Gemology: ಪರ್ಲ್ ಧರಿಸಿದರೆ ಹಣಕಾಸಿನ ಸಮಸ್ಯೆ ಇರಲ್ಲ

By Suvarna News  |  First Published Mar 24, 2022, 8:23 PM IST

ರತ್ನ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿದ್ದು ಇದು ವ್ಯಕ್ತಿಯ ಜೀವನ (Life)ದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸುತ್ತದೆ. ಅಂಥ ರತ್ನಗಳಲ್ಲೊಂದಾದ ಪರ್ಲ್ (Pearl) ಅಥವಾ ಮುತ್ತು ಚಂದ್ರನ ಪ್ರತೀಕವಾಗಿದೆ. ಇದನ್ನು ಧರಿಸುವುದರಿಂದ ಹಣಕಾಸಿನ ಸಮಸ್ಯೆ (Financial Problem) ಸಹ ಪರಿಹಾರವಾಗುತ್ತದೆ.


ಜ್ಯೋತಿಷ್ಯ ಶಾಸ್ತ್ರದ (Astrology) ಅಂಗವಾಗಿರುವ ರತ್ನ ಶಾಸ್ತ್ರವು  (Gemology) ನಿತ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತದೆ. ಅಂತಹ ರತ್ನಗಳಲ್ಲಿ ಒಂದಾದ ಮುತ್ತು (Pearl) ಅಥವಾ ಪರ್ಲ್ ಕೂಡಾ ಒಂದಾಗಿದೆ. ಇದು ಶಾಂತತೆ (Peace) ಮತ್ತು ಸಮಾಧಾನದ ಪ್ರತೀಕವಾಗಿದೆ. ಪುರಾತನ ಕಾಲದಿಂದಲೂ ಪರ್ಲ್ ಅನ್ನು ಆಭರಣದ (Jewellery) ರೂಪದಲ್ಲಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೇ ಬೇರೆ ಆಭರಣಗಳಲ್ಲಿ ಅಂದರೆ ಉಂಗುರಗಳಿಗೆ  (Ring), ಸರ ಅಥವಾ ಕಿವಿ ಓಲೆಗಳಲ್ಲಿ ಮುತ್ತನ್ನು ಸೇರಿಸಿ ಧರಿಸುವುದು ಸಹ ಇದೆ.

ರತ್ನ ಶಾಸ್ತ್ರದ ಪ್ರಕಾರ ಪರ್ಲ್ ಚಂದ್ರಗ್ರಹವನ್ನು (Moon) ಪ್ರತಿನಿಧಿಸುತ್ತದೆ. ಯಾವ ಜಾತಕದಲ್ಲಿ ಚಂದ್ರಗ್ರಹವು (Planet) ಶುಭಸ್ಥಾನದಲ್ಲಿದ್ದರೆ ಅಥವಾ ಶುಭ ಸ್ಥಾನದ ಅಧಿಪತಿ ಗ್ರಹ ಚಂದ್ರನಾಗಿದ್ದರೆ ಅಂಥವರು ಪರ್ಲ್ ಧರಿಸುವುದು (Wearing) ಉತ್ತಮವೆಂದು ಹೇಳಲಾಗುತ್ತದೆ. ಇದು ಸಮುದ್ರದ (Sea) ಆಳದಲ್ಲಿ ಸಿಗುವ ಅಪರೂಪದ ರತ್ನವಾಗಿದೆ. ಸಾಮಾನ್ಯವಾಗಿ ಗೋಲಾಕಾರವಾಗಿರುತ್ತದೆ.

ಶಾಸ್ತ್ರದಲ್ಲಿ ಹೇಳುವ ಪ್ರಕಾರ ಶ್ವೇತವರ್ಣದಲ್ಲಿರುವ ಹೊಳೆಯುವ ಗುಂಡಗಿನ ಮುತ್ತು ಅತ್ಯಂತ ಉತ್ತಮವಾದದ್ದೆಂದು ಹೇಳಲಾಗುತ್ತದೆ. ಪರ್ಲ್‌ನಲ್ಲಿ ಎರಡು ಪ್ರಕಾರಗಳಿವೆ. ಅಶುದ್ಧ ಜಲದಲ್ಲಿ ಸಿಗುವ ಮುತ್ತು ಹಾಗು ಶುದ್ಧ ಜಲದಲ್ಲಿ ದೊರಕುವ ಮುತ್ತು. ಅಷ್ಟೇ ಅಲ್ಲದೇ ಮುತ್ತು ಕೇವಲ ಬಿಳಿ ಬಣ್ಣದಲ್ಲಿ ಮಾತ್ರ ಇರುವುದಿಲ್ಲ. ಇದು ಕಪ್ಪು, ಗುಲಬಿ, ಹಳದಿ ಇತ್ಯಾದಿ ಬಣ್ಣಗಳಲ್ಲಿ ಸಹ ದೊರೆಯುತ್ತದೆ.

ಚಂದ್ರನ ಕೃಪೆಗೆ ಮುತ್ತು: ಜ್ಯೋತಿಷ್ಯ ಶಾಸ್ತ್ರದ ದೃಷ್ಠಿಯಿಂದ ನೋಡುವುದಾದರೆ ಜಾತಕದಲ್ಲಿ (Horoscope) ಚಂದ್ರನು ಶುಭ ಪ್ರಭಾವದಲ್ಲಿದ್ದು ಗೋಚರವಾದರೆ ಅಂಥ ವ್ಯಕ್ತಿಗಳು ಪರ್ಲ್ ಧರಿಸುವುದು ಉತ್ತಮ. ಹೀಗಾಗಿ  ಮುತ್ತನ್ನು ಧರಿಸುವುದರಿಂದ ಚಂದ್ರನ ಶುಭ ಪ್ರಭಾವ ವ್ಯಕ್ತಿಯ ಜೀವನದ (Life) ಮೇಲಾಗುತ್ತದೆ.  ಇದರಿಂದ ಸಂಬಂಧಗಳಲ್ಲಿ ಬಾಂಧವ್ಯ ಹೆಚ್ಚತ್ತದೆ. ಪ್ರೇಮ ಭಾವನೆ ಮತ್ತು ಪ್ರತಿಷ್ಠೆಗಳು ವೃದ್ಧಿಸುತ್ತವೆ. 

ಇದನ್ನು ಓದಿ: Solar Eclipse 2022: ಈ ವರ್ಷದಲ್ಲೆಷ್ಟು ಬಾರಿ ಸೂರ್ಯ ಗ್ರಹಣ?

ಮುತ್ತನ್ನು ಧರಿಸುವ ವಿಧಾನ: ಮುತ್ತು ಸಾಮಾನ್ಯವಾಗಿ 5ರಿಂದ 8 ಕ್ಯಾರೆಟ್  ಇರಬೇಕು. ಬೆಳ್ಳಿಯ ಉಂಗುರದಲ್ಲಿ ಜೋಡಿಸಿ, ಶುಕ್ಲಪಕ್ಷದ ಮೊದಲ ಸೋಮವಾರ ಸೂರ್ಯೋದಯದ ನಂತರ ಉಂಗುರವನ್ನು ಹಾಲು, ಗಂಗಾಜಲ, ಸಕ್ಕರೆ ಮತ್ತು ಜೇನುತುಪ್ಪದಿಂದ ಶುದ್ಧೀಕರಿಸಬೇಕು. ನಂತರ ಚಂದ್ರನನ್ನು ಪ್ರಾರ್ಥಿಸಿ 'ಓಂ ಸೋಂ ಸೋಮಾಯ ನಮಃ' ಮಂತ್ರವನ್ನು 108 ಬಾರಿ ಜಪಿಸಬೇಕು. ನಂತರ ಉಂಗುರವನ್ನು ಶಿವನ ಚರಣಗಳಲ್ಲಿಟ್ಟು ಪೂಜಿಸಿ ಕಿರುಬೆರಳಿಗೆ ಧರಿಸಿಕೊಳ್ಳಬೇಕು.

ಶಾಸ್ತ್ರ ಹೇಳುವ ಪ್ರಕಾರ ಮುತ್ತನ್ನು ಧರಿಸಿದ ಮೇಲೆ ಕೇವಲ ನಾಲ್ಕು ದಿನಗಳಲ್ಲಿ ಶುಭ ಪ್ರಭಾವವು ಗೋಚರಿಸುತ್ತದೆ. ಅಷ್ಟೇ ಅಲ್ಲದೆ ಧರಿಸಿ ಎರಡು ವರ್ಷಗಳ ತನಕ ಪರ್ಲ್ ತನ್ನು ಪೂರ್ಣ ಪ್ರಭಾವವನ್ನು ನೀಡುತ್ತದೆ. ಎರಡು ವರ್ಷಗಳ ನಂತರ ಹೊಸ ಮುತ್ತನ್ನು ಧರಿಸುವುದು ಉತ್ತಮ.

ಪರ್ಲ್ ಧರಿಸುವುದರಿಂದ ಆಗುವ ಪ್ರಯೋಜನಗಳು: ಜ್ಯೋತಿಷ್ಯ ಶಾಸ್ತ್ರದ ಅನುಸಾರ ಮುತ್ತನ್ನು ಧರಿಸುವ ವ್ಯಕ್ತಿಗಳು ಶಾಂತ ಚಿತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲದೆ ಚತುರ ಬುದ್ಧಿಮತ್ತೆಯನ್ನು ಹೊಂದುತ್ತಾರೆ. ಇದು ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಾಯಕವಾಗುತ್ತದೆ. ಪರ್ಲ್ ಧರಿಸುವುದರಿಂದ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ ಮತ್ತು ಗೌರವ, ಪ್ರತಿಷ್ಠೆ ವೃದ್ಧಿಸುತ್ತದೆ. ಹಣಕಾಸಿನ ಸಮಸ್ಯೆ ಉಳ್ಳವರು ಮುತ್ತನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತವಾಗುತ್ತಾರೆ.

ಇದನ್ನು ಓದಿ: Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!

ಮೇಷ (Aries), ಕರ್ಕಾಟಕ (Cancer), ವೃಶ್ಚಿಕ (Scorpio) ಮತ್ತು ಮೀನ (Pisces) ಲಗ್ನದಲ್ಲಿ ಜನಿಸಿದವರು ಮುತ್ತನ್ನು ಧರಿಸುವುದರಿಂದ ಹೆಚ್ಚು ಶುಭವನ್ನು ಕಾಣಬಹುದಾಗಿದೆ. ಹಾಗೆಯೇ ಸಿಂಹ (Leo), ತುಲಾ (Libra) ಮತ್ತು ಧನು (Sagittarius) ರಾಶಿಯವರು ಮುತ್ತು ಧರಿಸಿದರೆ ಸಾಮಾನ್ಯ ಪರಿಣಾಮವನ್ನು ಕಾಣಬಹುದಾಗಿದೆ. ಹಾಗಾಗಿ ಪರ್ಲ್ ಧರಿಸಬಯಸುವವರು ರತ್ನ ಶಾಸ್ತ್ರದ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರುವ ತಜ್ಞರಿಂದ ಸಲಹೆ ಪಡೆದು ಧರಿಸುವುದು ಉತ್ತಮ.

Tap to resize

Latest Videos

click me!