
ಶುಕ್ರ ಗ್ರಹದ ಶುಭ ಪ್ರಭಾವದಿಂದ ವ್ಯಕ್ತಿಗೆ ಜೀವನದಲ್ಲಿ ದೈಹಿಕ ಸುಖ, ವೈಭವ, ಕೀರ್ತಿ ಇತ್ಯಾದಿಗಳು ಲಭಿಸುತ್ತವೆ. ಸಾಮಾನ್ಯವಾಗಿ, ಶುಕ್ರ ಗ್ರಹವು ನಮ್ಮ ಜೀವನದಲ್ಲಿ ಸಂಪತ್ತು, ಸಮೃದ್ಧಿ, ಸಂತೋಷ, ಆಕರ್ಷಣೆ ಮತ್ತು ಪ್ರೀತಿಯ ವ್ಯವಹಾರಗಳನ್ನು ಪ್ರತಿನಿಧಿಸುತ್ತದೆ. ಶುಕ್ರನು ಪ್ರತಿಯೊಬ್ಬರೂ ಕೃಪೆ ಬಯಸುವ ಶುಭ ಗ್ರಹವಾಗಿದ್ದು, ಜ್ಯೋತಿಷ್ಯದಲ್ಲಿ, ಶುಕ್ರನ ರಾಶಿಚಕ್ರ ಬದಲಾವಣೆಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಶುಕ್ರ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನು 2023ರ ಏಪ್ರಿಲ್ 6ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರ ಫಲವಾಗಿ ಮಾಲವ್ಯ ರಾಜಯೋಗ(Malavya Rajayoga) ರೂಪುಗೊಳ್ಳುತ್ತದೆ. ಮಾಲವ್ಯ ಯೋಗವು ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾಗಿದ್ದು, ಇದು ವ್ಯಕ್ತಿಗೆ ಅಪರಿಮಿತ ಲಾಭ, ಅದೃಷ್ಟವನ್ನು ನೀಡುತ್ತದೆ.
ಶುಕ್ರವು ಪ್ರೀತಿ, ಸೌಂದರ್ಯ ಮತ್ತು ಆಕರ್ಷಣೆಯ ಸಂಕೇತವಾಗಿದೆ. ಶುಕ್ರನು ವೃಷಭ ಮತ್ತು ತುಲಾ ರಾಶಿಯಲ್ಲಿದ್ದರೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ, ಆದರೆ ಶುಕ್ರನು ಮೀನದಲ್ಲಿ ಉಚ್ಛನಾಗಿದ್ದರೆ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತಾನೆ. ಶುಕ್ರನ ರಾಶಿ ಬದಲಾವಣೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳಿಗೆ ಕೆಲವು ವಿಶೇಷ ಫಲಿತಾಂಶಗಳನ್ನು ತರುತ್ತದೆ. ಅದರಲ್ಲೂ 3 ರಾಶಿಚಕ್ರ ಚಿಹ್ನೆಗಳು(Zodiac signs) ಈ ಸಂದರ್ಭದಲ್ಲಿ ಶುಕ್ರಾನುಗ್ರಹದಿಂದ ಸಾಕಷ್ಟು ಲಾಭದ ಮುಖ ನೋಡಲಿವೆ. ಆ ರಾಶಿಗಳಲ್ಲಿ ನಿಮ್ಮ ರಾಶಿ ಇದೆಯೇ?
Lucky sign on palm: ಅಂಗೈಲಿದ್ದರೆ ಈ ಅಪರೂಪದ ಚಿಹ್ನೆ, ನೀವೇ ಅದೃಷ್ಟಶಾಲಿಗಳು
ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಶುಕ್ರ 2ನೇ ಮತ್ತು 11ನೇ ಮನೆಯ ಅಧಿಪತಿ. ಶುಕ್ರವು ಸಾಮಾನ್ಯವಾಗಿ ಸಂಪತ್ತು ಮತ್ತು ಐಷಾರಾಮಿಗಳನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿಯೇ ಇದು ಧನಲಾಭದ ವಿಷಯದಲ್ಲಿ ಬಹಳ ಒಳ್ಳೆಯ ಸಮಯ. ಶುಕ್ರ ಸಂಕ್ರಮಣದ ಸಮಯದಲ್ಲಿ, ನಿಮ್ಮ ಆಸೆಗಳನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ, ವೃತ್ತಿಜೀವನದಲ್ಲಿ ಸುಗಮ ಬೆಳವಣಿಗೆಯನ್ನು ಕಾಣಬಹುದು. ಆರ್ಥಿಕವಾಗಿ ಹಣ ಉಳಿತಾಯವಾಗಲಿದೆ.
ಕರ್ಕಾಟಕ ರಾಶಿ (Cancer)
ಕರ್ಕ ರಾಶಿಯವರಿಗೆ ಶುಕ್ರನು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ನಾಲ್ಕನೇ ಮನೆಯು ವಸ್ತು ಸೌಕರ್ಯಗಳು, ಮನೆ, ವಾಹನ ಮತ್ತು ತಾಯಿಯನ್ನು ಪ್ರತಿನಿಧಿಸುತ್ತದೆ. ಈ ರಾಶಿಚಕ್ರದ ಜನರಿಗೆ, 11 ನೇ ಮನೆಯಲ್ಲಿ ಶುಕ್ರನ ಸಂಕ್ರಮಣವು ಆಸೆಗಳನ್ನು ಪೂರೈಸುವ ಮತ್ತು ಸಂತೋಷದ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ. ಹೊಸ ಮನೆ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಮದುವೆಯಂತಹ ಶುಭ ಕಾರ್ಯಕ್ರಮಗಳು ನಡೆಯಲಿವೆ. ವೃತ್ತಿಯ ದೃಷ್ಟಿಯಿಂದ ಈ ಸಂಚಾರವು ಅನುಕೂಲಕರವಾಗಿರುತ್ತದೆ. ಬಡ್ತಿಯ ರೂಪದಲ್ಲಿ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದೆ. ವ್ಯಾಪಾರಿಗಳು ಹೆಚ್ಚಿನ ಲಾಭ ಮತ್ತು ಯಶಸ್ಸನ್ನು ಪಡೆಯಬಹುದು.
ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಶುಕ್ರನು 3ನೇ ಮತ್ತು 10ನೇ ಮನೆಯ ಅಧಿಪತಿ. ವೃತ್ತಿ ಜೀವನದ ಪ್ರಗತಿ ಮತ್ತು ಅದರಿಂದ ತೃಪ್ತಿಗಾಗಿ ಶುಕ್ರನ ಈ ವೃಷಭ ಪ್ರಯಾಣವು ನಿಮಗೆ ಪ್ರಯೋಜನಕಾರಿಯಾಗಿದೆ. ಕೆಲಸದ ಸ್ಥಳ ಬದಲಾವಣೆಯಾಗಬಹುದು. ಇದರೊಂದಿಗೆ ಹಿರಿಯರ ಸಹಕಾರವೂ ಸಿಗುತ್ತದೆ. ವೈಯಕ್ತಿಕ ವಿಚಾರದಲ್ಲಿ ಒಡಹುಟ್ಟಿದವರ ಉತ್ತಮ ಬೆಂಬಲವಿರುತ್ತದೆ. ಹೊಸ ಉದ್ಯೋಗಾವಕಾಶಗಳ ರೂಪದಲ್ಲಿ ತೃಪ್ತಿದಾಯಕ ಫಲಿತಾಂಶಗಳನ್ನು ಕಾಣಬಹುದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.