ಕೆಲವರು ಸುಳ್ಳು ಹೇಳೋ ಶುಕ್ರಾಚಾರಿಗಳಾಗಿರುತ್ತಾರೆ. ಅವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ಹಾಗಿದ್ದರೂ ಅವರದು ಸುಳ್ಳಿನ ಸರಮಾಲೆ ಎಂಬುದನ್ನು ಫಟಾಫಟ್ ಗುರುತಿಸುವ ಛಾತಿ ಕೆಲವರಿಗಿರುತ್ತದೆ. ಅಂಥ ಸಾಮರ್ಥ್ಯ ಹೊಂದಿರುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
ಯಾರಾದರೂ ಸುಳ್ಳು ಹೇಳಿದರೆ ನಿಮಗದನ್ನು ಕಂಡು ಹಿಡಿವ ಛಾತಿ ಇದೆಯೇ? ಇವರು ಸತ್ಯ ಹೇಳುತ್ತಿಲ್ಲ ಎಂದು ಒಳಮನಸ್ಸು ಎಚ್ಚರಿಸುತ್ತದೆಯೇ?
ಸಾಮಾನ್ಯವಾಗಿ ಸತ್ಯವಾಡುವವರು ಅಪರೂಪಕ್ಕೆ ಸುಳ್ಳು ಹೇಳಿದರೆ, ಅವರ ದೇಹ ಭಂಗಿಗಳು ಸತ್ಯ ಹೇಳುತ್ತಿರುತ್ತವೆ. ಆದರೆ ಮತ್ತೆ ಕೆಲವರಿರುತ್ತಾರೆ, ಅವರ ಮಾತೇ ಹಾಗೆ, ಅದರಲ್ಲಿ ಸತ್ಯ ಎಷ್ಟು, ಸುಳ್ಳೆಷ್ಟು ಎಂದು ವಿಭಾಗಿಸಿ ನೋಡುವುದು ಸುಲಭವಾಗಿರುವುದಿಲ್ಲ. ಇನ್ನು ಕೆಲವರು ಸುಳ್ಳನ್ನು ಸಕ್ಕರೆಯ ಸಿಹಿಯಲ್ಲಿದ್ದಿ ಮಾತನಾಡುತ್ತಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಅನಾಯಾಸವಾಗಿ ಸುಳ್ಳು ಹೇಳುತ್ತಾರೆ. ಹೀಗೆ ಹೇಳುವಾಗ ಅವರ ನಾಲಿಗೆ ತೊದಲುವುದಿಲ್ಲ, ಕೈ ಕಾಲು ಬೆವರುವುದಿಲ್ಲ. ಸುಳ್ಳು ಹೇಳಬಾರದೆಂಬ ನೈತಿಕ ಪ್ರಜ್ಞೆಯೂ ಇರುವುದಿಲ್ಲ.
ಇಂಥ ಅಪ್ಪಟ ಸುಳ್ಳುಗಳನ್ನು ಎಲ್ಲರಿಂದಲೂ ಗುರುತಿಸಲಾಗುವುದಿಲ್ಲ. ಆದರೆ, ಕೆಲವರಲ್ಲಿ ಆರನೇ ಇಂದ್ರಿಯ ಹೆಚ್ಚು ಎಚ್ಚರವಾಗಿದ್ದು, ಈ ಹಸಿ ಸುಳ್ಳುಗಳನ್ನು ಗುರುತಿಸಿ ಬಿಡುತ್ತವೆ. ಇದೂ ಕೂಡಾ ಒಂದು ಪ್ರತಿಭೆಯೇ. ಯಾರಾದರೂ ಸುಳ್ಳು ಹೇಳಿದಾಗ ಪತ್ತೆ ಹಚ್ಚುವ ವಿಲಕ್ಷಣ ಸಾಮರ್ಥ್ಯ ಕೆಲ ರಾಶಿಚಕ್ರಗಳಿಗೆ ಒಲಿದಿರುತ್ತದೆ. ನಿರುಪದ್ರವಿ ಸುಳ್ಳುಗಳಾದರೂ ವ್ಯಕ್ತಿಯು ಪ್ರಾಮಾಣಿಕವಾಗಿಲ್ಲ ಎಂಬುದನ್ನು ಅವು ಸೂಚಿಸುತ್ತವೆ. ಸುಳ್ಳು ಹೇಳುವವರು ವಂಚಕರಾಗಿರಬಹುದು ಎಂದು ಎಚ್ಚರಿಸುತ್ತವೆ. ಯಾವೆಲ್ಲ ರಾಶಿಯವರಲ್ಲಿ ಈ ಲೈ ಡಿಟೆಕ್ಟಿಂಗ್ ಸಾಮರ್ಥ್ಯ ಅದ್ಭುತವಾಗಿರುತ್ತದೆ ಎಂಬ ವಿವರ ಇಲ್ಲಿದೆ.
Planets in astrology: ವಯಸ್ಸಿಗೆ ಮುಂಚೆ ಕಾಡ್ತಿರುವ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಗ್ರಹ ದೋಷ ಕಾರಣ!
ಕನ್ಯಾ(Virgo)
ಕನ್ಯಾ ರಾಶಿಯವರ ಎದುರು ಸುಳ್ಳಾಡಲು ಹೋಗುತ್ತಿದ್ದೀರಿ ಎಂದರೆ ಗುಡ್ ಲಕ್! ಇವರಂತೂ ಮಾನವ ಸುಳ್ಳು ಪತ್ತೆ ಯಂತ್ರ(lie-detectors)ವಿದ್ದಂತೆ. ಎದುರಿನವರ ಮಾತಿನಲ್ಲಿ ಸತ್ಯಾಸತ್ಯತೆ ಪರೀಕ್ಷಿಸಲು ಇವರ ಎಲ್ಲ ಇಂದ್ರಿಯಗಳೂ ಒಂದುಗೂಡುತ್ತವೆ. ಮಾಹಿತಿಯನ್ನೆಲ್ಲ ಒಟ್ಟುಗೂಡಿಸಿ, ಒಂದಕ್ಕೊಂದು ಸಂಬಂಧ ಸರಿಯಿದೆಯೇ ಎಂದು ನೋಡುತ್ತವೆ. ಕೊಂಚ ಕೊಂಡಿ ಸಿಗದೆ ಹೋದರೂ ಇವರಿಗೆ ಸುಳ್ಳಿನ ವಾಸನೆ ಮೂಗಿಗೆ ಬಡಿಯುತ್ತದೆ. ಇದರ ಜೊತೆಗೆ, ಎಲ್ಲದರ ವಿವರಗಳನ್ನೂ ಕಲೆ ಹಾಕುವ ಸ್ವಭಾವ ಇವರದು.
ಮಿಥುನ(Gemini)
ರಾಶಿಚಕ್ರಗಳಲ್ಲೇ ಅತ್ಯುತ್ತಮ ಸಂವಹನ ಸಾಮರ್ಥ್ಯ ಇರುವವರು ಮಿಥುನ ರಾಶಿಯವರು. ಎಲ್ಲ ಬಿಟ್ಟು ಇರ ಬಳಿ ಸುಳ್ಳು ಹೇಳಲು ಹೋದರೆ, ಅದನ್ನು ಮೂರ್ಖತನವೆಂದೇ ತಿಳಿಯಬೇಕು. ಇವರಲ್ಲಿ ಸುಳ್ಳಾಡಿದರೆ ಲಾಯರ್ ಹಾಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಸಿಕ್ಕಿ ಹಾಕಿಸಲು ಚೆನ್ನಾಗಿ ತಿಳಿದವರು ಇವರು. ಏನು ಕೇಳಬೇಕೆಂದು ತಿಳಿದವರಷ್ಟೇ ಅಲ್ಲ, ನೇರಾನೇರ ಉತ್ತರ ಸಿಗುವವರೆಗೂ ಬಿಡದವರು. ಕೇವಲ ಜನ ಸುಳ್ಳು ಹೇಳಿದ್ದನ್ನು ಗುರುತಿಸುವುದಲ್ಲ, ಅವರದನ್ನು ಹೇಳುವ ರೀತಿಯಿಂದಲೇ ಗುರುತಿಸುತ್ತಾರೆ ಇವರು.
Turtle Ring: ಅದೃಷ್ಟ ತರುವ ಆಮೆ ಉಂಗುರ, ನಿಯಮ ಪಾಲಿಸಬೇಕು ಎಚ್ಚರ!
ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರಿಗೆ ಸುಳ್ಳು ಹೇಲಿ ನೀವು ಸಮಾಧಾನವಾಗಿರುವುದು ಸಾಧ್ಯವೇ ಇಲ್ಲ. ನೀವು ಸುಳ್ಳು ಹೇಳುವಾಗಲೇ ಇವರ ಇಂದ್ರಿಯ ಎಚ್ಚರಿಕೆ ಗಂಟೆ ಬಾರಿಸುತ್ತದೆ. ಮೊದಲೇ ತನಿಖೆ ಸ್ವಭಾವ ಇವರದು. ನೀವು ಏನೇ ಹೇಳಿದರೂ ಅದನ್ನು ಪೂರ್ತಿ ಅಗೆದು ಬಗೆದು ತನಿಖೆ ನಡೆಸಿ ನಿಮ್ಮನ್ನು ಸಿಲುಕಿಸಿಬಿಡುತ್ತಾರೆ. ಎಷ್ಟು ಸಮಯ, ಶಕ್ತಿ ಹಾಕಬೇಕೆಂದರೂ ಪರವಾಗಿಲ್ಲ, ಸತ್ಯ ಸಿಗುವವರೆಗೂ ಸುಮ್ಮನಾಗದ ಸ್ವಭಾವ ಇವರದು.
ಕಡೆಗೆ ಸುಳ್ಳಾಡಿದವರನ್ನು ಹಿಡಿದು ಸಿಕ್ಕಿಬಿದ್ದಿರಿ ಎಂಬುದನ್ನು ಅವರಿಗೆ ಮುಟ್ಟಿಸದೆ ಬಿಡುವವರಲ್ಲ.
ಮಕರ(Capricorn)
ಮಕರ ರಾಶಿಯವರು ಸಿಕ್ಕಾಪಟ್ಟೆ ಸತ್ಯನಿಷ್ಠರು. ಹಾಗಾಗಿ, ಅವರಿಗೆ ಸತ್ಯವಲ್ಲದ್ದನ್ನು ಗುರುತಿಸುವುದು ಸುಲಭ. ಯಾರಾದರೂ ನಾಟಕೀಯವಾಗಿ ವರ್ತಿಸಿದರೆ, ಸಿನಿಕತೆ ತೋರಿದರೆ ತಕ್ಷಣವೇ ಇವರು ಅಲರ್ಟ್ ಆಗಿಬಿಡುತ್ತಾರೆ. ಮಾತಾಡುವವರ ಕಣ್ಣನ್ನೇ ದಿಟ್ಟಿಸುತ್ತಾರೆ. ಇವರ ನೋಟ ಎದುರಿಸಲಾಗದೆ ಸುಳ್ಳಾಡುವವರು ಕಣ್ಣು ತೆಗೆಯುತ್ತಲೇ ಇವರಿಗೆ ಮಾತು ಸುಳ್ಳೆಂಬುದು ಅರ್ಥವಾಗಿ ಬಿಡುತ್ತದೆ. ಒಮ್ಮೆ ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ಮತ್ಯಾವತ್ತೂ ಇವರು ನಿಮ್ಮನ್ನಿ ನಂಬಲಾರರು.