
ಇತ್ತೀಚೆಗೆ ಕುಂಭ ಮೇಳಕ್ಕೆ ಹೋಗಿ ಬರುವವರು, ಕಾಶಿಗೆ ಹೋಗಿ ಬರುವವರು ಅಲ್ಲಿಂದ ರುದ್ರಾಕ್ಷಿ ಮಣಿಗಳನ್ನೂ ಮಾಲೆಗಳನ್ನೂ ತರುತ್ತಿದ್ದಾರೆ. ಮೊದಲನೆಯದಾಗಿ ಇವುಗಳನ್ನು ಸರಿಯಾದ ರೀತಿಯಲ್ಲಿ ಧರಿಸುವ ಮಾಹಿತಿ ಗೊತ್ತಿಲ್ಲದೆ ಧರಿಸಬಾರದು. ಎರಡನೆಯದು, ರುದ್ರಾಕ್ಷಿ ಧರಿಸಿ ಕೆಲವು ಕ್ರಿಯೆಗಳನ್ನು ಮಾಡಬಾರದು. ಹಾಗಿದ್ದರೆ ರುದ್ರಾಕ್ಷಿ ಧರಿಸುವ ರೀತಿ ಹೇಗೆ, ಅದನ್ನು ಧರಿಸಿ ಏನು ಮಾಡಬಹುದು, ಏನು ಮಾಡಬಾರದು, ಈ ಕುರಿತು ಜ್ಯೋತಿಷಿಗಳು ಏನಂತಾರೆ ಕೇಳೋಣ.
ರುದ್ರಾಕ್ಷಿಯನ್ನು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡ ಅತ್ಯಂತ ಪವಿತ್ರ ಮತ್ತು ಪವಾಡಕರ ವಸ್ತು ಎಂದು ನಂಬಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಅನುಗ್ರಹವನ್ನು ಪಡೆಯಬಹುದು ಎಂಬುದು ನಂಬಿಕೆ. ಇದರ ಜೊತೆಗೆ ಎಲ್ಲಾ ತೊಂದರೆಗಳಿಂದಲೂ ಪರಿಹಾರ ಪಡೆಯಬಹುದು. ಒಂದು ಮುಖದ ರುದ್ರಾಕ್ಷಿಯಿಂದ ಇಪ್ಪತ್ತೊಂದು ಮುಖಿಯವರೆಗೆ ವಿಭಿನ್ನವಾದುದು ಲಭ್ಯ. ಪ್ರತಿಯೊಂದಕ್ಕೂ ತನ್ನದೇ ಆದ ಪವರ್ ಇದೆ. ಇದು ಅನೇಕ ರೋಗಗಳನ್ನೂ ತಡೆಯುತ್ತದೆ. ಜಾತಕದ ಅನೇಕ ದೋಷಗಳನ್ನು ನಿವಾರಿಸುವಲ್ಲಿ ರುದ್ರಾಕ್ಷಿ ಸಹಾಯ ಮಾಡುತ್ತದೆ.
ನಾವು ನಮ್ಮ ಮನೋಭೀಷ್ಟೆಗಳಿಗೆ ಅನುಗುಣವಾಗಿ ರುದ್ರಾಕ್ಷವನ್ನು ಧರಿಸಬೇಕು. ನಂಬಿಕೆಗಳ ಪ್ರಕಾರ ಸಂಪತ್ತು ಗಳಿಸಲು ಹನ್ನೆರಡು ಮುಖಿ ರುದ್ರಾಕ್ಷಿ ಧರಿಸಬೇಕು ಎನ್ನಲಾಗುತ್ತದೆ. ಅದೇ ರೀತಿ ಸಂತೋಷ, ಮೋಕ್ಷ ಮತ್ತು ಪ್ರಗತಿಗಾಗಿ ಏಕಮುಖಿ ರುದ್ರಾಕ್ಷಿ ಧರಿಸಿದರೆ ಉತ್ತಮ. ರುದ್ರಾಕ್ಷವನ್ನು ಧರಿಸಿದ ನಂತರ ಮುಖ್ಯವಾದ ನಿಯಮಗಳನ್ನು ಪಾಲಿಸದಿದ್ದರೆ ಜೀವನದಲ್ಲಿ ತೊಂದರೆಗಳು ಬರುತ್ತದೆ. ರುದ್ರಾಕ್ಷಿ ಧರಿಸಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಶಿವನ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುತ್ತದೆ. ಹಾಗಾದ್ರೆ ರುದ್ರಾಕ್ಷಿ ಧರಿಸುವಾಗ ಯಾವ ತಪ್ಪುಗಳನ್ನ ಮಾಡಬಾರದು?
ರುದ್ರಾಕ್ಷಿಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬುದನ್ನ ಮಾತ್ರ ಮರೆಯಬೇಡಿ. ರುದ್ರಾಕ್ಷಿ ಮಣಿಯ ರಂಧ್ರಗಳಲ್ಲಿ ಧೂಳು ಮತ್ತು ಕೊಳಕು ಸಂಗ್ರಹವಾಗಬಹುದು. ಸಾಧ್ಯವಾದಷ್ಟು ಸ್ವಚ್ಛ ಮಾಡಲು ಪ್ರಯತ್ನ ಮಾಡಿ. ಅವುಗಳು ಹಾಳಾಗಿದ್ದರೆ ಅಥವಾ ದಾರ ತುಂಬಾ ಕೊಳಕಾಗಿದ್ದರೆ ಗಂಗಾ ಜಲದಿಂದ ಸ್ವಚ್ಛ ಮಾಡಿ. ರುದ್ರಾಕ್ಷಿ ಸ್ವಭಾವತಃ ಬಿಸಿಯಾಗಿರುತ್ತದೆ. ಇದರಿಂದಾಗಿ ಕೆಲವರಿಗೆ ಸಮಸ್ಯೆ ಆಗುತ್ತದೆ. ಈ ಸಮಯದಲ್ಲಿ ಅದನ್ನ ಧರಿಸದಿರುವುದು ಬಹಳ ಉತ್ತಮ.
ರುದ್ರಾಕ್ಷಿಯನ್ನು ಎಲ್ಲಾ ಜಾಗಗಳಿಗೆ ತೆಗೆದುಕೊಂಡು ಹೋಗಬಾರದು. ಮುಖ್ಯವಾಗಿ ಸ್ಮಶಾನಕ್ಕೆ ಎಂದಿಗೂ ರುದ್ರಾಕ್ಷಿ ಹಾಕಿಕೊಂಡು ಹೋಗಬಾರದು. ಇದಲ್ಲದೇ, ನವಜಾತ ಶಿಶುವಿನ ಜನನವಾದ ಸಮಯದಲ್ಲಿ ಅಥವಾ ಸ್ಥಳದಲ್ಲಿ ರುದ್ರಾಕ್ಷಿಯನ್ನು ಹಾಕಿಕೊಂಡು ಹೋಗಬಾರದು. ಮಹಿಳೆಯರು ಮುಟ್ಟಿನ ಸಮಯದಲ್ಲಿ ರುದ್ರಾಕ್ಷವನ್ನು ಧರಿಸಬಾರದು ಎನ್ನುವ ನಿಯಮವಿದೆ. ಸ್ನಾನ ಮಾಡದೆ ರುದ್ರಾಕ್ಷವನ್ನು ಎಂದಿಗೂ ಮುಟ್ಟಬಾರದು. ಹಾಗೆಯೇ ಲೈಂಗಿಕ ಸಂಪರ್ಕದ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸಿರಬಾರದು. ಎರಡು ವಿಭಿನ್ನ ದೇಹಗಳು ರುದ್ರಾಕ್ಷಿ ಕೊಡುವ ಪವರ್ ವಿಭಿನ್ನವಾಗಿರುತ್ತದೆ. ಲೈಂಗಿಕ ಸಂಪರ್ಕದ ಸಮಯದಲ್ಲಿ ಇದು ವಿಚಿತ್ರ ಸಂವೇದನೆ ಸೃಷ್ಟಿಸಬಹುದು. ರುದ್ರಾಕ್ಷಿ ಧರಿಸಿದ ನಂತರ ಮಾಂಸ ಮತ್ತು ಮದ್ಯದಿಂದ ದೂರವಿರಬೇಕು ಎನ್ನುವ ನಿಯಮ ಸಹ ಇದೆ.
ಬೆಳಗ್ಗೆ ರುದ್ರಾಕ್ಷವನ್ನು ಧರಿಸುವಾಗ, ರುದ್ರಾಕ್ಷ ಮಂತ್ರ ಮತ್ತು ರುದ್ರಾಕ್ಷ ಮೂಲ ಮಂತ್ರವನ್ನು 9 ಬಾರಿ ಜಪಿಸಬೇಕು, ಇದನ್ನು ಮಲಗುವ ಮೊದಲು ಮತ್ತು ರುದ್ರಾಕ್ಷಿಯನ್ನು ತೆಗೆದ ನಂತರವೂ ಈ ಶ್ಲೋಕಗಳನ್ನ ಪಠಣೆ ಮಾಡಬೇಕು. ಇನ್ನು ರುದ್ರಾಕ್ಷಿಯನ್ನ ತೆಗೆದಿಡುವ ಸ್ಥಳ ಸಹ ಬಹಳ ಪವಿತ್ರವಾಗಿ ಹಾಗೂ ಸ್ವಚ್ಛವಾಗಿ ಇರಬೇಕು. ಸಾಧ್ಯವಾದರೆ ದೇವರ ಮನೆಯಲ್ಲಿ ಇಡುವುದು ಉತ್ತಮ. ಸ್ವಚ್ಛ ಇಲ್ಲದ ಸ್ಥಳದಲ್ಲಿ ಇದನ್ನ ಇಟ್ಟರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಸೂರ್ಯ ಮುಳುಗಿದ್ಮೇಲೆ ಈ 3 ಕೆಲಸ ಮಾಡ್ಬೇಡಿ!
ಯಾವಾಗಲೂ ರುದ್ರಾಕ್ಷಿಯನ್ನು ಧರಿಸುವಾಗ ಕೆಂಪು ಅಥವಾ ಹಳದಿ ದಾರವನ್ನ ಬಳಸಬೇಕು . ಕಪ್ಪು ದಾರದಲ್ಲಿ ರುದ್ರಾಕ್ಷವನ್ನು ಧರಿಸುವುದು ಅಶುಭ ಪರಿಣಾಮಗಳನ್ನ ನೀಡುತ್ತದೆ ಎನ್ನಲಾಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿದ ನಂತರವೇ ಧರಿಸಬೇಕು. ಕೊಳಕು ಕೈಗಳಿಂದ ರುದ್ರಾಕ್ಷಿಯನ್ನು ಮುಟ್ಟಬೇಡಿ. ಬೇರೆಯವರು ಧರಿಸಿದ ರುದ್ರಾಕ್ಷಿಯನ್ನು ಧರಿಸುವ ದೊಡ್ಡ ತಪ್ಪು ಮಾತ್ರ ಮಾಡಲೇಬೇಡಿ. ನೀವು ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬೇಡಿ. ರುದ್ರಾಕ್ಷ ಮಣಿಗಳನ್ನು ಯಾವಾಗಲೂ ಬೆಸ ಸಂಖ್ಯೆಯಲ್ಲಿ ಧರಿಸಬೇಕು. ಆದರೆ ಇದು 27 ಮಣಿಗಳಿಗಿಂತ ಕಡಿಮೆಯಿರಬಾರದು.
ದೇವಸ್ಥಾನಕ್ಕೆ ಹೋಗಿ ಬರುವಾಗ ಮಾಡಬೇಕಾದ ಪ್ರಮುಖ ಕೆಲಸ