ಏಪ್ರಿಲ್ 27ರಂದು ಶುಕ್ರ ಗ್ರಹವು ಮೀನ ರಾಶಿಗೆ ಸಂಚರಿಸಲಿದೆ. ಇದರಿಂದ ಎಲ್ಲ ರಾಶಿಗಳ ಬಾಳಿನಲ್ಲಿ ಬಹಳಷ್ಟು ಬದಲಾವಣೆಯ ಗಾಳಿ ಬೀಸಲಿದೆ.
ಏಪ್ರಿಲ್ 27ರಂದು ನಮ್ಮ ಜೀವನದ ವಿಲಾಸಿತನಕ್ಕೆ ಕಾರಣವಾಗುವ ಶುಕ್ರ(Venus) ಗ್ರಹವು ಮೀನ ರಾಶಿಯನ್ನು ಪ್ರವೇಶಿಸುತ್ತಿದೆ. ಶುಕ್ರನು ಕೇವಲ ಲಕ್ಷುರಿಗಷ್ಟೇ ಅಲ್ಲ, ಪ್ರೀತಿ, ಸೃಜನಶೀಲತೆ, ಸೌಂದರ್ಯ ಎಲ್ಲದರ ಅಧಿಪತಿ. ಶುಕ್ರನು ಜಾತಕದಲ್ಲಿ ಬಲವಾದ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಾಕಷ್ಟು ವೈಭೋಗ, ಸಂತೋಷ ಕಾಣಬಹುದು. ಮೀನ ರಾಶಿ(Pisces)ಯು ಶುಕ್ರನ ಆಧ್ಯಾತ್ಮಿಕ ಚಿಹ್ನೆಯಾಗಿದ್ದು, ಇಲ್ಲಿರುವಾಗ ಈ ಗ್ರಹವು ಬಹಳ ಸ್ಟ್ರಾಂಗ್ ಆಗಿರಲಿದೆ. ಹಾಗಾದರೆ ಈ ಶುಕ್ರ ಗೋಚಾರವು ಎಲ್ಲ ರಾಶಿಗಳಿಗೆ ಯಾವ ಫಲ ತರಲಿದೆ ನೋಡೋಣ.
ಮೇಷ(Aries): ನೀವು ನಿಮ್ಮ ಕುಟುಂಬವನ್ನು ಇನ್ನಷ್ಟು ಹಚ್ಚಿಕೊಳ್ಳುತ್ತೀರಿ ಮತ್ತು ಮನೆಗೆ ಐಷಾರಾಮಿ ವಸ್ತುಗಳನ್ನು ತರಲು ಖರ್ಚು ಮಾಡಲು ಬಯಸುತ್ತೀರಿ. ವಿಶೇಷವಾಗಿ ಸಾಗರೋತ್ತರದಿಂದ ಹೊಸ ಪಾಲುದಾರಿಕೆಗಳು ರೂಪುಗೊಳ್ಳುವುದರಿಂದ ವ್ಯಾಪಾರದಲ್ಲಿರುವವರು ಹೆಚ್ಚಿನ ಪ್ರತಿಫಲ ಪಡೆಯುತ್ತಾರೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಏಕಾಂಗಿಯಾಗಿರುವವರು ತಮ್ಮ ಅತ್ಯುತ್ತಮ ಮಾತುಗಾರಿಕೆ ಕೌಶಲದಿಂದ ಇಷ್ಟಪಟ್ಟವರನ್ನು ಸೆಳೆಯಲು ಸಾಧ್ಯವಾಗುತ್ತದೆ.
ವೃಷಭ(Taurus): ನೀವು ನಿಮ್ಮ ಗುರಿ ಕಡೆಗೆ ಗಮನ ಹರಿಸುತ್ತೀರಿ ಹಾಗೂ ನಿಮ್ಮ ವೃತ್ತಿಸಂಬಂಧಿ ಸ್ನೇಹಜಾಲ ವಿಸ್ತರಿಸಿಕೊಳ್ಳುತ್ತೀರಿ. ಆಟೋಮೊಬೈಲ್ ಮತ್ತು ಟೂರಿಸಂ ಕ್ಷೇತ್ರದಲ್ಲಿರುವವರು ಅಪಾರ ಲಾಭ ಪಡೆಯಲಿದ್ದಾರೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಪ್ರತಿಯಾಗಿ ಅತ್ಯುತ್ತಮ ಗಳಿಕೆ ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ನಿಮ್ಮ ರೊಮ್ಯಾಂಟಿಕ್ ಜೀವನ ಹೆಚ್ಚು ಸುಂದರವಾಗಿರುತ್ತದೆ.
ಮಿಥುನ(Gemini): ವೃತ್ತಿ ಬೆಳವಣಿಗೆ ಮತ್ತು ಜನರ ಕಣ್ಣಿಗೆ ಬೀಳುವಲ್ಲಿ ಯಶಸ್ವಿಯಾಗಲಿದ್ದೀರಿ. ನಿಮ್ಮ ಜ್ಞಾನ ಹಾಗೂ ಸಾಮರ್ಥ್ಯವನ್ನು ವೃತ್ತಿಸ್ಥಳದಲ್ಲಿ ಪ್ರದರ್ಶಿಸುವುದು ಉತ್ತಮ. ಹಿಂದೆ ಮಾಡಿದ ಹೂಡಿಕೆಗಳು ಉತ್ತಮ ಫಲ ನೀಡಲಿವೆ. ವೈಯಕ್ತಿಕ ಜೀವನಕ್ಕೆ ಬಂದರೆ ಸಂಗಾತಿಗೆ ಹೆಚ್ಚು ಸಮಯ ನೀಡುವ ಜೊತೆಗೆ ಮನಃಶಾಂತಿ ಇರುತ್ತದೆ. ದೂರ ಪ್ರವಾಸ ಯೋಜಿಸಬಹುದು.
ಕಟಕ(Cancer): ಹೊಸತನ್ನು ಕಲಿವ ಮಹದಾಸೆ ಇರುತ್ತದೆ ಮತ್ತು ನಿಮ್ಮ ಸ್ವಂತ ಐಡಿಯಾಗಳು ವೃತ್ತಿ ಸ್ಥಳದಲ್ಲಿ ಎಲ್ಲರ ಮೆಚ್ಚುಗೆ ಗಳಿಸಲಿವೆ. ಸಂಬಳ ಹೆಚ್ಚಳ ಹಾಗೂ ಬಡ್ತಿ ಇರುವುದು. ಇದರೊಂದಿಗೆ ಬೇರೆ ಹಿತಕರ ಸುದ್ದಿಯೂ ಸಿಗಲಿದೆ. ನಿಮ್ಮಲ್ಲಿ ಕೆಲವರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು. ತಂದೆಯೊಂದಿಗೆ ಸಂಬಂಧ ಚೆನ್ನಾಗಿರಿಸಿಕೊಳ್ಳಿ. ಕುಟುಂಬದೊಂದಿಗೆ ದೂರ ಪ್ರವಾಸ ಹೋಗುವುದರಿಂದ ಸಂಬಂಧ ಬಲಗೊಳ್ಳಲಿವೆ.
ಸಿಂಹ(Leo): ವೃತ್ತಿ ಜೀವನದ ಬಗ್ಗೆ ಅನಿಶ್ಚಿತತೆ ಕಾಡಲಿದೆ. ಹೊಸ ಯೋಜನೆಗಳನ್ನು ಪಡೆವಲ್ಲಿ, ಬಾಕಿ ಉಳಿದಿರುವ ಸಂಬಳ ಹೆಚ್ಚಳ ಪಡೆವಲ್ಲಿ ತಡವಾಗಬಹುದು. ಸಂಶೋಧನಾ ರಂಗ ಅಥವಾ ವಿಜ್ಞಾನ ರಂಗದಲ್ಲಿರುವವರಿಗೆ ಉತ್ತಮ ಲಾಭವಿದೆ. ನಿಮ್ಮ ಉದ್ಯಮ ಪಾಲುದಾರರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡರೆ ಲಾಭವಿದೆ. ನಿಮ್ಮಲ್ಲಿ ಕೆಲವರಿಗೆ ಪಿತ್ರಾರ್ಜಿತ ಆಸ್ತಿ ದೊರೆಯಲಿದೆ.
ಕನ್ಯಾ(Virgo): ನಿಮ್ಮ ವ್ಯಕ್ತಿತ್ವ ಹೊಳೆಯಲಿದೆ. ಇದರಿಂದ ಸುತ್ತಲಿರುವವರು ನಿಮ್ಮೆಡೆಗೆ ಗಮನ ಹರಿಸಲಿದ್ದಾರೆ. ಬಿಸ್ನೆಸ್‌ನಲ್ಲಿರುವವರು ಹೊಸ ಪಾಲುದಾರಿಕೆ ಹೊಂದುವ ಸಾಧ್ಯತೆಗಳಿವೆ. ಅವಿವಾಹಿತರು ಸಧ್ಯಗಲ್ಲಿ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಪ್ರೇಮಿಗಳ ನಡುವೆ ಪ್ರೀತಿ ಹೆಚ್ಚಲಿದ್ದು, ಸಧ್ಯದಲ್ಲೇ ನಿಮ್ಮ ಜೀವನದಲ್ಲಿ ಉತ್ಸಾಹ ಹೆಚ್ಚಲಿದೆ.
Akshaya Tritiya 2022: ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?
ತುಲಾ(Libra): ನಿಮ್ಮ ಹಕ್ಕುಗಳಿಗಾಗಿ ಹೋರಾಡಲು ಸಿದ್ಧವಾಗಿರಿ. ನೀವು ಕೇಳದೆ ಬಡ್ತಿ ಸಿಗದೆ ಹೋಗಬಹುದು. ಬಾಯಿ ಬಿಟ್ಟು ಕೇಳದೆ ಸಂಬಳ ಹೆಚ್ಚಳವಾಗದಿರಬಹುದು. ಬಿಸ್ನೆಸ್‌ನಲ್ಲಿರುವವರು ಹೆಚ್ಚು ಕೇರ್‌ಫುಲ್ ಆಗಿರಬೇಕು. ಯಾವುದಾದರೂ ಫಲಿತಾಂಶ ನೀಡದ ವಿಷಯಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ವಿವಾಹಿತರು ಸಂತೋಷವಾಗಿರಲಿದ್ದಾರೆ. ಆದರೆ, ಒಂಟಿಯಾಗಿರುವವರು ತಮ್ಮ ಸಂಬಂಧಗಳ ಜೊತೆ ಅನಿಶ್ಚಿತತೆ ಅನುಭವಿಸಲಿದ್ದಾರೆ.
ವೃಶ್ಚಿಕ(Scorpio): ನಿಮ್ಮ ಕ್ರಿಯಾಶೀಲತೆ ಮತ್ತು ಹೊಸತಾದ ಯೋಚನೆಗಳು ತುಂಬಾ ಚೆನ್ನಾಗಿ ಫಲ ಕೊಡಲಿವೆ. ನಿಮ್ಮ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಿದೇಶದಲ್ಲಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇರಲಿದೆ. ವಿವಾಹಿತ ದಂಪತಿಗೆ ಕುಟುಂಬ ಹಿಗ್ಗುವ ಸಿಹಿ ಸುದ್ದಿ ಸಿಗಲಿದೆ. ಹೂಡಿಕೆ ಕೆಲ ಕಾಲ ತಡೆ ಹಿಡಿಯುವುದು ಉತ್ತಮ.
ಧನು(Sagittarius): ವೃತ್ತಿ ಜೀವನದಲ್ಲಿ ಹೆಚ್ಚು ಸಫಲತೆ ಪಡೆಯಲಿದ್ದೀರಿ. ಸಾಮರ್ಥ್ಯ ಹಿಗ್ಗಲಿದೆ. ಜೀವನದ ಸಣ್ಣ ವಿಷಯಗಳನ್ನು ಅನುಭವಿಸಲು ಆರಂಭಿಸುವಿರಿ. ಹೊಸ ವಾಹನ ಕೊಳ್ಳಲಿರುವಿರಿ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವಿರಿ.
ಮಕರ(Capricorn): ಕೆಲಸದ ವಿಷಯವಾಗಿ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗ ಬದಲಿಸಲು ಬಯಸುವವರಿಗೆ ಹೊಸ ಉದ್ಯೋಗ ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಅತ್ಯುತ್ತಮ ಸಂಬಂಧ ಕಾಯ್ದುಕೊಂಡರೆ ಅಪಾರ ಲಾಭವಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಹತ್ತಿರದವರೊಂದಿಗೆ ಸಂಬಂಧ ಹೆಚ್ಚು ಗಟ್ಟಿಯಾಗಲಿದೆ. ನಿಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲಿದ್ದಾರೆ.
Focus ಮಾಡಲು ಕಷ್ಟವೇ? ಈ ಮಂತ್ರ ಪಠಿಸಿ, ಏಕಾಗ್ರತೆ ಹೆಚ್ಚುತ್ತೆ!
ಕುಂಭ(Aquarius): ಹಣದ ವಿಷಯದಲ್ಲಿ ಅದೃಷ್ಟಶಾಲಿಯಾಗುವಿರಿ. ನಿಮ್ಮ ಉಳಿತಾಯ ಹೆಚ್ಚಿಸುವತ್ತ ಗಮನ ಹರಿಸಿ ಮತ್ತು ಧೀರ್ಘಾವಧಿಗೆ ಚಿನ್ನ ಸೇರಿದಂತೆ ಇತರೆ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿ. ನಿಮ್ಮ ವೃತ್ತಿ ಭವಿಷ್ಯದ ಬಗ್ಗೆ ಪ್ರೋತ್ಸಾಹಕ ಸುದ್ದಿ ಸಿಗಲಿದೆ. ಒಂಟಿಯಾಗಿರುವವಪು ಜಂಟಿಯಾಗಲಿದ್ದಾರೆ. ಕುಟುಂಬ ಒಗ್ಗೂಡುವಂತ ಸಾಕಷ್ಟು ಸಮಾರಂಭಗಳು ನಡೆಯಲಿವೆ.
ಮೀನ(Pisces): ನಿಮ್ಮ ಆತ್ಮವಿಶ್ವಾಸ ಕುಗ್ಗುವುದು. ಆದರೆ, ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಗುರಿಯಿಂದ ಅಲುಗಾಡಿಸಲು ಬಿಡಬೇಡಿ. ಆಧ್ಯಾತ್ಮಿಕ ವಿಷಯಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮ್ಮ ಯೋಚನೆಗಳು ಸ್ಪಷ್ಟತೆ ಪಡೆಯಲಿವೆ. ಸಂಶೋಧನೆ ಮತ್ತು ಲೆಕ್ಕಾಚಾರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರುವವರಿಗೆ ಅತ್ಯುತ್ತಮ ಸುದ್ದಿ ಸಿಗಲಿದೆ. ಒಂಟಿಯಾಗಿರುವವರು ಪ್ರೀತಿಯಲ್ಲಿ ಬೀಳಲಿದ್ದಾರೆ.