ಋಷಿಗಳು ಹದ್ದುಗಳ ರೂಪದಲ್ಲಿ ಕಾಣಿಸುವ ಐತಿಹ್ಯ ಹೊಂದಿದೆ ಈ ದೇವಾಲಯ!

By Suvarna News  |  First Published May 10, 2022, 4:11 PM IST

ಈ ದೇವಾಲಯಕ್ಕೆ ಎರಡು ಈಜಿಪ್ಟಿಯನ್ ಹದ್ದುಗಳು ಪ್ರತಿ ದಿನ ಒಂದೇ ಸಮಯದಲ್ಲಿ ಬಂದು ಇಲ್ಲಿನ ಅರ್ಚಕರು ಕೊಡುತ್ತಿದ್ದ ಅನ್ನ ತಿಂದು ಹೋಗುತ್ತಿದ್ದವು. ಈ ರಣಹದ್ದುಗಳು ಶಿವನಿಂದ ಶಿಕ್ಷೆಗೊಳಗಾದ ಋಷಿಗಳೆಂಬ ದಂತಕತೆ ಇದೆ. ಎಲ್ಲಿದೆ ಈ ದೇವಾಲಯ? 


ಪ್ರತಿಯೊಂದು ಪುರಾತನ ದೇವಾಲಯಕ್ಕೂ ಐತಿಹ್ಯವಿರುತ್ತದೆ. ಕೆಲವಕ್ಕೆ ಸಂಬಂಧಿಸಿದ ಸ್ಥಳಪುರಾಣಗಳು ರೋಚಕವಾಗಿದ್ದರೆ, ಮತ್ತೆ ಕೆಲವು ದೇವಾಲಯದ ಪುರಾಣ ಕತೆಗಳು ಕುತೂಹಲ ಹುಟ್ಟಿಸುತ್ತವೆ. ಇನ್ನು ಕೆಲವು ಹೀಗೂ ಉಂಟೆ ಎಂದು ಅಚ್ಚರಿಗೆ ಕಾರಣವಾಗುತ್ತವೆ. ತಮಿಳುನಾಡಿನಲ್ಲಂತೂ ದೇವಾಲಯಕ್ಕೆ ಕೊರತೆಯಿಲ್ಲ. ಒಂದಕ್ಕಿಂತ ಒಂದು ಚೆಂದದ ದೇವಾಲಯವಿದ್ದು, ಒಂದೊಂದರ ಐತಿಹ್ಯ(legend)ವೂ ವಿಶಿಷ್ಠವಾಗಿದೆ. 

ಅಂಥ ಒಂದು ಅಪರೂಪದ ದೇವಾಲಯ ವೇದಗಿರೀಶ್ವರರ್ ದೇವಾಲಯ(Vedagiriswarar Temple). ಈ ದೇವಾಲಯವು ಹದ್ದಿನ ದೇವಾಲಯವೆಂದೇ ಜನಪ್ರಿಯವಾಗಿದೆ. ಈಶ್ವರನ ದೇವಾಲಯವಾದರೂ ಹದ್ದಿನ ದೇವಾಲಯ ಎಂದು ಹೆಸರು ಗಳಿಸಿರುವುದರ ಹಿಂದೊಂದು ವಿಶೇಷ ಘಟನೆಯಿದೆ. 

Tap to resize

Latest Videos

ಹೌದು, ವೇದಗಿರಿಶ್ವರರ್ ದೇವಾಲಯವು ತಮಿಳುನಾಡಿನ ತಿರುಕಲುಕುಂದ್ರಂನಲ್ಲಿರುವ ಜನಪ್ರಿಯ ದೇವಾಲಯವಾಗಿದೆ. ಇದನ್ನು ಭಕ್ತರು ಹೆಚ್ಚು ಗೌರವಿಸುತ್ತಾರೆ. ಇದು ಚೆನ್ನೈನಿಂದ 72 ಕಿಮೀ ಮತ್ತು ಮಹಾಬಲಿಪುರಂನಿಂದ 16 ಕಿಮೀ ದೂರದಲ್ಲಿದೆ. ಇಲ್ಲಿ ಶಿವ(Lord Shiva)ನು ವೇದಗಿರಿಶ್ವರರೆಂದು ಕರೆಯಲ್ಪಡುವ ಪ್ರಧಾನ ದೇವತೆ. ಈಜಿಪ್ಟಿಯನ್ ಈಗಲ್ಸ್‌ನ ಇತಿಹಾಸದಿಂದಾಗಿ ಈ ಬೆಟ್ಟದ ಮೇಲಿನ ದೇವಾಲಯವು ಭೇಟಿ ನೀಡಲು ಯೋಗ್ಯವಾಗಿದೆ. 

ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

ವೇದಗಿರಿಶ್ವರರ್ ದೇವಾಲಯದ ಇತಿಹಾಸ 
ಪ್ರಾಚೀನ ಕಾಲದಲ್ಲಿ ಈ ಪಟ್ಟಣವನ್ನು ತಿರುಕಝುಗುಕುಂದ್ರಂ ಎಂದು ಕರೆಯಲಾಗುತ್ತಿತ್ತು. ಎರಡು ಈಜಿಪ್ಟಿನ ರಣಹದ್ದು(Egyptian eagles)ಗಳು ದೇವಾಲಯದ ಸಮೀಪವಿರುವ ಬೆಟ್ಟಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರಿಂದ ಇದು ನಂತರ ಪಕ್ಷಿ ತೀರ್ಥಂ ಎಂಬ ಹೆಸರನ್ನು ಪಡೆಯಿತು. ದೇವಸ್ಥಾನದ ಅರ್ಚಕರು ಕೊಡುವ ಅನ್ನ ತಿನ್ನಲು ದಿನವೂ ಎರಡು ರಣಹದ್ದುಗಳು ಒಂದೇ ಸಮಯಕ್ಕೆ ಬರುತ್ತಿದ್ದವು. ಒಂದು ದಂತಕಥೆಯ ಪ್ರಕಾರ, ಈ ರಣಹದ್ದುಗಳು ಅಥವಾ ಹದ್ದುಗಳನ್ನು ಶಿವನು ಶಿಕ್ಷಿಸಿದ ಋಷಿಗಳೆಂದು(sages) ಪರಿಗಣಿಸಲಾಗಿದೆ. ಆದ್ದರಿಂದ, ಇದು ಈಗಲ್ ಟೆಂಪಲ್(Eagle Temple) ಎಂದು ಪ್ರಸಿದ್ಧವಾಗಿದೆ. ಆದರೆ, ಹಲವು ವರ್ಷಗಳಿಂದ ಈ ಹದ್ದುಗಳು ದೇವಸ್ಥಾನದ ಆವರಣದಲ್ಲಿ ಕಾಣಿಸುತ್ತಿಲ್ಲ.

ಭಾರದ್ವಾಜರ ಕೋರಿಕೆ
ಋಷಿ ಭಾರದ್ವಾಜ(Sage Bharadwaj)ರ ಕೋರಿಕೆಯನ್ನು ಪೂರೈಸಲು ಶಿವನು ವಿವಿಧ ವೇದಗಳನ್ನು ಸೂಚಿಸುವ ಮೂರು ಪರ್ವತಗಳನ್ನು ವರವಾಗಿ ಸೃಷ್ಟಿಸಿದನು ಎಂದು ಒಂದು ದಂತಕಥೆ ಹೇಳುತ್ತದೆ. 
ಋಷಿಯು ಎಲ್ಲ ವೇದಗಳನ್ನು ಕಲಿಯಲು ತಾವು ಹೆಚ್ಚು ಕಾಲ ಬದುಕಬೇಕೆಂದು ಬಯಸಿದರು ಮತ್ತು ದೊಡ್ಡ ತಪಸ್ಸನ್ನು ಮಾಡಿದರು. ಆದರೆ, ಕಲಿಕೆಯು ಅನಂತ ಮತ್ತು ಈ ಪರ್ವತಗಳಂತೆ ದೊಡ್ಡದಾಗಿದೆ ಎಂದು ವಿವರಿಸಲು ಶಿವನು ಮೂರು ಬೃಹತ್ ಪರ್ವತಗಳನ್ನು ಸೃಷ್ಟಿಸಿದನು. ಕಲಿಯುಗದಲ್ಲಿ ಜನರು ಆಳವಾದ ಭಕ್ತಿಯಿಂದ ಮೋಕ್ಷವನ್ನು ಪಡೆಯಬಹುದು ಎಂದೂ ಈ ಸಂದರ್ಭದಲ್ಲಿ ಶಿವನು ಹೇಳಿದನು. ಈ ದೇವಾಲಯವಿರುವ ಬೆಟ್ಟವು ಶಿವನು ರಚಿಸಿದ ಮೂರು ಪರ್ವತಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಇಲ್ಲಿ ಶಿವನನ್ನು ವೇದ ಪರ್ವತಗಳ ಭಗವಂತ ಎಂದು ಕರೆಯಲಾಗುತ್ತದೆ. ಹೀಗೆ ವೇದದ ಅಗಾಧತೆ ತೋರುವ ಬೆಟ್ಟದ ಮೇಲೆ ಶಿವ ಇರುವುದರಿಂದ ಈ ಸ್ಥಳಕ್ಕೆ ವೇದಗಿರೀಶ್ವರ್ ಎಂಬ ಹೆಸರು ಬಂದಿದೆ. 

Sita Navami 2022: ಸೀತೆ ರಾವಣನ ಮಗಳು! ಈ ಕತೆ ಕೇಳಿದ್ರೆ ಯಾಕಿರಬಾರ್ದು ಅಂತೀರಿ..

 ಶಿವನ (ವೇದಗಿರಿಶ್ವರರ್) ಮುಖ್ಯ ದೇವಾಲಯವು ಬೆಟ್ಟದ ತುದಿಯಲ್ಲಿದೆ ಮತ್ತು ತ್ರಿಪುರಸುಂದರಿ ಅಮ್ಮನ (ಅವನ ಪತ್ನಿ ಪಾರ್ವತಿ) ದೇವಾಲಯವು ತಪ್ಪಲಿನಲ್ಲಿದೆ. ಬೆಟ್ಟದ ತಪ್ಪಲಿನಲ್ಲಿ ದೇವಸ್ಥಾನದ ತೊಟ್ಟಿಯೂ ಇದೆ. ದ್ರಾವಿಡ ಶೈಲಿಯ ವಾಸ್ತುಶೈಲಿಯನ್ನು ಹೊಂದಿರುವ ಈ ದೇವಾಲಯವು ಭಕ್ತರನ್ನು ವಿವಿಧ ಕಾರಣಗಳಿಗಾಗಿ ಆಕರ್ಷಿಸುತ್ತದೆ. 
 

click me!