಲಿದ್ದರೆ, ಎಂತಹ ಫಲ ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳಬಹುದು. ರಾಶಿಯ ಮೇಲೆ ಶನಿ ಪ್ರಭಾವ ಹೇಗೆ ಆಗುತ್ತದೆ? ಯಾವ ರಾಶಿಯಲ್ಲಿ ಶನಿ ಇದ್ದರೆ ಏನೇನು ಆಗಲಿದೆ ಎಂಬುದನ್ನು ನೋಡೋಣ ಬನ್ನಿ.

ಮೇಷರಾಶಿ (Aries)
ಮೇಷ ರಾಶಿಯ ವ್ಯಕ್ತಿಗಳಿಗೆ ಶನಿದಶೆ ನಡೆಯುತ್ತಿದ್ದರೆ ಆ ವೇಳೆ ಸಂಬಂಧಿಕರು (Relation) ಮತ್ತು ಸ್ನೇಹಿತರ (Friends) ಜೊತೆ ಮನಸ್ತಾಪ ಹೆಚ್ಚಲಿದೆ. ಕಾರಣ, ಮೇಷ ರಾಶಿಯಲ್ಲಿ ಶನಿ ನೀಚ ಸ್ಥಾನದಲ್ಲಿ ಇರುತ್ತಾನೆ. ಹೀಗಿದ್ದಲ್ಲಿ ಅಶುಭ ಫಲ ದೊರೆಯಲಿದೆ. ಜೊತೆಗೆ ಈ ರಾಶಿಯವರ ವ್ಯಕ್ತಿತ್ವದಲ್ಲಿಯೂ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಆತ್ಮವಿಶ್ವಾಸದ (Confidence) ಕೊರತೆಯುಂಟಾಗುತ್ತದೆ. ಕೆಟ್ಟ ಅಭ್ಯಾಸಗಳ ಮೇಲೆ ಆಕರ್ಷಿತರಾಗುತ್ತಾರೆ. 

ವೃಷಭ (Taurus)
ಜಾತಕದಲ್ಲಿ ಶನಿಯು ವೃಷಭ ರಾಶಿಯಲ್ಲಿದ್ದರೆ ಮೋಸ (Cheating), ವಂಚನೆಗಳನ್ನು (Fraud) ಮಾಡುವ ಮನಃಸ್ಥಿತಿ ಉಂಟಾಗುತ್ತದೆ. ಜೊತೆಗೆ ಆ ವ್ಯಕ್ತಿ ಸುಳ್ಳನ್ನು ಬಹಳ ಹೇಳುತ್ತಾರೆ. ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ (Clever). ಆದರೆ, ವಿಶ್ವಾಸಕ್ಕೆ ಅರ್ಹರಾಗಿರುವುದಿಲ್ಲ. ಕಾರಣ, ಶನಿ ಪ್ರಭಾವ ಹಾಗೆ ಮಾಡಿಸುತ್ತದೆ. ಜಾತಕದಲ್ಲಿ ಬೇರೆ ಗ್ರಹಗಳು ಶುಭ ಸ್ಥಿತಿಯಲ್ಲಿರದಿದ್ದರೆ ಅನ್ಯ ಸಂಬಂಧವನ್ನು ಮಾಡುವಂತ ಮನಃಸ್ಥಿತಿಯೂ ಇವರದ್ದಾಗುತ್ತದೆ.

ಮಿಥುನ ರಾಶಿ (Gemini)
ಈ ರಾಶಿಯಲ್ಲಿ ಶನಿ ಇದ್ದರೆ ಅಂತಹ ವ್ಯಕ್ತಿಗಳು ಎಷ್ಟೇ ಚತುರರಾಗಿದ್ದರೂ ಮೋಸ ಮಾಡುವ ಸ್ವಭಾವ ಬಂದುಬಿಡುತ್ತದೆ. ಜೊತೆಗೆ ಆ ವ್ಯಕ್ತಿಯು ಕೆಟ್ಟ ಸಾಹಸಗಳಿಗೆ (Adventure) ಕೈ ಹಾಕುವಂಥ ಮನಸ್ಥಿತಿಯನ್ನು ಶನಿಯು ನೀಡುತ್ತಾನೆ. ಇನ್ನು ಮಿಥುನ ರಾಶಿಯಲ್ಲಿ ಶನಿ ಇದ್ದರೆ ಸಂತಾನಕ್ಕೆ ಅಷ್ಟು ಯೋಗ್ಯವಲ್ಲ. 

ಕರ್ಕಾಟಕ ರಾಶಿ (Cancer)
ಈ ರಾಶಿಯವರಿಗೆ ಶನಿದೆಶೆ ನಡೆಯುತ್ತಿದ್ದಾಗ ಹೆಚ್ಚು ಕಷ್ಟವನ್ನು ಪಡಬೇಕಾಗುತ್ತದೆ. ಜಾತಕದ ನಾಲ್ಕನೇ ಮನೆಯಲ್ಲಿ ಶನಿ ಇದ್ದಾನೆಂದರೆ ಹೊಟ್ಟೆಕಿಚ್ಚು, ಹಠ ಸ್ವಭಾಗಳು ಇವರಲ್ಲಿ ಹೆಚ್ಚು ಕಾಣಲಿದೆ. ಇನ್ನು ಸಂಸಾರ ಜೀವನದ (Marriage Life) ಬಗ್ಗೆ ನೋಡುವುದಾದರೆ ಮನಸ್ತಾಪಗಳು ಹೆಚ್ಚಲಿವೆ.

ಇದನ್ನು ಓದಿ: Friendship Astro: ಯಾವ ರಾಶಿಯವರನ್ನು ಫ್ರೆಂಡ್‌ಶಿಪ್ ಮಾಡಿಕೊಂಡರೆ ಒಳ್ಳೆಯದು?

ಸಿಂಹ ರಾಶಿ (Leo)
ಈ ರಾಶಿಯವರ ಮೇಲೆ ಶನಿ ಶುಭ ಪ್ರಭಾವ ಇರಲಿದೆ. ಶನಿಯ ಪ್ರಭಾವಕ್ಕೊಳಪಟ್ಟ ಈ ರಾಶಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಜೊತೆಗೆ ಗಂಭೀರ (Serious) ವ್ಯಕ್ತಿತ್ವವು (Personality) ಇವರದ್ದಾಗುತ್ತದೆ. ಇವರು ಯಾವುದೇ ಕೆಲಸ ಮಾಡಲಿ ಅದರಲ್ಲಿ ಪರಿಶ್ರಮ ಹಾಗೂ ನೈಪುಣ್ಯತೆಯನ್ನು ಕಾಣಬಹುದಾಗಿದೆ. ಶನಿದಶೆ ನಡೆಯುತ್ತಿದ್ದಾಗ ಮಾತ್ರ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. 

ಕನ್ಯಾರಾಶಿ (Virgo)
ಕನ್ಯಾ ರಾಶಿಯಲ್ಲಿ ಶನಿ ಇದ್ದರೆ ಆರ್ಥಿಕವಾಗಿ ಪ್ರಬಲರಾಗುತ್ತಾರೆ. ಈ ರಾಶಿಯವರಿಗೆ ಶನಿದಶೆಯು ಶುಭ, ಲಾಭವನ್ನು ತರುತ್ತದೆ. ಅಲ್ಲದೆ, ಪರೋಪಕಾರಿ ಮನೋಭಾವ ಇವರದ್ದಾಗಿರುತ್ತದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಇವರು, ಹೆಚ್ಚು ಗುಣವಂತರಾಗಿರುತ್ತಾರೆ.

ತುಲಾರಾಶಿ (Libra)
ಈ ರಾಶಿಯವರಿಗೆ ಶನಿ ಉತ್ತಮ ಫಲ ನೀಡುತ್ತಾನೆ. ಮಹತ್ವಾಕಾಂಕ್ಷೆಯ ಮನೋಭಾವ ಇವರಲ್ಲಿ ಮೂಡಲಿದ್ದು, ಸ್ವಾಭಿಮಾನಿ (Self-respecting) ವ್ಯಕ್ತಿತ್ವ ಇವರದ್ದಾಗಿರುತ್ತದೆ. ಜೊತೆಗೆ ಆರ್ಥಿಕ ಸ್ಥಿತಿ (Economic Status) ಸಹ ಉತ್ತಮವಾಗಲಿದೆ. 

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯಲ್ಲಿ ಶನಿ ಇದ್ದರೆ ನಿರಾಸಕ್ತಿ ಭಾವ ಹಾಗೂ ಅಸೂಯೆಯ ಗುಣ ಹೆಚ್ಚಲಿದೆ. ಮಾತಿನ ಸಂದರ್ಭದಲ್ಲಿ ಭಾವೋದ್ರೇಕಗೊಳ್ಳುವ ಇವರು ಕೋಪ ಹೆಚ್ಚಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗುವುದಲ್ಲದೆ (Financial loss), ಮರ್ಯಾದೆಗೆ ಕುಂದುಂಟಾಗುತ್ತದೆ. 

ಧನು ರಾಶಿ (Sagittarius)
ಈ ರಾಶಿಯವರಿಗೆ ಶನಿದಶೆ ನಡೆಯುತ್ತಿದ್ದರೆ ಉತ್ತಮ ಫಲವನ್ನು ಪಡೆಯುವುದಲ್ಲದೆ, ಸಮೃದ್ಧಿ ಹೊಂದಲಿದ್ದಾರೆ. ಶಿಕ್ಷಣ (Education) ಕ್ಷೇತ್ರದಲ್ಲಿಯೂ ಇವರು ಸಫಲತೆ ಕಾಣುತ್ತಾರೆ. ಅಲ್ಲದೆ, ಈ ಸಂದರ್ಭದಲ್ಲಿ ಶನಿದೆಸೆ ನಡೆಯುತ್ತಿರುವ ವ್ಯಕ್ತಿಗಳು ವ್ಯಾವಹಾರಿಕವಾಗಿ ಯಶಗಳಿಸುತ್ತಾರೆ. 

ಮಕರ ರಾಶಿ (Capricorn)
ಮಕರ ರಾಶಿಯಲ್ಲಿ ಶನಿ ಇದ್ದರೆ ಆಸ್ತಿ-ಭೂಮಿಯ (Property - Land) ಲಾಭ (Profit) ದೊರೆಯಲಿದೆ. ಇಂಥವರು ದೇವರಲ್ಲಿ ಹೆಚ್ಚು ಭಕ್ತಿ ಹೊಂದುವುದಲ್ಲದೆ, ವ್ಯವಹಾರದಲ್ಲಿ ಏಳ್ಗೆಯನ್ನು ಕಾಣಬಹುದಾಗಿದೆ. ಆರ್ಥಿಕವಾಗಿಯೂ ಲಾಭವನ್ನು ಗಳಿಸುತ್ತಾರೆ. 

ಕುಂಭ ರಾಶಿ (Aquarius)
ಕುಂಭ ರಾಶಿಯಲ್ಲಿ ಶನಿ ಇದ್ದರೆ ಅಂಥವರು ಅಹಂಕಾರಿ ಮನೋಭಾವವನ್ನು ಹೊಂದುತ್ತಾರೆ. ಅವರಿಗೇ ಅರಿವಿಲ್ಲದಂತೆ ಹೀಗಾಗುತ್ತಾರೆ. ಕಣ್ಣಿಗೆ ಸಂಬಂಧ ಪಟ್ಟ ರೋಗದಿಂದ ಬಳಲುತ್ತಾರೆ. ವ್ಯವಹಾರದಲ್ಲಿ (Business) ಕುಶಲತೆಯನ್ನು, ಭಾಗ್ಯವನ್ನು ಹೊಂದುತ್ತಾರೆ. ಆರ್ಥಿಕ ಪರಿಸ್ಥಿತಿಯು ಸಾಧಾರಣವಾಗಿರುತ್ತದೆ. 

ಇದನ್ನು ಓದಿ: ಈ 4 ರಾಶಿ ಹುಡುಗಿಯರು ರಿಲೇಶನ್ ಶಿಪ್ ನಲ್ಲಿ ಬೆಸ್ಟ್!

ಮೀನ ರಾಶಿ (Pisces)
ಮೀನರಾಶಿಯಲ್ಲಿ ಶನಿ ಇದ್ದರೆ ಆರ್ಥಿಕ ಸ್ಥಿತಿ ಏರುಗತಿ ಕಾಣುವುದಲ್ಲದೆ, ಅಂತಹ ವ್ಯಕ್ತಿಗಳು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ. ಉದಾರ ಮನೋಭಾವ ಇವರದ್ದಾದರೂ ಕೆಲವು ಸಂದರ್ಭದಲ್ಲಿ ಅಸೂಯೆ ಪಡುವ ಗುಣ ಇವರದ್ದಾಗುತ್ತದೆ. 

click me!