ಮಂಗಳವಾರ ಜನಿಸಿದವರು ಛಲಬಿಡದ ಹೋರಾಟಗಾರರು!

By Suvarna News  |  First Published May 18, 2021, 4:24 PM IST

ಮಂಗಳವಾರ ಹುಟ್ಟಿದವರು ಸ್ವಭಾವ, ಗುಣಲಕ್ಷಣಗಳು ಹೇಗಿರುತ್ತವೆ? ಅವರು ಬದುಕಿನಲ್ಲಿ ಹೇಗಿರ್ತಾರೆ? 
 


ಮಂಗಳ ಗ್ರಹ ಅಧಿಪತಿ
ಮಂಗಳ ಗ್ರಹವೇ ಮಂಗಳವಾರದ ಅಧಿಪತಿ. ಮಂಗಳ ಗ್ರಹದ ಗುಣಲಕ್ಷಣಗಳನ್ನು ಗಮನಿಸಿದರೆ ಈ ದಿನದಂದು ಹುಟ್ಟಿದವರ ಸ್ವಭಾವಗಳನ್ನೂ ಅರ್ಥ ಮಾಡಿಕೊಳ್ಳಬಹುದು. ಆದರೂ ಮಂಗಳವಾರ ಹುಟ್ಟಿದವರ ವ್ಯಕ್ತಿತ್ವ ಅರಿತುಕೊಳ್ಳುವುದು ಮತ್ತು ಅವರ ನಡವಳಿಕೆಯನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮಂಗಳ ಗ್ರಹ ಆ ಮಟ್ಟಿಗೆ ನಿಗೂಢ. ಅದನ್ನ ಕೆಂಪು ಗ್ರಹ ಎಂದೇ ಕರೆಯಲಾಗುತ್ತದೆ. ಇಲ್ಲಿ ಸದಾ ಧೂಳಿನ ಸುಂಟರಗಾಳಿಗಳು ಓಡಾಡುತ್ತಿರುತ್ತವೆ. ಮಂಗಳವಾರದಂದು ಹುಟ್ಟಿದವರು ಕೂಡ ಹೋರಾಡುವ ಸ್ವಭಾವ ಹೊಂದಿದವರು. ಎಲ್ಲಾ ಕಷ್ಟಗಳನ್ನು ಸಂಕಷ್ಟಗಳನ್ನು ಹೋರಾಡಿ ಜಯಿಸುವ ಗುಣ ಈ ದಿನ ಹುಟ್ಟಿದವರದ್ದಾಗಿರುತ್ತದೆ. ಅವರ ದಾರಿಯಲ್ಲಿ ಬರುವ ಯಾವುದೇ ಸಂಕಷ್ಟಗಳು ಅವರನ್ನು ಹಿಮ್ಮೆಟ್ಟಿಸುವುದಿಲ್ಲ ಮತ್ತು ಅವರನ್ನು ಪ್ರೇರೇಪಣೆಗೊಳಿಸುತ್ತದೆ. ಅವರ ಆಲೋಚನೆಗಳನ್ನು ಉದ್ದೀಪನಗೊಳಿಸುವ ಕೆಲಸಗಳನ್ನು ಮಾಡುತ್ತಾರೆ. ಹೋರಾಡಲು ಆಯುಧಗಳನ್ನು ಹರಿತಗೊಳ್ಳಿಸಿಕೊಳ್ಳುವುದರಲ್ಲಿ ಅವರು ಬ್ಯುಸಿಯಾಗಿರುತ್ತಾರೆ. 



ಕುಜನ ನೋಟ
ಮಂಗಳನನ್ನು ಕುಜ ಎಂದೂ ಕರೆಯುತ್ತಾರೆ, ಮಂಗಳ ಗ್ರಹದ ವಕ್ರ ಚಲನೆ ಯಾರನ್ನೇ ಆದರೂ ಅಧೀರಗೊಳಿಸುತ್ತದೆ. ಕುಜ ದೋಷ ಹೊಂದಿರುವವರಿಗೆ ಮದುವೆ ಆಗುವುದು ಕಷ್ಟ ಎಂಬ ಮಾತಿದೆ. ಇವರು ಕುಜನ ರೋಷವನ್ನು ಧರಿಸಿದವರಲ್ಲವಾದರೂ ಮಂಗಳವಾರದಂದು ಹುಟ್ಟಿದ ಕಾರಣ ಇವರ ದಾಂಪತ್ಯ ಕೆಲವು ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಹಾದು ಹೋಗುತ್ತದೆ. ಮಂಗಳನ ಪ್ರಭಾವದಿಂದ ತಮ್ಮನ್ನು ಇತರರಿಗೆ ತೆರೆದಿಟ್ಟುಕೊಳ್ಳುವುದುನ್ನು ಅವರು ಕಷ್ಟವಾಗಿಸುತ್ತಾರೆ. ಮಾತನಾಡುವುದಕ್ಕಿಂತ ಮುಂಚೆ ಅವರು ಯೋಚಿಸುವುದಿಲ್ಲ ಏಕೆಂದರೆ ಮಂಗಳ ಸಾಮರ್ಥ್ಯ ಅವರ ಮೇಲಿರುತ್ತದೆ. ತಮ್ಮ ಪದಗಳಿಂದ ಸಂಗಾತಿಗೆ ಅವರು ನೋವನ್ನುಂಟು ಮಾಡಬಹುದು. ಇದರಿಂದ ಪ್ರೀತಿ ಸಾಂಗತ್ಯ ಮತ್ತು ವೈವಾಹಿಕ ಜೀವನದಲ್ಲಿ ಏರು ಪೇರುಗಳು ಉಂಟಾಗುತ್ತಿರುತ್ತವೆ. ಸಂಗಾತಿಯಾಗಿ ಅವರು ತಮ್ಮ ಬಾಳ ಸಂಗಾತಿಯನ್ನು ಸಂರಕ್ಷಿಸುತ್ತಾರೆ ಮತ್ತು ಜೀವನದ ಕಷ್ಟದ ಸಂದರ್ಭದಲ್ಲಿ ಕೈಬಿಡುವುದಿಲ್ಲ. ಅವರ ಸ್ವಭಾವ ಅವರನ್ನು ಸದೃಢರನ್ನಾಗಿಸುತ್ತದೆ ಮತ್ತು ತಮ್ಮ ಸಂಗಾತಿಗೆ ಅವರು ಬೆಂಗಾವಲಾಗಿ ಇರುತ್ತಾರೆ.

Tap to resize

Latest Videos



ಕೋಪ ಮತ್ತು ಧೈರ್ಯ
ಮಂಗಳವಾರ ಹುಟ್ಟಿದವರ ವಿಶೇಷತೆ ಇವರಲ್ಲಿರುವ ಶಕ್ತಿ ಇವರನ್ನು ಅಸಾಮಾನ್ಯರನ್ನಾಗಿಸುತ್ತದೆ. ಅವರ ಸ್ವಭಾವದಲ್ಲಿ ಕೋಪ ಮತ್ತು ಧೈರ್ಯ ಎದ್ದು ಕಾಣುತ್ತದೆ. ಈ ಕೋಪ ಅವರನ್ನು ಕಷ್ಟಗಳಿಗೆ ಸಿಕ್ಕದಂತೆಯೂ ಕಾಯುತ್ತದೆ. ಆದರೆ ಒಮ್ಮೊಮ್ಮೆ ಇದು ಅವರ ವಿಫಲತೆಗೂ ಕಾರಣವಾಗುತ್ತದೆ. ಇವರು ತಮ್ಮ ಬಗ್ಗೆ ಹೇಳಿದ ಮಾತುಗಳನ್ನು ಪರಿಶೀಲಿಸದೇ ಒಪ್ಪಿಕೊಳ್ಳುವುದಿಲ್ಲ. ಅವರ ಜೀವನದಲ್ಲಿ ಕುಹಕವಾಡುವುದು ಒಂದು ಭಾಗವಾಗಿರುತ್ತದೆ. ಅದರಲ್ಲೂ ಕೆಲಸದ ಸಮಯದಲ್ಲಿ ವ್ಯಂಗ್ಯೋಕ್ತಿಗಳನ್ನು ಅವರು ನುಡಿಯಬಹುದು. ಆದರೆ ಇದನ್ನು ಹಗುರವಾಗಿ ತೆಗೆದುಕೊಳ್ಳಬೇಕು. 



ವೃತ್ತಿಜೀವನ
ಮಂಗಳವಾರ ಹುಟ್ಟಿದವರ ವೃತ್ತಿ ಜೀವನ ಸವಾಲುಗಳಿಂದ ಕೂಡಿರುತ್ತದೆ. ಈ ದಿನ ಹುಟ್ಟಿದವರು ಹೆಚ್ಚು ಧೈರ್ಯವಂತರು ಮತ್ತು ನಿಜವಾದ ಹೋರಾಟಗಾರರು ಆಗಿದ್ದಾರೆ. ಬ್ಯಾಂಕಿಂಗ್ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಅಕೌಂಟೆನ್ಸಿ ಮುಂತಾದ ಕೆಲಸಗಳಲ್ಲಿ ಅವರಿಗೆ ಸ್ಥಾನ ದೊರೆಯುತ್ತದೆ ಮತ್ತು ಇಂತಹ ವೃತ್ತಿ ಅವರಿಗೆ ಹೇಳಿಮಾಡಿಸಿದ್ದಾಗಿದೆ. ಈ ದಿನ ಹುಟ್ಟಿದವರು ವೃತ್ತಿ ಜೀವನದಲ್ಲಿ ಚಾಲೆಂಜಿಂಗ್ ಆಗಿರುವ ಕಾರ್ಯಗಳನ್ನು ಮಾಡುವಲ್ಲಿ ನಿಪುಣರಾಗಿರುತ್ತಾರೆ. ಬಾಸ್‌ಗೆ ಸವಾಲು ಎಸೆದು ಹೊಸ ಉದ್ಯಮ, ಹೊಸ ಸ್ಟಾರ್ಟಪ್‌ಗಳನ್ನು ಸ್ಥಾಪಿಸುವಲ್ಲಿ ಇಂಥವರೇ ಹೆಚ್ಚು. ಹಾಗೇ ಕೆಲಸದ ಜಾಗದಲ್ಲಿ ಹೊಸ ಸವಾಲುಗಳನ್ನು ಸ್ವೀಕರಿಸುವುದರಲ್ಲಿ ನಿಪುಣರು.


ದೇವರ ಜೊತೆ ಚಾಲೆಂಜ್‌
ಇವರು ದೇವಭಕ್ತರಾಗಿರಲು ಸಾಧ್ಯವಿಲ್ಲ. ಇವರಲ್ಲಿ ಇರುವ ಸದಾ ಸವಾಲು ಹಾಕುವ ಸ್ವಭಾವದಿಂದಾಗಿ, ದೇವರನ್ನು ಕೂಡ ಸವಾಲಿನ ದೃಷ್ಟಿಯಿಂದಲೇ ನೋಡುತ್ತಾರೆ. ಸಂಪೂರ್ಣ ಶರಣಾಗತಿಯಾಗಲೀ, ಭಕ್ತಿಯಾಗಲೀ ಇವರಿಂದ ಅಸಾಧ್ಯ. ಆದ್ದರಿಂದ ಇವರಲ್ಲಿ ಆಸ್ತಿಕತನವನ್ನು ಹೆಚ್ಚಾಗಿ ನಿರೀಕ್ಷಿಸಲಾರೆವು.  

 

click me!