ರುದ್ರಾಕ್ಷಿಯಿಂದ ಸುಖ – ಸಂಪತ್ತು ಆರೋಗ್ಯ.. ಯಾವ ವಿಧ ನಿಮಗೆ ಒಳ್ಳೆಯದು?

Published : May 06, 2022, 12:00 PM ISTUpdated : May 06, 2022, 12:12 PM IST
ರುದ್ರಾಕ್ಷಿಯಿಂದ ಸುಖ – ಸಂಪತ್ತು ಆರೋಗ್ಯ.. ಯಾವ ವಿಧ ನಿಮಗೆ ಒಳ್ಳೆಯದು?

ಸಾರಾಂಶ

ಹಿಂದೂ ಧಾರ್ಮಿಕ ಪುರಾಣಗಳಲ್ಲಿ ರುದ್ರಾಕ್ಷಿಗೆ ಬಹಳ ಮಹತ್ವ ಇದ್ದು, ಇವುಗಳನ್ನು ಪೂಜಿಸುವುದರಿಂದ, ಧರಿಸುವುದರಿಂದ ಅನೇಕ ಉಪಯೋಗಗಳು ಇರುವ ಬಗ್ಗೆ ಉಲ್ಲೇಖಗಳಿವೆ. ಇದು ಸಾಕ್ಷಾತ್ ದೇವರ ಸ್ವರೂಪ ಆಗಿರುವುದರಿಂದ ಸುಖ, ಸಂಪತ್ತು, ಸಮೃದ್ಧಿ, ಆರೋಗ್ಯ ಲಭಿಸುತ್ತದೆ. ರುದ್ರಾಕ್ಷಿ ಧಾರಣೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಸಹ ಪರಿಹಾರಗೊಳ್ಳುತ್ತದೆ. ಹಾಗಾದರೆ ರುದ್ರಾಕ್ಷಿಯ ಹದಿನಾಲ್ಕು ವಿಧಗಳ ಬಗ್ಗೆ ತಿಳಿಯೋಣ.

ರುದ್ರಾಕ್ಷಿ (Rudraksha) ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಇದಕ್ಕೆ ಭಾರಿ ಮಹತ್ವ ಸಹ ಇದೆ. ಶಿವನ ಕಣ್ಣೀರಿನಿಂದ ಬಿದ್ದ ಹನಿಯಿಂದ ಈ ರುದ್ರಾಕ್ಷಿ ಉದ್ಭವ ಆಗಿದೆ ಎಂಬ ನಂಬಿಕೆ (Belief) ಇದೆ. ರುದ್ರಾಕ್ಷಿಗೆ ವಿಶೇಷ ಶಕ್ತಿ ಸಹ ಇದ್ದು, ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಬಲ್ಲದು. ಇವುಗಳನ್ನು ಧಾರಣೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯ (Positive energy) ಸಂಚಾರ ಆಗುವುದಲ್ಲದೆ, ಉತ್ತಮ ಆರೋಗ್ಯವನ್ನು (Health) ನಮ್ಮದಾಗಿಸಿಕೊಳ್ಳಬಹುದು. 

ಇನ್ನು ರುದ್ರಾಕ್ಷಿ ಹಾಗೂ ಅದರ ಧಾರಣೆ ಬಗ್ಗೆ ಹಲವು ಪುರಾಣಗಳಲ್ಲಿ ಉಲ್ಲೇಖವಿದೆ. ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಸೇರಿದಂತೆ ಮತ್ತಿತರ ಕಡೆ ತಿಳಿಸಿಕೊಡಲಾಗಿದೆ. ಒಟ್ಟು ಹದಿನಾಲ್ಕು ಪ್ರಕಾರದ ರುದ್ರಾಕ್ಷಿ ಇದೆ ಎಂದು ಶಿವ ಪುರಾಣದ ವಿಘ್ನೇಶ್ವರ ಸಂಹಿತೆಯಲ್ಲಿ ಹೇಳಲಾಗಿದೆ. ಇವುಗಳಲ್ಲಿ ಯಾವ ಪ್ರಕಾರದ ರುದ್ರಾಕ್ಷಿಯನ್ನು  ಧರಿಸಿದರೆ ಯಾವ ರೀತಿಯ ಲಾಭ ಎಂಬುದರ ಬಗ್ಗೆ ನೋಡೋಣ... 

ಏಕ ಮುಖಿ ರುದ್ರಾಕ್ಷಿ  
ಒಂದು ಮುಖವನ್ನು ಹೊಂದಿರುವ ರುದ್ರಾಕ್ಷಿ ಧಾರಣೆ ಬಹಳ ಶ್ರೇಯಸ್ಕರವಾಗಿದ್ದು, ಇದರಲ್ಲಿ ಸಾಕ್ಷಾತ್ ಶಿವ ಸ್ವರೂಪವಿದೆ ಎಂಬ ನಂಬಿಕೆ ಇದೆ. ಹೀಗಾಗಿ ಇದನ್ನು ಧರಿಸಿದವರು ಜ್ಞಾನವಂತರಾಗುತ್ತಾತೆ. ಅಲ್ಲದೆ, ಅವರೊಳಗೆ ಭಕ್ತಿ ಮತ್ತು ಶ್ರದ್ಧಾ ಭಾವ ಹೆಚ್ಚುತ್ತದೆ. ಆಧ್ಯಾತ್ಮದ ಬಗ್ಗೆಯೂ ಒಲವನ್ನು ಹೊಂದುತ್ತಾರೆ. 

ದ್ವಿಮುಖಿ ರುದ್ರಾಕ್ಷಿ : 
ಇದು ಎರಡು ಮುಖವನ್ನು ಹೊಂದಿದ್ದು, ಶಿವ ಮತ್ತು ಪಾರ್ವತಿಯ ಸಂಯೋಗ ರೂಪವಾಗಿದೆ. ಈ ರುದ್ರಾಕ್ಷಿ ಧಾರಣೆಯಿಂದ ಶಿವಪಾರ್ವತಿಯ ಕೃಪೆ ಪಡೆಯಬಹುದು. ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ಸಂತೋಷ (Hapiness) ಮತ್ತು ಸುಖ ಪ್ರಾಪ್ತಿಯಾಗಲಿದೆ. 

ಇದನ್ನು ಓದಿ : ತಪ್ಪು ಸಮಯದಲ್ಲಿ ಈ ಕಾರ್ಯಗಳ ಮಾಡಿದರೆ ಭಾರೀ ನಷ್ಟ!

ತ್ರಿಮುಖಿ ರುದ್ರಾಕ್ಷಿ :
ಮೂರು ಮುಖವನ್ನು ಹೊಂದಿರುವ ಈ ರುದ್ರಾಕ್ಷಿಯು ಅಗ್ನಿಯ ಸ್ವರೂಪವಾಗಿದೆ. ಇದರ ಧಾರಣೆಯಿಂದ ತೇಜಸ್ಸು ಮತ್ತು ಶಕ್ತಿ ಹೆಚ್ಚಲಿದೆ. ಪಾಪಕರ್ಮಗಳನ್ನು ನಾಶಗೊಳಿಸುವ ಶಕ್ತಿ ಇದಕ್ಕಿದ್ದು, ಮಂಗಳ ಗ್ರಹದ (Mars) ದೋಷವನ್ನೂ ನಿವಾರಿಸಬಲ್ಲದು. ಜೊತೆಗೆ ಅಗ್ನಿ ದೇವನ ಪ್ರಸನ್ನತೆಗೂ ಪಾತ್ರ ಆಗಬಹುದಾಗಿದೆ. 

ಚತುರ್ಮುಖಿ ರುದ್ರಾಕ್ಷಿ :
4 ಮುಖವುಳ್ಳ ಈ ರುದ್ರಾಕ್ಷಿಯು ಬ್ರಹ್ಮನ ಸ್ವರೂಪವಾಗಿದೆ. ಧನ ಸಂಪತ್ತು ಮತ್ತು ವೈಭವಯುತ ಜೀವನಕ್ಕೆ ಇದನ್ನು ಧರಿಸಬಹುದಾಗಿದೆ. ಚತುರ್ಮುಖಿ ರುದ್ರಾಕ್ಷಿಯು ಸ್ವಾಸ್ಥ್ಯ ಸಂರಕ್ಷಣೆ ಮತ್ತು ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ ಎಂದು ದೇವಿಭಾಗವತ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.

ಪಂಚಮುಖಿ ರುದ್ರಾಕ್ಷಿ :
ಐದು ಮುಖವುಳ್ಳ ರುದ್ರಾಕ್ಷಿ ಇದಾಗಿದ್ದು, ಈ ರುದ್ರಾಕ್ಷಿಯು ಬ್ರಹ್ಮನ ಸ್ವರೂಪವೆಂದೇ ಹೇಳಲಾಗುತ್ತದೆ. ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಜ್ಞಾನವು ವೃದ್ಧಿಸುವುದಲ್ಲದೆ, ಆಧ್ಯಾತ್ಮಿಕ ಭಾವನೆ ಹೆಚ್ಚುತ್ತದೆ. ಜಪ ಮಾಡಲು ರುದ್ರಾಕ್ಷಿ ಬಳಸುವುದರಿಂದ ಹೃದಯಕ್ಕೆ (Heart) ಬಲ ಬರಲಿದ್ದು, ಪಾಪದಿಂದ ಮುಕ್ತಿ ಪಡೆಯಬಹುದಾಗಿದೆ.

ಷಷ್ಠಮುಖಿ ರುದ್ರಾಕ್ಷಿ
ಈ ರುದ್ರಾಕ್ಷಿಯು ಕಾರ್ತಿಕೇಯನ ಸ್ವರೂಪವಾಗಿದೆ. ಷಷ್ಠಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಶಕ್ತಿ ಮತ್ತು ವೀರ್ಯ ವೃದ್ಧಿ ಆಗಲಿದೆ. ಅಕಾಲ ಮೃತ್ಯು ಮತ್ತು ದುರ್ಘಟನೆಗಳಿಂದಲೂ ಕಾಪಾಡುತ್ತದೆ. ಶತ್ರುಬಾಧೆ ಸಹ ಇದರ ಧಾರಣೆಯಿಂದ ನಿವಾರಣೆಯಾಗಲಿದೆ. 

ಸಪ್ತಮುಖಿ ರುದ್ರಾಕ್ಷಿ
ಸಪ್ತಮುಖಿ ರುದ್ರಾಕ್ಷಿಯು ಸಪ್ತಋಷಿಗಳ ಸ್ವರೂಪವಾಗಿದೆ. ಈ ರುದ್ರಾಕ್ಷಿ ಧರಿಸಿದವರ ಮೇಲೆ ಲಕ್ಷ್ಮೀದೇವಿಯ ಕೃಪೆ ಸದಾ ಇರುತ್ತದೆ. ಅಲ್ಲದೆ, ಧನಸಂಪತ್ತು ಪ್ರಾಪ್ತಿಯಾಗುವುದರ ಜೊತೆಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಆರೋಗ್ಯ ರಕ್ಷಣೆಗೂ ಈ ರುದ್ರಾಕ್ಷಿ ಲಾಭದಾಯಕವಾಗಿದೆ.

ಅಷ್ಠಮುಖಿ ರುದ್ರಾಕ್ಷಿ :
ಎಂಟು ಮುಖವುಳ್ಳ ಈ ರುದ್ರಾಕ್ಷಿಯು ಅಷ್ಟಾವಸುಗಳ ಸ್ವರೂಪವಾಗಿದೆ. ಅಷ್ಠಮುಖಿ ರುದ್ರಾಕ್ಷಿ ಧರಿಸುವುದರಿಂದ ಶನಿಯ (Saturn) ಅಶುಭ ಪ್ರಭಾವದಿಂದ ಮುಕ್ತಿ ಪಡೆಯಬಹುದಾಗಿದೆ. ವ್ಯಕ್ತಿಯ ಭೌತಿಕ ಇಚ್ಛೆಗಳ ಪೂರೈಕೆಗೆ ಮತ್ತು ಅಪಘಾತಗಳಿಂದ ಈ ರುದ್ರಾಕ್ಷಿಯಿಂದ ರಕ್ಷಣೆ ಪಡೆದುಕೊಳ್ಳಬಹುದು. 

ನವಮುಖಿ ರುದ್ರಾಕ್ಷಿ
ಒಂಭತ್ತು ಮುಖವುಳ್ಳ ರುದ್ರಾಕ್ಷಿಯು ನವಮುಖಿ ರುದ್ರಾಕ್ಷಿಯಾಗಿದೆ. ಈ ರುದ್ರಾಕ್ಷಿಯು ಯಮರಾಜನ ಸ್ವರೂಪವಾಗಿದೆ. ಇದರ ಧಾರಣೆಯಿಂದ ಮೃತ್ಯು ಭಯ ನಿವಾರಣೆಯಾಗುತ್ತದೆ. ಭಾಗ್ಯವೃದ್ಧಿಗೆ ಸಹಕಾರಿಯಾಗಿದೆ. 

ಇದನ್ನು ಓದಿ : ಕೆಟ್ಟ ದೃಷ್ಟಿ ಬಿದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ..!

ದಶಮುಖಿ ರುದ್ರಾಕ್ಷಿ, ಏಕಾದಶಮುಖಿ ರುದ್ರಾಕ್ಷಿ ಮತ್ತು ತ್ರಯೋದಶಮುಖಿ ರುದ್ರಾಕ್ಷಿ :
ಈ ಮೂರು ವಿಧದ ರುದ್ರಾಕ್ಷಿಯನ್ನು ಧರಿಸುವುದರಿಂದ ಶುಭ ಮತ್ತು ಉತ್ತಮ ಫಲ ದೊರೆಯುತ್ತದೆ. ದಶಮುಖಿ ರುದ್ರಾಕ್ಷಿಯನ್ನು ದಿಕ್ಪಾಲಕರ ಸ್ವರೂಪ, ಏಕಾದಶಮುಖಿ ರುದ್ರಾಕ್ಷಿಯನ್ನು ರುದ್ರ ಸ್ವರೂಪ ಮತ್ತು ತ್ರಯೋದಶಮುಖಿ ರುದ್ರಾಕ್ಷಿಯನ್ನು ಕಾಮದೇವನ ಸ್ವರೂಪ ಎಂದು ಕರೆಯಲಾಗುತ್ತದೆ. ಈ ರುದ್ರಾಕ್ಷಿಗಳ ಧಾರಣೆಯಿಂದ ಮನೋಕಾಮನೆಗಳು ಪೂರ್ಣಗೊಳ್ಳುವುದಲ್ಲದೇ, ಪ್ರೀತಿಯಲ್ಲಿ ಮತ್ತು ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣಬಹುದಾಗಿದೆ.

ದ್ವಾದಶಮುಖಿ ರುದ್ರಾಕ್ಷಿ ಮತ್ತು ಚತುರ್ದಶಮುಖಿ ರುದ್ರಾಕ್ಷಿ
ಹನ್ನೆರಡು ಮುಖವುಳ್ಳ ರುದ್ರಾಕ್ಷಿಯನ್ನು ದ್ವಾದಶಮುಖಿ ಎನ್ನಲಾಗುವುದು. ಹದಿನಾಲ್ಕು ಮುಖವುಳ್ಳ ರುದ್ರಾಕ್ಷಿಯು ಚತುರ್ದಶಮುಖಿ ರುದ್ರಾಕ್ಷಿಯಾಗಿದೆ. ಈ 2 ವಿಧದ ರುದ್ರಾಕ್ಷಿಯನ್ನು ಶಿವನ ಸ್ವರೂಪವಾಗಿದೆ. ಇವುಗಳ ಧಾರಣೆಯಿಂದ ಧನ-ಧಾನ್ಯ ವೃದ್ಧಿಸಲಿದ್ದು, ಧಾರ್ಮಿಕ ಕಾರ್ಯಗಳು ನಿಮ್ಮ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ