Vat Savitri Vrat 2023 ಆಚರಣೆಯಿಂದ ಮಕ್ಕಳ ಫಲ ಸಿದ್ಧಿ! ಆಚರಣೆ ಹೀಗಿರಲಿ..

Published : May 13, 2023, 12:59 PM IST
Vat Savitri Vrat 2023 ಆಚರಣೆಯಿಂದ ಮಕ್ಕಳ ಫಲ ಸಿದ್ಧಿ! ಆಚರಣೆ ಹೀಗಿರಲಿ..

ಸಾರಾಂಶ

ವಟ ಸಾವಿತ್ರಿ ವ್ರತ ಮಹಿಳೆಯರಿಗೆ ವಿಶೇಷವಾಗಿದೆ. ಮಕ್ಕಳಿಲ್ಲದ ದಂಪತಿ ಮಗುವಿಗಾಗಿ ಹಾಗೂ ಮಹಿಳೆಯರು ಪತಿಯ ಧೀರ್ಘಾಯಸ್ಸಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಈ ಬಾರಿ ವಟ ಸಾವಿತ್ರಿ ವ್ರತ ಆಚರಣೆ ಯಾವಾಗ, ಇದರ ಕತೆಯೇನು ವಿವರಗಳು ಇಲ್ಲಿವೆ..

ಪ್ರತಿ ವರ್ಷ ವಟ ಸಾವಿತ್ರಿ ವ್ರತವನ್ನು ಜ್ಯೇಷ್ಠ ಮಾಸದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಮಕ್ಕಳನ್ನು ಪಡೆಯುವ ಮತ್ತು ಪತಿಯ ದೀರ್ಘಾಯುಷ್ಯದ ಆಶಯದೊಂದಿಗೆ ಈ ಉಪವಾಸವನ್ನು ಆಚರಿಸಲಾಗುತ್ತದೆ. ಈ ದಿನ, ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಆಲದ ಮರವನ್ನು ಪೂಜಿಸುತ್ತಾರೆ. ವಟ ಸಾವಿತ್ರಿ ವ್ರತದ ದಿನಾಂಕ, ಅಂದು ನಾವು ಆಲದ ಮರವನ್ನು ಏಕೆ ಪೂಜಿಸಬೇಕು, ಅದರ ಕಥೆಯನ್ನು ತಿಳಿಯೋಣ.

ವಟ ಸಾವಿತ್ರಿ ವ್ರತ ದಿನಾಂಕ
ಜ್ಯೇಷ್ಠ ಮಾಸದ ಅಮವಾಸ್ಯೆಯ ತಿಥಿಯು ಮೇ 18ರಂದು ರಾತ್ರಿ 9.42ರಿಂದ ಪ್ರಾರಂಭವಾಗಿ ಮೇ 19ರಂದು ರಾತ್ರಿ 9.22ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕಾಗಿಯೇ ಮೇ 19ರ ಉದಯ ತಿಥಿಯಂದು ಈ ಉಪವಾಸವನ್ನು ಆಚರಿಸಲಾಗುತ್ತದೆ.

ವಟ ಸಾವಿತ್ರಿ ವ್ರತದ ಮಹತ್ವ
ಧಾರ್ಮಿಕ ಗ್ರಂಥಗಳ ಪ್ರಕಾರ, ವಟ ಸಾವಿತ್ರಿ ವ್ರತದಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ವ್ರತದ ಪ್ರಭಾವದಿಂದ ನಿರೀಕ್ಷೆಯಲ್ಲಿರುವ ದಂಪತಿಗೆ ಮಗು ಜನಿಸುತ್ತದೆ ಮತ್ತು ಪತಿಯು ದೀರ್ಘಾಯುಷ್ಯವನ್ನು ಹೊಂದುತ್ತಾನೆ.

Shani Jayanti 2023: ಶನಿ ದೇವಸ್ಥಾನಕ್ಕೆ ಹೋಗುವ ಜನರು ಈ ತಪ್ಪನ್ನು ಹೆಚ್ಚಾಗಿ ಮಾಡುತ್ತಾರೆ..!

ವಟ ಸಾವಿತ್ರಿ ವ್ರತ ಸಾಮಗ್ರಿ
ಈ ವ್ರತಕ್ಕೆ ಸಾವಿತ್ರಿ ಸತ್ಯವಾನ್ ವಿಗ್ರಹ, ಕೆಂಪು ದಾರ, ಬಿದಿರಿನ ಬೀಸಣಿಗೆ, ಧೂಪ, ದೀಪ, ತುಪ್ಪ, ಹಣ್ಣು, ಹೂವು, ಆಲದ ಹಣ್ಣು, ನೀರು ತುಂಬಿದ ಕಲಶ ಬೇಕು.

ವಟ ಸಾವಿತ್ರಿ ವ್ರತ ಪೂಜಾ ವಿಧಾನ
1. ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮತ್ತು ಧ್ಯಾನದ ನಂತರ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ.
2. ನಂತರ ಹತ್ತಿರದ ಆಲದ ಮರದ ಬಳಿ ಹೋಗಿ ಸಾವಿತ್ರಿ ಮತ್ತು ಸತ್ಯವಾನ್ ವಿಗ್ರಹವನ್ನು ಆಲದ ಮರದ ಕೆಳಗೆ ಇರಿಸಿ.
3. ವಿಗ್ರಹ ಮತ್ತು ಆಲದ ಮರಕ್ಕೆ ನೀರು ಅರ್ಪಿಸಿ ಪೂಜಿಸಿ.
4. ಮರಕ್ಕೆ ಪ್ರದಕ್ಷಿಣೆ ಹಾಕುವಾಗ ಕೆಂಪು ದಾರವನ್ನು ಏಳು ಸುತ್ತು ಸುತ್ತಿ.
5. ನಂತರ ಅತ್ತೆಯ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ.
6. ಸಾವಿತ್ರಿ-ಸತ್ಯವಾನರ ಪುಣ್ಯ ಕಥೆಯನ್ನು ಆಲಿಸಿ ಮತ್ತು ದೇವರನ್ನು ಧ್ಯಾನಿಸಿ.

Shani Jayanti 2023: ಶನಿ ಕೋಪದಿಂದ ಮುಕ್ತರಾಗೋಕೆ ಇಲ್ಲಿದೆ ನೋಡಿ ಸುದಿನ

ವಟ ಸಾವಿತ್ರಿ ವ್ರತದ ದಿನದಂದು ಆಲದ ಮರವನ್ನು ಏಕೆ ಪೂಜಿಸಲಾಗುತ್ತದೆ?
ಧಾರ್ಮಿಕ ಗ್ರಂಥಗಳ ಪ್ರಕಾರ, ತ್ರಿಮೂರ್ತಿಗಳು ಆಲದ ಮರದಲ್ಲಿ ನೆಲೆಸಿದ್ದಾರೆ. ಬ್ರಹ್ಮನು ಅದರ ಮೂಲದಲ್ಲಿ, ವಿಷ್ಣುವು ತೊಗಟೆಯಲ್ಲಿ ಮತ್ತು ಶಿವನು ಕೊಂಬೆಯಲ್ಲಿ ನೆಲೆಸಿದ್ದಾನೆ. ಇದಲ್ಲದೇ ಸಾವಿತ್ರಿಯು ಆಲದ ಮರದ ಕೆಳಗೆ ಯಮರಾಜನನ್ನು ಸೋಲಿಸಿ, ತನ್ನ ಪತಿಯ ಧರ್ಮದಿಂದ ಪ್ರಸನ್ನಗೊಳಿಸಿ, ಪತಿಯ ಆಯುಷ್ಯವನ್ನು ಮರಳಿ ಪಡೆದಳು. ಆದುದರಿಂದ ಈ ದಿನ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. 

ವಟ ಸಾವಿತ್ರಿ ವ್ರತ ಕಥಾ
ವಟ ಸಾವಿತ್ರಿ ವ್ರತ ಕಥಾ ಪ್ರಕಾರ, ಭದ್ರಾ ದೇಶದ ರಾಜ ಅಶ್ವಪತಿಗೆ ಸಂತಾನವಿರಲಿಲ್ಲ. ಅವನು ಮಗುವನ್ನು ಪಡೆಯಲು ಸಾವಿತ್ರಿ ದೇವಿಗೆ ಕಠಿಣ ಯಜ್ಞ ಮಾಡಿದನು. ಪೂಜಾ ಫಲವಾಗಿ ಈತನಿಗೆ ಹೆಣ್ಣು ಮಗುವೊಂದು ಪ್ರಾಪ್ತಿಯಾಗುತ್ತದೆ. ಆ ಮಗು ತುಂಬಾನೇ ರೂಪವತಿಯಾಗಿತ್ತು. ಸಾವಿತ್ರಿ ದೇವಿಯ ಪೂಜೆಯಿಂದ ಹುಟ್ಟಿದ ಮಗುವಾದ್ದರಿಂದ ರಾಜನು ಆ ಮಗುವಿಗೆ ಸಾವಿತ್ರಿ ಎಂದೇ ನಾಮಕರಣ ಮಾಡಿದನು. 

Name Astro: ಈ ಹೆಸರಿನ ಸೊಸೆಯರು ಅತ್ತೆಗೆ ಅದೃಷ್ಟ ತರ್ತಾರೆ!

ಈ ಹುಡುಗಿ ಸುಂದರ ಮತ್ತು ಸೌಮ್ಯವಾಗಿದ್ದಳು. ಆದರೆ ಆಕೆಗೆ ಸೂಕ್ತ ವರ ಸಿಗಲಿಲ್ಲ. ಇದರಿಂದ ಮನನೊಂದ ಅಶ್ವಪತಿ, ಕೊನೆಗೆ ಹುಡುಗಿಗೆ ಸ್ವತಃ ವರನನ್ನು ಹುಡುಕಿಕೊಳ್ಳುವಂತೆ ಆದೇಶಿಸಿದ. ತಂದೆಯ ಮಾತಿಗೆ ಮಣಿದ ಸಾವಿತ್ರಿ ತಪೋವನದಲ್ಲಿ ಅಲೆದಾಡತೊಡಗಿದಳು. ಒಂದು ಸ್ಥಳದಲ್ಲಿ, ಸಾಲ್ವ ದೇಶದ ರಾಜ ದ್ಯುಮತ್ಸೇನನು ರಾಜ್ಯವನ್ನು ಕಸಿದುಕೊಳ್ಳುವ ಕಾರಣದಿಂದಾಗಿ ವಾಸಿಸುತ್ತಿದ್ದನು, ಅವನ ಮಗ ಸತ್ಯವಾನ್ ಸಾವಿತ್ರಿಯನ್ನು ಮದುವೆಯಾಗಲು ಮುಂದಾದನು. ಆದರೆ ಸತ್ಯವಾನ್ ಅಲ್ಪಾಯುಷಿ, ಹಾಗಾಗಿ ಈ ವೇಳೆ ಆಗಮಿಸಿದ ದೇವರ್ಷಿ ನಾರದರು ಆತನನ್ನು ಮದುವೆಯಾಗದಂತೆ ಸಾವಿತ್ರಿಗ ಸಲಹೆ ನೀಡಿದರು.

ಆದರೆ ಸಾವಿತ್ರಿ ಒಪ್ಪದೆ ಸತ್ಯವಾನನನ್ನು ಮದುವೆಯಾದಳು. ಇಲ್ಲಿ, ತನ್ನ ಗಂಡನ ಮರಣದ ಸಮಯ ಹತ್ತಿರ ಬಂದಾಗ, ಸಾವಿತ್ರಿಯು ತಪಸ್ಸು ಮಾಡಲು ಪ್ರಾರಂಭಿಸಿದಳು ಮತ್ತು ಅಂತಿಮವಾಗಿ ತನ್ನ ಗಂಡನ ಮರಣವನ್ನು ತಪ್ಪಿಸಿದಳು ಮತ್ತು ಯಮರಾಜನಿಗೆ ತನ್ನ ಗಂಡನ ಜೀವ ಕರೆದುಕೊಂಡು ಹೋಗಲು ಬಿಡಲಿಲ್ಲ. ಯಮನನ್ನು ಗೆದ್ದ ಏಕೈಕ ಪತಿವ್ರತೆ ಸಾವಿತ್ರಿಯಾಗಿದ್ದಾಳೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ