ಇವರು ರೊಮ್ಯಾಂಟಿಕ್ ಹೆಸರಿನಲ್ಲಿ ತುಂಬಾ ಅಂಟಿಕೊಳ್ಳುತ್ತಾರೆ…

By Sushma Hegde  |  First Published Jun 20, 2023, 1:07 PM IST

ಕೆಲವು ಜನರು ಯಾವಾಗಲೂ ತಮ್ಮ ಸಂಗಾತಿ ಜತೆ ಹೆಚ್ಚು ಹತ್ತಿರವಾಗಿರುತ್ತಾರೆ. ಯಾವಾಗಲೂ ಅಂಟಿಕೊಂಡು ಇರಲು ಇಷ್ಟಪಡುತ್ತಾರೆ. ಸಂಬಂಧಗಳಲ್ಲಿ ತುಂಬಾ ಅಂಟಿಕೊಳ್ಳುವ ಸಾಧ್ಯತೆಯಿರುವ ಈ 5 ರಾಶಿಚಕ್ರದ ಚಿಹ್ನೆಗಳ ಮಾಹಿತಿ ಇಲ್ಲಿದೆ.


ಪ್ರಣಯ (romance) ವಿಲ್ಲದೇ ವೈವಾಹಿಕ ಜೀವನ ಅರ್ಥಪೂರ್ಣ ಎನಿಸಲ್ಲ. ಹೀಗಾಗಿ ಅನೇಕರು ತುಂಬಾ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಇದು ಸಂಬಂಧದಲ್ಲಿ ಬೇಸರ (bored) ಮೂಡಿಸುವುದಿಲ್ಲ, ಆದರೆ ಪ್ರಣಯ ಅತಿಯಾದರೆ ಪರಸ್ಪರ ಕಿರಿಕಿರಿಯ ಮನೋಭಾವನೆ (Attitude) ಮೂಡುತ್ತದೆ. ಕೆಲ ರಾಶಿಯವರು ಪ್ರಣಯದ ಹೆಸರಿನಲ್ಲಿ ಸಂಗಾತಿಯೊಂದಿದೆ ತುಂಬಾ ಅಂಟಿಕೊಳ್ಳುತ್ತಾರೆ.

ಸಂಗಾತಿಯನ್ನು ಖುಷಿ (jolliness) ಪಡಿಸಲು ರೊಮ್ಯಾಂಟಿಕ್ ಆಗಿರುವುದು ತುಂಬಾ ಮುಖ್ಯ, ಪ್ರತಿಯೊಬ್ರಿಗೂ ತಮ್ಮ ಸಂಗಾತಿ ಹೆಚ್ಚು ರೊಮ್ಯಾಂಟಿಕ್ ಆಗಿರಬೇಕು ಎಂದು ಬಯಸುತ್ತಾರೆ. ಕೆಲವು ಜನರು ಯಾವಾಗಲೂ ತಮ್ಮ ಸಂಗಾತಿ ಜತೆ ಹೆಚ್ಚು ಹತ್ತಿರವಾಗಿರುತ್ತಾರೆ. ಯಾವಾಗಲೂ ಅಂಟಿಕೊಂಡು ಇರಲು ಇಷ್ಟಪಡುತ್ತಾರೆ. ಸಂಬಂಧಗಳಲ್ಲಿ ತುಂಬಾ ಅಂಟಿಕೊಳ್ಳುವ ಸಾಧ್ಯತೆಯಿರುವ ಈ 5 ರಾಶಿಚಕ್ರ (Zodiac) ದ ಚಿಹ್ನೆಗಳ ಮಾಹಿತಿ ಇಲ್ಲಿದೆ.

Tap to resize

Latest Videos

 

ವೃಷಭ ರಾಶಿ (Taurus)

ಇವರು ಸಂಬಂಧಗಳಲ್ಲಿ ತುಂಬಾ ಬದ್ಧತೆ ಮತ್ತು ನಿಷ್ಠಾವಂತ (faithful) ರಾಗಿ ಇರುತ್ತಾರೆ. ತಮ್ಮ ಸಂಗಾತಿಯನ್ನು ಕಳೆದುಕೊಳ್ಳುವ ಭಯವನ್ನು ಅನುಭವಿಸಿದಾಗ ಅವರನ್ನು ಬಿಟ್ಟು ಎಲ್ಲಿಗೂ ಹೋಗಲ್ಲ. ಯಾವಾಗಲೂ ಅವರೊಂದಿಗೆ ಅಂಟಿಕೊಂಡು ಇರುತ್ತಾರೆ. ವೃಷಭ ರಾಶಿ (Taurus) ಯವರು ತಮ್ಮ ಸಂಗಾತಿಯನ್ನು ಹೆಚ್ಚು ಗೌರವಿಸುತ್ತಾರೆ. ಪ್ರಣಯದ ವಿಚಾರದಲ್ಲಿ ಹೆಚ್ಚು ಕುತೂಹಲ ಹೊಂದಿರುತ್ತಾರೆ. ದೈಹಿಕ ಸಂಬಂಧ (Physical relationship) ಕ್ಕೆ ಹೆಚ್ಚು ಒತ್ತು ಕೊಡುತ್ತಾರೆ.

ಕಟಕ (Cancer)

ಕಟಕ ರಾಶಿಯವರು ತುಂಬಾ ಭಾವನಾತ್ಮಕ (Emotional) ವ್ಯಕ್ತಿಗಳು. ಅವರು ಸಂಬಂಧಗಳಲ್ಲಿ ಭದ್ರತೆ (security) ಯನ್ನು ಹೊಂದಿರುತ್ತಾರೆ. ಸಂಗಾತಿಯ ಭಾವನೆಯನ್ನು ಹೆಚ್ಚು ಗೌರವಿಸುತ್ತಾರೆ. ಅವರು ಬಿಟ್ಟು ಹೋಗುವ ಭಯದಿಂದಾಗಿ ಕೆಲವೊಮ್ಮೆ ತುಂಬಾ ಅಂಟಿಕೊಳ್ಳುತ್ತಾರೆ. ಪ್ರಣಯ (romance) ದ ವಿಚಾರದಲ್ಲಿ ಉತ್ಸಾಹುಕರಾಗಿರುತ್ತಾರೆ. 

ತುಲಾ ರಾಶಿ (Libra)

ಇವರು ಸಂಬಂಧ (relationship) ಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಹಾಗೂ ಸಂಬಂಧಗಳನ್ನು ಗೌರವಿಸುತ್ತಾರೆ. ತಮ್ಮ ಸಂಗಾತಿ ಜತೆ ಭಾವನಾತ್ಮಕವಾಗಿ ಬೆರೆತಾಗ ಅಂಟಿಕೊಳ್ಳುವ ನಡವಳಿಕೆ (behavior) ಯನ್ನು ಪ್ರಾರಂಭಿಸುತ್ತಾರೆ. ಸಂಗಾತಿ ಜತೆ ನಿರಂತರ ಒಡನಾಟ (companionship) ದಿಂದ ಇರಲು ಬಯಸುತ್ತಾರೆ. ಕೆಲವೊಮ್ಮೆ ಪಾಲುದಾರ (Partner) ರ ಮೇಲೆ ಅವಲಂಬಿತರಾಗುತ್ತಾರೆ.

ಅಬ್ಬಾ! ಅಂತೂ Guru Chandal Dosh ವಿಸರ್ಜನೆ; 5 ರಾಶಿಗಳಿಗೆ ಜೂ.21ರಿಂದ ಅದೃಷ್ಟದ ದಿನಗಳು..

 

ವೃಶ್ಚಿಕ ರಾಶಿ (Scorpio)

ಇವರು ಕೂಡ ಭಾವನಾತ್ಮಕ ವ್ಯಕ್ತಿಗಳು. ತಮ್ಮ ಪಾಲುದಾರರೊಂದಿಗೆ ದೈಹಿಕ  (physical) ಹಾಗೂ ಮಾನಸಿಕ (mental) ವಾಗಿ ತುಂಬಾ ಆಳವಾಗಿ ಇರಲು ಬಯಸುತ್ತಾರೆ. ಇದರಿಂದ ಯಾವಾಗಲು ಸಂಗಾತಿ ಜತೆ ಅಂಟಿಕೊಂಡು ಇರುತ್ತಾರೆ. 

ಮೀನ ರಾಶಿ (Pisces)

ಮೀನ ರಾಶಿಯವರು ಸಹಾನುಭೂತಿ (Sympathy) , ರೋಮ್ಯಾಂಟಿಕ್  (Romantic) ಮತ್ತು ಹೆಚ್ಚು ಆದರ್ಶವಾದಿಗಳು. ಭಾವನಾತ್ಮಕವಾಗಿ ಹೆವಗವು ಬಯಕೆ ಹೊಂದಿರುತ್ತಾರೆ. ಸಂಗಾತಿಯ ನಿರಾಕರಣೆಯ ಭಯದಿಂದಾಗಿ ಅವರು ಸಂಬಂಧಗಳಲ್ಲಿ ಅಂಟಿಕೊಳ್ಳಬಹುದು. ಮೀನ ರಾಶಿಯವರು ಪ್ರೀತಿ (love) ಯಲ್ಲಿ ತಮ್ಮ ಎಲ್ಲವನ್ನೂ ನೀಡಲು ಒಲವು ತೋರುತ್ತಾರೆ, ಕೆಲವೊಮ್ಮೆ ತಮ್ಮ ಸಂಗಾತಿಗಾಗಿ ಏನು ಮಾಡಲು ಸಿದ್ಧರಿರುತ್ತಾರೆ.

Kedarnath Dham ಬಗ್ಗೆ 5 ಆಸಕ್ತಿಕರ ಸಂಗತಿಗಳು

 

ಇವರು ಸಂಗಾತಿಯ ಗೌಪ್ಯತೆ  (Confidentiality) ಗೌರವಿಸುತ್ತಾರೆ

ಮೇಷ (Aries) , ಮಿಥುನ (Gemini) , ಸಿಂಹ, ಕನ್ಯಾ, ಧನು ರಾಶಿ,  ಕುಂಭ ರಾಶಿ (Aquarius) ಯವರು ತಮ್ಮ ಪಾಲುದಾರರ ಗೌಪ್ಯತೆಯನ್ನು ಗೌರವಿಸುತ್ತಾರೆ. ಭಾವನೆ (feeling) ಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಮತ್ತು ಯಾರಾದರೂ ಅನಗತ್ಯವಾಗಿ ಅಂಟಿಕೊಂಡರೆ ಅದನ್ನು ದ್ವೇಷಿಸುತ್ತಾರೆ.

click me!