ನಕಾರಾತ್ಮಕ ಶಕ್ತಿಯನ್ನು ಮೊದಲೇ ಗ್ರಹಿಸೋ ರಾಶಿಗಳಿವು, ನಿಮಗಿದ್ಯಾ ಈ ಪವರ್?

By Suvarna News  |  First Published May 19, 2021, 6:09 PM IST

ನಕಾರಾತ್ಮಕ ಶಕ್ತಿಯನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಆದರೆ, ಕೆಲವು ರಾಶಿಯವರಿಗೆ ಇದು ಹುಟ್ಟಿನಿಂದಲೇ ಬಂದಿರುವ ಶಕ್ತಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಸುಪ್ತ ಮನಸ್ಸು ಜಾಗೃತ ಆಗಿರುತ್ತದೆ. ಅವರ ಸುತ್ತಮುತ್ತ ನಡೆಯಲಿರುವ ನಕಾರಾತ್ಮಕ ಶಕ್ತಿಯನ್ನು ಮೊದಲೇ ಪತ್ತೆ ಹಚ್ಚಿಬಿಡುತ್ತಾರೆ. ಅಂತಹ ಒಂದು ಅದ್ಭುತ ಶಕ್ತಿ ಈ ರಾಶಿಯವರಿಗಿದ್ದು, ಯಾವುದು ಈ ರಾಶಿಗಳು ಎಂಬುದನ್ನು ನೋಡೋಣ...


ನಕಾರಾತ್ಮಕ ಶಕ್ತಿ ಎಂದರೆ ಅದೊಂದು ರೀತಿಯಲ್ಲಿ ಹಿನ್ನಡೆ ಎಂದೇ ಹೇಳಬಹುದು. ಎಲ್ಲರೂ ಸಕಾರಾತ್ಮಕ ಚಿಂತನೆ, ಶಕ್ತಿಯನ್ನು ಪಡೆಯಲು ಯೋಚಿಸುತ್ತಾರೆ. ಅಲ್ಲದೆ, ಮನೆ-ಮನದಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದ್ದರೆ ನೆಮ್ಮದಿ – ಸಮೃದ್ಧ ಜೀವನವನ್ನು ಕಾಣಬಹುದಾಗಿದೆ. 

ನಕಾರಾತ್ಮಕ ಶಕ್ತಿಯು ಹಲವು ಕಾರಣಗಳಿಂದ ಬರುತ್ತದೆ. ಒಂದು ನಮ್ಮ ಆಲೋಚನೆಗಳು, ಇಲ್ಲವೇ ನಮ್ಮ ಮನೆಯಲ್ಲಿರುವ ವಸ್ತುಗಳು, ನಮ್ಮ ಸ್ವಚ್ಛತೆ, ಶ್ರದ್ಧೆ, ಭಕ್ತಿ, ದುಷ್ಟ ಕ್ರಿಯೆಗಳು ಹೀಗೆ ಅನೇಕ ವಿಚಾರಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಸುಪ್ತ ಮನವು ಜಾಗೃತವಾಗಿರುತ್ತದೆ. ಅಂದರೆ, ತಮ್ಮ ಸುತ್ತಮುತ್ತ ಯಾವುದೇ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದ್ದರೆ, ಸಮಸ್ಯೆಗಳಾಗುತ್ತಿದೆ ಎಂಬುದು ಮೊದಲೇ ಗೊತ್ತಾಗಿಬಿಡುತ್ತದೆ. 

ಅಂದರೆ, ಇವರ ಮನಸ್ಸಿಗೆ ಆ ಸಂದರ್ಭದಲ್ಲಿ ಯಾವುದಾದರೂ ಒಂದು ಸೂಚನೆಗಳ ಮೂಲಕ ಇದು ಹೀಗೆಯೇ, ನಕಾರಾತ್ಮಕ ಘಟನೆಯೊಂದು ಸಂಭವಿಸಬಹುದು ಎಂಬ ಮುನ್ಸೂಚನೆ ಕೆಲವು ರಾಶಿಯವರಿಗೆ ಸಿಕ್ಕಿಬಿಡುತ್ತದೆ. ಕರ್ಕಾಟಕ, ಮೀನ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಇಂತಹ ವಿಶಿಷ್ಟ ಗುಣಗಳಿವೆ. ಹೀಗಾಗಿ ಈ ರಾಶಿಯವರಿಗೆ ಯಾವುದೇ ನಕಾರಾತ್ಮಕ ಶಕ್ತಿಗಳಿದ್ದರೂ ಬಹಳ ಮುಂಚಿತವಾಗಿಯೇ ತಿಳಿದುಬಿಡುವ ಶಕ್ತಿ ಇದೆ. ಇದೊಂದು ರೀತಿಯಲ್ಲಿ ವರದಾನ ಎಂದೇ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇದನ್ನು ಓದಿ: ಶನಿವಾರ ಈ ವಸ್ತು ಖರೀದಿಸಿದರೆ ಶನಿ ದೇವರಿಗೆ ಸಿಟ್ಟು ಬರುತ್ತೆ..! 

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ನಕಾರಾತ್ಮಕ ಶಕ್ತಿಯನ್ನು ಮೊದಲೇ ಅರಿಯುವ ಶಕ್ತಿ ಇದೆ. ತಮ್ಮ ಸುತ್ತಮುತ್ತಲು ನಡೆಯುವ ಕೆಲವು ಅವಗುಣಗಳ ಬಗ್ಗೆ ಮೊದಲೇ ಸುಳಿವನ್ನು ಹಿಡಿದುಬಿಡುತ್ತಾರೆ. ಈ ರಾಶಿಯವರಿಗೆ ಇಂಥದ್ದೊಂದು ವಿಶಿಷ್ಟ ಗುಣವಿದೆ ಎಂಬುದು ಎದುರಿನಲ್ಲಿರುವ ವ್ಯಕ್ತಿಗೆ ತಿಳಿಯುವುದೇ ಇಲ್ಲ. ಇದರಿಂದ ಕೆಲವೊಮ್ಮೆ ಎದುರಿನ ವ್ಯಕ್ತಿಗಳು ನಕಾರಾತ್ಮಕವಾಗಿ ಏನನ್ನಾದರೂ ಮಾಡಲು ಹೋದರೆ ಇವರ ಸುಪ್ತ ಮನಸ್ಸಿಗೆ ಆ ಸುಳಿವು ಮುಂಚಿತವಾಗಿಯೇ ಸಿಕ್ಕಿಬಿಟ್ಟುರುತ್ತದೆ. 

Tap to resize

Latest Videos


ಮೀನ ರಾಶಿ
ಮೀನ ರಾಶಿಯವರು ಬಹಳ ಅರ್ಥಗರ್ಭಿತರಾಗಿ ಇರುತ್ತಾರೆ. ಅವರ ಪ್ರತಿ ವಿಚಾರದಲ್ಲಿಯೂ ಉತ್ತಮ ಚಿಂತನೆ ಇರುತ್ತದೆ. ಬೇರೆಯವರಿಗೆ ಪ್ರೇರಣೆ ಕೊಡುವ ಇವರು, ಸದಾ ಸಕಾರಾತ್ಮಕವಾಗಿಯೇ ಚಿಂತಿಸುತ್ತಿರುತ್ತಾರೆ. ಇವರಿಗೆ ನಕಾರಾತ್ಮಕ ಅಂಶಗಳು ಎಂದರೆ ಆಗದು. ಅಲ್ಲದೆ, ಇಂಥ ವಿಚಾರಗಳನ್ನು ಮೊದಲೇ ಗ್ರಹಿಸಿಬಿಡುವ ತಾಕತ್ತನ್ನು ಹೊಂದಿರುತ್ತಾರೆ. ಆಳವಾಗಿ ವಿಚಾರ ಮಾಡುವ ಇವರು ಯಾವುದೇ ವಿಷಯವನ್ನು ಅರ್ಧಕ್ಕೆ ಬಿಟ್ಟು ಗೊತ್ತಿರುವುದಿಲ್ಲ. ಯಾವುದೇ ಸಮಸ್ಯೆಗಳ ಬಗ್ಗೆ ಮುಂಚಿತವಾಗಿ ಗಮನಕ್ಕೆ ಬಂದಿತೆಂದರೆ ಸಾಕು ಇವರು ಅವುಗಳ ಪೂರ್ವಾಪರಗಳನ್ನೆಲ್ಲ ತಡಕಾಡಿ ಬಿಡುತ್ತಾರೆ. ಆ ಮೂಲಕ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿಬಿಡುತ್ತಾರೆ. ಹೀಗಾಗಿ ಮೀನ ರಾಶಿಯವರನ್ನು ಯಾವುದೇ ಕಾರಣಕ್ಕೂ ಕೈಲಾಗದವರು ಎಂದು ಭಾವಿಸಿದರೆ ತಪ್ಪಾಗಲಿದೆ. 

ಇದನ್ನು ಓದಿ: ಈ ರಾಶಿ ನಿಮ್ಮದಾಗಿದ್ದರೆ ಸದಾ ಇರುತ್ತೆ ಸದಾಶಿವನ ಕೃಪೆ..! 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಒಳಮನಸ್ಸು ಸದಾ ಜಾಗೃತವಾಗಿರುತ್ತದೆ. ಇವರ ಒಳಮನಸ್ಸು ಹೇಳುವುದು ಬಹಳ ನಿಖರತೆಯನ್ನು ಹೊಂದಿರುವುದಲ್ಲದೆ, ಅದು ನಕಾರಾತ್ಮಕ ಶಕ್ತಿಯನ್ನು ಅಷ್ಟೇ ಬೇಗ ಕಂಡುಹಿಡಿದುಬಿಡುತ್ತದೆ. ಎದುರಿನಲ್ಲಿರುವ ಯಾರೇ ಆಗಲಿ, ಅವರ ಸುಳ್ಳನ್ನು ಬಹುಬೇಗ ಪತ್ತೆ ಹಚ್ಚುವ ಶಕ್ತಿ ಇವರ ಒಳ ಮನಸ್ಸಿಗೆ ಇರುತ್ತದೆ. ಇವರಿಗೆ ಏನಾದರೂ ಸಮಸ್ಯೆಯಾಗಲಿದೆ, ಕೆಟ್ಟದ್ದಾಗಲಿದೆ ಎಂದು ಬಹಳ ಮುಂಚೆಯೇ ಸೂಚನೆ ಸಿಗುವುದರಿಂದ ತಮ್ಮನ್ನು ಹಾಗೂ ತಮ್ಮವರನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.

ಇದನ್ನು ಓದಿ: ನಿದ್ರಿಸುವ ದಿಕ್ಕು ಸರಿ ಇದ್ದರೆ, ಹಣ ಹರಿವಿನ ದಿಕ್ಕನ್ನು ಬೇಕಾದರೂ ಬದಲಾಯಿಸಬಹುದು! 

ಮಕರ ರಾಶಿ
ಮಕರ ರಾಶಿಯವರನ್ನು ಯಾರಾದರೂ ಮೂರ್ಖರನ್ನಾಗಿ ಮಾಡಲು ಪ್ರಯತ್ನ ಪಟ್ಟರೆ, ಅವರೇ ಮೊದಲು ಮೂರ್ಖರಾಗಿಬಿಡುತ್ತಾರೆ. ಅಂದರೆ, ಅದನ್ನು ಮಕರ ರಾಶಿಯವರು ಅಷ್ಟೇ ನಾಜೂಕಾಗಿ ಪತ್ತೆ ಹಚ್ಚಿಬಿಡುತ್ತಾರೆ. ಹೀಗಾಗಿ ಈ ರಾಶಿಯವರಿಗೆ ಮೋಸ ಆಗುವುದಿಲ್ಲ. ಸಕಾರಾತ್ಮಕ ಚಿಂತನೆ ಇವರನ್ನು ಕಾಪಾಡಲಿದೆ.

click me!