Planets in astrology: ವಯಸ್ಸಿಗೆ ಮುಂಚೆ ಕಾಡ್ತಿರುವ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಗ್ರಹ ದೋಷ ಕಾರಣ!

By Suvarna News  |  First Published Mar 3, 2022, 12:17 PM IST

ನೋಡಿದ ತಕ್ಷಣ ಗಮನ ಸೆಳೆಯುವ ದೇಹದ ಅಂಗಗಳಲ್ಲಿ ಕೂದಲು ಕೂಡ ಒಂದು. ಕಪ್ಪನೆಯ, ದಟ್ಟ, ಉದ್ದ ಕೂದಲು ಎಲ್ಲರನ್ನು ಸೆಳೆಯುತ್ತದೆ. ಅಲ್ಲಲ್ಲಿ ಕಾಣಿಸುವ ಬಿಳಿ ಕೂದಲು ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗುತ್ತದೆ. ಈ ಬಿಳಿ ಕೂದಲಿನ ಸಮಸ್ಯೆಗೆ ನಿಮ್ಮ ಜಾತಕದಲ್ಲಿರುವ ದೋಷವೂ ಒಂದು ಕಾರಣವಾಗಿರಬಹುದು. 
 


ಮೊದಲೆಲ್ಲ ವಯಸ್ಸು (Age) 40ರ ಗಡಿ ದಾಟಿದ ಮೇಲೆ ಅಲ್ಲೊಂದು ಇಲ್ಲೊಂದು ಕೂದಲು (Hair) ಬೆಳ್ಳಗಾಗ್ತಿತ್ತು (White). ಆದ್ರೀಗ 20ರ ಹರೆಯದಲ್ಲೇ ಕೂದಲಿಗೆ ಬಣ್ಣ ಬಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕೂದಲು ಬೆಳ್ಳಗಾದ್ರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತೆ ಎಂದು ಜನರು ನಂಬಿದ್ದಾರೆ. ಎಲ್ಲರ ಮುಂದೆ ಯಂಗ್ ಆಗಿ ಕಾಣಲು 80ರ ಹರೆಯದಲ್ಲೂ ಕೂದಲಿಗೆ ಬಣ್ಣ ಬಳಿದುಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಕಾರಣಕ್ಕೆ ಕೂದಲು ಬೆಳ್ಳಗಾಗ್ತಿಲ್ಲ. ಕೂದಲು ಹಣ್ಣಾಗಲು ಅನೇಕರ ಕಾರಣಗಳಿವೆ. ವೈದ್ಯರ ಪ್ರಕಾರ ಕೂದಲು ಬಿಳಿಯಾಗಲು ಮೆಲನಿನ್ ಎಂಬ ಅಂಶದ ಕೊರತೆಯೇ ಕಾರಣ. ಇದಕ್ಕೆ ದುಬಾರಿ ಚಿಕಿತ್ಸೆಯನ್ನು ಜನರು ಮಾಡಿಕೊಳ್ತಾರೆ.

ಕೆಲವರು ಏನೇ ಮಾಡಿದ್ರೂ ಕೂದಲು ಕಪ್ಪಾಗುವುದಿಲ್ಲ. ನಿಮ್ಮ ಕೂದಲೂ ಕಡಿಮೆ ವಯಸ್ಸಿನಲ್ಲಿಯೇ ಬೆಳ್ಳಗಾಗಿದ್ದರೆ, ಚಿಕಿತ್ಸೆ ನಂತ್ರವೂ ಪ್ರಯೋಜನ ಶೂನ್ಯವಾಗಿದ್ದರೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಸ್ವಲ್ಪ ಗಮನ ನೀಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂದಲಿನ ಬಗ್ಗೆ ಹೇಳಲಾಗಿದೆ. ಕೂದಲು ಬಿಳಿಯಾಗಲು ಕಾರಣವೇನು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲ ಗ್ರಹಗಳ ಬಲಹೀನತೆ ವಯಸ್ಸಿಗೆ ಮುಂಚೆಯೇ ಬಿಳಿ ಕೂದಲು ಉಂಟಾಗಲು ಕಾರಣವಾಗ್ತಿದೆ. ಇಂದು ಯಾವ ಗ್ರಹ, ಕೂದಲು ಹಣ್ಣಾಗಲು ಕಾರಣ ಹಾಗೆ ಅದಕ್ಕೆ ಪರಿಹಾರವೇನು ಎಂಬುದನ್ನು ಹೇಳ್ತೇವೆ.

Latest Videos

undefined

ಕೂದಲು ಬಿಳಿಯಾಗಲು ಇವು ಕಾರಣ 
ಶುಕ್ರ ಗ್ರಹ ದುರ್ಬಲನಾದಾಗ ಹಣ್ಣಾಗುತ್ತೆ ಕೂದಲು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರನನ್ನು ಸೌಂದರ್ಯದ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಗ್ರಹ ದುರ್ಬಲ ಸ್ಥಾನದಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗಬಹುದು. ಶುಕ್ರ ಗ್ರಹ ದುರ್ಬಲವಾಗಲು ಕಾರಣ ಯಾವುದಾದರೂ ಪಾಪ ಗ್ರಹದ ಜೊತೆಗಿನ ಒಡನಾಟ. ಶುಕ್ರ ಗ್ರಹವು ಮಂಗಳ, ಶನಿ, ರಾಹು ಅಥವಾ ಕೇತುಗಳೊಂದಿಗೆ ರಾಶಿಚಕ್ರದಲ್ಲಿದ್ದಾಗ ಕೂದಲು ಬಿಳಿಯಾಗುವ ಸಮಸ್ಯೆ ಉಂಟಾಗಬಹುದು. ಇದಲ್ಲದೆ ಶುಕ್ರ ಗ್ರಹವು ಜಾತಕದ 6, 8 ಅಥವಾ 12 ನೇ ಮನೆಯಲ್ಲಿದ್ದಾಗ ಅದೂ ಕೂಡ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.

TURTLE RING: ಅದೃಷ್ಟ ತರುವ ಆಮೆ ಉಂಗುರ, ನಿಯಮ ಪಾಲಿಸಬೇಕು ಎಚ್ಚರ!

ಗುರುವಿನ ಪ್ರಭಾವದಿಂದಲೂ ಬಿಳಿಯಾಗುತ್ತೆ ಕೂದಲು : 
ಕೂದಲು ಬಿಳಿಯಾಗಲು ಒಂದು ಕಾರಣ ಗುರು ಗ್ರಹದ ಬಲವರ್ಧನೆಯೂ ಆಗಿರಬಹುದು. ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಬಲವಾದ ಸ್ಥಾನದಲ್ಲಿದ್ದರೂ ಸಹ ಅವರ ಕೂದಲಿನ ಬಣ್ಣ ಬದಲಾಗುತ್ತದೆ. ಗುರುವು ಬಲವಾದ ಸ್ಥಾನದಲ್ಲಿದ್ದಾಗ ವ್ಯಕ್ತಿ ಮನಸ್ಸು  ಆಧ್ಯಾತ್ಮಿಕತೆಯ ಕಡೆಗೆ ಒಲಿಯಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಅವನು ತನ್ನ ದೇಹದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದಾಗಿ ಅವನ ಕೂದಲು ಬಿಳಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. 

ಸೂರ್ಯನ ದೌರ್ಬಲ್ಯ : ಜ್ಯೋತಿಷ್ಯದಲ್ಲಿ ಸೂರ್ಯನನ್ನು ಕೂದಲುಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಸೂರ್ಯನು ಪ್ರಕಾಶಮಾನ ಗ್ರಹವೂ ಆಗಿದ್ದಾನೆ. ಸೂರ್ಯ ಗ್ರಹ ಜಾತಕದಲ್ಲಿ ದುರ್ಬಲವಾಗಿದ್ದರೆ ಅಂದರೆ ತುಲಾ, ಮಕರ ಅಥವಾ ಕುಂಭದಲ್ಲಿ ಸೂರ್ಯನಿದ್ದಾಗ ಕೂದಲು ಬೆಳ್ಳಗಾಗುತ್ತದೆ. 

ಚಂದ್ರನ ಸ್ಥಿತಿಯೂ ಇದಕ್ಕೆ ಕಾರಣ : ಸೂರ್ಯನಲ್ಲದೇ ಚಂದ್ರನ ದುರ್ಬಲ ಸ್ಥಾನವೂ ಬಿಳಿ ಕೂದಲಿಗೆ ಕಾರಣವಾಗುತ್ತದೆ. ಚಂದ್ರನು ಸೂರ್ಯ, ಮಂಗಳ ಮತ್ತು ರಾಹು ಜೊತೆಯಲ್ಲಿದ್ದಾಗ ಅವನು ದುರ್ಬಲನಾಗುತ್ತಾನೆ. ಆಗ ಕೂದಲಿನ ಬಣ್ಣ ಬದಲಾಗುತ್ತದೆ.

Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?

ದೋಷ ನಿವಾರಿಸಿ, ಕೂದಲು ರಕ್ಷಿಸಿ 
ಕೂದಲು ಬಿಳಿಯಾಗುವುದನ್ನು ತಡೆಯಲು ಜ್ಯೋತಿಷ್ಯದಲ್ಲಿ ಕೆಲವೊಂದು ಪರಿಹಾರಗಳನ್ನು ಹೇಳಲಾಗಿದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಬಹುದು. ಈ ಕ್ರಮಗಳು ವೇದಕಾಲದಿಂದಲೂ ನಡೆದುಕೊಂಡು ಬಂದಿವೆ ಮತ್ತು  ಪರಿಣಾಮಕಾರಿಯಾಗಿದೆ.  
ಕೂದಲು ಬೆಳ್ಳಗಾಗುವುದನ್ನು ತಡೆಯಲು ಪ್ರತಿದಿನ ಯೋಗ-ವ್ಯಾಯಾಮ ಮಾಡಬೇಕು. ಪ್ರತಿದಿನ ಸೂರ್ಯನಮಸ್ಕಾರ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಜೀವನ ಶೈಲಿಯಲ್ಲಿ ಬದಲಾವಣೆ ಬಹಳ ಮುಖ್ಯ. ಪ್ರತಿ ದಿನ ಒಂದೇ ಸಮಯದಲ್ಲಿ ಊಟ,ನಿದ್ರೆಯ ವಿಧಾನವನ್ನು ಅನುಸರಿಸಬೇಕು. ಕೂದಲು ಬಿಳಿಯಾಗುವುದನ್ನು ತಡೆಯಲು ಆಹಾರದ ಬಗ್ಗೆ ಗಮನ ಕೊಡುವುದು ಮುಖ್ಯ.

click me!