ಸಾಮಾನ್ಯವಾಗಿ ನಾವು ಪಾದರಕ್ಷೆಗಳನ್ನು ಅಶುಭವೆಂದೇ ಕಾಣುತ್ತೇವೆ. ಆದರೆ ನಿಜ ಹಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಅಂದಂದಿನ ಶಕುನಗಳು ಪಾದರಕ್ಷೆ ಅಥವಾ ಚಪ್ಪಲಿಯ ಮೂಲಕವೂ ನಿಮಗೆ ಬರುತ್ತವೆ. ಪಾದರಕ್ಷೆಯನ್ನು ಧರಿಸದೆ ಯಾರೂ ಓಡಾಡಲು ಸಾಧ್ಯವಿಲ್ಲ. ಆದರೆ ನಮ್ಮ ಪಾದಗಳನ್ನು ಕಾಪಾಡುವ ಚಪ್ಪಲಿಗಳು ಯಾವಾಗಲೂ ಮನೆಯ ಹೊರಗೇ ಇರುತ್ತವೆ. ತಮ್ಮ ಚಪ್ಪಲಿಗಳನ್ನು ದೇವಸ್ಥಾನದಲ್ಲಿ ಕಳೆದುಕೊಳ್ಳದವರೇ ಇಲ್ಲ ಎನ್ನಬಹುದು. ಹಾಗಿದ್ದರೆ ಇವೆಲ್ಲಾ ನಮ್ಮ ಬದುಕಿನಲ್ಲಿ ಏನನ್ನು ಸೂಚಿಸುತ್ತವೆ? ಚಪ್ಪಲಿಗಳು ಏನು ಹೇಳುತ್ತವೆ ಎಂಬುದನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಇಲ್ಲಿದೆ ನೋಡಿ.
- ತುಂಡಾದ, ಒಂದು ಬದಿ ಹರಿದ, ಬಾರ್ ಕಡಿದ ಪಾದರಕ್ಷೆ ಧರಿಸಿದರೆ ಶನಿ. ಒಂದು ವೇಳೆ ನಿಮಗೆ ಅದು ಶನಿಯ ಕಾಟದ ಕಾಲ ಅಲ್ಲದೇ ಹೋದರೂ, ತುಂಡಾದ ಪಾದರಕ್ಷೆಯನ್ನು ಧರಿಸಿದರೆ ಶನಿಯ ಒಂದು ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಿದೆ ಅಥವಾ ಬೀಳಲಿದೆ ಎಂದರ್ಥ.
- ನೀವು ದೇವಸ್ಥಾನದಲ್ಲಿ ಹೊರಗಿಟ್ಟ ನಿಮ್ಮ ಚಪ್ಪಲಿಯನ್ನು ಕಳೆದುಕೊಂಡರೆ, ಅದರಿಂದ ದುಃಖಿತರಾಗಬೇಡಿ. ನಿಮ್ಮ ಶನಿಕಾಟ ಆ ಮೂಲಕ ಇನ್ನೊಬ್ಬರ ಹೆಗಲೇರಿತು ಎಂದು ತಿಳಿಯಿರಿ. ತಿಳಿದೋ ತಿಳಿಯದೆಯೋ ನೀವು ಆಹ್ವಾನಿಸಿಕೊಂಡ ಕ್ಷುದ್ರಶಕ್ತಿಗಳು ಆ ಪಾದರಕ್ಷೆಗಳ ಮೂಲಕ ಇನ್ನೊಬ್ಬರನ್ನು ಸೇರಿಕೊಂಡಿರುತ್ತವೆ. ಇದು ನಿಮ್ಮ ಒಳಿತಿಗಾಗಿಯೇ ಆಗಿದೆ ಎಂದು ತಿಳಿಯಿರಿ.
- ಒದ್ದೆಯಾದ ಪಾದರಕ್ಷೆಗಳನ್ನು ಧರಿಸಬೇಡಿ. ಇದರಿಂದ ಕಾಲಿನಲ್ಲಿ ಫಂಗಸ್ ಉಂಟಾಗಿ ಕಾಲಿನ ಆರೋಗ್ಯವೂ ಹಾಳಾಗುತ್ತದೆ. ಜೊತೆಗೆ, ಋಣಾತ್ಮಕ ಪರಿಣಾಮವೂ ನಿಮ್ಮ ಮೇಲಾಗುತ್ತದೆ.
- ನೀವು ಯಾವುದಾದರೂ ಕಾರ್ಯಕ್ಕೆ ಹೊರಟಿದ್ದು, ರಸ್ತೆಯ ಮಧ್ಯದಲ್ಲಿ ನಿಮ್ಮ ಚಪ್ಪಲಿ ಕಡಿದುಹೋದರೆ, ನೀವು ಹೊರಟ ಕಾರ್ಯ ಆಗುವುದಿಲ್ಲ ಎಂದೇ ಅರ್ಥ. ಸಮಯ ವ್ಯರ್ಥ ಮಾಡಬೇಡಿ, ಬೇರೆ ದಿನ ಹೊರಡಿ ಅಥವಾ ಬೇರೆ ಕೆಲಸ ಮಾಡಿಕೊಳ್ಳಿ.
- ಶನಿವಾರ ನಿಮ್ಮ ಪಾದರಕ್ಷೆ ಅಥವಾ ಶೂ ಕಳೆದುಹೋದರೆ ನಿಮಗೆ ಶೀಘ್ರವೇ ಶನಿಯ ಕೆಟ್ಟ ದೃಷ್ಟಿ ಕಳೆದು ಒಳಿತು ಆಗಮಿಸಲಿದೆ ಎಂದರ್ಥ.
- ನೀವು ಎಲ್ಲಿಗಾದರೂ ಹೊರಡುವ ಮುನ್ನ ನಿಮ್ಮ ಮನೆಯ ನಾಯಿ ಅಥವಾ ಬೇರೆ ನಾಯಿ, ನಿಮ್ಮ ಚಪ್ಪಲಿಯನ್ನು ಕಚ್ಚಿಕೊಂಡು ಹೋಗಿ ಬೇರೆ ಕಡೆ ಇಟ್ಟರೆ, ನಿಮ್ಮ ಸೊತ್ತು ಕಳವಾಗಲಿದೆ ಎಂದರ್ಥ. ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಿ.
- ನೀವು ಎಲ್ಲಿಗಾದರೂ ಹೊರಟಾಗ ಚಪ್ಪಲಿಯಿಲ್ಲದ ವ್ಯಕ್ತಿ ನಡೆದುಬರುವುದು ಕಂಡರೆ, ಹರಿದ ಚಪ್ಪಲಿ ಧರಿಸಿದ ವ್ಯಕ್ತಿ ಕುಂಟುತ್ತಾ ಬರುವುದು ಕಂಡರೆ, ನಿಮಗೆ ಆ ದಿನ ದರಿದ್ರ ವಕ್ಕರಿಸಿತು ಎಂದೇ ಅರ್ಥ. ಹೊರಟ ಕೆಲಸವೂ ಆಗುವುದಿಲ್ಲ, ಕೈಯಲ್ಲಿದ್ದ ಹಣವನ್ನೂ ಕಳೆದುಕೊಳ್ಳುತ್ತೀರಿ.
- ಮನೆಯೆದುರು ಅಥವಾ ಹೊಲದೆದುರು ಅಥವಾ ಅಂಗಡಿಯೆದುರು ಮಾಡಿನ ಮೇಲೆ ದೃಷ್ಟಿಯಾಗದಿರಲಿ ಎಂದು ಕೆಲವರು ಚಪ್ಪಲಿ- ಲಿಂಬೆ- ಮೆಣಸು- ಕೆಂಪುದಾರ ಕಟ್ಟಿರುತ್ತಾರೆ. ವಾಹನಗಳ ಹಿಂದೆ ಕೂಡ ಕಟ್ಟುವುದುಂಟು. ಇದನ್ನು ನೋಡಿದರೆ ಆ ದಿನ ನಿಮಗೆ ಲಾಭ ಖಂಡಿತಾ ಇದೆ.
- ಮನೆಯೊಳಗೆ ಚಪ್ಪಲಿ ಧರಿಸಿಕೊಂಡು ಓಡಾಡುವುದರಿಂದ ದೋಷವಿಲ್ಲ. ಆದರೆ ಆ ಚಪ್ಪಲಿಯಿಂದ ಹೊಸ್ತಿಲಿನಿಂದ ಆಚೆ ಯಾವುದೇ ಕಾರಣಕ್ಕೂ ಧರಿಸಕೂಡದು. ಹೊಸ್ತಿಲಾಚೆಗೆ ಧರಿಸಿದ ಚಪ್ಪಲಿಯನ್ನೇ ಮನೆಯೊಳಗೆ ಮೆಟ್ಟಿದರೆ ದರಿದ್ರ ಆಗಮಿಸುತ್ತದೆ.
ಪದೇ ಪದೇ ನಿಮ್ಮನ್ನು ಕಾಗೆ ಅಟ್ಟಾಡಿಸಿ ಕುಕ್ಕುತ್ತಿದ್ದರೆ ಅದು ದೊಡ್ಡ ಸೂಚನೆ; ಎಚ್ಚೆತ್ತುಕೊಳ್ಳಿ
- ಮನೆಯಿಂದಾಚೆಗೆ ಹೊರಡುವಾಗ ಚಪ್ಪಲಿಗಳು ಕಂಡರೆ ದೋಷವಿಲ್ಲ. ಆದರೆ ಒಂಟಿ ಚಪ್ಪಲಿ ಕಂಡರೆ ಅಶುಭ. ನಿಮ್ಮ ಚಪ್ಪಲಿ ಒಂದೇ ಇದ್ದು, ಇನ್ನೊಂದನ್ನು ಹುಡುಕುವಂತೆ ಆದರೂ ಅದೂ ಅಶುಭ.
- ಮನೆಯಲ್ಲಿ ಚಪ್ಪಲಿ ಸ್ಟಾಂಡ್ ತುಳಸಿ ಕಟ್ಟೆಗಿಂತ ಎತ್ತರವಾಗಿ ಇರಕೂಡದು. ಈಶಾನ್ಯ ದಿಕ್ಕಿನಲ್ಲಿ ಚಪ್ಪಲಿ ಸ್ಟಾಂಡ್ ಇರಬಾರದು. ಹೊಸ್ತಿಲಿನ ಮುಂದೆ ಸದಾ ಚಪ್ಪಲಿಗಳನ್ನು ಹರಡಿದಂತೆ ಇಡಬಾರದು.
- ಚಪ್ಪಲಿ ಸ್ಟಾಂಡ್‌ನಲ್ಲಿ ಪುಸ್ತಕ, ಪತ್ರಿಕೆ, ಊಟದ ತಟ್ಟೆ ಬಟ್ಟಲು, ಕಾರಿನ ಕೀ ಇತ್ಯಾದಿಗಳನ್ನು ಇಡಬೇಡಿ.
ಶ್ರಾವಣ ಮಾಸದಲ್ಲಿ ಮಾಂಸ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ? ಇಲ್ಲಿದೆ ವೈಜ್ಞಾನಿಕ ಕಾರಣ!