Budh Gochar 2023: ಬುಧನುದಯ, ಮೇಷ ಗೋಚಾರದಿಂದ 4 ರಾಶಿಗಳಿಗೆ ಹೆಚ್ಚುವ ಸವಾಲುಗಳು..

By Suvarna NewsFirst Published Mar 27, 2023, 9:15 AM IST
Highlights

ಬುಧವು ಮಾರ್ಚ್ 31ರಂದು ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಅದಕ್ಕೂ ಮೊದಲು ಮಾರ್ಚ್ 30ರ ಸಂಜೆ ಬುಧವು ಮೀನ ರಾಶಿಯಲ್ಲಿ ಉದಯಿಸುತ್ತಾನೆ ಮತ್ತು ಮರು ದಿನ ಮೇಷ ರಾಶಿಯಲ್ಲಿ ಸಾಗುತ್ತಾನೆ. ಮೇಷ ರಾಶಿಯಲ್ಲಿ ಬುಧ ಉದಯದಿಂದಾಗಿ, 4 ರಾಶಿಚಕ್ರ ಚಿಹ್ನೆಗಳು ವಿಶೇಷವಾಗಿ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತಿದೆ. 

ಸಧ್ಯ ಬುಧ ಮೀನ ರಾಶಿಯಲ್ಲಿ ಅಸ್ತನಾಗಿದ್ದಾನೆ. ಆತ ಮಾರ್ಚ್ 30ರ ಸಂಜೆ 6.39 ಕ್ಕೆ ಮೀನ ರಾಶಿಯಲ್ಲಿ ಉದಯಿಸುತ್ತಾನೆ. ಮರುದಿನ ಮಾರ್ಚ್ 31 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಗ್ರಹದ ಈ ಬದಲಾವಣೆಗಳ ಕಾರಣದಿಂದಾಗಿ 4 ರಾಶಿಚಕ್ರ ಚಿಹ್ನೆಗಳು ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ 4 ರಾಶಿಚಕ್ರದ ಚಿಹ್ನೆಗಳು(zodiac signs) ಯಾವುವು ಎಂದು ತಿಳಿಯೋಣ.

ವೃಷಭ ರಾಶಿ (Taurus)
ಬುಧವನ್ನು ವೃಷಭ ರಾಶಿಯ ಐದನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ನಿಮ್ಮ ಜಾತಕದ 12ನೇ ಮನೆಯಲ್ಲಿ ಉದಯಿಸುತ್ತದೆ. ಬುಧದ ಸ್ಥಾನದಲ್ಲಿನ ಈ ಬದಲಾವಣೆಯು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುವುದಿಲ್ಲ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಅನೇಕ ರೀತಿಯ ಏರಿಳಿತಗಳು ಬರಬಹುದು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ತುಂಬಾ ಚಿಂತಿತರಾಗುವಿರಿ. ವಿದ್ಯಾರ್ಥಿಗಳು ಕೆಲವು ಕಾರಣಗಳಿಂದ ತಮ್ಮ ಅಧ್ಯಯನವನ್ನು ಬಿಡಬೇಕಾಗಬಹುದು. ಹಣಕಾಸಿನ ವಿಷಯಗಳಲ್ಲಿ ಏರಿಳಿತಗಳಿರಬಹುದು ಮತ್ತು ವೃತ್ತಿಯ ವಿಷಯದಲ್ಲಿಯೂ ಅನೇಕ ಸವಾಲುಗಳನ್ನು ಎದುರಿಸಬಹುದು. ಪರಿಹಾರವಾಗಿ ಬುಧವಾರ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.

ಈ 5 ರಾಶಿಯವ್ರು ಪಕ್ಕಾ Marriage Material; ವೈವಾಹಿಕ ಜೀವನಕ್ಕೆ ಬೇಗ ಒಗ್ಗಿಕೊಳ್ತಾರೆ!

ಕರ್ಕಾಟಕ ರಾಶಿ (Cancer)
ಬುಧವನ್ನು ಕರ್ಕ ರಾಶಿಯ 12 ಮತ್ತು 3ನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಬುಧವು ನಿಮ್ಮ ರಾಶಿಯ 10ನೇ ಮನೆಯಲ್ಲಿ ಉದಯಿಸುತ್ತದೆ. ನಿಮ್ಮ ಜಾತಕದಲ್ಲಿ ಬುಧದ ಈ ಸ್ಥಾನವನ್ನು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಕೆಲವು ಕಾರಣಗಳಿಂದ ಸಮಾಜದಲ್ಲಿ ನೀವು ಅಪಖ್ಯಾತಿಗೆ ಒಳಗಾಗಬಹುದು. ವೃತ್ತಿಪರ ಜೀವನದಲ್ಲಿಯೂ ನೀವು ತೊಂದರೆಗಳನ್ನು ಎದುರಿಸಬಹುದು. ಬಾಸ್ ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧಗಳು ಹದಗೆಡಬಹುದು. ಈ ಸಮಯದಲ್ಲಿ ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಇದು ಉದ್ಯೋಗ ನಷ್ಟಕ್ಕೂ ಕಾರಣವಾಗಬಹುದು. ಹಣಕಾಸಿನ ವಿಷಯಗಳಲ್ಲಿಯೂ ಕಷ್ಟದ ಸಂದರ್ಭಗಳು ಉಂಟಾಗಬಹುದು. ಪರಿಹಾರವಾಗಿ, ಬುಧವಾರ 5 ಕನ್ನಿಕಾ ಮುತ್ತೈದೆಯರಿಗೆ ಹಸಿರು ಬಳೆ ತೊಡಿಸಿ.

ಕನ್ಯಾ ರಾಶಿ (Virgo)
ನಿಮ್ಮ ಜಾತಕದಲ್ಲಿ ಬುಧವನ್ನು 1 ಮತ್ತು 10 ನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಬುಧ ನಿಮ್ಮ 8ನೇ ಮನೆಯಲ್ಲಿ ಉದಯಿಸುತ್ತಾನೆ. ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು. ಕುಟುಂಬದ ಸದಸ್ಯರ ಆರೋಗ್ಯಕ್ಕಾಗಿ ನೀವು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ, ನೀವು ಯೋಜಿಸಿದಂತೆಯೇ ನಡೆದುಕೊಳ್ಳಲು ಪ್ರಯತ್ನಿಸಿ. ಇಲ್ಲದಿದ್ದರೆ ಖರ್ಚು ಹೆಚ್ಚಾಗಿ ಉದ್ವಿಗ್ನತೆ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಬಗ್ಗೆ ಗಾಸಿಪ್‌ಗಳು ಇರಬಹುದು. ಜನರು ನಿಮ್ಮ ವಿರುದ್ಧ ಸಂಚು ಮಾಡಬಹುದು. ಈ ಸಮಯದಲ್ಲಿ ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸದ್ಯಕ್ಕೆ ನಿಲ್ಲಿಸಿ. ಮನಸ್ಸಿನ ಸಮಾಧಾನಕ್ಕಾಗಿ ಧ್ಯಾನ ಮಾಡಿ. ಪರಿಹಾರವಾಗಿ, ಪ್ರತಿ ಬುಧವಾರ ದುರ್ಗಾ ಸಪ್ತಶತಿ ಪಾರಾಯಣ ಮಾಡಿ.

ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ! ಅಪಾಯ ತಪ್ಪೋದಿಲ್ಲ..

ಕುಂಭ ರಾಶಿ (Aquarius)
ನಿಮ್ಮ ರಾಶಿಚಕ್ರದಲ್ಲಿ, ಬುಧವನ್ನು 5 ಮತ್ತು 8ನೇ ಮನೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅದು ನಿಮ್ಮ 3ನೇ ಮನೆಯಲ್ಲಿ ಉದಯಿಸುತ್ತದೆ.  ಈ ಸಮಯದಲ್ಲಿ ನೀವು ಕಿರಿಯ ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಹಾದಿಯಲ್ಲಿ ಅಡೆತಡೆಗಳು ಇರಬಹುದು. ಯಾವುದೇ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ. ಮೋಸ ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಅಪಾಯಕಾರಿ ಹೂಡಿಕೆಯನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಪರಿಹಾರವಾಗಿ ಬುಧವಾರ ಹಸಿರು ಬಟ್ಟೆಗಳನ್ನು ದಾನ ಮಾಡಿ.

click me!