ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

Published : May 10, 2022, 03:14 PM IST
ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!

ಸಾರಾಂಶ

ಚಂದ್ರಗ್ರಹಣದ ಪರಿಣಾಮವಾಗಿ ಮೂರು ರಾಶಿಗಳ ಅದೃಷ್ಟ ಬದಲಾಗಿ ಲಾಭ ಹೆಚ್ಚಲಿದೆ. ಆ ಮೂರು ರಾಶಿಗಳಲ್ಲಿ ನಿಮ್ಮ ರಾಶಿ ಇದೆಯೇ?

ಈ ವರ್ಷದ ಮೊದಲ ಚಂದ್ರಗ್ರಹಣ ಆ ತಿಂಗಳ 16ರಂದು ಸಂಭವಿಸುತ್ತಿದೆ. ಈ ವರ್ಷದಲ್ಲಿ ಎರಡು ಚಂದ್ರಗ್ರಹಣಗಳಿದ್ದು, ಎರಡನೆಯದು ನವೆಂಬರ್ 8ರಂದು ಘಟಿಸಲಿದೆ. 

ಮೇ 16ರಂದು ನಡೆಯುತ್ತಿರುವ ಚಂದ್ರ ಗ್ರಹಣವು ಮೇ 15 ರಂದು ರಾತ್ರಿ 10.28  ಪ್ರಾರಂಭವಾಗಿ, ಮೇ 16ರಂದು ಬೆಳಗ್ಗೆ 12.11ರ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮತ್ತು ಅರ್ಧರಾತ್ರಿ 1.55ರ ಹೊತ್ತಿಗೆ ಮುಗಿಯುತ್ತದೆ.  ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದರೂ ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಸೂತಕ ಸಮಯ ಇರುವುದಿಲ್ಲ. ಆದ್ದರಿಂದ ವೈಶಾಖ ಹುಣ್ಣಿಮೆ ಆಚರಿಸಲು ಗ್ರಹಣ ಅಡ್ಡಿಯಾಗುವುದಿಲ್ಲ. ಆದರೆ ಗ್ರಹಣವು ಕೆಲವು ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಯಾವ ರಾಶಿಯವರಿಗೆ ಚಂದ್ರಗ್ರಹಣವು ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ಈ ಬಾರಿ ವೃಶ್ಚಿಕ ರಾಶಿಯಲ್ಲಿ ಈ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣದ ದಿನ ರೂಪುಗೊಳ್ಳುವ ಗ್ರಹಗಳು ಮೂರು ರಾಶಿಯವರಿಗೆ ಅನುಕೂಲಕರವಾಗಲಿವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. 

ಮೇಷ ರಾಶಿ(Aries)
ಈ ಚಂದ್ರಗ್ರಹಣವು ಎಲ್ಲ ರೀತಿಯಲ್ಲಿಯೂ ಮೇಷ ರಾಶಿಗೆ ಕೂಡಿ ಬರಲಿದೆ ಎನ್ನುತ್ತಾರೆ ಜ್ಯೋತಿಷಿಗಳು. ವಿಶೇಷವಾಗಿ ಗ್ರಹಣ ಫಲವಾಗಿ ಈ ರಾಶಿಯವರು ಉದ್ದೇಶಿತ ಗುರಿಗಳನ್ನು ತಲುಪುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಉದ್ಯೋಗಿಗಳು ಉನ್ನತ ಹಂತಕ್ಕೆ ಹೋಗುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಅವರು ಎಲ್ಲರನ್ನೂ ಧನಾತ್ಮಕವಾಗಿ ಮತ್ತು ಸೌಜನ್ಯದಿಂದ ನಡೆಸಿಕೊಳ್ಳುತ್ತಾರೆ. ಈ ಚಂದ್ರಗ್ರಹಣ ಬಳಿಕದ ಸಮಯವು ಹೂಡಿಕೆಗೆ ಸೂಕ್ತವಾಗಿರುತ್ತದೆ.

ಸಿಂಹ ರಾಶಿ(Leo)
ಈ ಚಂದ್ರಗ್ರಹಣವು ಎಲ್ಲ ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಅದರಲ್ಲೂ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚು. ನಿಮ್ಮ ಆದಾಯವೂ ದುಪ್ಪಟ್ಟಾಗುತ್ತದೆ. ಮೇಲಾಗಿ ಸಂಸಾರದಲ್ಲಿ ಇದ್ದ ಜಗಳ, ಕದನಗಳೆಲ್ಲ ಮಾಯವಾಗಿ ಸುಖವಾಗಿರುತ್ತೀರಿ. ನಿಮ್ಮ ಸಾಮರ್ಥ್ಯ ನಿಮಗೇ ಅಚ್ಚರಿ ತರಲಿದೆ. ಸಾಮರ್ಥ್ಯದ ಗರಿಷ್ಠ ಬಳಕೆ ಮಾಡಿದರೆ ಅತ್ಯುತ್ತಮ ಫಲಿತಾಂಶ ಪಡೆಯಲಿದ್ದೀರಿ. 

Surya Gochar: ಮೇ 15ರ ನಂತರ ಈ ಐದು ರಾಶಿಗಳಿಗೆ ಭಲೇ ಅದೃಷ್ಟ!
 
ಧನು ರಾಶಿ(Sagittarius)
ಧನು ರಾಶಿಯವರಿಗೆ ಈ ಚಂದ್ರಗ್ರಹಣ ಧನಾತ್ಮಕ ಪರಿಣಾಮ ಬೀರುತ್ತದೆ. ಈ ರಾಶಿಯವರಿಗೆ ಉತ್ತಮ ಅವಕಾಶಗಳು ಲಭಿಸುತ್ತವೆ. ಇವು ನಿಮ್ಮ ಪ್ರಗತಿಗೆ ಉಪಯುಕ್ತವಾಗಲಿವೆ. ನೌಕರರು ಮೇಲಿನ ಸ್ಥಾನಕ್ಕೆ ಹೋಗುತ್ತೀರಿ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಲಿದೆ. ಸಾಲ ಮತ್ತು ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಆದಾಯವೂ ಚೆನ್ನಾರುತ್ತದೆ. 

ಇನ್ನು ಗ್ರಹಣದಿಂದಾಗಿ ಎರಡು ರಾಶಿಗಳು ಭಾರೀ ಕಷ್ಟನಷ್ಟ ಅನುಭವಿಸಬೇಕಾಗುತ್ತವೆ. ಅವೆಂದರೆ, 
ಮಿಥುನ(Gemini): ಚಂದ್ರಗ್ರಹಣವು ಈ ರಾಶಿಚಕ್ರದ ಜನರಿಗೆ ತೊಂದರೆಯನ್ನುಂಟುಮಾಡುತ್ತದೆ. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಹಸ ಬೇಡ. ಇದಲ್ಲದೆ, ಯಾವುದಾದರೂ ವಸ್ತು ಹಾನಿಯ ಬಲವಾದ ಸಾಧ್ಯತೆಯಿದೆ. ಪ್ರಯಾಣದಲ್ಲಿ ಅಡೆತಡೆಗಳು ಎದುರಾಗಬಹುದು. 

Lunar Eclipse 2022: ಗ್ರಹಣ ಸಂದರ್ಭದಲ್ಲಿ ನೀವೇನು ಮಾಡಬೇಕು? ಏನು ಮಾಡಕೂಡದು?

ವೃಶ್ಚಿಕ(Scorpio): ಗ್ರಹಣದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿಯೇ ಸಂಚಾರ ಮಾಡುತ್ತಾನೆ. ಇದರಿಂದಾಗಿ ವೃಶ್ಚಿಕ ರಾಶಿಯ ಜನರು ಗ್ರಹಣದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಈ ರಾಶಿಯ ಜನರು ಗ್ರಹಣ ಸಂದರ್ಭದಲ್ಲಿ ಎಲ್ಲ ವಿಷಯಗಳಲ್ಲೂ ಜಾಗರೂಕರಾಗಿರಬೇಕು. ಯಾವುದೇ ಕೆಲಸದಲ್ಲಿ ಆತುರವು ನಿಮಗೆ ದೊಡ್ಡ ಹೊಡೆತ ಕೊಡಬಹುದು. ಕೆಲಸದ ಸ್ಥಳದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಕೆಲಸ ಕಳೆದುಕೊಳ್ಳುವ ಅಪಾಯವಿರುತ್ತದೆ. ತಿಂಗಳ ಕಾಲ ಚಂದ್ರ ಸಮಸ್ಯೆಯನ್ನುಂಟು ಮಾಡಬಹುದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ