ಭಾನುವಾರ ಜನಿಸಿದವರು ಸುಖಿಗಳು. ಜೀವನಪೂರ್ತಿ ಸುಖಿಗಳಾಗಿ, ರಸಿಕರಾಗಿ ಇರಲು ಇವರು ಪ್ರಯತ್ನ ಪಡಬೇಕಾಗುತ್ತದೆ.
ಭಾನುವಾರ ಜನಿಸಿದವರು ಆರಾಮಪ್ರಿಯರಾದರೂ ಚೆನ್ನಾಗಿ ದುಡಿಯುವವರೂ ಹೌದು. ಆದರೆ ನೀವು ಅದೃಷ್ಟವಂತರಾಗಿರುವುದರಿಂದ ಅತ್ಯಂತ ಸುಖದಿಂದ ನಿಮ್ಮ ಜೀವನವನ್ನು ನಿಭಾಯಿಸುತ್ತೀರಿ. ನೀವು ಅತ್ಯಂತ ಉತ್ಸಾಹ ಹೊಂದಿದ ವ್ಯಕ್ತಿಗಳಾಗಿರುತ್ತೀರಿ. ನೀವು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆ ಎಂದೇ ಹೇಳಬಹುದು. ನಿಮ್ಮ ಮನಸ್ಸು ಯಾವಾಗಲೂ ಸರಳವಾಗಿದ್ದು, ನ್ಯಾಯಶೀಲ ಹಾಗೂ ಧರ್ಮ ಮಾರ್ಗದಲ್ಲಿ ನಿಮ್ಮನ್ನು ನಡೆಯುವಂತೆ ಪ್ರೇರೇಪಿಸುತ್ತದೆ. ನೀವು ಮನಸ್ಸಿನಲ್ಲಿ ಯಾವ ಕಳಂಕವೂ ಇಲ್ಲದ ನಿಷ್ಕಳಂಕತೆಯಿಂದ ಕೂಡಿದ ವ್ಯಕ್ತಿಗಳಾಗಿರುತ್ತೀರಿ.
ನೀವು ಶಾಂತ ಸ್ವಭಾವದವರು ಹಾಗೂ ಕಳಂಕರಹಿತರು. ನಿಮಗೆ ಇಂದು ಬೇಕಾಗಿದ್ದದ್ದು ನಾಳೆ ಬೇಡವಾಗಬಹುದು. ಮಕ್ಕಳೆಂದರೆ ನಿಮಗೆ ತುಂಬಾ ಇಷ್ಟ. ಜೀವನದಲ್ಲಿ ಜನಪ್ರಿಯತೆ ಹಾಗೂ ಹಣ ಗಳಿಸುವ ಹಂಬಲ ತುಂಬಿದ ವ್ಯಕ್ತಿಗಳಾಗಿರುತ್ತಿರಿ. ನೀವು ದಾನ ಧರ್ಮ ಮಾಡುವ ಮನಸ್ಸುಳ್ಳವರಾಗಿರುತ್ತೀರಿ.
ನೀವು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತೀರಿ. ನೀವು ಸೋಮಾರಿಗಳಂತೆ ಕೈ ಕಟ್ಟಿ ಕೂರುವವರಲ್ಲ. ಹಿಡಿದ ಕೆಲವನ್ನು ಮುಗಿಸಿಯೇ ತೀರುತ್ತೇನೆಂಬ ಹಂಬಲ ನಿಮ್ಮಲ್ಲಿರುತ್ತದೆ. ಯಾವ ಕೆಲಸವೇ ಆಗಲಿ, ಕೆಟ್ಟದ್ದಾಗಲಿ ಅಥವಾ ಒಳ್ಳೆಯದೇ ಆಗಲಿ ಒಮ್ಮೆ ನಿಮ್ಮ ಮನಸ್ಸಿನಲ್ಲಿ ಅದು ಬಂತೆಂದರೆ ನೀವು ಅದನ್ನು ಮುಗಿಸದೆ ಬಿಡುವವರಲ್ಲ. ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೀವು ನಿಸ್ಸೀಮರು.
ಆಟ ನೋಟ ಸಿನಿಮಾ ನಾಟಕ ಸಂಗೀತ ಮನರಂಜನೆ ಚರ್ಚೆ ಹರಟೆ ಇವುಗಳೆಲ್ಲ ನಿಮ್ಮ ಗುಣಗಳಾಗಿರುತ್ತವೆ. ನೀವು ಎಲ್ಲಿಗೇ ಹೋದರೂ ಯಾವ ಕೆಲಸದಲ್ಲಾದರೂ ಸರಿಯೇ ಅಲ್ಲಿ ನಿಮ್ಮ ಪ್ರೌಡಿಮೆ ಇರುತ್ತದೆ. ನೀವು ನೈಸರ್ಗಿಕವಾಗಿ ರಸಿಕರೂ ಸುಖಭೋಗಿಗಳು ಆಗಿರುವುದರಿಂದ, ನಿಮ್ಮ ದೇಹದ ಸುಸ್ಥಿತಿಯನ್ನು ಕಾಯ್ದುಕೊಳ್ಳುವುದು ಬಹುಶಃ ಕಷ್ಟವಾಗಬಹುದು. ಅನಾರೋಗ್ಯ ನಿಮ್ಮನ್ನು ಅಷ್ಟೇನೂ ಬಾಧಿಸದು.
ನಿಮ್ಮ ಬುದ್ಧಿ ಬಹಳ ಸ್ಥಿರವಾಗಿರುತ್ತದೆ. ನೀವು ತುಂಬಾ ಸಂಕೋಚದಿಂದಿರುವ ವ್ಯಕ್ತಿಗಳಾಗಿರುತ್ತೀರಿ. ಆದರಿಂದ ನೀವು ಸಂಕಷ್ಟಗಳಿಗೆ ಸಿಲುಕುತ್ತೀರಿ. ನೀವು ಯಾವಾಗಲೂ ಗಂಭೀರ ಮುಖವನ್ನು ಹಾಗೂ ಗಂಭೀರ ಸ್ವಭಾವವನ್ನು ಹೊಂದಿರುತ್ತೀರಿ. ಇತರರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿರುತ್ತದೆ. ನಿಮಗೆ ಅತಿ ಆಸೆ ಎಂಬುದೇ ಇರುವುದಿಲ್ಲ. ನೀವು ಭೋಜನಪ್ರಿಯರಾಗಿರುತ್ತೀರಿ. ಬಂಡವಾಳ ಹೂಡಿಕೆಯ ಉದ್ಯಮ ನಿಮಗೆ ಬಹು ಇಷ್ಟವಾದ ಕೆಲಸವಾಗಿರುತ್ತದೆ.
ನೀವು ಕಲಾವಿದರು ಹಾಗೂ ಕೀರ್ತಿಶಾಲಿಗಳು ಆಗಿರಬಹುದು. ಸ್ಥಿರ ಮನಸ್ಸುಳ್ಳವರೂ ಆಗಿರುತ್ತೀರಿ. ಪ್ರತಿಯೊಂದು ಪ್ರಾಣಿಯನ್ನು ನೀವು ಪ್ರೀತಿಯಿಂದ ಕಾಣಿತ್ತಿರಿ. ನಿಮ್ಮ ಸ್ನೇಹಿತರು, ಗಂಡ, ಮಡದಿ, ಮಕ್ಕಳು ನಿಮ್ಮನ್ನು ಬಹಳ ಪ್ರೀತಿಯಿಂದ ಕಂಡು ಆದರಿಸುತ್ತಾರೆ. ಎಲ್ಲರ ಹೃದಯದ ಅಂತರಾಳವನ್ನು ಬಹು ಬೇಗ ಅರ್ಥ ಮಾಡಿಕೊಳ್ಳಬಲ್ಲ ವಿಶೇಷ ಗುಣ ನಿಮ್ಮಲ್ಲಿರುತ್ತದೆ. ನಿಮ್ಮ ಕರ್ತವ್ಯ ತತ್ಪರತೆ ತುಂಬಾ ಶ್ಲಾಘನೀಯವಾದದ್ದು. ನಿಮ್ಮ ಸಿಟ್ಟು ಅರೆಗಳಿಗೆಯದ್ದು. ಎಷ್ಟೇ ಕೆಡುಕು ಮಾಡಿದವರನ್ನು ಬಹುಬೇಗ ಕ್ಷಮಿಸಿಬಿಡುವಂತಹ ವ್ಯಕ್ತಿತ್ವ ನಿಮ್ಮದು. ಮತ್ತು ನಿಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳದ ಭಾವನಾಜೀವಿಗಳಾಗಿರುತ್ತೀರಿ.
ಒಪ್ಪಿಕೊಂಡ ಮಾತನ್ನು ಚಾಚೂ ತಪ್ಪದೆ ನಿರ್ವಹಿಸುವ ಗುಣ ನಿಮ್ಮಲ್ಲಿರುತ್ತದೆ. ನಿಮ್ಮ ಕಾರ್ಯವನ್ನು ನೀವು ತಪ್ಪದೇ ಮಾಡುತ್ತೀರಾದರೂ ಪರರ ಕಾರ್ಯಗಳನ್ನು ನಿರ್ಲಕ್ಷಿಸದೆ ಇರಬಹುದು. ನಿಮ್ಮ ಶಕ್ತಿ ಮೀರಿದ ಕೆಲಸಕ್ಕೆ ನೀವು ಕೈ ಹಾಕುವುದಿಲ್ಲ. ಆದರೆ ಒಪ್ಪಿಗೆಯಾಗಿ ಕೈ ಇಟ್ಟ ಕೆಲಸವನ್ನು ಪೂರ್ತಿ ಮಾಡದೆ ವಿಶ್ರಮಿಸುವ ವ್ಯಕ್ತಿತ್ವ ನಿಮ್ಮದಲ್ಲ. ನೀವು ಸಹೃದಯ ನಡೆ ನುಡಿಗಳಿಂದ ಸರಳರು. ಮತ್ತೆ ನಿಮ್ಮ ಸಮೀಪದವರೂ ಹಾಗೆಯೇ ಇರಬೇಕೆಂದು ನೀವು ಆಶಿಸುತ್ತೀರಿ.
ವೃತ್ತಿ ಜೀವನದಲ್ಲಿ ಬಹಳ ಬೇಗನೆ ಮೇಲೇರುತ್ತೀರಿ. ಉನ್ನತವಾದ ನಡೆನುಡಿಗಳಿಂದ ಅದನ್ನು ಕಾಯ್ದುಕೊಳ್ಳಿ. ಹಾಗೆಯೇ ಕುಟುಂಬವತ್ಸಲರು, ಎರಡನೇ ಪ್ರೇಮ ಅಥವಾ ವಿವಾಹೇತರ ಸಂಬಂಧಕ್ಕೆ ಕೈಹಾಕಬೇಡಿ, ಹಾಕಿದರೆ ಕೆಡುತ್ತೀರಿ.
ನೀವು ಗಣಪತಿಯ ಆರಾಧನೆಯಿಂದ ಇನ್ನೂ ಹೆಚ್ಚಿನ ಸುಖವನ್ನು ಪಡೆಯುತ್ತೀರಿ. ವರ್ಷಕ್ಕೊಮ್ಮೆ ಗಣಹೋಮ ಮಾಡಿಸುವುದು ಹಿತ. ಹಾಗೇ ಗಣಪತಿಯ ತಂದೆಯಾದ ಶಿವನನ್ನು ಆರಾಧಿಸಿ. ಶಿವಪಂಚಾಕ್ಷರಿಯನ್ನು ನಿತ್ಯವೂ ಪಠಿಸುವುದರಿಂದ ನಿಮಗೆ ಶ್ರೇಯಸ್ಸಾಗುತ್ತದೆ. ಶಿವನ ಜೊತೆಗೆ ದುರ್ಗೆಯನ್ನು ಆರಾಧಿಸುವುದೂ ಶ್ರೇಯಸ್ಕರವಾದುದು. ಶಿವನ ದೇವಾಲಯಗಳಿಗೆ ತಪ್ಪದೆ ಭೇಟಿ ಕೊಡಿ. ಹಣ್ಣುಕಾಯಿ ಮಾಡಿಸುವುದು ನಿಮ್ಮ ಪೂರ್ಣಫಲವನ್ನು ನಿಮಗೆ ಕೊಡುವಂತಹ ಸೇವೆ.