ರಾಜ್ಯವಾಳುವವರಿಗೆ ಕೆಡುಕಾಗಲಿದ್ಯಾ, 4 ದಶಕದಿಂದ ಉರಿಯುತ್ತಿದ್ದ ಚಿಗಳ್ಳಿ ದೀಪ ನಂದಿಹೋಯ್ತು!

Published : Feb 07, 2025, 01:28 PM IST
ರಾಜ್ಯವಾಳುವವರಿಗೆ ಕೆಡುಕಾಗಲಿದ್ಯಾ, 4 ದಶಕದಿಂದ ಉರಿಯುತ್ತಿದ್ದ ಚಿಗಳ್ಳಿ ದೀಪ ನಂದಿಹೋಯ್ತು!

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದಲ್ಲಿ 45 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದ ದೀಪಗಳು ನಂದಿವೆ. ಅರ್ಚಕರ ಮರಣದ ನಂತರ ದೇವಾಲಯದ ಬಾಗಿಲು ತೆರೆದಾಗ ದೀಪಗಳು ಆರಿಹೋಗಿದ್ದು, ಊರಿಗೆ ಕೆಡಕಾಗುವ ಭಯದಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಉತ್ತರ ಕನ್ನಡ (ಫೆ.7): ಕಳೆದ 4 ದಶಕಗಳಿಂದ ಅಂದರೆ, 45  ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದ ದೇವಸ್ಥಾನದ ದೀಪಗಳು ನಂದಿ ಹೋಗಿದೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಚಿಗಳ್ಳಿಯಲ್ಲಿರುವ ದೀಪನಾಥೇಶ್ವರ ದೇವಾಲಯದ ದೀಪಗಳು 45 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದವು. 1979 ರಲ್ಲಿ ದೈವಜ್ಞ ಶಾರದಮ್ಮ ಎಂಬವರು ದೇವಸ್ಥಾನದಲ್ಲಿ ಹಚ್ಚಿದ್ದ ದೀಪಗಳು ಇವಾಗಿದ್ದವು. ಸತತ ನಾಲ್ಕು ದಶಕದಿಂದ ಎಣ್ಣೆ ಹಾಕದೆಯೇ ಮೂರು ದೀಪಗಳು ಉರಿಯುತ್ತಿದ್ದವು. ಈ ದೀಪ ನಂದಿ ಹೋದಲ್ಲಿ ರಾಜ್ಯವಾಳುವವರಿಗೆ ಕೆಡಕು ಎಂಬ ನಂಬಿಕೆ ಇಲ್ಲಿನ ಸ್ಥಳೀಯಲ್ಲಿದೆ. ಇದರ ಬೆನ್ನಲ್ಲಿಯೇ ರಾಜ್ಯಕ್ಕೆ ಏನಾದರೂ ಅಪಶಕುನ ಕಾದಿದ್ಯಾ ಎನ್ನುವ ಚರ್ಚೆಗಳು ಶುರುವಾಗಿದೆ.

ದೇವಸ್ಥಾನದಲ್ಲಿ ಪೂಜೆ ಮಾಡ್ತಿದ್ದ ಅರ್ಚಕ ವೆಂಕಟೇಶ್ ಎಂಬವರು 15 ದಿನಗಳ ಹಿಂದೆ ಮೃತರಾಗಿದ್ದರು. ಅರ್ಚಕ ಸಾವಿಗೀಡಾಗಿದ್ದ ಸೂತಕದ ಹಿನ್ನೆಲೆ ದೇವಸ್ಥಾನದ ಬಾಗಿಲನ್ನು ಸಮಿತಿ ಮುಚ್ಚಿತ್ತು. ಅರ್ಚಕ ವೆಂಕಟೇಶ್ ಅವರ ಶ್ರಾದ್ಧ ಕಾರ್ಯಗಳನ್ನು ಗೋಕರ್ಣ ಕ್ಷೇತ್ರದಲ್ಲಿ ಮಾಡಲಾಗಿತ್ತು. ಸೂತಕ ಕಳೆದ ನಂತರ ದೇವಸ್ಥಾನದ ಬಾಗಿಲು ತೆರೆದಾಗ ಮೂರು ದೀಪಗಳು ಆರಿ ಹೋಗಿದ್ದವು. ನಾಗರತ್ನ ಎಂಬವರು ದೇವಸ್ಥಾನದ ಬಾಗಿಲು ತೆರೆದು ನೋಡಿದಾಗ ದೀಪಗಳು ಆರಿ ಹೋಗಿರುವುದನ್ನು ಕಂಡಿದ್ದಾರೆ. ಬಳಿಕ ಎಷ್ಟು ಬಾರಿ ದೀಪ ಉರಿಸಲು ಪ್ರಯತ್ನಿಸಿದರೂ ದೀಪ ಉರಿದಿರಲಿಲ್ಲ. 

ಊರಿಗೆ ಕೆಡುಕಾಗುವ ಭಯದಲ್ಲಿ ಗ್ರಾಮಸ್ಥರು ದೇವಸ್ಥಾನದ ಬಾಗಿಲನ್ನೂ ಮುಚ್ಚಿಸಿದ್ದಾರೆ. ಸಾರ್ವಜನಿಕರ ವೀಕ್ಷಣೆಗೂ ನಿರ್ಬಂಧ ಹೇರಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಲಾಗಿದೆ. ಇನ್ನೂ ನಾಲ್ಕೈದು ದಿನ ಬಿಟ್ಟು ಗುರು-ಹಿರಿಯರ ಸಲಹೆ ಪಡೆದು ದೇವಾಲಯದ ಕದ ತೆರೆಯಲು ಸಮಿತಿ ಚಿಂತನೆ ಮಾಡಿದೆ.

ಸದ್ಯ ರಾಜೇಶ್ ಗುರೂಜಿ ಎಂಬವರಿಂದ ತುಪ್ಪದ ದೀಪ ಹಚ್ಚಿಡಲು ಸಲಹೆಯನ್ನು ಪಾಲಿಸಲಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪೇಜಾವರ ಸ್ವಾಮೀಜಿ, ದಲಾಯಿ- ಲಾಮಾ, ಆನಂದ ಗುರೂಜಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಆರಿಹೋಯ್ತು ಚಿಗಳ್ಳಿಯ ದೀಪನಾಥೇಶ್ವರ ದೇವಾಲಯದಲ್ಲಿ 4 ದಶಕದಿಂದ ನಿರಂತರವಾಗಿ ಉರಿಯುತ್ತಿದ್ದ ದೀಪ!

ಹೊನ್ನಾವರ ಕರ್ಕಿ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಅವರ ಭೇಟಿಗೆ ಸಮಿತಿ ನಿರ್ಧಾರ ಮಾಡಿದೆ. ಅಲ್ಲದೇ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಭೇಟಿ ಮಾಡಿ ಸಲಹೆ ಪಡೆಯಲು ನಿರ್ಧಾರ ಮಾಡಲಾಗಿದೆ.
1979ರಲ್ಲಿ ಕಲ್ಮೇಶ್ವರ ಮಠದ ಪ್ರವಚನದಲ್ಲಿ ನಿರತರಾಗಿದ್ದ ಶಾರದಾ ಬಾಯಿ ದೈವಜ್ಞ ಅವರು ಇಲ್ಲಿ ದೀಪ ಹಚ್ಚಿದ್ದರು. ಹಲವು ದಿನಗಳ ಕಾಲ ಎಣ್ಣೆ ಇಲ್ಲದೇ ದೀಪ ಉರಿದಾಗ ಪರೀಕ್ಷಾರ್ಥವಾಗಿ ಮತ್ತೆರಡು ದೀಪ ಹಚ್ಚಲಾಗಿತ್ತು. ಆವಾಗಲೂ ಮತ್ತೆರಡು ದೀಪಗಳು ಎಣ್ಣೆ ಇಲ್ಲದೇ ಉರಿದು ಪವಾಡ ನಡೆದಿತ್ತು. ಅಂದಿನಿಂದ ಈವರೆಗೆ ಕಲ್ಮೇಶ್ವರ ಮಠದ ಗುರುಗಳ ಆದೇಶದಂತೆ ದತ್ತಾತ್ರೇಯ ಸ್ವರೂಪವೆಂದು ದೀಪದ ಆರಾಧನೆ ಮಾಡಲಾಗಿತ್ತು. 45 ವರ್ಷಗಳ ಕಾಲ ಎಣ್ಣೆ ಇಲ್ಲದೆಯೇ ಮೂರು ದೀಪಗಳು ಉರಿಯುತ್ತಿದ್ದವು.

ಗೋ ಹಂತಕರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾಕ್ತೇವೆ: ಸಚಿವ ಮಂಕಾಳು ವೈದ್ಯ

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ