Hindu Temples: ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಿವು..

Published : Jan 05, 2022, 05:30 PM IST
Hindu Temples: ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಿವು..

ಸಾರಾಂಶ

ದೇಶದಲ್ಲಿ 64 ಜ್ಯೋತಿರ್ಲಿಂಗಗಳಿವೆ. ಅವುಗಳಲ್ಲಿ 12 ಅತಿ ಪ್ರಮುಖವಾದವು. ಅವು ಎಲ್ಲೆಲ್ಲ ಇವೆ ಅಂದ್ರೆ..

ಒಮ್ಮೆ ಬ್ರಹ್ಮ(Lord Brahma) ಹಾಗೂ ವಿಷ್ಣು(Vishnu )ವಿನ ಮಧ್ಯೆ ಯಾರು ಹೆಚ್ಚು ಎಂಬ ಬಗ್ಗೆ ವಾಗ್ವಾದವಾಗುತ್ತದೆ. ಆಗ ಇದನ್ನು ನಿಭಾಯಿಸಲು ಶಿವ(Shiva)ನು ಅವರಿಬ್ಬರ ನಡುವೆ ಒಂದು ಸ್ಪರ್ಧೆ ಏರ್ಪಡಿಸುತ್ತಾನೆ. ಬೆಳಕಿನ ರೇಖೆಯೊಂದನ್ನು ದೊಡ್ಡ ಕಂಬದ ಹಾಗೆ ಸೃಷ್ಟಿಸಿ ಯಾರು ಅದರ ಕೊನೆ ಎಲ್ಲಿದೆ ಎಂದು ನೋಡುವರೋ ಅವರೇ ಹೆಚ್ಚು ಎನ್ನುತ್ತಾನೆ. ಆಗ ಬ್ರಹ್ಮ ಅದರ ತುದಿ ಹುಡುಕಿಕೊಂಡು ಮೇಲಕ್ಕೆ ಹೋದರೆ ವಿಷ್ಣುವು ಕೆಳಭಾಗಕ್ಕೆ ಹೋಗುತ್ತಾನೆ. ಕಡೆಗೆ ವಿಷ್ಣು ಬಂದು ತನಗೆ ಅದರ ತುದಿ ಸಿಗಲಿಲ್ಲವೆಂದು ಸೋಲೊಪ್ಪಿಕೊಳ್ಳುತ್ತಾನೆ. ಆದರೆ ಬ್ರಹ್ಮನು ಗೆಲ್ಲಬೇಕೆಂಬ ಹಟದಿಂದ ತಾನು ಆ ಜ್ಯೋತಿಯ ಕೊನೆ ನೋಡಿದ್ದಾಗಿ ಸುಳ್ಳು ಹೇಳುತ್ತಾನೆ. ಬ್ರಹ್ಮ ಸುಳ್ಳು ಹೇಳುವುದು ಗೊತ್ತಾದ ಶಿವನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಇನ್ನು ನಿನ್ನನ್ನು ಯಾರೂ ಪ್ರಾರ್ಥಿಸುವುದಿಲ್ಲ, ಪೂಜಿಸುವುದಿಲ್ಲ ಎಂದು ಶಾಪ ಕೊಡುತ್ತಾನೆ. ಆ ಬೆಳಕಿನ ಕಂಬವೇ ಜ್ಯೋತಿರ್ಲಿಂಗ(Jyotirlinga). 

ಇಂಥ ಜ್ಯೋತಿರ್ಲಿಂಗಗಳು ದೇಶದಲ್ಲಿ 64 ಕಡೆಗಳಲ್ಲಿವೆ. ಅವುಗಳಲ್ಲಿ 12 ಅತಿ ಪ್ರಮುಖವಾದವಾಗಿವೆ. ಪವಿತ್ರವಾದ ಈ ದ್ವಾದಶ ಜ್ಯೋತಿರ್ಲಿಂಗಗಳು ಎಲ್ಲೆಲ್ಲಿ ಇವೆ ಎಂದು ತಿಳಿಯೋಣ.

ಓಂಕಾರೇಶ್ವರ್, ಖಾಂಡ್ವಾ, ಮಧ್ಯಪ್ರದೇಶ
ಖಾಂಡ್ವಾದಲ್ಲಿರುವ ಓಂಕಾರೇಶ್ವರ ದೇವಾಲಯ(Omkareshwar temple) ದೇಶದ ಪ್ರಮುಖ ಶಿವ ದೇವಾಲಯಗಳಲ್ಲೊಂದು. ನರ್ಮದಾ ನದಿ ಮಧ್ಯದ ದ್ವೀಪ ಶಿವಪುರಿಯಲ್ಲಿ ಈ ದೇವಾಲಯವಿದೆ. ಇಲ್ಲಿನ ಲಿಂಗವು ಓಂ ಆಕಾರದಲ್ಲಿರುವುದು ವಿಶೇಷ. 

ಸೋಮನಾಥ ದೇವಾಲಯ, ಗುಜರಾತ್
ವೇರಾವಲ್‌ನಲ್ಲಿರುವ ಸೋಮನಾಥ ದೇವಾಲಯವು(Somnath Temple) 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿದ್ದು, ಜಗತ್ತಿನ ಶಿವ ದೇವಾಲಯಗಳಲ್ಲೇ ಅತಿ ಪ್ರಮುಖವಾದುದು ಎನಿಸಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ಪುರಾಣ, ಕತೆಗಳಿವೆ. ಅವುಗಳಲ್ಲೊಂದು ಹೀಗಿದೆ, ಒಮ್ಮೆ ಚಂದ್ರನು ತನ್ನ ಕಾಂತಿ ಕಳೆದುಕೊಂಡು ನೊಂದು ಸೋಮನಾಥದಲ್ಲಿ ನೀರಿನಲ್ಲಿ ಸ್ನಾನ ಮಾಡಿದ. ಆಗ ಆತನ ಕಾಂತಿ ಮರಳಿತು ಎಂದು. 

Saturn Transit: ಶನಿಯ ರಾಶಿ ಪರಿವರ್ತನೆಯಿಂದ ಈ ಎಂಟು ರಾಶಿಗಳ ಮೇಲೆ ಅಗಾಧ ಪರಿಣಾಮ

ಶ್ರೀಶೈಲ, ಆಂಧ್ರಪ್ರದೇಶ
ಎರಡನೆಯದು ಎನಿಸಿಕೊಂಡ ಜ್ಯೋತಿರ್ಲಿಂಗ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಾಲಯದಲ್ಲಿದೆ. ಒಮ್ಮೆ ಗಣಪತಿ ತನಗಿಂತ ಮೊದಲು ವಿವಾಹವಾಗಲು ಸಜ್ಜಾಗಿದ್ದಾನೆಂದು ಕೋಪಗೊಂಡ ಕಾರ್ತಿಕೇಯನನ್ನು ಸಮಾಧಾನ ಪಡಿಸಲು ಶಿವ ಹಾಗೂ ಪಾರ್ವತಿ ಇಲ್ಲಿಗೆ ಬಂದಿದ್ದರೆಂಬ ಕತೆಯಿದೆ. 

ಮಹಾಕಾಳೇಶ್ವರ ದೇವಾಲಯ, ಉಜ್ಜೈನಿ
ಮಧ್ಯಪ್ರದೇಶದ ಉಜ್ಜೈನಿ(Ujjain)ಯಲ್ಲಿರುವ ಮಹಾಕಾಳೇಶ್ವರ ದೇವಾಲಯದಲ್ಲಿ ಮೂರನೆಯ ಜ್ಯೋತಿರ್ಲಿಂಗವಿದೆ. ರುದ್ರಸಾಗರ್ ಕೆರೆಯ ತಟದಲ್ಲಿರುವ ಲಿಂಗವು ಸ್ವಯಂಭುವಾಗಿದ್ದು, ಇದರೊಳಗಿನ ಶಕ್ತಿಯಿಂದಲೇ ಪ್ರಜ್ವಲಿಸುತ್ತದೆ. 

2022 ಈ ರಾಶಿಯ ಹುಡುಗಿಯರಿಗೆ ಸಖತ್ Lucky Year

ರಾಮೇಶ್ವರಂ ಜ್ಯೋತಿರ್ಲಿಂಗ, ತಮಿಳು ನಾಡು
ದೇಶದ ಅತಿ ದಕ್ಷಿಣ ಭಾಗದಲ್ಲಿ ಈ ಜ್ಯೋತಿರ್ಲಿಂಗವಿದೆ. ರಾಮೇಶ್ವರಂ(Rameshwaram) ಜ್ಯೋತಿರ್ಲಿಂಗವು ರಾಮನು ಲಂಕೆಯಲ್ಲಿ ರಾವಣನ ಸಂಹಾರ ಮಾಡಿ ಬಂದ ಸಮಯಕ್ಕೆ ಸಂಬಂಧಿಸಿದ್ದು. ರಾಮನು ರಾವಣ ಸಂಹಾರಕ್ಕೆ ಹೋಗುವ ಮುಂಚೆ ಇಲ್ಲಿ ಮರಳಲ್ಲಿ ಲಿಂಗ ನಿರ್ಮಿಸಿ ಗೆಲುವಿಗಾಗಿ ಆಶೀರ್ವಾದ ಕೇಳಿ ಪೂಜಿಸಿದ್ದ. ಆಗ ಶಿವನು ರಾಮನಿಗಂ ಆಶೀರ್ವದಿಸಿ ಆ ಲಿಂಗವನ್ನು ಜ್ಯೋತಿರ್ಲಿಂಗವಾಗಿ ಬದಲಾಯಿಸಿದ. 

ಕೇದಾರನಾಥ, ಉತ್ತರಾಖಂಡ್
ರುದ್ರಪ್ರಯಾಗದಲ್ಲಿರುವ ಕೇದಾರನಾಥವು ವರ್ಷದಲ್ಲಿ ಆರು ತಿಂಗಳು ಮಾತ್ರ ತೆರೆದಿರುತ್ತದೆ. ಇಲ್ಲಿರುವ ಜ್ಯೋತಿರ್ಲಿಂಗ ದರ್ಶನಕ್ಕೆ ಭಕ್ತಾದಿಗಳು ಕಷ್ಟದ ಹಾದಿ ಸವೆಸಿ ಬರಬೇಕು. 

Astrology And Personality Traits: ಈ ರಾಶಿಯವರು ಸಂಗಾತಿಗೆಂದೂ ಮೋಸ ಮಾಡಲ್ಲ!

ಭೀಮಶಂಕರ್(Bhimashankar), ಮಹಾರಾಷ್ಟ್ರ
ಈ ದೇವಾಲಯವು ಭೀಮಾ ನದಿ ತೀರದಲ್ಲಿದ್ದು, ಚಾರಣಿಗರಿಗೆ ಸ್ವರ್ಗವೆನಿಸುವಂಥ ತಾಣದಲ್ಲಿದೆ. 

ವಿಶ್ವನಾಥ, ವಾರಣಾಸಿ
ವಾರಣಾಸಿಯಲ್ಲಿ ಗಂಗಾ ನದಿ ತಟದಲ್ಲಿರುವ ವಿಶ್ವನಾಥ ದೇವಾಲಯವು ಜ್ಯೋತಿರ್ಲಿಂಗಗಳಲ್ಲೊಂದು. 

ತ್ರಯಂಬಕೇಶ್ವರ, ನಾಸಿಕ್
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮತ್ತೊಂದು ಜ್ಯೋತಿರ್ಲಿಂಗ ದೇವಾಲಯವಿದೆ. ಅದೇ ತ್ರಯಂಬಕೇಶ್ವರ(Tryambakeshwar). ಇದೂ ಕೂಡಾ ಅತಿ ಪುರಾತನ ಹಿಂದೂ ದೇವಾಲಯಗಳಲ್ಲೊಂದು. 

ಗೃಶ್ಣೇಶ್ವರ ಜ್ಯೋತಿರ್ಲಿಂಗ, ಔರಂಗಾಬಾದ್
ಮಹಾರಾಷ್ಟ್ರದ ಔರಂಗಾಬಾದ್‌(Aurangabad)ನಲ್ಲಿರುವ ಗೃಷ್ಣೇಶ್ವರ ದೇವಾಲಯವು ತಾನಿರುವ ಸ್ಥಳದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಏಕೆಂದರೆ ಇಲ್ಲಿಯೇ ಜಗತ್ಪ್ರಸಿದ್ಧ ಅಜಂತಾ, ಎಲ್ಲೋರಾ ಗುಹೆಗಳಿರುವುದು. 

ಬೈಜನಾಥ್, ಜಾರ್ಖಂಡ್(Jharkhand)
ಜಾರ್ಖಂಡ್‌ನ ಬೈಜನಾಥ್ ದೇವಾಲಯವು ಮತ್ತೊಂದು ಜ್ಯೋತಿರ್ಲಿಂಗ ಹೊಂದಿದೆ. 

ನಾಗೇಶ್ವರ, ದ್ವಾರಕೆ(Dwarka)
ಗುಜರಾತ್‌ನ ದ್ವಾರಕೆಯಿಂದ 18 ಕಿಲೋಮೀಟರ್ ದೂರದಲ್ಲಿ ನಾಗೇಶ್ರ ದೇವಾಲಯವಿದೆ. ಶಿವಪುರಾಣದಲ್ಲಿ ಈ ದೇವಾಲಯದ ಹೆಸರು ಉಲ್ಲೇಖಗೊಂಡಿದೆ. ಇಲ್ಲಿ ಶಿವನು ತನ್ನ ಭಕ್ತೆ ಸುಪ್ರಿಯಾ ರಕ್ಷಣೆಗಾಗಿ ದಾರುಕಾ ಎಂಬ ರಾಕ್ಷಸನನ್ನು ಕೊಂದಿದ್ದ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!